fbpx
Awareness

ದೇಶ ವಿರೋದಿತನದೆಡೆ ಸಾಗುತ್ತಿರುವ ವಿದ್ಯಾರ್ಥಿ ಸಮೂಹ…!

ಭಾರತವು ಋಷಿಮುನಿಗಳು, ಸಾಧುಸಂತರು, ಯೋಗಿಗಳು, ಗುರುಗಳಿಗೆ ಖ್ಯಾತಿ ಹೊಂದಿರುವ ದೇಶ. ಪ್ರಾಚೀನ ಕಾಲದಲ್ಲಿ ಕೃಷ್ಣ, ಬುದ್ಧ, ಶಂಕರ, ಪಂಥಜಲಿ ಅಚ್ಚುಮೆಚ್ಚಿನ ಹೆಸರುಗಳು. ಆಧುನಿಕ ಭಾರತದಲ್ಲಿ ರಮಣ ಮಹಋಷಿ, ಶ್ರೀ ಅರಬಿಂದೋ, ಸ್ವಾಮಿ ವಿವೇಕಾನಂದರಂಥ ಜ್ಞಾನಿಗಳು ಭಾರತೀಯ ಸ್ವಾತಂತ್ರ್ಯ ಹೋರಾಟದ ಸ್ಫೂರ್ತಿಗಳಾದರು.

ಈ ಮಹಾನ್ ಗುರುಗಳು(ಶಿಕ್ಷಕರು), ಸಮಯ ಮತ್ತು ಬ್ರಹ್ಮಾಂಡದ ಆಚೆಗೆ ವಿಸ್ತಾರವಾದ ಆಂತರಿಕ ಪ್ರಜ್ಞೆಯ ವಿಶಾಲ ವ್ಯಾಪ್ತಿಯನ್ನು ವಿವರಿಸಿದವರು. ಇಷ್ಟೊಂದು ಶ್ರೀಮಂತ ಜ್ಞಾನ, ಪರಂಪರೆ ಹೊಂದಿರುವ ಭಾರತದಲ್ಲಿಂದು ಶಿಕ್ಷಣದಲ್ಲಿ ಗಮನಾರ್ಹ ಬದಲಾವಣೆಯಾಗುತ್ತಿದೆ.

ಭಾರತದ ಗೊಂದಲದ ವಿದ್ಯಾರ್ಥಿಗಳು :

ಭಾರತದಲ್ಲಿನ ಕಾಲೇಜುಗಳ ಆವರಣದಲ್ಲಿಂದು ದೇಶದ ಗುರುಗಳು ಮತ್ತವರ ಭವ್ಯ ಹಾಗೂ ಸಂಕೀರ್ಣವಾದ ಬೋಧನೆಗಳ ಬಗ್ಗೆ ಗೌರವವನ್ನು ವಿರಳವಾಗಿ ನೋಡಬಹುದಾಗಿದೆ. ದೇಶಾದ್ಯಂತ ಭಾರಿ ವಿವಾದ ಸೃಷ್ಟಿಸಿದ್ದ ಜವಾಹರ್‍ಲಾಲ್ ನೆಹರು ವಿಶ್ವವಿದ್ಯಾಲಯ(ಜೆಎನ್‍ಯು) ಪ್ರತಿಭಟನೆಯು ಭಾರತದ ಪೂಜ್ಯ ಸಂಪ್ರದಾಯದ ಪ್ರಶ್ನಾತೀತ ನಿರಾಕರಣೆ ಹಾಗೂ ಸರಳ ತಿರಸ್ಕಾರದ ಕಣ್ಣುಚುಕ್ಕುವಂಥ ಉದಾಹರಣೆಯಾಗಿದೆ. ಸಂಸತ್ ಭವನದ ಮೇಲೆ ದಾಳಿ ಪ್ರಕರಣದ ರೂವಾರಿ ಅಫ್ಜಲ್ ಗುರುವನ್ನು ಜೆಎನ್‍ಯು ಎಡಪಂಥೀಯರು ತಮ್ಮ ಗುರುವೆಂದು ಗೌರವಿಸಿದ್ದಾರೆ. ಛಗೇವಾರನಂಥ ಕ್ರಾಂತಿಕಾರಿ ವ್ಯಕ್ತಿಗಳನ್ನು ಜೆಎನ್‍ಯು ಕೆಲ ವಿದ್ಯಾರ್ಥಿಗಳು ವೈಭವೀಕರಿಸಿದ್ದಾರೆ. ತಾಲಿಬಾನ್ ಮತ್ತು ಹಿಂಸಾತ್ಮಕ ಇಸ್ಲಾಂ ಬಗ್ಗೆ ಈ ವಿದ್ಯಾರ್ಥಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜನಾಂಗೀಯ ದಬ್ಬಾಳಿಕೆಗೆ ಬಲಿಯಾದವರೆಂದು ಇಸ್ಲಾಂ ಸ್ಟೇಟ್(ಐಸಿಸ್)ನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಈ ಮೂಲಭೂತ ಇಸ್ಲಾಂ ಮಾನವಿಯತೆ ಮತ್ತು ಪ್ರಜಾಪ್ರಭುತ್ವನ್ನು ವಿರೋಧಿಸಿದರೂ ಅದನ್ನು ಎಡಪಂಥೀಯರು ಒಪ್ಪಿಕೊಳ್ಳುತ್ತಿದ್ದಾರೆ.

ಎಂಪಂಥೀಯರ ಸೀಮಿತ ದೃಷ್ಟಿಕೋನ :

ರಾಜಕೀಯ ಶಕ್ತಿಯೇ ತಮ್ಮ ಪ್ರಥಮ ಗುರಿಯನ್ನಾಗಿಸಿಕೊಂಡಿರುವ ಮಾಕ್ರ್ಸ್‍ವಾದಿಗಳು, ವಿಶ್ವದ ಪ್ರಾಪಂಚಿಕ ದೃಷ್ಟಿಕೋನವನ್ನು ಹಿಂಬಾಲಿಸುತ್ತಾರೆ. ಇದಕ್ಕಾಗಿ ಹಿಂಸಾಚಾರ, ಜಾತಿ/ಧರ್ಮಗಳ ನಡುವೆ ಸಮರವೇ ತಮ್ಮ ಕಾನೂನುಬದ್ಧ ದಾರಿಗಳನ್ನಾಗಿಸಿಕೊಂಡಿದ್ದಾರೆ. ರಾಜಕೀಯ ಲಾಭಕ್ಕಾಗಿ ಇತಿಹಾಸದ ಪತನವೇ ತಮ್ಮ ಸೂಚನಾ ಮುದ್ರೆಯನ್ನಾಗಿಸಿಕೊಂಡಿದ್ದಾರೆ. ಜಗತಿನಾದ್ಯಂತ ಕಮ್ಯೂನಿಸಮ್ ತನ್ನ ಶಕ್ತಿ ಕಳೆದುಕೊಂಡಿದೆ ಎಂಬುದನ್ನು ಭಾರತದ ಈ ಮೂಲಭೂತ ಎಡಪಂಥೀಯರು ಒಪ್ಪಿಕೊಳ್ಳಲು ಸಿದ್ಧವಿಲ್ಲ. 21ನೇ ಶತಮಾನದ ಆಧ್ಯಾತ್ಮಿಕ ಹಾಗೂ ಆರ್ಥಿಕ ಅಗತ್ಯತೆಗಳ ದೃಷ್ಟಿಕೋನವನ್ನು ಇವರು ಹೊಂದಿಲ್ಲ ಅಥವಾ ಉತ್ತಮ ಶಿಕ್ಷಣ ಹಾಗೂ ಉದ್ಯೋಗ ಸೃಷ್ಟಿ ಮೂಲಕ ಬಡವರನ್ನು ಮೇಲೆತ್ತು ಪ್ರಯತ್ನಕ್ಕೂ ಇವರು ಕೈಜೋಡಿಸಿಲ್ಲ. ಇಂಥ ಚಿಂತನಾ ಪರಿಸ್ಥಿತಿ ಹೇಗೆ ಉದ್ಭವಿಸಿತು? ರಾತ್ರೋರಾತ್ರಿ ಇದು ಸಂಭವಿಸಲಿಲ್ಲ. ವಸಾಹತುಶಾಹಿ, ಬಂಡವಾಳಶಾಹಿ ರಕ್ಷಣೆಗೆ ಅಗತ್ಯವೆಂದು ಬಿಂಬಿತವಾದ ಭಾರತದ ಎಡಪಂಥೀಯ ದೃಷ್ಟಿಕೋನವನ್ನು ನೆಹರು ಮತ್ತು ಬೆಂಬಲಿಗರು ಸೃಷ್ಟಿಸಿದರು. ಸ್ವಾತಂತ್ರ್ಯ ನಂತರ ಬುದ್ಧಜೀವಿಗಳ ಮಟ್ಟದಲ್ಲಿ ನೆಹರುವಿನ ಸಮಾಜವಾದ ಮೇಲೆ ಸಮತಾವಾದ(ಕಮ್ಯೂನಿಸ್ಟ್) ಪ್ರಭಾವಬೀರತೊಡಗಿತು. ಭಾರತೀಯ ಸಮಾಜವನ್ನು ಹೊಡೆದು ಆಳು ಸಿದ್ಧಾಂತಕ್ಕೆ ಮತ್ತು ಭಾರತದ ಶೈಕ್ಷಣಿಕ ಮತ್ತು ಮಾಧ್ಯಮದ ಮೇಲೆ ಎಡಪಂಥೀಯ ಅಧಿಕಾರವನ್ನು ತನ್ನ ರಾಜಕೀಯ ಲಾಭಕ್ಕಾಗಿ ಕಾಂಗ್ರೆಸ್ ಪ್ರೋತ್ಸಾಹಿಸಿತೊಡಗಿತು. ವಿಶ್ವದ ಎಡಪಂಥೀಯ ದೃಷ್ಟಿಕೋನವು ವಸಾಹತುಶಾಹಿ ಆಡಳಿತಗಾರರನ್ನು ವಿರೋಧಿಸುತ್ತದೆ ಮತ್ತು ರಾಜಕೀಯ ಸ್ವಾತಂತ್ರ್ಯವನ್ನು ಬಯಸುತ್ತದೆ. ಪೂರ್ವಏಷ್ಯಾ ಮತ್ತು ಚೀನಾದಲ್ಲಿ ಬೌದ್ಧ ಧರ್ಮ ವಿರುದ್ಧ ಸಮತಾವಾದವನ್ನು ಭಾರತೀಯ ಮಾಕ್ರ್ಸ್‍ವಾದ ಬೆಂಬಲಿಸುತ್ತದೆ ಮತ್ತು ಭಾರತದಲ್ಲಿ ಹಿಂದೂ-ವಿರೋಧಿ ಕಾರ್ಯಕ್ರಮಗಳನ್ನು ಉತ್ತೇಜಿಸುತ್ತದೆ. ತಮ್ಮ ಸ್ವಂತ ಆಳವಾದ ಸಾಂಸ್ಕøತಿಕ ಪರಂಪರೆಯಿಂದ ದೂರವಿಡಲು ಉದ್ದೇಶಪೂರ್ವಕವಾಗಿಯೇ ಇಂಥ ಮನಃಸ್ಥಿತಿ ಸಂಸ್ಥೆಗಳನ್ನು ಹುಟ್ಟುಹಾಕಲಾಗಿದೆ.

ಪ್ರಬುದ್ಧ ಮಾರ್ಗ :

ನಿಜವಾದ ಜ್ಞಾನವು ಮೂಕಧ್ಯಾನಸ್ಥ ಮನಸ್ಸಿನಿಂದಲೇ ಹುಟ್ಟುತ್ತದೆ ಹೊರತು ನಿರಾಕರಣದದ ಬುದ್ಧಶಕ್ತಿಯಿಂದಲ್ಲ ಎಂಬ ಈ ನೆಲದ ಖ್ಯಾತ ಗುರುಗಳು, ಪ್ರಾಚೀನ ಮತ್ತು ಆಧುನಿಕ ಜ್ಞಾನಿಗಳ ಬೋಧನೆಯನ್ನು ಇಂದಿನ ಭಾರತದ ವಿದ್ಯಾರ್ಥಿಗಳು ನೆನಪಿಸಿಕೊಳ್ಳಬೇಕು. ಭಾರತದ ನಿಜವಾದ ಶೈಕ್ಷಣಿಕ ಪರಂಪರೆಯನ್ನು ಭಾರತದ ಯೋಗಿಗಳ ಮತ್ತು ಧ್ಯಾನಗುರುಗಳ ಗುರುಕುಲಗಳು ಪ್ರತಿನಿಧಿಸುತ್ತವೆ ಹೊರತು ಜೆಎನ್‍ಯು ಎಡಪಂಥಿಯರಲ್ಲ. ವಿಜ್ಞಾನಿ ಮತ್ತು ಆಧ್ಯಾತ್ಮಿಕತೆ ಎರಡಕ್ಕೂ ಸಂಬಂಧಿಸಿದಂತೆ ಚಿಂತನೆಯ ಮೂಲಕ ಇಂಥ ಆಳವಾದ ಶಿಕ್ಷಣವನ್ನು ಪುನರ್ ಸ್ಥಾಪಿಸಬೇಕಾಯಿತು. ಇದರಿಂದ ಯುವಪೀಳಿಗೆ ಮತ್ತೊಮ್ಮೆ ವಿಶ್ವಾಸ ಹೊಂದುತ್ತದೆ. ಅಲ್ಲದೆ, ದೇಶ ಮತ್ತು ಮಾನವೀಯತೆಯನ್ನು ನಿರಂತರ ಮತ್ತು ಸಾಮರಸ್ಯ ರೀತಿಯಲ್ಲಿ ಮುಂದೆ ತೆಗೆದುಕೊಂಡು ಹೋಗುತ್ತಾರೆ. ಇಲ್ಲವಾದರೆ, ಹಿಂಸಾಚಾರ ಮತ್ತು ದೇಶವಿರೋಧಿತನವು ಭಾರತ ಶೈಕ್ಷಣಿಕ ವ್ಯವಸ್ಥೆ ಮುಂದುವರಿಯಲಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

ದೇಶ ವಿರೋದಿತನದೆಡೆ ಸಾಗುತ್ತಿರುವ ವಿದ್ಯಾರ್ಥಿ ಸಮೂಹ…!
Click to comment

Leave a Reply

Your email address will not be published.

ನಮ್ಮಲ್ಲಿ ಜನಪ್ರಿಯ

To Top