fbpx
Sports

bronze ಗೆದ್ದು ಭೇಷ್ ಎನ್ನಿಸಿಕೊಂಡ ಸಾಕ್ಷಿ…

ಈಗ ಬಂತು.. ಆಗ ಬಂತು ಅಂತಲೇ ಎರಡು ವಾರಗಳು ಕಳೆದವು. ಭರವಸೆ ಇಟ್ಟವರೆಲ್ಲಾ ಮಣ್ಣು ತಿಂದರು. ಇನ್ನೇನು ಪದಕ ಗೆದ್ದೇಬಿಡುತ್ತಾರೆ ಎಂದು ಕೋಟ್ಯಂತರ ಅಭಿಮಾನಿಗಳು ಕಾಯುತ್ತಿದ್ದಾಗ ಆಘಾತ ಸಿಡಿಲೆರಗಿದಂತೆ ಬಂದು ಬೀಳುತ್ತಿತ್ತು. ಆದರೆ ಬುಧವಾರ ಮಧ್ಯರಾತ್ರಿ ಭಾರತಕ್ಕೆ ಕೊನೆಗೂ ಒಲಿಂಪಿಕ್ಸ್ ಪದಕ ಬಂದೇ ಬಿಟ್ಟಿತು. ಈ ಪದಕ ತಂದುಕೊಟ್ಟಿದ್ದು ಮತ್ತಾರೂ ಅಲ್ಲ ಹರಿಯಾಣದ ಕುಸ್ತಿಪಟು ಸಾಕ್ಷಿ ಮಲಿಕ್!

ಹೌದು, ಬುಧವಾರ ನಡೆದ ೫೮ ಕೆಜಿ ವಿಭಾಗದ ಫ್ರೀಸ್ಟೈಲ್ ಸ್ಪರ್ಧೆಯಲ್ಲಿ ಸಾಕ್ಷಿ ಮಲಿಕ್ ಕಂಚಿನ ಪದಕ ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. ವನಿತೆಯರ ಕುಸ್ತಿಯಲ್ಲಿ ಭಾರತಕ್ಕೆ ಮೊದಲ ಪದಕವನ್ನು ಸಾಕ್ಷಿ ತಂದುಕೊಟ್ಟಿದ್ದಾರೆ. ಅಲ್ಲದೇ ಕುಸ್ತಿಯಲ್ಲಿ ಒಟ್ಟಾರೆ ಐದನೇ ಪದಕ ಇದಾಗಿದೆ. ಈ ಐತಿಹಾಸಿಕ ಸಾಧನೆಯೊಂದಿಗೆ ಭಾರತ ರಿಯೊ ಒಲಿಂಪಿಕ್ಸ್‌ನಲ್ಲಿ ಕೊನೆಗೂ ಪದಕದ ಖಾತೆ ತೆರೆದಿದೆ.

ವಿಶ್ವದ ೨ನೇ ಶ್ರೇಯಾಂಕಿತೆ ವಿನೀಶಾ ಪೋಗತ್ ಗಾಯಗೊಂಡು ಕ್ವಾರ್ಟರ್ ಫೈನಲ್‌ನಲ್ಲಿ ನಿರ್ಗಮಿಸಿದಾಗ ಭಾರತದ ಪದಕ ಮರೀಚಿಕೆಯಾಗಿತ್ತು. ೫೮ ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಸಾಕ್ಷಿ ಮಲಿಕ್ ಕ್ವಾರ್ಟರ್‌ಫೈನಲ್‌ನಲ್ಲಿ ೨-೯ರಿಂದ ಸೋಲುಂಡಿದ್ದರು.

ಆದರೆ ಸಾಕ್ಷಿ ವಿರುದ್ಧ ಗೆದ್ದಿದ್ದ ವಲೆರಿಯಾ ಕೊಬೊಲೊವಾ ಫೈನಲ್ ತಲುಪಿದರು. ಈ ಮೂಲಕ ರಿಪೆಚಾಜ್ ಮೂಲಕ ಕಂಚಿನ ಪದಕಕ್ಕಾಗಿ ಹೋರಾಡುವ ಅವಕಾಶ ದೊರೆಯಿತು.

ಈ ವಿಭಾಗದಲ್ಲಿ ಕಂಚು ಗೆಲ್ಲಬೇಕಾದರೆ ಸಾಕ್ಷಿಗೆ ಎರಡು ಪಂದ್ಯ ಗೆಲ್ಲಬೇಕಿತ್ತು.

ಮೊದಲ ಪಂದ್ಯದಲ್ಲಿ ಮಂಗೋಲಿಯಾದ ಜಾಕ್ರೂನ್ ಪುರೆವೊಡ್ಜಿ ಅವರನ್ನು ೧೦-೩ ಅಂಕಗಳ ಭಾರೀ ಅಂತರದಿಂದ ಬಗ್ಗುಬಡಿದರು. ಅತ್ಯಂತ ಮಹತ್ವ ಪಡೆದ ಎರಡನೇ ಪಂದ್ಯದಲ್ಲಿ ಕಜಕಿಸ್ತಾನದ ಐಸುಲು ಟೈಂಕೆಬೆಕೊವಾ ವಿರುದ್ಧ ಜಿದ್ದಾಜಿದ್ದಿನ ಪಂದ್ಯದಲ್ಲಿ ೮-೩ರಿಂದ ಗೆದ್ದ ಸಾಕ್ಷಿ ಇತಿಹಾಸ ನಿರ್ಮಿಸಿದರು.

ಐಸಲು ವಿರುದ್ಧದ ತಲಾ ೩ ನಿಮಿಷಗಳ ೨ ಅವಧಿಯ ಸ್ಪರ್ಧೆಯಲ್ಲಿ ಸಾಕ್ಷಿ ಮೊದಲ ಅವಧಿಯ ಆ ಮುಗಿದಾಗ ೦-೩ರಿಂದ ಹಿನ್ನಡೆ ಅನುಭವಿಸಿದ್ದರು. ಆದರೆ ಎರಡನೇ ಅವಧಿಯ ಆಟದಲ್ಲಿ ಅಮೋಘ ದಾಳಿ ಸಂಘಟಿಸಿ ಸತತ ೮ ಅಂಕ ಗಿಟ್ಟಿಸಿದರು.

ಸಾಕ್ಷಿ ಗೆ ದುಡ್ಡಿನ ಸುರಿಮಳೆ :

ರಿಯೋ ಒಲಂಪಿಕ್ಸ್ ನ 12ನೆ ದಿನದ ಕ್ರೀಡಾಕೂಟದಲ್ಲಿ ಕಂಚಿನ ಪದಕ ಗೆದ್ದು ಭಾರತದ ಮಾನ ಕಾಪಾಡಿರುವ ರೋಟಕ್ನ ಸಾಕ್ಷಿ ಮಲ್ಲಿಕ್ ಇನ್ನು ಮುಂದೆ ಕೋಟ್ಯಾಧೀಶ್ವರಳಾಗಲಿದ್ದಾಳೆ. ಬಹುಮಾನ ಮತ್ತು ಪುರಸ್ಕಾರಗಳ ಮಹಾಪೂರವೇ ಆಕೆಯತ್ತ ಹರಿದುಬರುತ್ತಿದೆ. ಹರ್ಯಾಣ ರಾಜ್ಯ ಸರ್ಕಾರವು 2 ಕೋಟಿ ರೂ. ನಗದು ಬಹುಮಾನ ಮತ್ತು ರಾಜ್ಯ ಸರ್ಕಾರ ದೊಡ್ಡ ನಿವೇಶನದ ಪುರಸ್ಕಾರವನ್ನು ಘೋಷಿಸಿದೆ. ಭಾರತೀಯ ರೈಲ್ವೆಯ ಉದ್ಯೋಗಿ 50 ಲಕ್ಷ ರೂ.ಗಳನ್ನು ನೀಡುವುದಾಗಿ ರೈಲ್ವೆ ಇಲಾಖೆ ಪ್ರಕಟಿಸಿದೆ.

ಇದಲ್ಲದೆ, ಭಾರತ ಒಲಂಪಿಕ್ ಸಂಸ್ಥೆ 20 ಲಕ್ಷ ರೂ. ನಗದು ಬಹುಮಾನ ನೀಡಲಿದೆ. ಬಾಲಿವುಡ್ ನಟ ಮತ್ತು ಒಲಂಪಿಕ್ ಕ್ರೀಡಾಕೂಟದ ಭಾರತದ ರಾಯಭಾರಿ ಸಲ್ಮಾನ್ ಖಾನ್ ಎಲ್ಲ ಕ್ರೀಡಾಪಟುಗಳಿಗೆ ತಲಾ 1,01,000ರೂ. ನಗದನ್ನು ಈಗಾಗಲೇ ಘೋಷಿಸಿದ್ದು, ಪದಕ ವಿಜೇತ ಸಾಕ್ಷಿಗೆ ಆ ಮೊತ್ತವನ್ನು ಇನ್ನಷ್ಟು ಹೆಚ್ಚಿಸಲಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

bronze ಗೆದ್ದು ಭೇಷ್ ಎನ್ನಿಸಿಕೊಂಡ ಸಾಕ್ಷಿ…
Click to comment

Leave a Reply

Your email address will not be published.

ನಮ್ಮಲ್ಲಿ ಜನಪ್ರಿಯ

To Top