ಲಂಡನ್: ಬರೋಬ್ಬರಿ 145 ವರ್ಷ ವಯಸ್ಸಿನ ಮಭಾ ಗೊಥೊ ಈಗ ವಿಶ್ವದ ಹಿರಿಯಜ್ಜ ಎಂಬ ಖ್ಯಾತಿ ಪಡೆಯಲಿದ್ದಾರೆ. ಇಂಡೋನೇಷ್ಯಾದ ದಾಖಲೆಗಳು ಸತ್ಯ ಎಂದು ದೃಢೀಕರಣವಾದರೆ ಗೊಥೊ ಅವರನ್ನು ಅಧಿಕೃತವಾಗಿ ವಿಶ್ವದ ಹಿರಿಯಜ್ಜ ಎಂದು ಘೋಷಿಸಲಾಗುತ್ತದೆ. ಈವರೆಗೂ ಫ್ರಾನ್ಸ್ನ 122 ವರ್ಷದ ಜಿಯಾನ್ನೆ ಕಾಲ್ಮೆಂಟ್ ಅವರು ಈ ಖ್ಯಾತಿ ಪಡೆದಿದ್ದಾರೆ.
ಕೇಂದ್ರ ಜಾವಾದ ಸ್ರಗನ್ನಲ್ಲಿ 1870ರ ಡಿ.31ರಂದು ಜನಿಸಿದ ಗೊಥೊ ಅವರಿಗೆ 10 ಸಹೋದರ-ಸಹೋದರಿಯರು ಹಾಗೂ ನಾಲ್ಕು ಪತ್ನಿಯರು ಇದ್ದಾರೆ.
ಗೊಥೊ ಅವರಿಗೆ 10 ಸಹೋದರ-ಸಹೋದರಿಯರು ಹಾಗೂ ನಾಲ್ಕು ಪತ್ನಿಯರು ಇದ್ದಾರೆ. ಮತ್ತೊಂದು ವಿಶೇಷ ಸಂಗತಿ ಎಂದರೆ ಈ ಹಿರಿಯಜ್ಜ ಮಕ್ಕಳು, ಮೊಮ್ಮಕ್ಕಳು, ಮರಿ ಮೊಮ್ಮಕ್ಕಳು ಅಲ್ಲದೇ ಮರಿ ಮೊಮ್ಮಕ್ಕಳ ಮಕ್ಕಳನ್ನೂ ಕಂಡಿದ್ದಾರೆ. ಜಗತ್ತಿನ ಹಿರಿಯಜ್ಜನ ಕೊನೆಯ ಆಸೆ ತಾನು ಸಾಯುವುದಾಗಿದೆ, ಹೀಗಾಗಿಯೇ 20 ವರ್ಷಗಳ ಹಿಂದೆಯೇ ಇವರು ತಮ್ಮ ಗೋರಿಯನ್ನೂ ಸಿದ್ಧಮಾಡಿದ್ದಾರೆ. ನನ್ನ ಮೊಮ್ಮಕ್ಕಳು ಎಲ್ಲರೂ ಸ್ವತಂತ್ರರಾಗಿದ್ದಾರೆ. ನನಗೀಗ ಬೇಕಾಗಿರುವುದು ಸಾವಷ್ಟೇ ಎಂದು ಗೊಥೊ ಹೇಳಿದ್ದಾರೆ.
ಆದಾಗ್ಯೂ, ಈ ಅತಿ ಹಿರಿಯ ಮನುಷ್ಯ ಸಾವನ್ನು ಎದುರು ನೋಡುತ್ತಿದ್ದಾರೆ. ಅವರು 20 ವರ್ಷಗಳ ಹಿಂದೆಯೇ ತನ್ನ ಸಮಾಧಿ ಕಲ್ಲನ್ನು ಖರೀದಿಸಿ ಇಟ್ಟಿದ್ದಾರೆ.
”ನಾನು ಸಾಯಲು ಬಯಸುತ್ತಿದ್ದೇನೆ. ನನ್ನ ಮೊಮ್ಮಕ್ಕಳು ಈಗ ಸ್ವತಂತ್ರವಾಗಿ ಬದುಕುತ್ತಿದ್ದಾರೆ” ಎಂದು ಅವರು ಹೇಳಿದರು.
ಅವರು ಜಗತ್ತಿನ ‘ಸಾರ್ವಕಾಲಿಕ ಅತ್ಯಂತ ಹಿರಿಯ ವ್ಯಕ್ತಿ’ಯಾಗಿ ದಾಖಲಾಗುತ್ತಾರೋ ಇಲ್ಲವೋ ಎನ್ನುವುದು ಅನಿಶ್ಚಿತ. ಯಾಕೆಂದರೆ, ಅವರ ದಾಖಲೆಯನ್ನು ಸ್ವತಂತ್ರವಾಗಿ ಈಗಲೂ ಪರಿಶೀಲನೆ ನಡೆಸಲಾಗಿಲ್ಲ.
ಕಳೆದ ಮೂರು ತಿಂಗಳಲ್ಲಿ ಗೋತೊರಿಗೆ ಚಮಚದ ಮೂಲಕ ಆಹಾರ ನೀಡಲಾಗುತ್ತಿದೆ. ಅವರು ನಿತ್ರಾಣರಾಗಿದ್ದು ಅವರಿಗೆ ಬೇರೆಯವರು ಸ್ನಾನ ಮಾಡಿಸಬೇಕಾಗಿದೆ.
ಅವರು ಹೆಚ್ಚಿನ ಸಮಯ ಕುಳಿತುಕೊಂಡು ರೇಡಿಯೊ ಕೇಳುತ್ತಾರೆ ಎಂದು ಗೋತೊ ಅವರ ಮೊಮ್ಮಕ್ಕಳು ಹೇಳುತ್ತಾರೆ. ಅವರ ದೀರ್ಘಾಯುಷ್ಯದ ಗುಟ್ಟು ‘ತಾಳ್ಮೆ’ ಎಂದು ಅವರು ಅಭಿಪ್ರಾಯಪಡುತ್ತಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
