fbpx
Achivers

ರಿಯೋ ಒಲಂಪಿಕ್ಸ್ ನಲ್ಲಿ ಪದಕ ಗೆದ್ದ ಪಿ.ವಿ.ಸಿಂಧುರವರ ಸಾಧನೆಯಲ್ಲಿ ಪುಲ್ಲೇಲ ಗೋಪಿಚಂದ್ ಪಾತ್ರ

ಪುಲ್ಲೇಲ ಗೋಪಿಚಂದ್ ನಡೆದು ಬಂದ ಹಾದಿ

gopichand1

ಪ್ರಕಾಶ್ ಪಡುಕೋಣೆ ನಂತರ ಆಲ್ ಇಂಗ್ಲೆಂಡ್ ಓಪನ್ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ಗೆದ್ದು ಸಾಧನೆಗೈದ ಎರಡನೇ ಭಾರತೀಯ ಆಟಗಾರ ಪುಲ್ಲೇಲ ಗೋಪಿಚಂದ್. ಪುಲ್ಲೇಲ ಗೋಪಿಚಂದ್ ಅವರು ಆಂಧ್ರ ಪ್ರದೇಶ ರಾಜ್ಯದ ಪ್ರಕಾಶಂ ಜಿಲ್ಲೆಯ ನಗಂಡ್ಲ ಎಂಬ ಊರಿನವರು. ಗೋಪಿಚಂದ್ ಮೊದಮೊದಲು ಕ್ರಿಕೆಟ್ ಆಟದಲ್ಲಿ ಹೆಚ್ಚು ಆಸಕ್ತಿ ಉಳ್ಳವರಾಗಿದ್ದರು. ಆದರೆ ಅವರ ಹಿರಿಯ ಸಹೋದರ ಅವರಿಗೆ ಕ್ರಿಕೆಟ್ ನ ಬದಲಾಗಿ ಬ್ಯಾಡ್ಮಿಂಟನ್ ಆಟವನ್ನು ವೃತ್ತಿಯನ್ನಾಗಿ ತೆಗೆದುಕೊಳ್ಳಲು ಪ್ರೋತ್ಸಾಹಿಸಿದರು.

1990 ಮತ್ತು 1991 ರಲ್ಲಿ ಭಾರತೀಯ ಸಂಯೋಜಿತ ವಿಶ್ವವಿದ್ಯಾಲಯಗಳ ಬ್ಯಾಡ್ಮಿಂಟನ್ ತಂಡದ ನಾಯಕರಾಗಿದ್ದರು. 1996 ರಲ್ಲಿ ತಮ್ಮ ಮೊದಲ ರಾಷ್ಟ್ರೀಯ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ ಪ್ರಶಸ್ತಿಯನ್ನು ಗೆದ್ದರು, ಮತ್ತು 2000 ದನೆಯ ಇಸವಿಯ ವರೆವಿಗೆ ಸತತವಾಗಿ ಐದು ಬಾರಿ ಪ್ರಶಸ್ತಿಯನ್ನು ತಮ್ಮ ಮುಡಿಗೆ ಏರಿಸಿಕೊಂಡರು. ಚೀನಾದ ಚೆನ್ ಹಾಂಗ್ ಅವರನ್ನು ಅಂತಿಮ ಪಂದ್ಯದಲ್ಲಿ ಸೋಲಿಸುವ ಮೂಲಕ 1980 ರಲ್ಲಿ ಪ್ರಶಸ್ತಿ ಗೆದ್ದ ಪ್ರಕಾಶ್ ಪಡುಕೋಣೆಯವರ ನಂತರ ಈ ಸಾಧನೆ ಮಾಡಿದ ಎರಡನೇ ಭಾರತೀಯ ಆಟಗಾರ ಎಂಬ ಖ್ಯಾತಿಗೆ ಪಾತ್ರರಾದರು.

ವೃತ್ತಿಪರ ಆಟದಿಂದ ನಿರ್ಗಮಿಸಿದ ನಂತರ ಗೋಪಿಚಂದ್ ಅವರು ತಮ್ಮದೇ ಆದ ಗೋಪಿಚಂದ್ ಬ್ಯಾಡ್ಮಿಂಟನ್ ಅಕಾಡೆಮಿ ಯನ್ನು ಹೈದರಾಬಾದಿನಲ್ಲಿ ಸ್ಥಾಪಿಸಿದರು. ಅತ್ಯಾಧುನಿಕ ಸೌಕರ್ಯಗಳನ್ನೊಳಗೊಂಡ ಇವರ ಅಕಾಡೆಮಿಯಲ್ಲಿ ಹಲವು ಮಂದಿ ರಾಷ್ತ್ರೀಯ ಅಂತರರಾಷ್ತ್ರೀಯ ಖ್ಯಾತಿಯ ಆಟಗಾರರು ತರಬೇತಿ ಪಡೆಯುತ್ತಿದ್ದಾರೆ. ಈ ಮೂಲಕ ಭಾರತದಲ್ಲಿ ಅಂತರರಾಷ್ಟ್ರೀಯ ಮಟ್ಟದ ಬ್ಯಾಡ್ಮಿಂಟನ್ ತರಬೇತಿ ಸಂಸ್ಥೆಯನ್ನು ಸ್ಥಾಪಿಸಿದ ಹೆಗ್ಗಳಿಕೆ ಗೋಪಿಚಂದ್ ಅವರದು. ಖ್ಯಾತ ಆಟಗಾರರಾದ ಸೈನಾ ನೆಹವಾಲ್, ಪರುಪಳ್ಳಿ ಕಶ್ಯಪ್, ಪಿ.ವಿ. ಸಿಂಧು, ಗುರು ಸಾಯಿದತ್ ಸೇರಿದಂತೆ ಹಲವಾರು ಭಾರತೀಯ ಬ್ಯಾಡ್ಮಿಂಟನ್ ಆಟಗಾರರು ಇವರ ಅಕಾಡೆಮಿಯಲ್ಲಿ ತರಬೇತಿ ಪಡೆದಿರುವ/ಪಡೆಯುತ್ತಿರುವ ಪ್ರಮುಖರು.

ಪುಲ್ಲೇಲ ಗೋಪಿಚಂದ್ ರವರು ಅರ್ಜುನ ಪ್ರಶಸ್ತಿ (೧೯೯೯), ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ (೨೦೦೧), ಪದ್ಮಶ್ರೀ ಪುರಸ್ಕಾರ (೨೦೦೫), ದ್ರೋಣಾಚಾರ್ಯ (ಪ್ರಶಸ್ತಿ ೨೦೦೯), ಪದ್ಮ ಭೂಷಣ ಪ್ರಶಸ್ತಿ (೨೦೧೪) ಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

&copy: indianexpress

&copy: indianexpress

ಗೋಪಿಚಂದ್ ಬ್ಯಾಡ್ಮಿಂಟನ್ ಅಕಾಡೆಮಿ ಹಿಂದೆ ಗೋಪಿಚಂದ್ ರವರ ಪರಿಶ್ರಮ ಇರುವುದು ಸತ್ಯ, ದಿನನಿತ್ಯ ಅವರು ಬೆಳಗಿನಜಾವ 4 ಘಂಟೆಗೆ ಮೊದಲು ಅಕಾಡೆಮಿಗೆ ಬರುತ್ತಿದ್ದರಂತೆ. ಸಾಮಾನ್ಯವಾಗಿ, ದಿನ ಪಿ.ವಿ. ಸಿಂಧು ಮತ್ತು ಕಿಡಂಬಿ ಶ್ರೀಕಾಂತ್ ಹಿರಿಯ ವಿದ್ಯಾರ್ಥಿಗಳಿಂದ pratice ಶುರು ಮಾಡಿಸುತ್ತಿದ್ದರು.

ರಿಯೋ ಒಲಂಪಿಕ್ಸ್ ನಲ್ಲಿ ಪದಕ ವಿಜೇತರಾದ ವೀರವನಿತೆಯರಾದ ಪಿ.ವಿ.ಸಿಂಧು ಕೂಡ ಎರಹತ್ತಿರಾ ತರಬೇತೆ ಪಡೆದವರಲ್ಲಿ ಒಬ್ಬರು. ಅವರ ಈ ಸಾಧನೆಯಲ್ಲಿ ಪುಲ್ಲೇಲ ಗೋಪಿಚಂದ್ರವರ ಪಾತ್ರ ದೊಡ್ಡದು.

ಪಿ.ವಿ.ಸಿಂಧು ರವರ ಬಗ್ಗೆ 

300x300xpv-sindhu-01.jpg.pagespeed.ic.yomTdrPI89

ಪಿ.ವಿ ಸಿಂಧು ಜನಿಸಿದ್ದು ಹೈದರಾಬಾದ್ನಲ್ಲಿ. ತಂದೆ ಪಿ.ವಿ. ರಮಣ ಮತ್ತು ತಾಯಿ ಪಿ. ವಿಜಯ. ಸಿಂಧುವಿನ ತಂದೆ-ತಾಯಿ ಇಬ್ಬರೂ ಸಹ ಮಾಜಿ ವಾಲಿಬಾಲ್ ಆಟಗಾರರಾಗಿರುವುದೊಂದು ವಿಶೇಷ. ತಂದೆ ರಮಣರವರು ಕನ್ನಡ ಮಾತನಾಡಬಲ್ಲರು..

ಗೋಪಿಚಂದ್ ಅವರ ಬ್ಯಾಡ್ಮಿಂಟನ್ ಅಕಾಡೆಮಿ ಸೇರಿದ ನಂತರ, ಸಿಂಧು ಹಲವಾರು ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಚೀನಾ ದಲ್ಲಿ ಜರುಗಿದ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ (ಪ್ರಕಾಶ್ ಪಡುಕೋಣೆ ೧೯೮೩ ರಲ್ಲಿ ಕಂಚು ಗೆದ್ದ ನಂತರ ಭಾರತದ ಮೊದಲ ಸಿಂಗಲ್ಸ್ ಪದಕ)ನ ಸಿಂಗಲ್ಸ್ ನಲ್ಲಿ ಪದಕ ಗೆದ್ದ ಮೊದಲ ಭಾರತೀಯ ಮಹಿಳೆಯಾಗಿದ್ದಾರೆ.

“ಸಿಂಧು ಆಟದಲ್ಲಿನ ಅತ್ಯಂತ ಗಮನಾರ್ಹ ಲಕ್ಷಣವೆಂದರೆ, ಆಕೆಯ ಧನಾತ್ಮಕ ವರ್ತನೆ ಮತ್ತು ಕಡೆಯವರೆವಿಗೂ ಹೋರಾಡುವ ಮನೋಭಾವ ” ಎಂದು ಗೋಪಿಚಂದ್ ರವರು ಪ್ರಶಂಸಿದ್ದಾರೆ.

ಬ್ಯಾಡ್ಮಿಂಟನ್‌ನಲ್ಲಿ ಯಾರೂ ಇದುವರೆಗೆ ಭಾರತಕ್ಕೆ ಒಲಿಂಪಿಕ್ಸ್‌ ಬೆಳ್ಳಿ ಅಥವಾ ಚಿನ್ನ ತಂದಿತ್ತಿಲ್ಲ. ಸೈನಾ ನೆಹ್ವಾಲ್‌ 2012ರ ಲಂಡನ್‌ ಕೂಟದಲ್ಲಿ ಕಂಚು ಜಯಿಸಿದ್ದು ಭಾರತದ ಸ್ಪರ್ಧಿಯ ಇದುವರೆಗಿನ ಅತ್ಯುತ್ತಮ ಸಾಧನೆ ಎನಿಸಿದೆ. ಪಿ.ವಿ.ಸಿಂಧು ರವರ ಈ ಸಾಧನೆ ಭಾರತದ ಬ್ಯಾಡ್ಮಿಂಟನ್‌ನಲ್ಲಿ ಅಚ್ಚಳಿಯದೇ ಉಳಿಯಲಿದೆ.

ರಿಯೋ ಒಲಿಂಪಿಕ್‌ನ ಬ್ಯಾಡ್ಮಿಂಟನ್ ಸಿಂಗಲ್ಸ್ ನಲ್ಲಿ ಫೈನಲ್ ತಲುಪಿರೋ ಪಿ.ವಿ.ಸಿಂಧು ಚಿನ್ನ ಗೆದ್ದು ಬರಲಿ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top