ಪ್ಯಾರಲ್ಯಕ್ಸ್ ವೆಬ್ಸೈಟ್/ ಪ್ಯಾರಲ್ಯಕ್ಸ್ ಸ್ಕ್ರೂಲಿಂಗ್ (Parallax Website/ Parallax Scrolling) ಎಂಬುದು, ಅಂತರ್ಜಾಲ ಪುಟಗಳ ಹೊಸ ಆವಿಷ್ಕಾರ, ಇದು ವೆಬ್ಸೈಟ್ ತಂತ್ರಜ್ಞಾನದ ಒಂದು ಭಾಗವಾಗಿದೆ, ಇದರಲ್ಲಿ ನಾವು ಬಹುಮುಖ್ಯವಾಗಿ, ಚಿತ್ರಾತ್ಮಕ (Graphical), ಹಾಗು ಛಾಯಾಚಿತ್ರಗಳ (Photo) ಸಂಯೋಜನೆಯನ್ನು ಗಮನಿಸಬಹುದು. ಇನ್ನೊಂದರ್ಥದಲ್ಲಿ ಹೇಳಬೇಕೆಂದರೆ ಇದರಲ್ಲಿ ನಾವು ಚಿತ್ರಾತ್ಮಕ (Graphical), ಹಾಗು ಛಾಯಾಚಿತ್ರಗಳ(Photo) ಇಂಟರಾಕ್ಟಿವ್ ವಿಶುಅಲ್ಸ್ (Visual Interactivity) ಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ವೀಕ್ಷಿಸಬಹುದಾಗಿದೆ, ಇದರಿಂದಾಗಿ ಗಣಕ ಜಾಲ ಪುಟಗಳನ್ನು (web pages) ತುಂಬಾ ಕುತೂಹಲಕಾರಿಯಾಗಿ ಕಾಣುತ್ತೇವೆ.
ಪ್ಯಾರಲ್ಯಕ್ಸ್ ವೆಬ್ಸೈಟ್/ ಪ್ಯಾರಲ್ಯಕ್ಸ್ ಸ್ಕ್ರೂಲಿಂಗ್ ಹೇಗೆ ಕಾರ್ಯನಿರ್ವಹಿಸುತ್ತದೆ?
ಇತ್ತೀಚಿನ ದಿನಗಳಲ್ಲಿ ಈ ರೀತಿಯಾದ ಅತ್ಯಾಕರ್ಷಕ ಅಂತರ್ಜಾಲಪುಟಗಳನ್ನು ಕಾಣುತ್ತಿದ್ದೇವೆ. ಈ ಅಂತರ್ಜಾಲಪುಟಗಳನ್ನು ಸಾಮಾನ್ಯವಾಗಿ HTML 5 , CSS 3, ಹಾಗೂ Javascript ಕೋಡ್ ಗಳ ಸಹಾಯದಿಂದ ತಯಾರಿಸಲಾಗುತ್ತದೆ. ಇವುಗಳು ಸಾಮಾನ್ಯ ಅಂತರ್ಜಾಲಪುಟಗಳ ಶೈಲಿಯಲ್ಲಿ ಇರುವುದಿಲ್ಲ, ಇವುಗಳಲ್ಲಿನ ಸ್ಕ್ರಾಲ್ ಬಾರ್ (Scroll Bar)ಗಳು ಬಹು ಸಾಮರ್ಥ್ಯದಿಂದ ಕೂಡಿರುತ್ತವೆ, ಅಂದರೆ ನಾವು ಅಂತರ್ಜಾಲಪುಟವನ್ನು ಸ್ಕ್ರಾಲ್ ಡೌನ್ (Scroll Down) ಮಾಡುವುದರಿಂದಾಗಿ ಹೊಸ ವಿನ್ಯಾಸದ ಆಕರ್ಷಕ 2D ವಿಶುಅಲ್ (2D Visual) ಅಂತರ್ಜಾಲಪುಟಗಳು ಸಂಯೋಜನೆಗೊಳ್ಳುತ್ತವೆ. ಈ ರೀತಿಯಾಗಿ ಪ್ಯಾರಲ್ಯಕ್ಸ್ ವೆಬ್ಸೈಟ್/ ಪ್ಯಾರಲ್ಯಕ್ಸ್ ಸ್ಕ್ರೂಲಿಂಗ್ ಕಾರ್ಯನಿರ್ವಹಿಸುತ್ತವೆ
ಪ್ಯಾರಲ್ಯಕ್ಸ್ ವೆಬ್ಸೈಟ್/ ಪ್ಯಾರಲ್ಯಕ್ಸ್ ಸ್ಕ್ರೂಲಿಂಗ್ ನಿರ್ಮಾಣದ ಕ್ರಮ .
ಪ್ಯಾರಲ್ಯಕ್ಸ್ ವೆಬ್ಸೈಟ್/ ಪ್ಯಾರಲ್ಯಕ್ಸ್ ಸ್ಕ್ರೂಲಿಂಗ್ ಅಳವಡಿಸಲು ಅದರದ್ದೇ ಆದ ಕ್ರಮ ಇದೆ. ಅದರಲ್ಲಿ ಪ್ರಮುಖವಾದುದೆಂದರೆ ಪದರ ಪರಿಕಲ್ಪನೆ (Layer Concept). ಪದರ ಪರಿಕಲ್ಪನೆ ಒಂದು ಪ್ರಭಾವಿ ಕ್ರಮವಾಗಿದ್ದು ಪ್ಯಾರಲ್ಯಕ್ಸ್ ವೆಬ್ಸೈಟ್/ ಪ್ಯಾರಲ್ಯಕ್ಸ್ ಸ್ಕ್ರೂಲಿಂಗ್ ಅಂತರ್ಜಾಲಪುಟಗಳನ್ನು ಇದರಲ್ಲಿ ವಿವಿಧ ಮುನ್ನೆಲೆ (Foreground), ಹಿನ್ನೆಲೆ (Background) ಪದರಗಳ ಸಂಯೋಜನೆಯ ಮೂಲಕ ಒಂದು ರೂಪ ಕೊಡಲಾಗುತ್ತದೆ. ಅಂದರೆ ಒಂದೊಂದು ಪದರವೂ ಒಂದೊಂದು ಹೊಸ ವಿನ್ಯಾಸದ ಚಿತ್ರಾತ್ಮಕ ಅಂಶಗಳನ್ನು (Graphical Elements) ಹೊಂದಿರುತ್ತದೆ.ಅದು ಒಟ್ಟಾರೆಯಾಗಿ ಸ್ಕ್ರಾಲ್ ಅಪ್ ಅಥವಾ ಸ್ಕ್ರಾಲ್ ಡೌನ್ (Scroll up/Scroll Down) ಮಾಡಿದಾಗ ಒಂದು ನಿರ್ದಿಷ್ಟ ಹಾಗೂ ಆಕರ್ಷಕ ವಿನ್ಯಾಸವಾಗಿ ನಮ್ಮ ಕಣ್ಣಮುಂದೆ ಬರುತ್ತದೆ.
ಕೆಳಗಿರುವ ಚಿತ್ರಗಳು ಪ್ಯಾರಲ್ಯಕ್ಸ್ ವೆಬ್ಸೈಟ್/ ಪ್ಯಾರಲ್ಯಕ್ಸ್ ಸ್ಕ್ರೂಲಿಂಗ್ ನ ಪದರ ಪರಿಕಲ್ಪನೆಯನ್ನು (Layer Concept) ತಿಳಿಸುತ್ತದೆ.

© ssrarticles.wordpress

© ssrarticles.wordpress
ಪ್ಯಾರಲ್ಯಕ್ಸ್ ವೆಬ್ಸೈಟ್ ಹೇಗೆ ಪರಿಣಾಮಕಾರಿ?
ಪ್ರಮುಖವಾಗಿ ಗ್ರಾಹಕರನ್ನು ತನ್ನತ್ತ ಸೆಳೆಯಲು ಪ್ಯಾರಲ್ಯಕ್ಸ್ ವೆಬ್ಸೈಟ್ ಗಳನ್ನು ನಿರ್ಮಾಣ ಮಾಡಲಾಗಿರುತ್ತದೆ, ಯಾವುದೇ ಒಂದು ಜಾಲತಾಣಕ್ಕೆ ಗ್ರಾಹಕ/ವೀಕ್ಷಕ ಬೇಟಿ ಕೊಡಬೇಕೆಂದರೆ, ಅದರಲ್ಲಿ ಹೊಸತನವನ್ನು ನೋಡಲಿಚ್ಚಿಸುತ್ತಾನೆ, ಅಂತಹ ಸಂಧರ್ಭಗಳಲ್ಲಿ ಪ್ಯಾರಲ್ಯಕ್ಸ್ ವೆಬ್ಸೈಟ್ ಗಳು ತುಂಬಾ ಪರಿಣಾಮಕಾರಿಯಾಗಿರುತ್ತದೆ.
ಸಾಧಕ ಹಾಗು ಬಾಧಕಗಳು
ಸಾಧಕಗಳು:
–> ಜಾಲತಾಣಗಳು ನೋಡಲು ಅತ್ಯಾಕರ್ಷಕವಾಗಿರುತ್ತವೆ.
–> ಜಾಲತಾಣಗಳಿಗೆ ಬೇಟಿ ಕೊಡುವವರನ್ನು ತನ್ನ ಹಿಡಿತದಲ್ಲಿರಿಸಲು ಸಹಕಾರಿಯಾಗಿರುತ್ತದೆ. ವೀಕ್ಷಕನು ಮತ್ತೊಮ್ಮೆ ಜಾಲತಾಣಕ್ಕೆ ಬೇಟಿ ಕೊಡಲು ಇದು ಕಾರಣವಾಗುತ್ತದೆ.
ಬಾಧಕಗಳು:
–> ಪ್ಯಾರಲ್ಯಕ್ಸ್ ಅಂತರ್ಜಾಲಪುಟಗಳಲ್ಲಿನ ಅತೀ ಹೆಚ್ಚು ಛಾಯಾಚಿತ್ರಗಳು (Photo), ಚಿತ್ರಾತ್ಮಕ ಅಂಶಗಳು (Graphical Elements) ಹಾಗು ಅನಿಮೇಷನ್ ಒಳಅಂಶವು ಅಂತರ್ಜಾಲಪುಟ ತೆರೆದುಕೊಳ್ಳುವ ಸಮಯ ಹೆಚ್ಚಾಗುವಂತೆ ಮಾಡುತ್ತವೆ (Webpage total loading time), ಇದನ್ನು ನಾವು ಹಲವಾರು ಕಡೆ ಕಾಣಬಹುದು.
–> ಪ್ಯಾರಲ್ಯಕ್ಸ್ ಅಂತರ್ಜಾಲಪುಟಗಳು ಬಹಳ ಸಂಧರ್ಭಗಳಲ್ಲಿ ಕೇವಲ ಕಂಪ್ಯೂಟರ್ ನಲ್ಲಿ ಮಾತ್ರ ತೆರೆದುಕೊಳ್ಳುತ್ತವೆ(Desktop version), ಮೊಬೈಲ್ ಗಳಲ್ಲಿ ಕಷ್ಟಸಾಧ್ಯ.
–> ಪ್ಯಾರಲ್ಯಕ್ಸ್ ಅಂತರ್ಜಾಲಪುಟಗಳು ತೆರೆದುಕೊಳ್ಳಲು ಅತ್ಯುತ್ತಮ ಅಂತರ್ಜಾಲ ಸಂಪರ್ಕ ಅನಿವಾರ್ಯ .
ಈ ಕೆಳಗಿನ ಕೆಲವು ಕೊಂಡಿಗಳು ಪ್ರಮುಖ ಪ್ಯಾರಲ್ಯಕ್ಸ್ ಜಾಲತಾಣಗಳನ್ನು ಕಾಣಬಹುದು :
http://www.soleilnoir.net/believein/#/start
ಸೂಚನೆ: ನಿಮ್ಮ ಕಂಪ್ಯೂಟರ್ ನಲ್ಲಿ ಅಂತರ್ಜಾಲ ಸಂಪರ್ಕ ವೇಗದಿಂದ ಕೂಡಿದ್ದರೆ ಈ ಮೇಲಿನ ಪ್ಯಾರಲ್ಯಕ್ಸ್ ಜಾಲತಾಣಗಳನ್ನು ತುಂಬಾ ಪರಿಣಾಮಕಾರಿಯಾಗಿ ವೀಕ್ಷಿಸಬಹುದಾಗಿದೆ.
– ಶರತ್ ಎಸ್ ರಾವ್
Web Designer & Developer
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
