fbpx
Karnataka

ಅಗತ್ಯವಾಗಿ ಬೇಕಾಗಿದೆ “ಕನ್ನಡ ಭಾಗ್ಯ” ಯೋಜನೆ!!

ಹತ್ತನೆ ತರಗತಿಯವರೆಗೂ ಕನ್ನಡಮಾಧ್ಯಮದಲ್ಲಿ ಓದಿದವರಿಗೆ ಮಾತ್ರ ಸರ್ಕಾರಿ ಉದ್ಯೋಗ!! ಅಗತ್ಯವಾಗಿ ಬೇಕಾಗಿದೆ “ಕನ್ನಡ ಭಾಗ್ಯ” ಯೋಜನೆ!!

e0b295e0b2a8e0b38de0b2a8e0b2a1-e0b295e0b2b2e0b2bf

ಮೇಲಿನ ಶಿರ್ಷಿಕೆ ಓದಿದರ ಆಶ್ಚರ್ಯವಾಗಬಹುದು, ಅದರೆ ಇಂದಿನ ಕನ್ನಡದ ಸ್ಥಿತಿಗತಿಗಳನ್ನು ಅವಲೋಕಿಸಿದಾಗ ಸದ್ಯಕ್ಕೆ ತುರ್ತಾಗಿ ಇಂಥಹದೊಂದು ಕಾನೂನು ಕರ್ನಾಟಕದಲ್ಲಿ ಸರ್ಕಾರದಿಂದ ಜಾರಿಯಾಗಬೇಕಾಗಿದೆ ಎಂದು ಅನ್ನಿಸುತ್ತದೆ.ಕರ್ನಾಟಕದಲ್ಲಿ ಅಥವಾ ಬೆಂಗಳೂರಿನಲ್ಲಿ ಕನ್ನಡಿಗರು ಕಡಿಮೆಯಾಗಿಲ್ಲಾ!! ಅದರೆ ಕನ್ನಡ ಬಳಸುವವರು ಕಡಿಮೆಯಾಗಿದ್ದಾರೆ.ಇತ್ತಿಚೀನ ದಿನಗಳಲ್ಲಿ ತಂದೆತಾಯಿಯರ ಮುಖ್ಯವಾದ ಕನಸು ತಮ್ಮ ಮಕ್ಕಳು ಉತ್ತಮ ಶಾಲೆಯಲ್ಲಿ ಓದಿ ಪಟಪಟನೆ ಇಂಗ್ಲೀಷ್ ಮಾತನಾಡಬೇಕು, ಸಾಫ್ಟ್ವೇರ್ ತಂತ್ರಜ್ನಾನಾಗಬೇಕು ವಿದೇಶಕ್ಕೆ ಹಾರಬೇಕು, ಹಾಗಾಗಿ ಏಲ್ಲರೂ ಇಂಗ್ಲೀಷ್ ಶಾಲೆಯತ್ತ ಮುಖಮಾಡಿ ಕನ್ನಡಿಗರು ತಮ್ಮ ಮಕ್ಕಳಿಗೆ ಖಡ್ಡಾಯವಾಗಿ ಇಂಗ್ಲೀಷ್ ಕಲಿಸುತ್ತಿದ್ದಾರೆ,ಇನ್ನು ಈ ಪೋಷಕರು ತಮ್ಮ ಮಕ್ಕಳನ್ನು ಓದಿಸುವ ಕರ್ನಾಟಕದಲ್ಲಿರುವ ಶಾಲೆಗಳಲ್ಲಿಸಿ.ಬಿ.ಎಸ್.ಸಿ ಹಾಗೂ ಐ,ಸಿ,ಎಸ್‍ಸಿ ಪಠ್ಯವಿರುವ ಶಾಲೆಗಳಲ್ಲಿ ಹಿಂದಿ ಖಡ್ಡಾಯವಾಗಿದೆಯೆ ಹೊರತು ಕನ್ನಡವಲ್ಲಾ! ಹಿಂದಿ ಮಾತನಾಡುವ ರಾಜ್ಯಗಳನ್ನು ಬಿಟ್ಟು ಬೇರೆ ರಾಜ್ಯಗಳಲ್ಲೆಕೆ ತ್ರೀಭಾಷಾ ಸೂತ್ರ? ಇಂತಹ ಸಂದಿಗ್ದ ಪರಿಸ್ಥಿತಿ ಇರುವಾಗ ಮೇಲಿನಂತಹ ಕಾನೂನು ಅಗತ್ಯವಾಗಿ ಬೇಕೆನಿಸುತ್ತದೆ. ಸರ್ಕಾರಿ ಉದ್ಯೋಗ ಪಡೆದುಕೊಳ್ಳಬೇಕೆಂಬ ಅಕಾಂಕ್ಷೆ ಇದ್ದವರು ಖಂಡಿತ ಇಂತಹ ಶಾಲೆಗಳಿಗೆ ಸೇರುತ್ತಾರೆ, ಹತ್ತನೆ ತರಗತಿಯವರೆಗೂ ಕನ್ನಡ ಮಾಧ್ಯಮ ಇಲ್ಲಾದ್ದಿದ್ದರೂ ಕನ್ನಡ ಭಾಷೆಯನ್ನು ಪ್ರಥಮಭಾಷೆಯಾಗಿ ಓದಿದವರಿಗೆ ಮಾತ್ರ ಸರ್ಕಾರಿ ಉದ್ಯೋಗಕ್ಕೆ ಅರ್ಹರು ಏಂಬಂತಹ ಕಾನೂನಾದರೂ ಜಾರಿಗೆ ಬರಬೇಕು, ಹೀಗಾದರೂ ಕನ್ನಡ ಮಾತನಾಡುವವರ ಸಂಖ್ಯೆ ಬೆಂಗಳೂರಿನಲ್ಲಿ, ರಾಜ್ಯದಲ್ಲಿ ಹೆಚ್ಚಾಗಬಹುದು.

ಪ್ರಾಥಮಿಕ ಶಿಕ್ಷಣದಲ್ಲಿ ಕನ್ನಡ ಭಾಷೆ ( ಮೊದಲು ಕರ್ನಾಟಕದಲ್ಲಿ 1 ರಿಂದ 10ನೇ ತರಗತಿಯ ವರೆಗೆ ಕನ್ನಡ ಕಲಿಕೆ ಕಡ್ಡಾಯಮಾಡಬೇಕೆಂಬ ಬೇಡಿಕೆ ಇತ್ತು, ಅದು ಈಗ ಪ್ರಾಥಮಿಕ ಶಿಕ್ಷಣಕ್ಕೆ ಮಾತ್ರ ಸೀಮಿತವಾಗಿರುವುದು ವಿಪರ್ಯಾಸ!!) ಕಡ್ಡಾಯವಾಗಬೇಕೆಂಬುದರಲ್ಲಿ ಎರಡು ಮಾತಿಲ್ಲಾ!ಪ್ರಾಥಮಿಕ ಶಿಕ್ಷಣದಲ್ಲಿ ಕನ್ನಡ ಭಾಷೆ ಕಡ್ಡಾಯಗೊಳಿಸುವಂತೆ ಸಂವಿಧಾನ ತಿದ್ದುಪಡಿಗೆ ಒತ್ತಡ ಹೇರುವಲ್ಲಿ ಕರ್ನಾಟಕದ ಸಂಸದರಾಗಲಿ ಅಥವ ಕರ್ನಾಟಕದ ಯಾವುದೇ ರಾಜಕಾರಣಿಯಾಗಲಿ ಪ್ರಾಮಾಣಿಕ ಪ್ರಯತ್ನವನ್ನೇ ಮಾಡುತ್ತಿಲ್ಲ! ಅವರಿಗೆ ಪ್ರಯತ್ನದ ಇಚ್ಚಾಶಕ್ತಿಯು ಇದ್ದಂತಿಲ್ಲ!! ಹೀಗಿರುವಾಗ ಕರ್ನಾಟಕದಲ್ಲಿ ಕನ್ನಡದ ಉಳಿವು ದೊಡ್ದಪ್ರಶ್ನೆಯಾಗಿಯೇ ಉಳಿಯುತ್ತದೆ. ಜಾಗತಿಕರಣದಿಂದಾಗಿ ಹಲವಾರು ದೇಶದ ಹಲವಾರು ಭಾಷೆಗಳು ಇಂಗ್ಲೀಷನ ಪ್ರಬಾವಕ್ಕೆ ಓಳಗಾದರೂ ಇಂಗ್ಲೀಷನ್ನು ಪೂರ್ಣವಾಗಿ ಒಪ್ಪಿಕೊಂಡಿಲ್ಲ.ಅಂದರೆ ದೇಶಿಯ ಭಾಷೆಯನ್ನು ಉಳಿಸಿಕೊಳ್ಳುವ ಪ್ರಯತ್ನ ಏಲ್ಲಾ ದೇಶದಲ್ಲು ಇದೆ. ಚೀನಾ, ರಷ್ಯ, ಜಪಾನ್, ಮುಂತಾದ ದೇಶಗಳಲ್ಲಿ ಶಿಕ್ಷಣ ಮಾದ್ಯಮವು ಏಲ್ಲಾ ಹಂತಗಳಲ್ಲಿ ಆಯಾ ದೇಶ ಭಾಷೆಗಳಲ್ಲೆ ಇರುವುದು ಇಲ್ಲಿ ಗಮನಾರ್ಹ ವಿಚಾರ. ಕನ್ನಡವನ್ನೇ ಬಿಟ್ಟುಕೋಟ್ತು ಇಂಗ್ಲೀಷನ್ನು ಸ್ವಿಕರಿಸುವುದು ಸರಿಯಲ್ಲ.ಪ್ರತಿವರ್ಷ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡ ಭಾಷೆಯ ಉನ್ನತಿಗೆ ಆಗಬೇಕಾಗಿರುವ ವಿಷಯಗಳ ಬಗ್ಗೆ ಚರ್ಚೆ ಬರಿ ಕನ್ನಡ ಸಾಹಿತ್ಯ ಸಮ್ಮೇಳನದ ಕಾರ್ಯಕ್ರಮಕ್ಕೆ ಸೀಮಿತವಾಗುತ್ತಿದೆ ಎಂದರೆ ತಪ್ಪಾಗುವುದಿಲ್ಲ!ನೂರು ವರ್ಷಗಳ ಇತಿಹಾಸ ಇರುವ ಸಮೃದ್ದ ಸಾಹಿತ್ಯ ಪರಂಪರೆ ಇರುವ, ಕನ್ನಡ ಸಾಹಿತ್ಯದ ಚಟುವಟಿಕೆಯ ಕೇಂದ್ರಬಿಂದು ಕನ್ನಡಿಗರ ಹೆಮ್ಮೆಯ ಕಸಪಾ ಪ್ರಾಥಮಿಕ ಶಿಕ್ಷಣದಲ್ಲಿ ಕನ್ನಡ ಭಾಷೆ ಕಡ್ಡಾಯಗೊಳಿಸುವಂತೆ ಸಂವಿಧಾನ ತಿದ್ದುಪಡಿಗೆ ಒತ್ತಡ ಹೇರಲು ಪ್ರಾಮಾಣಿಕ ಪ್ರಯತ್ನ ಮಾಡಬೇಕಿದೆ

ಪ್ರಾಥಮಿಕ ಶಿಕ್ಷಣದಲ್ಲಿ ಕನ್ನಡ ಭಾಷೆ ಕಡ್ಡಾಯವಾಗುವುದಿರಲಿ ಹಲವಾರು ಸರ್ಕಾರಿ ಕನ್ನಡ ಶಾಲೆಗಳನ್ನು ಮುಚ್ಹಬೇಕೆಂದು ಸರ್ಕಾರ ನಿರ್ದರಿಸಿದ್ದು ನಿಮಗೆ ಗೊತ್ತಿಲ್ಲದ ವಿಷಯವೆನಲ್ಲ!ಪ್ರತಿವರ್ಷ ಕೋಟ್ಯಂತರ ರೂಪಾಯಿಗಳನ್ನು ಖರ್ಚುಮಾಡಿ ಕನ್ನಡ ಸಾಹಿತ್ಯಸಮ್ಮೇಳನ ನೆಡೆಸುವ ಬದಲು, ಸರ್ಕಾರಿ ಕನ್ನಡ ಶಾಲೆಗಳು ಮುಚ್ಚುವ ಹಂತಕ್ಕೆ ಏಕೆ ಬಂದಿದೆ? ಎಂದು ಪರಾಮರ್ಶಿಸಿ ಅಂತಹ ಶಾಲೆಗಳ ಉದ್ದಾರಕ್ಕೆ ಉನ್ನತಿಕರಣಕ್ಕೆ ಈ ಕೊಟ್ಯಂತರ ರೂಪಾಯಿಗಳನ್ನು ವ್ಯಯಿಸುವ ಔದಾರ್ಯವನ್ನು ಸರ್ಕಾರ ಕಸಾಪ ಮಾಡಬಹುದಲ್ಲವೇ?ಒಂದೆರಡು ವರ್ಷ ಸಾಹಿತ್ಯಸಮ್ಮೇಳನ ಮಾಡದಿದ್ದರೆ ಕನ್ನಡದ ಅಭಿಮಾನವೇನು ಕಡಿಮೆಯಾಗುವುದಿಲ್ಲ.ಅಲ್ಲವೇ?ಅಖಿಲ ಭಾರತಮಟ್ಟದಲ್ಲಿ, ಜಿಲ್ಲಾ ಮಟ್ಟದಲ್ಲಿ ಮತ್ತು ತಾಲ್ಲೂಕು ಮಟ್ಟದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ನೆಡೆಸಿ ಕೊಟ್ಯಂತರ ರೂಪಾಯಿ ಹಣ ಖರ್ಚು ಮಾಡಿ ಕಸಾಪ ಸಾದಿಸುತ್ತಿರುವುದಾದರು ಏನನ್ನು?

kampina banner 3

ಕನ್ನಡದಲ್ಲಿ ಪ್ರತಿವರುಷ ಸಾವಿರಾರು ಪುಸ್ತಕಗಳು ಹೊರಬರುತ್ತಿದೆ,ಬೇರೆ ಭಾಷೆಯ ಸಾಹಿತ್ಯಕ್ಕೆ ಹೋಲಿಸಿದರೆ ಕನ್ನದ ಸಾಹಿತ್ಯ ರಚನೆಯಿಂದ ಶ್ರೀಮಂತವಾಗಿದ್ದು, ಕನ್ನಡದಲ್ಲೇ ಅತಿ ಹೇಚ್ಚು ಸಾಹಿತ್ಯ ರಚನೆಯಾಗುತ್ತಿದೆಯೆಂದರೆ ತಪ್ಪಾಗುವುದಿಲ್ಲ..ಪ್ರಾಥಮಿಕ ಶಿಕ್ಷಣದಲ್ಲಿ ಕನ್ನಡ ಭಾಷೆ ಕಡ್ಡಾಯವಾಗದ್ದಿದ್ದಲ್ಲಿ, ಸರ್ಕಾರ ಸರ್ಕಾರಿ ಕನ್ನಡಶಾಲೆಗಳನ್ನು ಮುಚ್ಹಿದ್ದಲ್ಲಿ ಹೀಗೆ ಬರೆದ ಪುಸ್ತಕಗಳನ್ನು ಮುಂದೆ ಓದುವರಾರು? ಪ್ರಾಥಮಿಕ ಶಿಕ್ಷಣದಲ್ಲಿ ಕನ್ನಡ ಭಾಷೆ ಕಡ್ಡಾಯವಾಗದ್ದಿದ್ದಲ್ಲಿ ಮುಂಬರುವ ಕೇಲವೆ ವರ್ಷಗಳಲ್ಲಿ ಈ ಪುಸ್ತಕಗಳಿರಲಿ, ಕನ್ನಡ ಪತ್ರಿಕೆಗಳನ್ನು ಓದುವವರಿರುವುದಿಲ್ಲ, ಕನ್ನಡ ಬರಿ ವ್ಯವಹಾರಕ್ಕೆ ಮಾತ್ರ ಸೀಮಿತವಾಗಿ, ಕನ್ನಡ ಓದುವವರೆ ಇಲ್ಲವಾಗಬದುದಲ್ಲವೇ? ಕನ್ನಡ ಬರಿ ಮಾತನಾಡಲು ಮಾತ್ರ ಉಪಯೋಗಿಸುವ ಭಾಷೆಯಗಬೇಕೆ?

ಪ್ರಾಥಮಿಕ ಶಿಕ್ಷಣದಲ್ಲಿ ಕನ್ನಡ ಭಾಷೆ ಕಡ್ಡಾಯಮಾಡವುದು ಸರ್ಕಾರದ ಆದೇಶದಿಂದ ಆಗಬೇಕಾದ ಕೆಲಸವಾಗಿದ್ದು ಇದನ್ನು ಕಾರ್ಯಗತಗೊಳಿಸುವಂತೆ ಇತರ ಕನ್ನಡಪರ ಸಂಘಗಳೂಡನೆ ಸೇರಿ ಸರ್ಕಾರದ ಮೇಲೆ ಓತ್ತಡ ಹೇರುವುದು ಕನ್ನಡಿಗರ ಪ್ರಾತಿನಿದಿಕ ಸಂಸ್ಥೆಯಾದ ಕಸಾಪದ ಜವಾಬ್ದಾರಿಯಲ್ಲವೇ?

1976 ರಲ್ಲಿ ಶಿವಮ್ಮೊಗ್ಗದಲ್ಲಿ ನೆಡೆದ 49ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ತೆಗೆದುಕೊಡಿದ್ದ 13 ನಿರ್ಣಯಗಳಲ್ಲಿ ಬಹುಮುಖ್ಯವಾದ್ದದ್ದು ಕರ್ನಾಟಕದಲ್ಲಿ “1 ರಿಂದ 10ನೇ ತರಗತಿಯ” ವರೆಗೆ ಕನ್ನಡ ಕಲಿಕೆ ಕಡ್ಡಾಯಮಾಡುವುದು ಎಂಬ ನಿರ್ಣಯ, ಇದು ಇತ್ತಿಚೆಗೆ ಬರಿ ಪ್ರಾಥಮಿಕ ಶಿಕ್ಷಣದಲ್ಲಿ ಕನ್ನಡ ಭಾಷೆ ಕಡ್ಡಾಯ ಮಾಡಬೇಕೆಂಬ ಹಂತಕ್ಕೆ ಬಂದಿರುವುದು ವಿಪರ್ಯಾಸದ ಸಂಗತಿ! ಇದು ಇನ್ನು ನಿರ್ಣಯದ ಹಂತದಲ್ಲೇ ಇದೆ!!

ಇನ್ನು ಕನ್ನಡಪರ ಸಂಘಟನೆಗಳ ವಿಷಯಕ್ಕೆ ಬಂದರೆ, ಇವರಿಗೆ ಕನ್ನಡ ನೆನಪಾಗುವುದು, ನವಂಬರ್ ತಿಂಗಳಲ್ಲಿ ಎಂದರೆ ತಪ್ಪಾಗಲಾರದು.ನವಂಬರ್ ಬಂತೆಂದರೆ ಈ ಕನ್ನಡಪರ ಸಂಘಟನೆಗಳು ಇನ್ನಿಲ್ಲದ ಚಟುವಟಿಕೆಯಿಂದ ಇರುತ್ತದೆ!. ನವಂಬರ್ ತಿಂಗಳು ಪೂರ್ತಿ ಕನ್ನಡ ಕನ್ನಡ ಎಂದು ಚಂದಾ ಎತ್ತಿ ಕನ್ನಡರಾಜ್ಯೊತ್ಸವ ಆಚರಿಸಿ ಮಲಗಿದರೆ ಮುಗಿಯಿತು ಮತ್ತೆ ಏಳುವುದು ಮುಂದಿನ ನವಂಬರ್‍ನಲ್ಲೇ!! ಬೆಂಗಳೂರಿನಂತ ನಗರಗಳಲ್ಲಿರುವ ದೊಡ್ಡ ದೊಡ್ಡ ಖಾಸಗಿ ಕಂಪನಿಗಳಲ್ಲಿ ಹೆಚ್ಚಾಗಿ ಅನ್ಯಭಾಷೆಯವರೆ ಹೆಚ್ಚಾಗಿದ್ದು ಕನ್ನಡಿಗರಿಗೆ ಕೆಲಸ ಕೊಡಿಸುವಲ್ಲಿ ಪ್ರಮಾಣಿಕ ಪ್ರಯತ್ನವನ್ನೇನಾದರು ಈ ಕನ್ನಡಪರ ಸಂಘಟನೆಗಳು ಮಾಡಿದ್ದರೆ ಏದೆ ಮುಟ್ಟಿಕೊಂಡು ಹೇಳಲಿ ನೋಡೊಣ? ಇನ್ನೂ ಮಹಿಷಿವರದಿ ಜಾರಿಯಾಗಿಲ್ಲಾ, ಅದರೂ ಕಡೆಪಕ್ಷ ಈ ವರದಿಯ ಪ್ರಕಾರ ಕರ್ನಾಟಕದ ಖಾಸಗಿ ಕಂಪನಿಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಸಿಗುತ್ತಿದಿಯೆ ಏಂದು ಈ ಕನ್ನಡಪರ ಸಂಘಟನೆಗಳು ಪರಿಶಿಲಿಸುವ ಪ್ರಾಮಾಣಿಕ ಪ್ರಯತ್ನವನ್ನೇನಾದರೂ ಮಾಡಿದ್ದಾವೆಯೆ? ಕರ್ನಾಟಕದ ದೊಡ್ಡ ದೊಡ್ಡ ಕಂಪೆನಿಗಳಲ್ಲಿ ದೊಡ್ಡ ದೊಡ್ಡ ಹುದ್ದೆಗಳಲ್ಲಿ ಅನ್ಯಭಾಷಿಯರೆ ಹೆಚ್ಹಾಗಿ ಇದ್ದು, ಇವರು ತಮ್ಮ ಕೆಳಗಿನ ಹುದ್ದೆಗಳಿಗೆ ತಮ್ಮ ಭಾಷಿಯರನ್ನೇ ನೇಮಿಸಿಕೊಳ್ಳುತ್ತಿರುವುದರಿಂದ ಕನ್ನಡಿಗರಿಗೆ ತಮ್ಮ ನೆಲದಲ್ಲೆ ನೆಲೆ ಇಲ್ಲದಂತಾಗಿದೆ.! ಕನ್ನಡಿಗರ ಗೋಳು ಕೆಳೋರು ಯರು? ಎಂಬಂತಾಗಿದೆ

ಇಂಗ್ಲಿಷ್ ಜಾಗತಿಕ ಭಾಷೆಯಾಗಿದ್ದು ಅದು ನಮಗೆ ಉದ್ಯೋಗ ಓದಗಿಸಿಕೊಡುತ್ತದೆ ಎಂಬ ಕಾರಣಕ್ಕೆ ಅದರ ಹಿಂದೆ ಓಡುವುದರಿಂದ ಕನ್ನಡಕ್ಕೆ ನಿಜಕ್ಕೂ ಅಪಾಯವಿದೆ. ಪ್ರಾಥಮಿಕ ಶಿಕ್ಷಣದಲ್ಲಿ ಮಾತ್ರವಲ್ಲದೇ ಕನ್ನಡವನ್ನು ಉನ್ನತ ವಿದ್ಯಾಬ್ಯಾಸದ ಮಾದ್ಯಮವನ್ನಾಗಿ ಮಾಡಬೇಕಾದ ಅವಶ್ಯಕತೆಯಿದೆ. ಈ ನಿಟ್ಟಿನಲ್ಲಿ ಕಸಾಪ, ಕನ್ನಡ ಅಭಿವೃದ್ದಿ ಪ್ರಾದಿಕಾರ ಮತ್ತು ಕನ್ನಡಪರ ಸಂಘಟನೆಗಳು ಸರ್ಕಾರದ ಮೇಲೆ ಜನಪ್ರತಿನಿದಿಗಳ ಮೇಲೆ ಒತ್ತಡ ಹೇರಬೇಕಿದೆ. ಕನ್ನಡ ಉಳಿಸಿ ಬೆಳಸಬೇಕಾಗಿದ್ದು ಇಂದು ಅತ್ಯಂತ ಜಾರೂರಾಗಿ ಅಗಬೇಕಾಗಿರುವ ಕೆಲಸ, ಈ ನಿಟ್ಟಿನಲ್ಲಿ ಕಸಪ, ಕನ್ನಡ ಅಬಿವೃದ್ದಿ ಪ್ರಾದಿಕಾರ,ಸಾಹಿತ್ಯಸಕ್ತರು ಹಾಗೂ ಕನ್ನಡಪರ ಸಂಘಟನೆಗಳು ಈ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನವನ್ನು ಮಾಡಬೇಕಾಗಿದೆ. ಅದಕ್ಕಾಗಿಯೆ 81ನೇ ಕನ್ನಡ ಸಾಹಿತ್ಯಸಮ್ಮೇಳನದ ಅದ್ಯಕ್ಷಸ್ತಾನವನ್ನು ನಿರಾಕರಿಸಿದ ಶ್ರೀದೇವನೂರು ಅವರು ಎಲ್ಲರನ್ನು ಸೇರಿಸಿಕೊಂಡು ಹೊರಾಡಲು ಕಸಾಪಕ್ಕೆ ಇದು ಸುಸಮಯ! ಹೊರಾಡಲು ಪೆÇರೆ ಕಳಚಿ ಹೊರಬರಬೇಕಾಗಿದೆ ಎಂದಿರುವುದು. ಕೊನೆಪಕ್ಷ ಪ್ರಾಥಮಿಕ ಶಿಕ್ಷಣದಲ್ಲಿ ಕನ್ನಡ ಖಡ್ಡಾಯ ಮಾಡದ್ದಿದ್ದರೆ ಕಾಲಾಂತರದಲ್ಲಿ ಶ್ರೀಮಂತವಾದ ಕನ್ನಡ ಸಾಹಿತ್ಯವನ್ನು ಓದುವವರೇ ಇಲ್ಲವಾಗಬಹುದು, ಆಗ ಯಾರಿಗಾಗಿ ಕನ್ನಡ ಸಾಹಿತ್ಯ ಸಮ್ಮೇಳನವನ್ನು ನೆಡೆಸುತ್ತಿರಿ? ಈಗಿರುವ ಸರ್ಕಾರಕ್ಕೆ ಕನ್ನಡದ ಬಗ್ಗೆ ಕಾಳಜಿ ಇದೆ ಎಂದುಕೊಳ್ಳುತ್ತೇನೆ, ಅನ್ನ ಭಾಗ್ಯ, ಹಾಲು ಭಾಗ್ಯ, ಶಾದಿ ಭಾಗ್ಯ, ಬೋರ್ ವೆಲ್ ಭಾಗ್ಯ, ಆಭಾಗ್ಯ, ಈ ಭಾಗ್ಯ ಎಂಬ ಸರಣಿ ಬಾಗ್ಯ ಯೋಜನೆಯಂತೆ “ಪ್ರಾಥಮಿಕ ಶಿಕ್ಷಣದಲ್ಲಿ ಕನ್ನಡ ಖಡ್ಡಾಯ ಮಾಡುವ “ಕನ್ನಡ ಭಾಗ್ಯ” ವನ್ನು ಜಾರಿಗೆ ತರಲು ಸಂವಿದಾನ ತಿದ್ದುಪಡಿಗೆ ಕೇಂದ್ರಸರ್ಕಾರದ ಮೇಲೆ ಓತ್ತಡ ಹೇರಿ ಪ್ರಮಾಣಿಕ ಪ್ರಯತ್ನಮಾಡಿದರೆ ಕನ್ನಡಿಗರು ಮೆಚ್ಚಬಹುದೇನೋ?

51VIa5XT2OL._SY344_BO1,204,203,200_

ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ಹಿಂದಿ ಹೇರಿಕೆ ನಿಂತು ಕನ್ನಡ ಭಾಷೆಯ ಬಗೆಗಿನ ಒಲವು ಜಾಸ್ತಿಯಾಗಬೇಕಾಗಿದೆ, ಕರ್ನಾಟಕ ವಲಸಿಗರ ಸ್ವರ್ಗವಾಗುತ್ತಿದ್ದು ಕನ್ನಡ ಮಾತನಾಡುತ್ತಿರುವವರು ದಿನದಿಂದ ದಿನಕ್ಕೆ ಕಡಿಮೆಯಾಗುತ್ತಾಇದ್ದಾರೆ ಎಂದರೆ ತಪ್ಪಾಗಲಾರದು,ಕರ್ನಾಟಕದ ಸಿ.ಬಿ.ಎಸ್.ಸಿ ಹಾಗೂ ಐ,ಸಿ,ಎಸ್ ಸಿ ಶಾಲೆಗಳಲ್ಲಿ ಕನ್ನಡ ವಿಷಯ ಒದುವುದು ಖಡ್ಡಾಯವಲ್ಲಾ!!ಇನ್ನು ಕನ್ನಡ ಮಾದ್ಯಮ ಶಾಲೆಗಳು ಬೆರಳೆನಿಕೆಯಷ್ಟು, ಸರ್ಕಾರಿ ಕನ್ನಡ ಶಾಲೆಗಳನ್ನು ಮುಚ್ಚಲು ಸರ್ಕಾರವೆ ಮುಂದಾಗುತ್ತಿದ್ದು ಇನ್ನು ಕನ್ನಡ ಹೇಗೆ ಬೆಳೆಯಲು ಉಳಿಯಲು ಸಾಧ್ಯ? ರಾಜ್ಯ ಸರ್ಕಾರ ಕನ್ನಡದ ಏಳಿಗೆಗೆ ಕಾರ್ಯರೂಪವನ್ನು ತರದಿದ್ದರೆ ಹಿಂದಿ ಹೇರಿಕೆಯಿಂದ ಮುಂದೊಂದು ದಿನ ಕನ್ನಡ ಕರ್ನಾಟಕದಲ್ಲೇ ಅಲ್ಪಸಂಖ್ಯಾತ ಭಾಷೆಯಾಗುವುದರಲ್ಲಿ ಸಂದೇಹವಿಲ್ಲಾ. ಇಂತಹ ಪರಿಸ್ಥಿತಿ ಬರದೆ ಕನ್ನಡಿಗ ಕನ್ನಡನೆಲದಲ್ಲಿ ಸ್ವಾಭಿಮಾನಿಯಾಗಿ ಬದುಕುವಂತೆ ಮಾಡುವುದು ರಾಜ್ಯಸರ್ಕಾರದ ಅದ್ಯ ಕರ್ತವ್ಯವಲ್ಲವೇ? ಹತ್ತನೆತರಗತಿಯವರೆಗೂ ಹಿಂದಿ ಮಾಧ್ಯಮವನ್ನು ಒಂದು ವಿಷಯವನ್ನಾಗಿ ಓದಿಸುವ ಬದಲು ಕನ್ನಡ ವಿಷಯವನ್ನು ಕಲಿಯುವಂತೆ ಕಾನೂನು ತರಬೇಕು,ಈ ನಿಟ್ಟಿನಲ್ಲಿ ರಾಜ್ಯಸರ್ಕಾರ ಹಾಗೂ ಸಂಸದರು ಕನ್ನಡ ಉಳಿಸಿ ಬೇಳಸುತ್ತಾರೆಂಬ ಅಶಯ ಸಾಮಾನ್ಯ ಕನ್ನಡಿಗರಿಗೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

ಅಗತ್ಯವಾಗಿ ಬೇಕಾಗಿದೆ “ಕನ್ನಡ ಭಾಗ್ಯ” ಯೋಜನೆ!!
Click to comment

Leave a Reply

Your email address will not be published.

To Top