fbpx
News

ಹೆಂಡತಿ ಶವವನ್ನು ಭುಜದ ಮೇಲೆ 10ಕಿಮೀ ಕೊಂಡೊಯ್ದ ಪತಿ!

ಜಿಲ್ಲಾಸ್ಪತ್ರೆಯಲ್ಲಿ ರೋಗಿ ಸತ್ರು ವಾಹನ ಕೊಡ್ಲಿಲ್ಲ – ಹೆಂಡತಿಯ ಶವ ಹೊತ್ತು 12 ಕಿಲೋಮೀಟರ್ ಸಾಗಿದ ಬಡಪಾಯಿ ಗಂಡ – ಒರಿಸ್ಸಾದ ಕಾಳಹಂಡಿಯಲ್ಲಿ ಹೃದಯಕಲಕುವ ಸನ್ನಿವೇಶ  ನಡೆದಿದೆ. ತನ್ನ ಮೃತ ಪತ್ನಿಯ ಪಾರ್ತಿವ ಶರೀರವನ್ನು ಮನೆಗೆ ಸಾಗಿಸಲು ವಾಹನವೊಂದನ್ನು ಪಡೆಯುವಲ್ಲಿ ವಿಫಲನಾದ ಬುಡಕಟ್ಟು ಕೋಮಿನ ವ್ಯಕ್ತಿಯೊಬ್ಬ ತನ್ನ ಹೆಗಲ ಮೇಲೆ ಆಕೆಯ ಶವವನ್ನು ಹೊತ್ತು 10ಕಿಮೀ ದೂರ ನಡೆದ ಮನ ಕಲಕುವ ಘಟನೆ ಒಡಿಶಾದ ಹಿಂದುಳಿದ ಜಿಲ್ಲೆ ಕಲಹಂಡಿಯಲ್ಲಿ ಇಂದು ಬೆಳಗ್ಗೆ ನಡೆದಿದೆ. ದಾನ ಮಜ್ಹಿ ಎಂಬಾತನ ಪತ್ನಿ ಅಮಂಗ್ ದೇಸಾಯ್ ನಿನ್ನೆ ರಾತ್ರಿ ಕ್ಷಯ ರೋಗದಿಂದ ಭವಾನಿ ಪಟ್ನ ಜಿಲ್ಲಾ ಕೇಂದ್ರ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಳು. ಆದರೆ, ಈಕೆಯ ಶವವನ್ನು ಮನೆಗೆ ಕೊಂಡೊಯ್ದು ಅಲ್ಲಿಂದ ಸ್ಮಶಾನಕ್ಕೆ ಸಾಗಿಸಲು ಈತ ಎಷ್ಟೇ ಕಾಡಿ ಬೇಡಿದರೂ ಒಂದೇ ಒಂದು ವಾಹನ ಸಿಗಲಿಲ್ಲ. ಇದರಿಂದ ನೊಂದ ಈತ ತನ್ನ ಹೆಗಲ ಮೇಲೆಯೇ ಮೆಚ್ಚಿನ ಮಡದಿಯ ಶವವನ್ನು ಹೊತ್ತುಕೊಂಡು ಮಗಳೊಂದಿಗೆ 10ಕಿಮೀ ದೂರದಲ್ಲಿರುವ ತನ್ನ ಮನೆಯತ್ತ ನಡೆದ.

ಕರುಣಾಜನಕ ಘಟನೆ ದೃಶ್ಯ ನೋಡಿ ಸ್ಥಳೀಯರು ಮಮ್ಮಲ ಮರುಗಿದರು.

ಸರ್ಕಾರಿ ಆಸ್ಪತ್ರೆಗಳಿಂದ ಮೃತರ ಮನೆಗಳಿಗೆ ಅಥವಾ ರುದ್ರಭೂಮಿಗೆ ಶವವನ್ನು ಉಚಿತವಾಗಿ ಸಾಗಿಸಲು ಅನುಕೂಲವಾಗುವಂತೆ ಕಳೆದ ವಾರವಷ್ಟೆ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಸರ್ಕಾರ ಮಹಾ ಪರಾಯಣ ಎಂಬ ಯೋಜನೆಗೆ ಚಾಲನೆ ನೀಡಿತ್ತು. ಆದರೆ, ಈ ಸೌಲಭ್ಯ ಈತನಿಗೆ ಗಗನ ಕುಸುಮವಾಯಿತು. ನಾನು ತುಂಬಾ ಬಡವ. ಖಾಸಗಿ ವಾಹನದಲ್ಲಿ ಶವ ಕೊಂಡೊಯ್ಯಲು ನನ್ನ ಬಳಿ ಹಣವಿಲ್ಲ. ಎಷ್ಟೇ ಬೇಡಿಕೊಂಡರೂ ಯಾರೊಬ್ಬರೂ ನನೆ ಸಹಾಯ ಮಾಡಲಿಲ್ಲ ಎಂದು ಆತ ನೊಂದು ನುಡಿದಿದ್ದಾನೆ. ಇದು ನಮ್ಮ ಭಾರತದ ವಾಸ್ತವ ಸ್ಥಿತಿಯಾಗಿದೆ.

ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಬಡವರಿಗೆ ಈ ರೀತಿಯ ಅನುಕೂಲ ಮಾಡಿಕೊಡುವುದಕ್ಕಾಗಿಯೇ ಈ ವರ್ಷ ಫೆಬ್ರವರಿಯಲ್ಲಿ ಉಚಿತ ಅಂಬುಲೆನ್ಸ್ ಒದಗಿಸುವ “ಮಹಾಪರಾಯಣ’ ಯೋಜನೆಯನ್ನು ಜಾರಿಗೆ ತಂದಿರುವರಾದೂ ಆ ಯೋಜನೆಯಡಿ ಮಾಂಜಿಗೆ ಧರ್ಮಾರ್ಥವಾಗಿ ಅಂಬುಲೆನ್ಸ್ ಒದಗಿಸಲು ಆಸ್ಪತ್ರೆ ಅಧಿಕಾರಿಗಳು ನಿರಾಕರಿಸಿದರು.

ಅಂತಿಮವಾಗಿ ಮಾಂಜಿ, ತನ್ನ 12 ವರ್ಷ ಪ್ರಾಯದ ಮಗಳೊಂದಿಗೆ, ಪತ್ನಿಯ ಶವವನ್ನು ಹೊದಿಕೆಯೊಂದರಲ್ಲಿ ಕಟ್ಟಿ ಹೆಗಲಿಗೇರಿಸಿ 50 ಕಿ.ಮೀ. ದೂರದಲ್ಲಿರುವ ತನ್ನ ಗ್ರಾಮಕ್ಕೆ ಒಯ್ಯಲು ಮುಂದಾದ. ಸುಮಾರು 10 ಕಿ.ಮೀ. ದಾರಿಯನ್ನು ಮಾಂಜಿ ಹೀಗೆ ಕ್ರಮಿಸಿದಾಗ ಸುದ್ದಿ ವಾಹಿನಿಯೊಂದರ ಕ್ಯಾಮೆರಾ ತಂಡದವರು ಎದುರಾದರು. ಅವರೆದರು ಮಾಂಜಿ, ಪತ್ನಿಯ ಶವವನ್ನು ರಸ್ತೆಯ ಬದಿಯಲ್ಲಿರಿಸಿ ತನ್ನ ಗೋಳನ್ನು ತೋಡಿಕೊಂಡ. ಅವರು ಮಾಂಜಿಯ ಗೋಳನ್ನು ತಿಳಿದುಕೊಂಡು ಒಡನೆಯೇ ಜಿಲ್ಲಾಧಿಕಾರಿಗೆ ವಿಷಯ ತಿಳಿಸಿದರು.

ಜಿಲ್ಲಾಧಿಕಾರಿಗಳು ಮಾಂಜಿಗಾಗಿ ಕೂಡಲೇ ಸರಕಾರಿ ಅಂಬುಲೆನ್ಸ್ ಒದಗಿಸಿ ಆತನ ಗ್ರಾಮಕ್ಕೆ ತಲುಪಿಸುವ ವ್ಯವಸ್ಥೆ ಮಾಡಿದರು. ಮಾತ್ರವಲ್ಲದೆ ರಾಜ್ಯ ಸರಕಾರ ನಿರ್ಗತಿಕ ಹಾಗೂ ಬಡ ಕುಟುಂಬದವರ ಶವಗಳ ಅಂತ್ಯಸಂಸ್ಕಾರಕ್ಕೆಂದು ರೂಪಿಸಿರುವ ಹರಿಶ್ಚಂದ್ರ ಯೋಜನೆಯಡಿ ಮಾಂಜಿಯ ಮೃತ ಪತ್ನಿಯ ಧರ್ಮಾರ್ಥ ಅಂತ್ಯ ಸಂಸ್ಕಾರಕ್ಕೆ ವ್ಯವಸ್ಥೆ ಮಾಡಿದರು.

ನವೀನ್ ಪಟ್ನಾಯಕ್ ಸರಕಾರ ಈ ವರ್ಷ ಫೆಬ್ರವರಿಯಲ್ಲಿ ಜಾರಿಗೆ ತಂದಿರುವ ಮಹಾಪರಾಯಣ ಯೋಜನೆಯಡಿ, ನಿರ್ಗತಿಕರು ಹಾಗೂ ಬಡವರ ಶವ ಸಾಗಾಟಕ್ಕೆ 37 ಸರಕಾರಿ ಆಸ್ಪತ್ರೆಗಳಲ್ಲಿ ಒಟ್ಟು 40 ಅಂಬಲೆನ್ಸ್ಗಳನ್ನು ಒದಗಿಸಿದೆ. ಆದರೂ ಅದರ ಪ್ರಯೋಜನ ಬಡವರಿಗೆ ಸಿಗುವುದು ದುರ್ಲಭವಾಗಿದೆ ಎನ್ನಲಾಗಿದೆ.

ಓಡಿಶಾದಲ್ಲಿ ಮೃತಪಟ್ಟ ಪತ್ನಿಯನ್ನ ಹತ್ತು ಕಿ.ಮೀ. ಹೊಯ್ದ ಪ್ರಕರಣಕ್ಕೆ‌ ಪ್ರತಿಕ್ರಿಯೆ.
ಈ ರೀತಿ ಘಟನೆಯನ್ನ ನಾನು ಖಂಡಿಸ್ತೇನೆ. ರಾಜ್ಯ ಸರ್ಕಾರ ತಕ್ಷಣ ಕ್ರಮಕೈಗೊಳ್ಳಬೇಕು. ಈ ಪ್ರಕರಣದಲ್ಲಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು.

– ಓಡಿಶಾ ಶಾಸಕ ಹಾಗೂ ನಟ ಆಕಾಶ್ ದಾಸ್ ನಾಯಕ್ ಹೇಳಿಕೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top