fbpx
Achivers

ಇನ್ಮೇಲೆ ಆಕಾಶದಲ್ಲೂ ರೈಲು ಸಂಚಾರ ಮಾಡುತ್ತೆ,…!!

ಪ್ರತಿಭಾನ್ವಿತ 47 ವರ್ಷದ ರೈಲ್ವೆ ಇಂಜಿನಿಯರ್ ಅಶ್ವಾನಿ ಕುಮಾರ್ ಉಪಾಧ್ಯಾಯ ಎಂಬುವವರು ಇತ್ತೀಚೆಗೆ ಕ್ಯಾಟರ್ಪಿಲ್ಲರ್ ರೈಲನ್ನು ಅಭಿವೃದ್ಧಿ ಪಡಿಸಿದ್ದಕ್ಕಾಗಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಈ ರೈಲಿನ ಬೋಗಿಗಳು ಹೆಚ್ಚು ಎತ್ತರವಾಗಿದ್ದು, ಮತ್ತು ಹಗುರವಾಗಿವೆ. ಈ ರೈಲುಗಳು ಸರಿ ಸುಮಾರು ಒಂದು ಗಂಟೆಗೆ 100 ಕಿ.ಮೀ ಕ್ರಮಿಸಬಲ್ಲ ಸಾಮರ್ಥ್ಯ ಹೊಂದಿವೆ. ಇದ್ರಲ್ಲಿ ಏನ್ ವಿಶೇಷ ಅಂತೀರಾ, ಮುಂದೆ ಓದಿ…

ಎಷ್ಟೋ ಮಂದಿ ರೈಲು ಪ್ರಯಾಣ ಕಷ್ಟಕರ, ರೈಲ್ವೆ ಸ್ಟೇಷನ್ ತುಂಬಾ ದೂರ ಅನ್ನುವಂತವರಿಗೆ ಈ ರೈಲುಗಳು ಪರಿಹಾರ ಒದಗಿಸುತ್ತವೆ. ಹೌದು, ಈ ರೈಲುಗಳು ನಿಮ್ಮ ಮನೆ ಬಾಗಿಲಿಗೆ ಬಂದು pickup ಮತ್ತೆ drop ಮಾಡ್ತವೆ. ಈ ವಿಚಾರ ಕೇಳಿ ಖುಷಿ ಪಡ್ತಾ ಇದ್ದೀರಾ…? ಹಾಗಾದ್ರೆ ಆ ಖುಷಿಗೆ ಕಾರಣ ಈ ಅಶ್ವಾನಿ… ಇವರು ಭಾರತೀಯ ರೈಲ್ವೆ ಟ್ರಾಫಿಕ್ ಸರ್ವಿಸ್ ನ 1997 ಬ್ಯಾಚ್ ಆಫೀಸರ್ ಆಗಿ ಆಯ್ಕೆಯಾದವರು. ಸದ್ಯ ಬೋಸ್ಟನ್ ನ Massachusetts Institute of Technology ಯಲ್ಲಿ PhD ಮಾಡುತ್ತಿದ್ದಾರೆ. MIT ಆಯೋಜಿಸಿದ್ದ ಸ್ಪರ್ಧೆಯಲ್ಲಿ ಕೂಡ ಭಾಗವಹಿಸಿ ಪ್ರಶಸ್ತಿ ಬಾಚಿಕೊಂಡ ಪ್ರತಿಭಾವಂತ ಈ ಅಶ್ವಾನಿ…

new3-932x524

(The caterpillar train is named so because the idea is to install wheels both above and below the coaches. This way, they will be able to run on the tracks as well as hang from them. The tracks would be supported by poles bent to form arches)

ಮತ್ತೊಬ್ಬ PhD ಪಡೆದ ವ್ಯಕ್ತಿ Emil Jacob ಅವರ ಸಹಕಾರದೊಂದಿಗೆ ಅಶ್ವಾನಿ ಈ ಯೋಜನೆ ಸಿದ್ದಪಡಿಸಿದ್ದಾರೆ. ಈ ಯೋಜನೆಯಡಿ ಸಂಪೂರ್ಣ ರೈಲು ವಿದ್ಯುತ್ ಶಕ್ತಿ ಇಂದ ಚಲಿಸಲಿದ್ದು, ತುರ್ತು ಸಂದರ್ಭಗಳಲ್ಲಿ ಪ್ರತಿಯೊಂದು ಬೋಗಿಯೂ ತನ್ನದೇ ಆದ backup ಬ್ಯಾಟರಿಯೊಂದಿಗೆ ಚಲಿಸಲಿದೆ. ಪ್ರತಿಯೊಂದು ಬೋಗಿಯಲ್ಲೂ 20 ಜನರಿಗೆ ಕುಳಿತುಕೊಳ್ಳಲು ಅವಕಾಶವಿದ್ದು, ಇದರ ಗಾತ್ರ ಚಿಕ್ಕದಾಗಿರುವುದರಿಂದ ಪ್ರತಿ ವಸತಿ ಪ್ರದೇಶಗಳಿಗೂ ತಲುಪಲು ಮತ್ತು ಲಂಬವಾಗಿ ಚಲಿಸಲು ಅನುವು ಮಾಡಿಕೊಡುತ್ತದೆ.

Caterpillar-Train-6-600x480

station ಹೇಗ್ ಇರುತ್ತೆ ಅಂತ ಯೋಚನೆ ಮಾಡ್ತಾ ಇದ್ದೀರಾ ಓದುಗರೇ…? ಬಹಳ ಸರಳವಾಗಿರಲಿದ್ದು elevators ಮುಖಾಂತರ ನೀವು ಸ್ಟೇಷನ್ ತಲುಪಬಹುದು. ಇನ್ನೊಂದು ನಿಮಗೆ ಹೇಳಲೇ ಬೇಕು, ನಿಮಗೆ ಗೊತ್ತಿರುವ ಹಾಗೆ ಮೆಟ್ರೋ ಮಾಡೋದಕ್ಕೆ ಸರ್ಕಾರ ಅಷ್ಟ್ ಸಾವಿರ ಕೋಟಿ ಬೇಕು, ಇಷ್ಟು ಸಾವಿರ ಕೋಟಿ ಬೇಕು ಅಂತ ಹೇಳುತ್ತದೆ ಅಲ್ವಾ…? ಆದ್ರೆ ಈ caterpillar ರೈಲಿಗೆ ಹೆಚ್ಚು ಅಂದ್ರೆ ಮೆಟ್ರೋಗೆ ಖರ್ಚು ಮಾಡೋ 15 % ಖರ್ಚು ಆಗಬಹುದು, ಎಂತ ಖುಷಿ ವಿಚಾರ ಅಲ್ವಾ…!!

Caterpillar-Train-706x369

“ಸದ್ಯಕ್ಕೆ, ಪಟ್ಟಣ ಸಾಮೂಹಿಕ ಸಾರಿಗೆ ಸಂಚಾರ ಯೋಜನೆಯು ‘hub-and-spoke’ ಪರಿಕಲ್ಪನೆಯ ಮೇಲೆ ಅಭಿವೃದ್ಧಿಪಡಿಸಲಾಗಿದ್ದು, ಜನರು ಸಾರಿಗೆ ವ್ಯವಸ್ಥೆ ಪಡೆದುಕೊಳ್ಳಲು ಒಂದು ಕಡೆ ಇಂದ ಮತ್ತೊಂದು ಕಡೆ ಹೋಗಬೇಕಾದ ಅನಿವಾರ್ಯತೆ ಇದೆ, ಆದರೆ C-Train ಎಲ್ಲ ಕಡೆ ಕ್ರಮಿಸಬಲ್ಲ ಸಾಮರ್ಥ್ಯ ಹೊಂದಿದ್ದು, ಈ ರೈಲಿಗೆ ಕೇವಲ 5 ಮೀಟರ್ ರಸ್ತೆಯ ಅವಶ್ಯಕತೆ ಇದೆ” ಎಂದು ಅಶ್ವಾನಿ ತಿಳಿಸುತ್ತಾರೆ.

MIT ಯವರು ಆಯೋಜಿಸುತ್ತಿರುವ ಈ ಸ್ಪರ್ಧೆ ಪ್ರತಿಭೆ ಉಳ್ಳವರಿಗೆ ಬಹು ದೊಡ್ಡ ವೇದಿಕೆಯಾಗಿ ಪರಿಣಮಿಸಿದೆ. ಈ ವೇದಿಕೆ ಬಹಳಷ್ಟು ಯುವ ಜನತೆಯ ಕಲ್ಪನೆ, ಚಾಣಾಕ್ಷತೆಗೆ ಹಿಡಿದ ಕನ್ನಡಿಯಾಗಿದೆ. ಅಶ್ವಾನಿ ಅವರು ಸದ್ಯ ನಗರಾಭಿವೃದ್ಧಿ ತಜ್ಞರು ಮತ್ತು ಖ್ಯಾತ ಶಿಕ್ಷಣ ತಜ್ಞರ ಸಹಕಾರ ಪಡೆದು ತಮ್ಮ ಮಹತ್ತರ ಯೋಜನೆಯನ್ನು ದೊಡ್ಡ ದೊಡ್ಡ ಪಟ್ಟಣಗಳಲ್ಲಿ ಪ್ರಾಯೋಗಿಕವಾಗಿ ಆರಂಭಿಸುವ ಕಾರ್ಯದಲ್ಲಿ ಮಗ್ನರಾಗಿದ್ದಾರೆ. ಅವರಿಗೆ ಶುಭ ಹಾರೈಸೋಣ…

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

ಇನ್ಮೇಲೆ ಆಕಾಶದಲ್ಲೂ ರೈಲು ಸಂಚಾರ ಮಾಡುತ್ತೆ,…!!
Click to comment

Leave a Reply

Your email address will not be published. Required fields are marked *

ನಮ್ಮಲ್ಲಿ ಜನಪ್ರಿಯ

To Top