fbpx
Editor's Pick

ಭಾರತದಲ್ಲಿ ಮಲ್ಟಿಮೀಡಿಯಾ ತಂತ್ರಜ್ಞಾನ

ಭಾರತದಲ್ಲಿ ದಿನದಿಂದ ದಿನಕ್ಕೆ ಹೊಸ ತಾಂತ್ರಿಕ ಕೋರ್ಸ್ಗಳು ಹುಟ್ಟುತ್ತಿವೆ. ಆ ಸಾಲಿನಲ್ಲಿ ಮಲ್ಟಿಮೀಡಿಯಾ ಕ್ಷೇತ್ರವೂ ಒಂದು. ಈ ಮಲ್ಟಿಮೀಡಿಯಾ ಕ್ಷೇತ್ರದ ಬಾಹು ದಿನದಿಂದ ದಿನಕ್ಕೆ ತನ್ನ ವಿಸ್ತಾರವನ್ನು ಹೆಚ್ಚಿಸಿಕೊಳ್ಳುತ್ತಿದೆ. ಮಲ್ಟಿಮೀಡಿಯಾ ಒಂದು ದೊಡ್ಡ ಸಾಗರದಂತೆ. ಇದರಲ್ಲಿ ಕಾಣುವ ಹತ್ತು ಹಲವು ವಿಷಯಗಳು ನಿಜಕ್ಕೂ ಅದ್ಭುತ.

© ssrarticles.wordpress

© ssrarticles.wordpress

ಇತ್ತೀಚಿನ ವರ್ಷಗಳಲ್ಲಿ ಭಾರತೀಯರು ಮಲ್ಟಿಮೀಡಿಯಾ ಮಾಯೆಗೆ ತಲೆದೂಗಿರುವುದೇನೋ ನಿಜ. ಗೊತ್ತಿದ್ದೋ ಗೊತ್ತಿಲ್ಲದೆಯೋ ಜನರು ಮಲ್ಟಿಮೀಡಿಯಾ ತಂತ್ರಜ್ಞಾನವನ್ನು ನಿತ್ಯ ಜೀವನದಲ್ಲಿ ಬಳಸುತ್ತಿದ್ದಾರೆ. ಮಾಧ್ಯಮಕ್ಕೆ ಸಂಬಂಧಪಟ್ಟ ಯಾವವೊಂದು ಉದಾಹರಣೆ ತಗೆದುಕೊಂಡರು ಮಲ್ಟಿಮೀಡಿಯಾ ತಂತ್ರಜ್ಞಾನದ ಸಹಾಯವಿಲ್ಲದೆ ಯಾರೊಬ್ಬರು ತಮ್ಮ ವಿಚಾರವನ್ನು ಪರಿಣಾಮಕಾರಿಯಾಗಿ ಪ್ರಸ್ತುತ ಪಡಿಸಲು ಸಾದ್ಯವಿಲ್ಲ ಎನ್ನುವಂತೆ ಆಗಿದೆ.

ಭಾರತದಲ್ಲಿ ಕೆಲವೇ ವರ್ಷಗಳಿಂದೀಚೆಗೆ ಮಲ್ಟಿಮೀಡಿಯಾ ಕೋರ್ಸ್ ಗಳು ಜನ್ಮತಾಳಿವೆ, ಅದರಲ್ಲಿ ಡಿಪ್ಲೋಮಾ, ಪದವಿ, ಹಾಗು ಸ್ನಾತಕೋತ್ತರ ಪದವಿಗಳು ಪ್ರಮುಖವಾದವುಗಳು. ಈ ಕೋರ್ಸ್ಗಳಲ್ಲಿ ಮಲ್ಟಿಮೀಡಿಯಾ ತಂತ್ರಾಂಶಗಳ ಬಳಕೆ ಮತ್ತು ಅದರ ಉಪಯೋಗಗಳ ಕುರಿತು ತಿಳಿಸಿಕೊಡಲಾಗುತ್ತದೆ.

ಮಲ್ಟಿಮೀಡಿಯಾದಲ್ಲಿ ಅಂಥದ್ದೇನಿದೆ?

ಮಲ್ಟಿಮೀಡಿಯಾ ಒಂದು ಅದ್ಭುತ ವಿಷಯಗಳ ಗೊಂಚಲು, ಇದರಲ್ಲಿ ನಾವು ದೃಶ್ಯ, ಧ್ವನಿ , 3D , ಗಣಕ ಜಾಲ (web) ಹಾಗೂ ಇತ್ಯಾದಿಗಳನ್ನು ಹಲವಾರು ತಂತ್ರಾಂಶಗಳ ಸಹಾಯದಿಂದ ತಯಾರಿಸಬಹುದಾಗಿದೆ/ತಿದ್ದಬಹುದಾಗಿದೆ ,

ಮಲ್ಟಿಮೀಡಿಯಾವನ್ನು ೪ ವಿಭಾಗಗಳಾಗಿ ವಿಂಗಡನೆ ಮಾಡಬಹುದಾಗಿದೆ :

ಗ್ರಾಫಿಕ್ ಡಿಸೈನ್ (Graphic Design)

ವೆಬ್ ಡಿಸೈನ್/ಡೆವಲಪ್ಮೆಂಟ್ (Web Design/Development)

೩ಡಿ (3D)

ವಿ.ಎಫ್.ಎಕ್ಸ್/ ಎಸ್. ಎಫ್. ಎಕ್ಸ್ (VFX/SFX)

ಮೇಲ್ಕಂಡ ಒಂದೊಂದು ವಿಷಯವೂ ಕೂಡ ಅಗಾಧ. ಒಂದೊಂದರಲ್ಲೂ ಸಾಕಷ್ಟು ಪ್ರಾವೀಣ್ಯತೆಯ ಅವಶ್ಯಕತೆ ಇದೆ ಹೀಗಿರುವಾಗ ಇವುಗಳ ಆಳ ಎಷ್ಟಿರಬಹುದೆಂದು ಗೋಚರವಾಗುತ್ತದೆ.

ಮಲ್ಟಿಮೀಡಿಯಾ ತಂತ್ರಜ್ಞಾನ ಕ್ಷೇತ್ರಕ್ಕೆ ಮುಂದೆ ಅವಕಾಶ ಇದೆಯೇ?

ಹೌದು ಖಂಡಿತವಾಗಿಯೂ ಇದೆ. ಮನೋರಂಜನೆ ಕ್ಷೇತ್ರ ಎಷ್ಟು ದಿನ ಅಸ್ತಿತ್ವದಲ್ಲಿ ಇರುವುದೋ ಅಷ್ಟು ದಿನವೂ ಮಲ್ಟಿಮೀಡಿಯಾ ಕ್ಷೇತ್ರ ಬದುಕುಳಿಯಲಿದೆ!! (ಹೌದು ಇದು ನಿಜಕ್ಕೂ ಹಚ್ಚ ಹಸಿರಾದ ರಂಗ ), ದೂರದರ್ಶನ ಮಾಧ್ಯಮ, ಅಂತರ್ಜಾಲ ಮಾಧ್ಯಮ , e -ಕಾಮರ್ಸ್, ಚಲನಚಿತ್ರರಂಗ, ಅನಿಮೇಷನ್ ತಂತ್ರಜ್ಞಾನ,ಛಾಯಾಗ್ರಹಣ, ಇತ್ಯಾದಿ ಕ್ಷೇತ್ರಗಳಿಗೆ ಮಲ್ಟಿಮೀಡಿಯಾ ಕ್ಷೇತ್ರವೇ ಬೆನ್ನೆಲುಬು. ಇನ್ನೊಂದರ್ಥದಲ್ಲಿ ಹೇಳಬೇಕೆಂದರೆ ಮಲ್ಟಿಮೀಡಿಯಾ ಇಲ್ಲದೆ ಮನೋರಂಜನಾ ಜಗತ್ತೇ ಇಲ್ಲ ಅನ್ನುವಷ್ಟರ ಮಟ್ಟಿಗೆ ಮಲ್ಟಿಮೀಡಿಯಾ ತಂತ್ರಜ್ಞಾನ ಬೆಳೆದು ನಿಂತಿದೆ!

ಮಲ್ಟಿಮೀಡಿಯಾ ತಂತ್ರಜ್ಞಾನದ ಪ್ರಮುಖ ತಂತ್ರಾಂಶಗಳು ಯಾವುವು ?

ಮಲ್ಟಿಮೀಡಿಯಾ ತಂತ್ರಜ್ಞಾನದಲ್ಲಿ ನೂರಾರು ತಂತ್ರಾಂಶಗಳು ತಮ್ಮದೇ ಆದ ವೈಶಿಷ್ಟ್ಯವನ್ನು ಹೊಂದಿವೆ ಅವುಗಳಲ್ಲಿ ಪ್ರಮುಖವಾದ ಕೆಲವು ಹೀಗಿವೆ.

೧) ಗ್ರಾಫಿಕ್ ಡಿಸೈನ್ ವಿಭಾಗ
ಅಡೋಬಿ ಫೋಟೋಶಾಪ್ (Adobe Photoshop)
ಅಡೋಬಿ ಇಲ್ಲುಸ್ಟ್ರೀಟಾರ್ (Adobe Illustrator)
ಅಡೋಬಿ ಇನ್ ಡಿಸೈನ್ (Adobe in-Design)
ಕೊರಲ್ದ್ರವ್ (Coreldraw) ಮುಂತಾದವುಗಳು ..

೨) ವೆಬ್ ಡಿಸೈನ್/ಡೆವಲಪ್ಮೆಂಟ್ ವಿಭಾಗ
ಅಡೋಬಿ ಡ್ರೀಮ್ವೀವರ (Adobe Dreamweaver)
ಇಲ್ಲಿ ಗಮನಿಸಬೇಕಾದ ಅಂಶವೆಂದರೆ ವೆಬ್ ಡೆವಲಪ್ಮೆಂಟ್ ನಲ್ಲಿ ನಮಗೆ HTML CSS JavaScript ಹಾಗು ಮುಂತಾದ ಜ್ಞಾನವು ಅವಶ್ಯ.

೩) ೩ಡಿ ವಿಭಾಗ
ಆಟೋಡೆಸ್ಕ್ ಮಾಯಾ (Autodesk Maya)
ಆಟೋಡೆಸ್ಕ್ ೩ ಡಿ ಎಸ್ ಮ್ಯಾಕ್ಸ್ (Autodesk 3DS Max) ಮುಂತಾದವುಗಳು

೪) ವಿ. ಎಫ್. ಎಕ್ಸ್ /ಎಸ್. ಎಫ್. ಎಕ್ಸ್ (VFX/SFX) ವಿಭಾಗ
ಅಡೋಬಿ ಆಫ್ಟರ್ ಎಫೆಕ್ಟ್ಸ್ (Adobe after effects )
ಅಡೋಬಿ ಪ್ರೆಮಿಎರೆ ಪ್ರೊ (Adobe Premiere Pro )
ಫೈನಲ್ ಕಟ್ ಪ್ರೊ (Final Cut Pro )
ಸೋನಿ ಸೌಂಡ್ ಫೋರ್ಜ್ (Sony sound Forge )
ನ್ಯುಕ್ . ಮುಂತಾದವುಗಳು

ಪ್ರಮುಖವಾಗಿ ಯಾವ ಯಾವ ಕಾರ್ಯಕ್ಷೇತ್ರಗಳಲ್ಲಿ ಮಲ್ಟಿಮೀಡಿಯಾ ತಂತ್ರಾಂಶಗಳು ಬಳಕೆಗೆ ಬರುತ್ತವೆ?

ಕಾರ್ಯಕ್ಷೇತ್ರಕ್ಕನುಗುಣವಾಗಿ ತಂತ್ರಾಂಶಗಳನ್ನು ಪರಿಣಿತರು ಉಪಯೋಗಿಸುವುದನ್ನು ನಾವು ನೋಡಬಹುದು ಉದಾಹರಣೆ ತೆಗೆದುಕೊಂಡರೆ

೧) ಸಿನಿಮಾ ಜಗತ್ತಿಗೆ ಗ್ರಾಫಿಕ್ ಡಿಸೈನ್ ಹಾಗು ವಿ. ಎಫ್. ಎಕ್ಸ್ /ಎಸ್. ಎಫ್ . ಎಕ್ಸ್ (VFX/SFX) ತಂತ್ರಾಂಶವನ್ನು ಉಪಯೋಗಿಸುತ್ತಾರೆ.

ವಿ. ಎಫ್. ಎಕ್ಸ್ ಬಹು ಮುಖ್ಯ ಪ್ರಾಮುಖ್ಯತೆ ವಹಿಸುವುದು ವೀಡಿಯೊ ಎಡಿಟಿಂಗ್ ಕ್ಷೇತ್ರಗಳಲ್ಲಿ. ಇತ್ತೀಚಿಗೆ ಬಂದ ಲೈಫ್ ಆಫ್ ಪೈ (Life of pi) ಚಿತ್ರ ಒಂದು ನಿದರ್ಶನ. ಆ ಚಿತ್ರದಲ್ಲಿ, ದೋಣಿ ಸಮುದ್ರದಲ್ಲಿ ಸಂಚರಿಸುವಾಗ ನಿಜವಾಗಿಯೂ ಹುಲಿಯನ್ನು ಚಿತ್ರಿಸಿದ್ದಾರೆಯೇ? ಖಂಡಿತವಾಗಿಯೂ ಇಲ್ಲ! ಆ ಹುಲಿಯು ಕೇವಲ ಕಂಪ್ಯೂಟರ-ಜೆನೆರೆಟೆಡ್ ಇಮೇಜೆರಿ (Computer-generated imagery-CGI) ಅದನ್ನು 3D ತಂತ್ರಾಂಶಗಳ ಸಹಾಯದಿಂದ ರಚಿಸಲಾಗಿರುತ್ತದೆ, ಹಾಗು ಆ ಸಮುದ್ರದ ದೃಶ್ಯಾವಳಿಯನ್ನು ಕ್ರೋಮ ರೂಂನಲ್ಲಿ (Chroma -Room = ನೀಲಿ

© ssrarticles.wordpress

© ssrarticles.wordpress

ಅಥವಾ ಹಸಿರು maxresdefaultಪರದೆಯ ಕೊಠಡಿ ) ಚಿತ್ರೀಕರಿಸಲಾಗುತ್ತದೆ , ನಂತರ ವಿ. ಎಫ್. ಎಕ್ಸ್ ಮತ್ತು ಗ್ರಾಫಿಕ್ ಡಿಸೈನ್ ತಂತ್ರಾಂಶಗಳ ಮೂಲಕ ಹಿನ್ನೆಲೆ ದೃಶ್ಯಗಳ ಸಂಯೋಜನೆ ಮಾಡಲಾಗುತ್ತದೆ, ಇದು ಕೇವಲ ಒಂದು ಉದಾಹರಣೆ ಮಾತ್ರ. ಇತ್ತೀಚಿಗೆ ಬರುವ ಹಲವು ಸಿನಿಮಾಗಳಲ್ಲಿ ವಿ. ಎಫ್. ಎಕ್ಸ್ ತಂತ್ರಾಂಶಗಳು ಬಳಕೆಗೆ ಬರುವುದನ್ನು ನೋಡಬಹುದು..

ನಂತರ ವಾಯ್ಸ್ ಡಬ್ಬಿಂಗ್ ಹಾಗು ವಿಶೇಷ ದ್ವನಿ ಸಂಯೋಜನೆಗಾಗಿ ಎಸ್. ಎಫ್ . ಎಕ್ಸ್(SFX) ತಂತ್ರಾಂಶಗಳನ್ನು ಉಪಯೋಗಿಸಲಾಗುತ್ತದೆ.

೨) ಅನಿಮೇಷನ್ ಅಥವಾ ವಾಸ್ತುಶಿಲ್ಪ ಕ್ಷೇತ್ರದಲ್ಲಿ ಹಾಗೂ ವ್ಯೆದ್ಯಕೀಯ, ಶಿಕ್ಷಣ, ಜನಜಾಗೃತಿ ಸಾಕ್ಷ್ಯಚಿತ್ರ , ವಿಜ್ಞಾನ ಕ್ಷೇತ್ರಗಳಲ್ಲಿ 3D ತಂತ್ರಾಂಶವನ್ನು ಉಪಯೋಗಿಸುವುದು ಕಂಡುಬರುತ್ತದೆ.. ಅದು ಹೇಗೆಂದರೆ ವ್ಯೆದ್ಯಕೀಯ ಕ್ಷೇತ್ರಕ್ಕೆ ಬಂದರೆ ಸಾಮಾನ್ಯ ಜನರಿಗೆ ದೇಹದ ಭಾಗಗಳ ವಿವರಣೆ ಮಾಡುವ ಸಂದರ್ಭದಲ್ಲಿ ಆ ಭಾಗದ 3D ವೀಡಿಯೊ ತೋರಿಸುವುದರ ಮೂಲಕ ಅರಿವು ಮೂಡಿಸಲಾಗುತ್ತದೆ, ಹೀಗೆ ಹತ್ತು ಹಲವು ಉದಾಹರಣೆ ಕೊಡಬಹುದಾಗಿದೆ.

೩) ವೆಬ್ ಡಿಸೈನ್ ಅಥವಾ ವೆಬ್ ಡೆವಲಪ್ಮೆಂಟ್ ಕ್ಷೇತ್ರದಲ್ಲಿ, ಗ್ರಾಫಿಕ್ ಡಿಸೈನ್ ತಂತ್ರಾಂಶ ಹಾಗು HTML ಭಾಷೆಯನ್ನು (HTML Codes ) ಬಳಸಲಾಗುತ್ತದೆ.

ಇಲ್ಲಿ ಇನ್ನೊಂದು ಗಮನಿಸಬೇಕಾದ ಅಂಶವೆಂದರೆ ಗ್ರಾಫಿಕ್ ಡಿಸೈನ್ ತಂತ್ರಾಂಶಗಳು ಒಂದು ರೀತಿಯ ಸಾರ್ವತ್ರಿಕ ತಂತ್ರಾಂಶಗಳಾಗಿ ಕಾರ್ಯನಿರ್ವಹಿಸುತ್ತವೆ, ಹೇಗೆಂದರೆ ಎಲ್ಲಾ ವಿಭಾಗಗಳಿಗೆ ತನ್ನದೇ ಆದ ಚಿತ್ರಾತ್ಮಕ (ಗ್ರಾಫಿಕಲ್) ಗುಣವಿರುತ್ತದೆ ಆ ಸಂಧರ್ಭಗಳಲ್ಲಿ ಗ್ರಾಫಿಕ್ ಡಿಸೈನ್ ತಂತ್ರಾಂಶಗಳು ಬಳಕೆಗೆ ಬರುತ್ತವೆ.

ಮಲ್ಟಿಮೀಡಿಯಾ ಕಲೆಯೋ ಅಥವಾ ವಿಜ್ಞಾನವೋ ?

ಮಲ್ಟಿಮೀಡಿಯಾ ಒಂದರ್ಥದಲ್ಲಿ ಕಲೆಯೂ ಹೌದು! ಇನ್ನೊಂದರ್ಥದಲ್ಲಿ ವಿಜ್ಞಾನವೂ ಹೌದು !!

ಮಲ್ಟಿಮೀಡಿಯಾ ಒಂದು ಕಲೆಯನ್ನು ಆಧರಿಸಿದ ವಿಜ್ಞಾನ ಕ್ಷೇತ್ರ. ಏಕೆಂದರೆ ಮಲ್ಟಿಮೀಡಿಯಾದಲ್ಲಿ ಕಲೆ ಹೊಸದೊಂದು ಆಲೋಚನೆಗೆ ನಮ್ಮನ್ನು ದೂಡುತ್ತದೆ ( ಹೊಸ ಕಲಾತ್ಮಕ ವಿಚಾರಗಳನ್ನು ಅಳವಡಿಸಲು ), ಹಾಗು ವಿಜ್ಞ್ಯಾನವು ಅದನ್ನು ಸಾಕಾರಗೊಳಿಸುತ್ತದೆ (ತಂತ್ರಾಂಶಗಳನ್ನು ಕೊಡುವುದರ ಮೂಲಕ ) ಹಾಗಾಗಿ ಇದೊಂದು ಅದ್ಭುತ ಕಲೆಯಿಂದ ಕೂಡಿದ ವಿಜ್ಞಾನ ಕ್ಷೇತ್ರ ಇದೇ ಕಾರಣಕ್ಕೆ ಮಲ್ಟಿಮೀಡಿಯಾ ತಂತ್ರಜ್ಞಾನವು ಅತ್ಯಂತ ಪರಿಣಾಮಕಾರಿ ಹಾಗು ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಕ್ಷೇತ್ರಗಳ ಸಾಲಿಗೆ ಸೇರಿದೆ.

– ಶರತ್ ಎಸ್ ರಾವ್
ಸ್ನಾತಕೋತ್ತರ ಪದವೀಧರ (ಮಲ್ಟಿಮೀಡಿಯಾ ತಂತ್ರಜ್ಞಾನ)

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

ಭಾರತದಲ್ಲಿ ಮಲ್ಟಿಮೀಡಿಯಾ ತಂತ್ರಜ್ಞಾನ
Click to comment

Leave a Reply

Your email address will not be published.

ನಮ್ಮಲ್ಲಿ ಜನಪ್ರಿಯ

To Top