ಬೆಂಗಳೂರು: ನಗರದಲ್ಲಿ ಮಾದಕ ವಸ್ತು ಕೊಕೇನ್ಅನ್ನು ಮಾರಾಟ ಮಾಡುತ್ತಿದ್ದ ನೈಜೀರಿಯಾ ದೇಶದ ಆರೋಪಿ ಬಂಧನ.
ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ನೈಜೀರಿಯಾ ದೇಶದ ಪ್ರಜೆಯನ್ನು ಬಂಧಿಸಿ 13ಸಾವಿರ ಬೆಲೆಯ ಮಾದಕ ವಸ್ತು, 260 ಗ್ರಾಂ ತೂಕದ ಕೊಕೇನ್, 2 ಮೊಬೈಲ್ ಫೋನಗಳು ಹಾಗೂ ಒಂದು ಪಾಸ್ಪೋರ್ಟ್ ಜೆರೊಕ್ಸ್ ಹಾಳೆಯನ್ನು ಶಪಡಿಸಿಕೊಂಡಿದ್ದಾರೆ.
ನಗರದ ಬಾಗಲೂರು ಪೊಲೀಸ್ ಠಾಣಾ ಸರಹದ್ದಿನ ಬಿದರಹಳ್ಳಿ ಹೋಬಳಿ, ಕಣ್ಣೂರು ಪೋಸ್ಟ್, ಬಂಡೇ ಹೊಸೂರುಹಳ್ಳಿಯಲ್ಲಿ ನೈಜೀರಿಯಾ ದೇಶದ ಪ್ರಜೆ ಮಾದಕ ಮಾದಕವಸ್ತುವನ್ನು ಇಟ್ಟುಕೊಂಡು ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಸಂಗ್ರಹಿಸಿದ ತಕ್ಷಣ ಕಾರ್ಯಪ್ರವೃತ್ತರಾದ ಕೇಂದ್ರ ಅಪರಾಧದ ವಿಭಾಗ (ಸಿ.ಸಿ.ಬಿ) ವಿಶೇಷ ವಿಚಾರಣಾ ದಳದ ಇನ್ಸ್ ಪೆಕ್ಟರ್ ಮತ್ತು ಸಿಬ್ಬಂದಿಗಳು ಇದೇ 22 ರಂದು ಕ್ಷಪ್ತ ಕಾರ್ಯಾಚರಣೆ ನಡೆಸಿ ಆರೋಪಿ ADINIFE RAPHAEL OGUGUA S/O OGUGUA- 37 YEARS, NO.26, BENSON STREET OFF OSHODI RAOD, LAGOS, NIGERIA. Present adress: BandeHosir, BidarahalliHobil, Bengalore east. ಈತನನ್ನು ವಶಕ್ಕೆ ಪಡೆದಿದ್ದರೆ.
ಈತ ಬಿಸಿನೆಸ್ ವೀಸಾ ಪಡೆದುಕೊಂಡು 2010 ರಲ್ಲಿ ಭಾರತಕ್ಕೆ ಬಂದಿದ್ದು, ದೆಹಲಿ & ಮುಂಬೈಗಳಲ್ಲಿ ತಂಗಿದ್ದು 2012 ರಲ್ಲಿ ಬೆಂಗಳೂರಿಗೆ ಬಂದಿರುತ್ತಾನೆ. ಈತನ ವೀಸಾ ಅವಧಿಯು 2015 ಕ್ಕೆ ಮುಕ್ತಾಯವಾಗಿದ್ದರೂ, ತನ್ನ ದೇಶಕ್ಕೆ ವಾಪಸಾಗದೆ ಅನಧಿಕೃತವಾಗಿ ಬೆಂಗಳೂರಿನಲ್ಲೇ ವಾಸವಾಗಿದದ್ದು ವಿಚಾರಣೆಯಿಂದ ತಿಳಿದು ಬಂದಿದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
