fbpx
News

ವಿವಿದ ಕಂಪನಿಗಳ ಡೇಟಾ ದರ ಎಷ್ಟಿದೆ? ಎಂಬ ಮಾಹಿತಿ ಇಲ್ಲಿದೆ ನೋಡಿ

ರಿಲಯನ್ಸ್ ಸಂಸ್ಥೆ ಅಗ್ಗದ ದರದಲ್ಲಿ 4ಜಿ ಸೇವೆ ಒದಗಿಸಲು ಜಿಯೋ ಯೋಜನೆ ಆರಂಭಿಸಿದ್ದು, ತನ್ನ ಜಿಯೋ ಮೊಬೈಲ್ ಖರೀದಿಸುವ ಗ್ರಾಹಕರಿಗೆ ಅದು ತೀರಾ ಅಗ್ಗದ ದರದಲ್ಲಿ 4ಜಿ ಸೇವೆಗಳನ್ನು  ನೀಡುವುದಾಗಿ ಘೋಷಣೆ ಮಾಡಿದೆ. ಇದೇ ಕಾರಣಕ್ಕೆ ಈಗಾಗಲೇ ದೇಶದ ಹಲವು ಭಾಗಗಳಲ್ಲಿ ಜಿಯೋ ಮೊಬೈಲ್ ಸೇವೆಗಾಗಿ ಅರ್ಜಿ ಸಲ್ಲಿಸುತ್ತಿರುವ ಗ್ರಾಹಕರ ಸಂಖ್ಯೆ ಗಣನೀಯವಾಗಿ  ಹೆಚ್ಚಾಗುತ್ತಿದ್ದು, ಇತರೆ ಟೆಲಿಕಾಂ ಗ್ರಾಹಕರ ಸಂಖ್ಯೆಯಲ್ಲಿ ಇಳಿಮುಖ ಕಾಣುತ್ತಿದೆ.

ರಿಲಾಯನ್ಸ್ ಜಿಯೋ ಆರಂಭಿಕ ಕೊಡುಗೆಯಾಗಿ ಗ್ರಾಹಕರಿಗೆ ಭರ್ಜರಿ ಆಫರ್ ನೀಡುತ್ತಿದ್ದಂತೆಯೇ ಇತರೆ ಮೊಬೈಲ್ ಕಂಪನಿಗಳೂ ಈ ಸ್ಪರ್ಧೆಯನ್ನೆದುರಿಸಲು ಶೇ.80 ರಷ್ಟು ಡೇಟಾ ಪ್ಯಾಕ್ ಗಳ ಮೇಲಿನ ದರವನ್ನು ಕಡಿತಗೊಳಿಸಿವೆ.

ರಿಲಾಯನ್ಸ್ 90 ದಿನಗಳವರೆಗೆ ಉಚಿತ 4ಜಿ ಎಲ್.ಟಿ.ಇ ಡೇಟಾ, ಅನಿಯಮಿತ ಕರೆಗಳ ಜೊತೆಗೆ ವಿಡಿಯೋ ಕಾಲಿಂಗ್ ಸೌಲಭ್ಯವನ್ನೂ ನೀಡುತ್ತಿದ್ದು, ರಿಲಾಯನ್ಸ್ ಸಿಮ್ ಖರೀದಿಗೆ ಈಗ ಜನ ಮುಗಿ ಬಿದ್ದಿದ್ದಾರೆ. ಹೀಗಾಗಿ ಕೆಲ ಪ್ರಮುಖ ಟೆಲಿಕಾಂ ಕಂಪನಿಗಳು ಡೇಟಾ ಪ್ಯಾಕ್ ದರವನ್ನು ಕಡಿತಗೊಳಿಸಿದ್ದು, ಅದರ ವಿವರ ಇಲ್ಲಿದೆ ನೋಡಿ.

ಶೀಘ್ರವಾಗಿ ಇತ್ತೀಚೆಗೆ ಜಿಯೋ ನೆಟ್‌ವರ್ಕ್‌ ಅಳವಡಿಸಿದವರು ವಾಯ್ಸ್‌ ಕರೆ ನಿರ್ವಹಣೆಯಲ್ಲಿ ಕಠಿಣತೆ ಅನುಭವ ಪಡೆದಿದ್ದಾರೆ. ರಿಲಾಯನ್ಸ್ ಜಿಯೋ ಟ್ರಾಯ್‌ಗೆ ಬರೆದ ಪತ್ರದ ಪ್ರಕಾರ, ಅದರ ನೆಟ್‌ವರ್ಕ್‌ನಲ್ಲಿ ಕರೆ ಡ್ರಾಪ್‌ ದರ ಶೇಕಡ 65 ಕ್ಕಿಂತ ಹೆಚ್ಚಾಗಿದೆ. 1.6 ಕೋಟಿ ಕರೆಗಳು ಜಿಯೋ, ವೊಡಾಫೋನ್, ಏರ್‌ಟೆಲ್‌, ಐಡಿಯಾ ನೆಟ್‌ವರ್ಕ್‌ನಲ್ಲಿ ಫೇಲ್‌ ಆಗಿವೆ. ಜಿಯೋ ನೆಟ್‌ವರ್ಕ್‌ ಶೇರ್‌ ನೆಟ್‌ವರ್ಕ್‌ ಅನ್ನು ಫಾಲೋ ಮಾಡುವುದಿಲ್ಲ.

ದೇಶದ ಟೆಲಿಕಾಂ ಕಂಪನಿಗಳ ಪೈಕಿ ಮುಂಚೂಣಿಯಲ್ಲಿರುವ ಏರ್ ಟೆಲ್, ಡೇಟಾ ಪ್ಯಾಕ್ ದರವನ್ನು ಶೇ. 80 ರಷ್ಟು ಕಡಿತಗೊಳಿಸಿದ್ದು, ಆದರೆ ಈ ಸೌಲಭ್ಯ ಪಡೆಯಬೇಕೆಂದರೆ 1,498 ರೂ. ರೀ ಚಾರ್ಜ್ ಮಾಡಿಸಬೇಕಾಗುತ್ತದೆ. ಆ ಬಳಿಕ ಕೇವಲ 51 ರೂಪಾಯಿಗಳಲ್ಲಿ 12 ತಿಂಗಳ ಕಾಲ 1 ಜಿಬಿ 3ಜಿ/4ಜಿ ಡೇಟಾ ದೊರೆಯಲಿದ್ದು, ಈ 12 ತಿಂಗಳ ಅವಧಿಯಲ್ಲಿ ಎಷ್ಟು ಬಾರಿ ಬೇಕಾದರೂ 51 ರೂ.

ಪಾವತಿಸಿ 1 ಜಿಬಿ ಡೇಟಾ ಪಡೆಯಬಹುದಾಗಿದೆ. ಏರ್ ಟೆಲ್ ನ ಇತರೆ ಡೇಟಾ ಪ್ಯಾಕ್ ಗಳ ದರ ಈ ರೀತಿ ಇದೆ.

ಏರ್ ಟೆಲ್ (ಈ ಮೊತ್ತಕ್ಕೆ ಹಿಂದೆ ನೀಡುತ್ತಿದ್ದ ಜಿಬಿ ಯ ವಿವರ ಬ್ರಾಕೆಟ್ ನಲ್ಲಿದೆ)

580MB (440MB) – Rs 145

3GB (2GB) – Rs 455 for 28 days

5GB (3GB) – Rs 655 for 28 days

6GB (4GB) – Rs 755 for 28 days

7GB (5GB) – Rs 855 for 28 days

10GB (6.5GB) -Rs 989 for 28 days

ವೋಡಾಫೋನ್ (ಈ ಮೊತ್ತಕ್ಕೆ ಹಿಂದೆ ನೀಡುತ್ತಿದ್ದ ಜಿಬಿ ಯ ವಿವರ ಬ್ರಾಕೆಟ್ ನಲ್ಲಿದೆ)

5GB (3GB) – Rs 650 for 28 days

3GB (2GB) – Rs 449 for 28 days

10GB (6GB)- Rs 999 for 28 days

50MB (30MB)-Rs 12 for 1 day

ಐಡಿಯಾ (ಈ ಹಿಂದಿನ ದರ ಬ್ರಾಕೆಟ್ ನಲ್ಲಿದೆ)

2GB – Rs 349 for 28 days (Rs 449)

5GB – Rs 649 for 28 days (Rs 849)

10GB-Rs 990 for 28 days (Rs 1349)

ಬಿಎಸ್‌ಎನ್‌ಎಲ್ (ಈ ಮೊತ್ತಕ್ಕೆ ಹಿಂದೆ ನೀಡುತ್ತಿದ್ದ ಜಿಬಿ ಯ ವಿವರ ಬ್ರಾಕೆಟ್ ನಲ್ಲಿದೆ)

1,099 ರೂಪಾಯಿಗೆ ಅನಿಯಮಿತ 3 ಜಿ ಸೌಲಭ್ಯ

10GB (5GB) – Rs 549

2GB (1GB) – Rs 156 for 10 days

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

2 Comments

2 Comments

Leave a Reply

Your email address will not be published.

To Top