fbpx
Karnataka

ಮುಂಬಯಿಯಲ್ಲಿ ಸಹೋದರಿಯ ಮಗನ ಮದುವೆಗೆ ದಾವೂದ್ ಹಾಜರ್!

ಮುಂಬಯಿ : ಭಾರತದ ಮೋಸ್ಟ್ ವಾಂಟೆಡ್ ಭೂಗತ ಪಾತಕಿ ದಾವೂದ್ ಇಬ್ರಾಹಿಂನ ತನ್ನ ಸೋದರಿ ಹಸೀನಾ ಪಾರ್ಕರ್‍ಳ ಕೊನೆಯ ಪುತ್ರ, ಅಲಿಶಾ ಪಾರ್ಕರ್‍ನ ವಿವಾಹ ಬುಧವಾರ ಮುಂಬಯಿಯಲ್ಲಿ ನಡೆಯಲಿದ್ದು ಈ ಕಾರ್ಯಕ್ರಮದಲ್ಲಿ ದಾವೂದ್ ಭಾಗವಹಿಸಲಿದ್ದಾನೆ..!

ಈ ಸುದ್ದಿ ಕೇಳಿ ಒಂದ್ ಕ್ಷಣ ಎಲ್ಲರೂ ಹುಬ್ಬೇರಿಸುವುದುಂಟು… ಆದರೆ, ದಾವೂದ್ ಮದುವೆಯಲ್ಲಿ ಪಾಲ್ಗೊಳ್ಳುತ್ತಿರುವುದು ಸ್ಕೈಪ್ ಮೂಲಕ..!

ಮೆಮೋನ್ ಕುಟುಂಬಕ್ಕೆ ಸೇರಿದ ಆಯೆಷಾ ನಗಾನಿ ಜತೆಗೆ ಅಲಿಶಾ ಪಾರ್ಕರ್ ವಿವಾಹ ಬುಧವಾರ ದಕ್ಷಿಣ ಮುಂಬಯಿಯ ರಸೂಲ್ ಮಸೀದಿಯಲ್ಲಿ ಬೆಳಗ್ಗೆ ನಡೆಯಲಿದೆ. ಸಂಜೆ ಜುಹುವಿನಲ್ಲಿರುವ ಟ್ಯುಲಿಪ್ ಸ್ಟಾರ್ ಹೊಟೇಲ್‍ನಲ್ಲಿ ಸತ್ಕಾರ ಕೂಟ ನಡೆಯಲಿದೆ. ಮುಂಬಯಿಯಲ್ಲಿ ಕಟ್ಟಡ ನಿರ್ಮಾಣ ಉದ್ಯಮದಲ್ಲಿ ತೊಡಗಿಕೊಂಡಿರುವ ಅಲಿಶಾ, ತಾಯಿ ಹಸೀನಾ ಅವರ ಬದುಕುಳಿದಿರುವ ಏಕೈಕ ಪುತ್ರನಾಗಿದ್ದಾನೆ.

ಈ ವಿವಾಹ ಸಮಾರಂಭಕ್ಕೆ ಹಾಜರಾಗಲಿರುವ ದಾವೂದ್‍ನ ನಿಕಟವರ್ತಿ ಭೂಗತ ಜಗತ್ತಿನ ಪಾತಕಿಗಳು ಒಂದೊಮ್ಮೆ ಬಂದಲ್ಲಿ ಅವರನ್ನು ವಶಕ್ಕೆ ತೆಗೆದುಕೊಳ್ಳುವ ಯೋಜನೆಯ ಅಂಗವಾಗಿ ವಿವಾಹ ಸಮಾರಂಭಕ್ಕೆ ಬರುವ ಅತಿಥಿಗಳ ಮೇಲೆ ತೀವ್ರ ಕಣ್ಗಾವಲು ಇರಿಸುವಂತೆ ಮುಂಬಯಿ ಕ್ರೈಂ ಬ್ರಾಂಚ್, ಸುಲಿಗೆ ನಿಗ್ರಹ ದಳ ಹಾಗೂ ಯೂನಿಟ್ 1ರ ಸಿಬಂದಿಗಳನ್ನು ಕೇಳಿಕೊಂಡಿರುವುದಾಗಿ ವರದಿಯಗಿದೆ.

1993ರ ಮುಂಬಯಿ ಸರಣಿ ಬಾಂಬ್ ಸ್ಫೋಟದ ಪ್ರಮುಖ ಆರೋಪಿಯಾಗಿರುವ ದಾವೂದ್, ಪಾಕಿಸ್ಥಾನದಲ್ಲಿ (ಕರಾಚಿಯಲ್ಲಿ) ಅಡಗಿಕೊಂಡಿರುವುದಾಗಿ ನಂಬಲಾಗಿದೆ. ಭಾರತವು ಪಾಕಿಸ್ಥಾನಕ್ಕೆ ಈಗಾಗಲೇ ಹಲವಾರು ಬಾರಿ ದಾವೂದ್‍ನ ಪಾಸ್‍ಪೆÇೀರ್ಟ್ ಮಾಹಿತಿಗಳನ್ನು ಕೊಡುವಂತೆ ಕೇಳಿಕೊಂಡಿದ್ದರೂ ಪ್ರಯೋಜನವಾಗಿಲ್ಲ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top