fbpx
News

ಚೀನಾ ಟ್ರಾಫಿಕ್ ಜಾಮ್‍ಗೆ ಸಿಕ್ತು ಹೈಟೆಕ್ ಪರಿಹಾರ..!

ಎಷ್ಟೇ ಟ್ರಾಫಿಕ್ ಇದ್ದರೂ ಸರಾಗ ಸಂಚಾರ ಮಾಡಲಿರುವ ಸಬ್ ವೇ ಮಾದರಿ ಬಸ್

ಬೀಜಿಂಗ್: ಇಡೀ ಪ್ರಪಂಚದಲ್ಲಿ ಅತೀ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಚೀನಾದಲ್ಲಿ ಜನಸಂಖ್ಯೆಯಷ್ಟೇ ಅಲ್ಲಿನ ಟ್ರಾಫಿಕ್ ಸಮಸ್ಯೆ ಕೂಡ ಮಿತಿ ಮೀರಿದೆ. ಈ ನಿಟ್ಟಿನಲ್ಲಿ  ಪರಿಹಾರಕಂಡುಕೊಳ್ಳುವ ಸಲುವಾಗಿ ಹಲವು ದಶಕಗಳಿಂದ ತಿಣುಕಾಡುತ್ತಿದ್ದ ಚೀನಾದ ವಿಜ್ಞಾನಿಗಳಿಗೆ ಇದೀಗ ಒಂದು ಮಾಸ್ಟರ್ ಪ್ಲಾನ್ ಹೊಳೆದಿದ್ದು, ಎಷ್ಟೇ ಟ್ರಾಫಿಕ್ ಜಾಮ್ ಆದರೂ ಸರಿ  ಸರಾಗವಾಗಿ ಸಂಚರಿಸುವ ನೂತನ ವಿನ್ಯಾಸದ ವಾಹನವೊಂದನ್ನು ತಯಾರಿಸಿದ್ದಾರೆ.

ಈ ನೂತನ ವಾಹನ ಮಾದರಿಯಲ್ಲಿ ರಸ್ತೆಗಳಲ್ಲಿ ಎಷ್ಟೇ ವಾಹನ ದಟ್ಟಣ ಉಂಟಾದರೂ ಈ ವಾಹನ ಮಾತ್ರ ಸರಾಗವಾಗಿ ಸಂಚರಿಸುತ್ತದೆ. ಚೀನಾದ ಸ0ಶೋಧಕರು ಸಬ್‍ವೇ ಮಾದರಿಯ  (ಸ್ಟ್ರಾಡ್ಲಿ0ಗ್) ಬಸ್ಸೊ0ದನ್ನು ವಿನ್ಯಾಸ ಮಾಡಿದ್ದು, ಸ0ಚಾರ ದಟ್ಟಣೆ ಇದ್ದರೂ ಸರಾಗವಾಗಿ ಇದು ಸ0ಚರಿಸುತ್ತದೆ. ವಿಶೇಷವೆ0ದರೆ ಈ ಬಸ್ಸಿನ ಕೆಳಗಡೆ ಕಾರು ಸೇರಿದ0ತೆ ಲಘುವಾಹನಗಳು  ತೆರಳಲು ಅವಕಾಶ ಕಲ್ಪಿಸಲಾಗಿದೆ.

ಬೀಜಿ0ಗ್ ಮೂಲದ ಟ್ರಾನ್ಸಿಸ್ಟ್ ಎಕ್ಸ್ ಪೆÇ್ಲೀರ್ ಬಸ್ (ಟಿಇಬಿ) ಸ0ಸ್ಥೆ ಈ ಬಸ್‍ನ ವಿನ್ಯಾಸ ಮಾಡಿದ್ದು, ಬೀಜಿ0ಗ್‍ನಲ್ಲಿ ಈಗಿರುವ ರಸ್ತೆಯನ್ನೇ ಗಮನದಲ್ಲಿರಿಸಿಕೊ0ಡು ಈ ನೂತನ ಮಾದರಿಯ  ಬಸ್ ಅನ್ನು ನಿಮಿ9ಸಲಾಗಿದೆ. ರಸ್ತೆಯ ಎರಡು ಬದಿಗಳಲ್ಲಿ ವಿದ್ಯುತ್ ಹಳಿ ನಿಮಿ9ಸಿ, ಎರಡು ಮೀಟರ್‍ಗೂ ಎತ್ತರದಲ್ಲಿ ಬಸ್ಸನ್ನು ಸೇತುವೆ ಮಾದರಿಯಲ್ಲಿ ನಿಲ್ಲಿಸಲಾಗುತ್ತದೆ. ಸಬ್‍ವೇ  ಮಾದರಿಯಲ್ಲಿ ಈ ಬಸ್ ಚಲಿಸುವುದರಿ0ದ ಕೆಳಭಾಗದಲ್ಲಿ ವಾಹನಗಳ ಸ0ಚಾರಕ್ಕೆ ಯಾವುದೇ ಭ0ಗವಿಲ್ಲ. 40 ಸಾಮಾನ್ಯ ಬಸ್‍ಗಳ ಸಾಮಥ್ಯ9 ಇದಕ್ಕಿದ್ದು, ಏಕಕಾಲಕ್ಕೆ 1,200  ಪ್ರಯಾಣಿಕರು ಪ್ರಯಾಣಿಸಬಹುದು. ಈ ಬಸ್ 60 ಕಿ.ಮೀ. ಗರಿಷ್ಠ ವೇಗ ಹೊ0ದಿದ್ದು, ಇದರಿ0ದ ವಾಷಿ9ಕ 800 ಟನ್ ಇ0ಧನ ಉಳಿತಾಯದ ಜತೆಗೆ 2,400 ಟನ್ ಇ0ಧನ  ಹೊರಸೂಸುವಿಕೆಗೆ ಕಡಿವಾಣ ಹಾಕಬಹುದು ಎ0ದು ಕ0ಪನಿ ತಿಳಿಸಿದೆ.

ಈ ನೂತನ ಮಾದರಿ ಬಸ್ ಯೋಜನೆಗೆ 4.5 ಮಿಲಿಯನ್ ಡಾಲರ್ ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿದ್ದು, ಬೀಜಿ0ಗ್‍ನಿ0ದ 300 ಕಿ.ಮೀ. ದೂರದಲ್ಲಿರುವ ಕಿ0ಗ್ ವುಹಾ0ಗ್‍ಡುವುನಲ್ಲಿ ತಾತ್ಕಲಿಕ  ಟ್ರ್ಯಾಕ್ ನಿಮಿ9ಸಿ ಪರೀಕ್ಷಾಥ9 ಸ0ಚಾರ ನಡೆಸಲಾಗುತ್ತದೆ ಎ0ದು ಮುಖ್ಯ ಎ0ಜಿನಿಯರ್ ಸಾ0ಗ್ ಯುಜುಹೂ ತಿಳಿಸಿದ್ದಾರೆ.  ಸಬ್‍ವೇ ನಿಮಾ9ಣಕ್ಕೆ ತಗಲುವ ಐದನೇ ಒ0ದರಷ್ಟು  ಖಚಿ9ನಲ್ಲಿ ಇದನ್ನು ತಯಾರಿಸಬಹುದಾಗಿದ್ದು, ಒ0ದು ವಷ9ದಲ್ಲಿ ಯೋಜನೆ ಪೂಣ9ಗೊಳಿಸಬಹುದು ಎಂದು ಸಾ0ಗ್ ಯುಜುಹೂ ಹೇಳಿದ್ದಾರೆ.

2010ರಲ್ಲೇ ಮಾದರಿ ಪರಿಕಲ್ಪನೆ ಕುರಿತು ಯೋಜಿಸಲಾಗಿತ್ತಾದರೂ ಕಾರಣಾಂತರಗಳಿಂದ ಇದು ಮುಂದಕ್ಕೆ ಹೋಗಿತ್ತು. ಇದೀಗ ಬರೊಬ್ಬರಿ 6 ವರ್ಷಗಳ ಬಳಿಕ ಸಾ0ಗ್ ಯುಜುಹೂ ಅವರ ಈ  ವಿನೂತನ ಪರಿಕಲ್ಪನೆಗೆ ಚೀನಾ ಸರ್ಕಾರ ಪೆÇ್ರೀತ್ಸಾಹ ನೀಡಲು ಮುಂದಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top