fbpx
Karnataka

ತಮಿಳುನಾಡಿನ ರೈತರ ಮುಖಂಡರು ಕಾವೇರಿ ನೀರು ಬಿಡುವಂತೆ ಕರ್ನಾಟಕ ಸಿ.ಎಂ.ಗೆ ಮನವಿ

ಬೆಂಗಳೂರು : ಮಳೆ ಕೊರತೆಯಿಂದಾಗಿ ಕಾವೇರಿ ಜಲಾನಯನ ಪ್ರದೇಶದಲ್ಲಿ ಸಂಕಷ್ಟ ಉಂಟಾಗಿದೆ. ಹೀಗಾಗಿ ನೀರಾವರಿ ಉದ್ದೇಶಕ್ಕೆ ತಮಿಳುನಾಡಿಗೆ ನೀರು ಬಿಡುವುದು ಸಧ್ಯದ ಪರಿಸ್ಥಿತಿಯಲ್ಲಿ ಕಷ್ಟ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.

ತಮ್ಮ ಅಧಿಕೃತ ನಿವಾಸ ಕಾವೇರಿಯಲ್ಲಿ ಇಂದು ತಮ್ಮನ್ನು ಭೇಟಿ ಮಾಡಿ ನೀರು ಬಿಡುಗಡೆಗೆ ಮನವಿ ಮಾಡಿದ ತಮಿಳುನಾಡಿನ ರೈತ ಮುಖಂಡರೊಂದಿಗೆ ಮಾತನಾಡಿದ ಮುಖ್ಯಮಂತ್ರಿಗಳು, ಮುಂದಿನ ದಿನಗಳಲ್ಲಿ ಉತ್ತಮ ಮಳೆಯಾದರೆ ನೀರು ಬಿಡುಗಡೆ ಮಾಡುವುದಾಗಿ ತಿಳಿಸಿದರು.

ನೀರಿಲ್ಲದೆ ನಮ್ಮ ರೈತರಿಗೆ ಭಾರಿ ತೊಂದರೆಯಾಗಿದೆ. ಬೆಳೆ ನಷ್ಟದ ಆತಂಕ ಎದುರಾಗಿದೆ. 9 ಎಕರೆ ಪ್ರದೇಶದಲ್ಲಿರುವ ಸಾಂಬಾ ಬೆಳೆಗೆ ಅನುಕೂಲ ಆಗುವಂತೆ ನೀರು ಬಿಡುಗಡೆ ಮಾಡಬೇಕು ಎಂದು ತಮಿಳುನಾಡಿನ ರೈತ ಮುಖಂಡರು ಮನವಿ ಮಾಡಿದರು.

ಕಾವೇರಿ ಜಲಾನಯನ ಪ್ರದೇಶದಲ್ಲಿರುವ ಅಣೆಕಟ್ಟುಗಳಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ನೀರು ಸಂಗ್ರಹವಾಗಿಲ್ಲ. ಕುಡಿಯುವ ಉದ್ದೇಶಕ್ಕೂ ನೀರು ಒದಗಿಸಲು ಆಗದಂತಯ ವಾತಾವರಣ ಇದೆ. ಹೀಗಾಗಿ ಸಂಕಷ್ಟ ಸೂತ್ರದ ಅನ್ವಯವೂ ತಮಿಳುನಾಡಿಗೆ ನೀರು ಬಿಡುಗಡೆ ಮಾಡಲು ಕಷ್ಟವಾಗಿದೆ. ನಮ್ಮ ಪರಿಸ್ಥಿತಿಯನ್ನೂ ಅರ್ಥ ಮಾಡಿಕೊಳ್ಳಬೇಕು ಎಂದು ಮುಖ್ಯಮಂತ್ರಿಯವರು ರೈತ ಮುಖಂಡರಿಗೆ ಹೇಳಿದರು.

ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ ತಮಿಳುನಾಡಿನ ನಿಯೋಗದಲ್ಲಿ ನೀರಾವರಿ ರಕ್ಷಣಾ ಸಮಿತಿಯ ಅಧ್ಯಕ್ಷ ಹಾಗೂ ಮಾಜಿ ಸಂಸದ ಡಾ. ಕೆ.ಪಿ. ರಾಮಲಿಂಗಂ,  ತಮಿಳು ಕೃಷಿಕರ ಸಂಘದ ಅಧ್ಯಕ್ಷ ಕೆ. ಚೆಲ್ಲಮುತ್ತು,  ಕಾರ್ಯದರ್ಶಿ ಎ.ಪಿ. ತಿರುವುನಕ್ಕರಸು ಹಾಗೂ ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಮತ್ತಿತರರು ಇದ್ದರು.

WhatsApp Image 2016-08-25 at 12.02.44 PM

ಜಲ ಸಂಪನ್ಮೂಲ ಇಲಾಖೆಯ ಮೂರು ವರ್ಷಗಳ ಸಾಧನೆಯ ಹೊತ್ತಗೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗೃಹ ಕಚೇರಿ ಕೃಷ್ಣಾದಲ್ಲಿ ಗುರುವಾರ ಬಿಡುಗಡೆ ಮಾಡಿದರು. ಜಲ ಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್, ಇಲಾಖೆ ಪ್ರಧಾನ ಕಾರ್ಯದರ್ಶಿ ರಾಕೇಶ್ ಸಿಂಗ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಸುಪ್ರಿಂ ಕೋರ್ಟ್ ನಲ್ಲಿ ರಾಜ್ಯದ ನೀರಾವರಿ ವಿವಾಧಗಳ ಕೇಸುಗಳನ್ನು ನಿರ್ವಹಿಸುತ್ತಿರುವ ವಕೀಲ ನಾರಿಮನ್ ಗೆ ದೂರವಾಣಿ ಕರೆ ಮಾಡಿ ಮಾತನಾಡಿ  ಪರಿಸ್ಥಿತಿಯ ವಿವರವನ್ನು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ನಾರಿಮನ್ ಜೊತೆ ಸಿ.ಎಂ ದೂರವಾಣಿ ಚರ್ಚೆ: ತಮಿಳುನಾಡು ಸರ್ಕಾರ ಕಾವೇರಿ ನೀರು ಬಿಡುವಂತೆ ಸುಪ್ರೀಂಗೆ ಅರ್ಜಿ ಹಿನ್ನೆಲೆ, ಗ್ರೌಂಡ್ ರಿಯಾಲಿಟಿ ಇಟ್ಟುಕೊಂಡು ನೀವು ನಿಮ್ಮ ವಾದ ಮಂಡಿಸಿ ಎಂದು ಸೂಚನೆ. ನಾಳೆ ದೆಹಲಿಗೆ ಜಲಸಂಪನ್ಮೂಲ ಸಚಿವರನ್ನು ಕಳಿಸಿ ಇಲ್ಲಿಯ ಪರಿಸ್ಥಿತಿಯ ವಿವರವನ್ನು ನೀಡಲಿದ್ದಾರೆಂದು ನಾರಿಮನ್ ಗೆ ತಿಳಿಸಿದ ಸಿ.ಎಂ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top