fbpx
Karnataka

ಈ ಗ್ರಾಮಕ್ಕೆ ಯಾರೂ ಹೆಣ್ಣು ಕೊಡಲ್ಲ

‘ಕಕ್ಕೇರಾ ಸುತ್ತಲಿನ ಗ್ರಾಮಗಳು ಮತ್ತು ಲಿಂಗಸಗೂರು ತಾಲ್ಲೂಕಿನ ಗುರಗುಂಟಾ ಗ್ರಾಮದಲ್ಲಿ ನೀಲಕಂಠರಾಯನಗಡ್ಡಿ ಗ್ರಾಮದ ಸಂಭದಿಕರೊಬ್ಬರಾದ ನೀಲಕಂಠ ‘ಪ್ರಜಾವಾಣಿ’ಗೆ ತಮ್ಮ ಗ್ರಾಮದ ಪರಿಸ್ಥಿತಿ ಬಗ್ಗೆ ಹೀಗೆ ವಿವರಿಸಿದರು.

ವಿದ್ಯುತ್ ಮತ್ತು ಆಸ್ಪತ್ರೆ ವ್ಯವಸ್ಥೆ ಇಲ್ಲಿಲ್ಲ. ಇರುವ ಪ್ರಾಥಮಿಕ ಶಾಲೆ ಪ್ರವಾಹ ಬಂದಾಗ ತೆರೆಯುವುದಿಲ್ಲ. ಗ್ರಾಮಕ್ಕೆ ನದಿ ಮಾರ್ಗದಲ್ಲಿ ತೆರಳಬೇಕಿರುವುದರಿಂದ ಬಸ್ ಸೌಲಭ್ಯವೂ ಇಲ್ಲ. ಇಂತಹ ಸಂಕಷ್ಟದಲ್ಲಿ ಕನಿಷ್ಠ ಸೌಲಭ್ಯವಿಲ್ಲದ ಈ ಊರಿಗೆ ಯಾರು ತಾನೇ ಹೆಣ್ಣು ಕೊಡಲು ಮುಂದೆ ಬರುತ್ತಾರೆ’. ಅವರು ಮಾತ್ರ ಈ ಊರಿನಲ್ಲಿರುವ ಯುವಕರಿಗೆ ಹೆಣ್ಣು ಕೊಡುತ್ತಾರೆ ಮತ್ತು ಇಲ್ಲಿರುವ ಹೆಣ್ಣು ಮಕ್ಕಳನ್ನು ಮದುವೆಯಾಗುತ್ತಾರೆ. ಉಳಿದಂತೆ ಹೊಸಬರು ಈ ಊರಿನತ್ತ ಮುಖ ಮಾಡುವುದಿಲ್ಲ’ ಎನ್ನುತ್ತಾರೆ.

E0987848-CAA9-41A6-8D76-197C2211ECCF_L_styvpf

© kannada.eenaduindia

‘ಸಾವಿರ ಎಕರೆ ಸಾಗುವಳಿ ಭೂಮಿ ಇರುವ ನೀಲಕಂಠರಾಯ ಗಡ್ಡಿ ಗ್ರಾಮದಲ್ಲಿ 100ಕ್ಕೂ ಹೆಚ್ಚು ಮನೆಗಳಿದ್ದು, 300ಕ್ಕೂ ಹೆಚ್ಚು ಜನರು ವಾಸಿಸುತ್ತಾರೆ. ಪ್ರತಿಯೊಬ್ಬರದ್ದೂ ಎರಡರಿಂದ ಐದು ಎಕರೆ ಭೂಮಿ ಇದೆ. ಇದರಿಂದ ಬರುವ ಆದಾಯದಿಂದಲೇ ಇಲ್ಲಿಯ ಜನರ ಜೀವನ ನಡೆಯುತ್ತದೆ. ಕೆಲವರಿ ಇಲ್ಲಿನ ಸಮಸ್ಸೆಗಳಿಗೆ ಬೆಸೊತ್ತು ಪಟ್ಟಣಕ್ಕೆ ಸೇರಿಕೊಂಡಿದ್ದಾರೆ’.

ಸುಮಾರು 43 ಕುಟುಂಬಗಳಿಂದ 250ಕ್ಕೂ ಹೆಚ್ಚು ಜನರು ಇಲ್ಲಿ ವಾಸಿಸುತ್ತಿದ್ದಾರೆ. ಈ ಗ್ರಾಮ ಹಲವಾರು ವರ್ಷಗಳಿಂದ ಈ ರೀತಿ ನಡುಗಡ್ಡೆಯಾಗಿಯೇ ಉಳಿದಿದೆ. ಜನರು ಆಚೆಗೆ ಬರಬೇಕಾದರೆ ತೆಪ್ಪದ ಮುಖಾಂತರ ಇಲ್ಲವೇ, ಬೆನ್ನಿಗೆ ಈಸ್‌ಕಾಯಿ ಕಟ್ಟಿಕೊಂಡು (ಮೂರು ಕುಂಬಳಕಾಯಿಗಳನ್ನು ಒಂದಕ್ಕೊಂದು ಜೋಡಿಸಿದ ಸಾಧನ) ಈಜಿಕೊಂಡು ಇನ್ನೊಂದು ದಡಕ್ಕೆ ಬರುತ್ತಾರೆ. ಒಮ್ಮೆ ಬಂದು ಮೇಲೆ ಮನೆಗೆ ಬೇಕಾದ ಸಾಮಾನುಗಳನ್ನು ತೆಗೆದುಕೊಂಡು ಹೋಗುತ್ತಾರೆ.

“ಗ್ರಾಮದಲ್ಲಿ ಸೌಕರ್ಯವಿಲ್ಲ. ಇಲ್ಲಿಯ ಪರಿಸ್ಥಿತಿ ನೋಡಿದ ಹೊರಗಿನವರು ಈ ಗ್ರಾಮಕ್ಕೆ ಯಾರೂ ಹೆಣ್ಣು ಕೊಡಲ್ಲ. ಹೀಗಾಗಿ ಸಂಬಂಧಿಕರ ಮಧ್ಯೆ ಮಾತ್ರ ಮದುವೆಗಳು ನಡೆಯುತ್ತವೆ.”
-ನೀಲಕಂಠ , ಗ್ರಾಮಸ್ಥ

ನೀಲಕಂಠರಾಯನಗಡ್ಡಿ ಗ್ರಾಮದ ಗೋಳು.

ಈ ಗ್ರಾಮದ ಭೂಮಿಯನ್ನು ಯಾರೂ ಖರೀದಿಸುವುದಿಲ್ಲ. ಇಲ್ಲಿರುವವರು ಮತ್ತೊಬ್ಬರ ಭೂಮಿಯನ್ನು ಖರೀದಿ ಮಾಡುವಷ್ಟು ಶಕ್ತರಾಗಿಲ್ಲ. ಹೀಗಾಗಿ ಇಲ್ಲಿನ ಜನರು ತಮ್ಮ ತಮ್ಮ ಪಾಲಿನ ಭೂಮಿಯಲ್ಲಿ ಉಳಿಮೆ ಮಾಡಿಕೊಂಡು ಬದುಕಬೇಕಾದ ಅನಿವಾರ್ಯತೆ ಇದೆ.

ಜನಪ್ರತಿನಿಧಿಗಳ ನಿರ್ಲಕ್ಷ್ಯ: ‘ನದಿಗೆ ಅಡ್ಡಲಾಗಿ ಗ್ರಾಮಕ್ಕೆ ಸಂಪರ್ಕಿಸುವ ಮೇಲ್ಸೇತುವೆ ನಿರ್ಮಾಣ ಮಾಡುತ್ತೇವೆ ಎಂದು ಪ್ರತಿ ಚುನಾವಣೆಯಲ್ಲೂ ಇಲ್ಲಿನ ಜನಪ್ರತಿನಿಧಿಗಳು ಭರವಸೆ ನೀಡುತ್ತಾರೆ ಆದರೆ, ಇದುವರೆಗೂ ಅದು ಈಡೇರಿಲ್ಲ’ ಎಂದು ಗ್ರಾಮಸ್ಥರು ಆರೋಪಿಸುತ್ತಾರೆ.

ಪ್ರವಾಹ ಇಳಿಮುಖ: ನಾರಾಯಣಪುರ ಬಸವಸಾಗರ ಜಲಾಶಯದಿಂದ 2ಲಕ್ಷ ಕ್ಯುಸೆಕ್ ನೀರನ್ನು ನದಿಗೆ ಬಿಟ್ಟ ಪರಿಣಾಮ ಜುಲೈ 19ರಿಂದ ಸುಮಾರು 20ದಿನ ನೀಲಕಂಠರಾಯನ ಗಡ್ಡಿ ಗ್ರಾಮಸ್ಥರು ಹೊರ ಜಗತ್ತಿನ ಸಂಪರ್ಕ ಕಳೆದು ಕೊಂಡಿದ್ದರು. 4-5 ದಿನಗಳಿಂದ ಪ್ರವಾಹ ಕಡಿಮೆಯಾದ್ದರಿಂದ ನೀಲಕಂಠರಾಯ ಗಡ್ಡಿ ಗ್ರಾಮಸ್ಥರು ನೆಮ್ಮದಿಯಿಂದ ಇದ್ದಾರೆ. ನದಿಯಲ್ಲಿ ನಡೆದುಕೊಂಡು ಬಂದು, ಕಕ್ಕೇರಾ ಪಟ್ಟಣದಲ್ಲಿ ತಮಗೆ ಬೇಕಾದ ವಸ್ತುಗಳನ್ನು ತೆಗೆದುಕೊಂಡು ಹೋಗುತ್ತಿದ್ದಾರೆ.

ಕಕ್ಕೇರಾ ಪುರಸಭೆ ವ್ಯಾಪ್ತಿಯ 17ನೇ ವಾರ್ಡ್‍ಗೆ ಒಳಪಡುವ ನೀಲಕಂಠರಾಯನಗಡ್ಡಿ ಗ್ರಾಮದ ಜನಪ್ರತಿನಿಧಿಗಳು ಕೂಡ ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಿದ್ದಾರೆ. ಪ್ರವಾಹ ಬಂದಾಗ ಜಿಲ್ಲಾಡಳಿತ ತಿಂಗಳಿಗಾಗುವಷ್ಟು ಆಹಾರ ಪದಾರ್ಥಗಳು ನೀಡಿ ಕೈತೊಳೆದುಕೊಳ್ಳುತ್ತದೆ. ಆದರೆ, ಶಾಶ್ವತವಾದ ಯೋಜನೆಗಳನ್ನು ಒದಗಿಸುವಲ್ಲಿ ಹಿಂದೇಟು ಹಾಕುತ್ತಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top