fbpx
Exclusive

ಯೋಧರ ಬಗ್ಗೆ ರಮೇಶ್ ಮತ್ತೆ ಗಣೇಶ್ ಏನ್ ಹೇಳುದ್ರು ನೋಡಿ…

ಇದೀಗ ಈ ವಿಶೇಷ ದಿನದಂದು ಸ್ಯಾಂಡಲ್ ವುಡ್ ನ ಸ್ಟಾರ್ ನಟರಾದ ರಮೇಶ್ ಅರವಿಂದ್ ಮತ್ತು ಗೋಲ್ಡನ್ ಸ್ಟಾರ್ ಗಣೇಶ್ ಅವರು, ನಮ್ಮ ದೇಶದ ಗಡಿ ಕಾಯುತ್ತಿರುವ ಕೆಚ್ಚೆದೆಯ ಯೋಧರಿಗೆ ಬಹಿರಂಗ ಪತ್ರ ಬರೆದಿದ್ದಾರೆ. ಸ್ವಾತಂತ್ರ್ಯೋತ್ಸವ ದಿನವನ್ನು ಬಹಳ ಸಂಭ್ರಮದಿಂದ, ಸುಂದರವಾಗಿ ಆಚರಿಸುತ್ತಿದ್ದಾರೆ. 70ನೇ ಸ್ವಾತಂತ್ರ ದಿನಾಚರಣೆಯ ಈ ಸುಂದರ ದಿನದಂದು ದೇಶಕ್ಕೆ ಮಡಿದ ಸಾವಿರಾರು ಯೋಧರಿಗೆ ಹಾಗೂ ವೀರರಿಗೆ ನುಡಿ ನಮನ ಸಲ್ಲಿಸಲಾಗುತ್ತಿರುವ ಸಂದರ್ಭದಲ್ಲಿ ಸ್ಯಾಂಡಲ್ ವುಡ್ ನ ಸ್ಟಾರ್ ನಟರಾದ ರಮೇಶ್ ಅರವಿಂದ್ ಮತ್ತು ಗೋಲ್ಡನ್ ಸ್ಟಾರ್ ಗಣೇಶ್ ಅವರ ಪತ್ರ ನಿಜಕ್ಕೂ ಒಳ್ಳೆಯ ಬೆಳವಣಿಗೆಯೇ ಸರಿ…

ರಮೇಶ್ ಅರವಿಂದ್ ಪತ್ರ –

‘ಪ್ರೀತಿಯ ಸೈನಿಕ..ನಾನು ರಮೇಶ್ ಅರವಿಂದ್, ಅಲ್ಲಾ ನಿಮ್ಮ ಕಣ್ಣು ಕಪ್ಪಾ, ನೀಲಿನಾ ಅಥವಾ ಕಂದು ಬಣ್ಣನಾ..ನನಗ್ಗೊತ್ತಿಲ್ಲ. ನೀವೆಷ್ಟು ಉದ್ದ ಇದ್ದೀರಿ..ಅದೂ ನನಗೆ ಗೊತ್ತಿಲ್ಲ. ನೀವು ನಗ್ ನಗ್ತಾ ಇರ್ತೀರಾ?, ಅಥವಾ ಸಿಡುಮುಂಜಿನಾ, ಆಕ್ಚುವಲಿ ನಿಮ್ಮ ವೈಯಕ್ತಿಕ ವಿಷಯಗಳು ನನಗೆ ಏನೂ ಗೊತ್ತಿಲ್ಲ.-ರಮೇಶ್ ಅರವಿಂದ್.

ಎಲ್ಲರ ಖುಷಿಗೆ ಯೋಧರು ಕಾರಣ :

‘ನಮ್ಮ ಖುಷಿಯ ಹಾಡುಗಳು, ನಮ್ಮ ಕುಣಿತಗಳಿಗೆ ನೀವು ತುದಿಗಾಲಲ್ಲಿ ಅಲ್ಲಿ ನಿಂತಿದ್ದೀರಲ್ಲಾ ಅದೇ ಕಾರಣ. ನಿಮ್ಮ ಧಾರ್ಮಿಕ ನಿಲುವುಗಳು ನನಗೆ ಗೊತ್ತಿಲ್ಲ, ಆದರೆ ನಮ್ಮ ಪ್ರಾರ್ಥನೆಗಳು ಮಾತ್ರ ಸದಾ ನಿಮ್ಮ ಜೊತೆಗಿದೆ. ನಿಮಗೆ ಮದುವೆ ಆಗಿದೆಯಾ?, ಅಪ್ಪ-ಅಮ್ಮ ಆರೋಗ್ಯವಾಗಿದ್ದಾರಾ?, ನಿಮ್ಮ ಫ್ಯಾಮಿಲಿ ಬಗ್ಗೆ ಏನೂ ಗೊತ್ತಿಲ್ಲ. ಆದ್ರೆ ಒಂದು ಮಾತ್ರ ಸ್ಪಷ್ಟವಾಗಿ ಗೊತ್ತು. ನಿಮ್ಮ ಮನೆಯವರು ನಿಜವಾಗ್ಲೂ ವಿಶೇಷವಾದ ಗುಂಪು’

ನೆಮ್ಮದಿಯಾಗಿ ಕಣ್ಣು ಮುಚ್ಚಿ ಮಲಗಲು ಕಾರಣ ಯೋಧರು :

‘ನಾನು ನನ್ನ ಹೆಂಡತಿ, ನನ್ ಮಕ್ಕಳು ಹ್ಯಾಪಿಯಾಗಿ, ಇಲ್ಲಿ ಬೆಂಗಳೂರಲ್ಲಿ ಶಾಪಿಂಗ್ ಮಾಡ್ತಾ ಇದ್ದೀವಿ ಅಂದ್ರೆ, ಅದಕ್ಕೆ ಕಾರಣ ನೀವು. ಹದ್ದಿನಂತಹ ನಿಮ್ಮ ಕಣ್ಣುಗಳು ಗಡಿಯನ್ನು ಕಾಯುತ್ತಿರುವುದರಿಂದಲೇ, ನಾವಿಲ್ಲಿ ನೆಮ್ಮದಿಯಾಗಿ ಕಣ್ಣು ಮುಚ್ಚಿ ಮಲಗಿದ್ದೀವಿ’.-ರಮೇಶ್ ಅರವಿಂದ್.

ಅವರ ಅಪ್ಪ-ಅಮ್ಮ ಗ್ರೇಟ್ :

‘ನಿಮ್ಮನ್ನು ಮಿಲಿಟರಿಗೆ ಸೇರಿಸಬೇಕೆಂದು ಒಪ್ಪಿದ ನಿಮ್ಮ ಅಪ್ಪ ಇದ್ದಾರಲ್ಲಾ, ಅವರ ನಿಲುವು ವಾವ್..ಮಹಾ ಸಂದೇಶ. ನೀವು ಮೊದಲು ಈ ಮಣ್ಣಿನ ಮಗ, ನಂತರ ನನ್ನ ಮಗ ಅಂತ ಅರ್ಥ ಮಾಡಿಕೊಂಡಿರೋ ನಿಮ್ಮ ಅಮ್ಮ, ಆ ಗ್ರಹಿಕೆ ವಾವ್.. ಅದೂ ಮಹಾ ಸಂದೇಶ’

ರಮೇಶ್ ಅರವಿಂದ್ ಸಂದೇಶ :

‘ನೀವು ಅಪಾಯಕರ ಕಾರ್ಯಾಚರಣೆಯಲ್ಲಿ ಇದ್ದಾಗ ತಾಳ್ಮೆಯಿಂದ ಕಾಯ್ತಾ ಇದ್ದಾರಲ್ಲಾ, ನಿಮ್ಮ ಸಂಗಾತಿನೋ, ಗೆಳತಿನೋ ಅವರ ಪ್ರೀತಿ ವಾವ್…ಮಹಾನ್ ಸಂದೇಶ. ಎಲ್ಲರಿಗಿಂತ ನೀವು, ನಿಮ್ಮ ಆದರ್ಶ ವಾವ್…. ದೇಶಕ್ಕಿಂತ ಮಿಗಿಲಾದದ್ದು ಯಾವುದು ಇಲ್ಲ ಅಂತ ಬಡಿಯೋ ನಿಮ್ಮ ಹೃದಯ ಮಹಾನ್ ಸಂದೇಶ. ಪ್ರೀತಿಯ ಸೈನಿಕ, ಓಡಾಡೋ ದೇಶಪ್ರೇಮ ಅಂದ್ರೆ ನೀವು, ಕಾರ್ಯರೂಪದ ದೇಶಪ್ರೇಮ ಅಂದ್ರೆ ನೀವು, ಸಮವಸ್ತ್ರದಲ್ಲಿರೋ ದೇಶಪ್ರೇಮ ಅಂದ್ರೆ ನೀವು. ನೀವು ಮಹಾ ಸಂದೇಶ, ನನ್ನದೊಂದು ಸಣ್ಣ ಸಂದೇಶ.. ಧನ್ಯವಾದಗಳು.

ಗಣೇಶ್ ಅವರ ಪತ್ರ –

‘ಸೈನಿಕರೇ ಸಲಾಂ…..’

‘ಬೆಳಿಗ್ಗೆ ನಮ್ಮ ಮಕ್ಕಳಿಗೆ ಸ್ಕೂಲ್ ಬ್ಯಾಗ್ ಕೊಟ್ಟು ಕಳ್ಸಿ, ಅವರು ಬರೋದು ಅರ್ಧಗಂಟೆ ತಡ ಆದ್ರೆ ಗಾಬರಿಯಿಂದ ಸ್ಕೂಲ್ ವ್ಯಾನ್ ನವರಿಗೆ ಹತ್ತು ಸಲ ಫೋನ್ ಮಾಡ್ತೀವಿ.

‘ನೀವು ವಾಪಸ್ ಬರೋದೇ ಗ್ಯಾರೆಂಟಿ ಇಲ್ಲ! ಆದ್ರೂ, ನಿಮ್ಮನ್ನ ಗಟ್ಟಿಯಾಗಿ ತಬ್ಕೊಂಡು, ಕಣ್ಣೀರು ಮುಚ್ಚಿಟ್ಕೊಂಡು, ನಗ್ತಾ ನಗ್ತಾ ಟಾಟಾ ಮಾಡಿ ದೇಶವನ್ನ, ಜನರನ್ನ ರಕ್ಷಿಸಿ ಅಂತ ನಿಮ್ಮನ್ನು ಕಳುಹಿಸಿ ಕೊಡೋ ಆ ನಿಮ್ಮ ಕುಟುಂಬದ ಎಲ್ಲರಿಗೂ, ಕನ್ನಡಿಗರೆಲ್ಲರ ಪರವಾಗಿ, ಈ ಮಳೆ ಹುಡುಗನ ಒಂದು ಸಲಾಂ.

13925847_1164396490272917_7487921762586884128_o

ಅವತ್ತು ನಮಗೋಸ್ಕರ ಪ್ರಾಣತೆತ್ತ ಆ ಎಲ್ಲ ಹುತಾತ್ಮ ಸೈನಿಕರಿಗೆ ಇನ್ನೊಂದು ಸಲಾಂ.

ಇವತ್ತು, ನಮಗೋಸ್ಕರ ಪ್ರಾಣವನ್ನು ಕೈಯಲ್ಲಿ ಹಿಡಿದು ಗಡಿಯಲ್ಲಿ ನಿಂತಿರೋ ಎಲ್ಲಾ ಸೈನಿಕರಿಗೆ, ಈ ನಿಮ್ಮ ಗಣೇಶನ ಮತ್ತೊಂದು ಸಲಾಂ’. ಹೀಗಂತ ಕನ್ನಡ ನಟ ಗೋಲ್ಡನ್ ಸ್ಟಾರ್ ಗಣೇಶ್ ಅವರು ನಮ್ಮ ದೇಶದ ವೀರ ಯೋಧರಿಗೆ ಬಹಿರಂಗ ಪತ್ರ ಬರೆದಿದ್ದಾರೆ…

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

ಯೋಧರ ಬಗ್ಗೆ ರಮೇಶ್ ಮತ್ತೆ ಗಣೇಶ್ ಏನ್ ಹೇಳುದ್ರು ನೋಡಿ…
Click to comment

Leave a Reply

Your email address will not be published.

ನಮ್ಮಲ್ಲಿ ಜನಪ್ರಿಯ

To Top