fbpx
Karnataka

ತಮಿಳುನಾಡಿಗೆ ನೀರು ಬಿಡಲು ಪ್ರಯತ್ನಿಸಬೇಕು ಕರ್ನಾಟಕಕ್ಕೆ ಸುಪ್ರೀಂ ಸಲಹೆ

ದೆಹಲಿ: ತಮಿಳುನಾಡಿಗೆ ನೀರು ಬಿಡಲು ಪ್ರಯತ್ನಿಸಬೇಕು ಎಂದು ಸುಪ್ರೀಂಕೋರ್ಟ್ ಕರ್ನಾಟಕ ಸರ್ಕಾರಕ್ಕೆ ಸಲಹೆ ನೀಡಿದೆ.

ನೀರು ಬಿಡಲು ಕರ್ನಾಟಕಕ್ಕೆ ನಿರ್ದೇಶಿಸುವಂತೆ ಮನವಿ ಮಾಡಿ ತಮಿಳುನಾಡು ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾ.ದೀಪಕ್ ಮಿಶ್ರ ಹಾಗೂ ಜಸ್ಟಿಸ್ ಉದಯ್ ಲಲಿತ್ ಪೀಠ ಈ ಸಲಹೆ ನೀಡಿದೆ.ಅಲ್ಲದೆ ಜೂನ್,ಜುಲೈ,ಆಗಸ್ಟ್ ನಲ್ಲಿ ನೀರಿನ ಕೊರತೆ ಇದೆ. ಹೀಗಾಗಿ ಕರ್ನಾಟಕ ಬದುಕಿ ಬದುಕಲು ಬಿಡಿ ತತ್ವ ಅಳವಡಿಸಿಕೊಳ್ಳಬೇಕು.ಇದರಂತೆ ತಮಿಳುನಾಡಿಗೆ ನೀರು ಬಿಡಲು ಪ್ರಯತ್ನಿಸಬೇಕು ಎಂದು ಸೂಚನೆ ನೀಡಿದೆ.

ಕರ್ನಾಟಕ ಸರ್ಕಾರ ಜೂನ್, ಜುಲೈ ಹಾಗೂ ಆಗಸ್ಟ್ ತಿಂಗಳಲ್ಲಿ ನೀರು ಬಿಟ್ಟಿಲ್ಲ ಎಂದು ತಮಿಳುನಾಡು ಪರ ವಕೀಲರು ವಾದ ಮಂಡಿಸಿದರು. ಆದರೆ ಈ ಮೂರು ತಿಂಗಳಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದ್ದು, ನೀರಿನ ಕೊರತೆಯಾಗಿದೆ ಎಂದು ಕರ್ನಾಟಕದ ಪರ ಹಿರಿಯ ವಕೀಲ ಫಾಲಿ ನಾರಿಮನ್ ಅವರು ಪ್ರತಿವಾದ ಮಂಡಿಸಿದರು.

ಈ ಬಗ್ಗೆ ನೀವು ಮನವೊಲಿಸಿ ಎಂದು ಸುಪ್ರೀಂ ಪೀಠ ಕರ್ನಾಟಕ ಪರ ವಕೀಲರಿಗೆ ಸೂಚಿಸಿ, ಅರ್ಜಿ ವಿಚಾರಣೆಯನ್ನು ಸೆಪ್ಟೆಂಬರ್ 5ಕ್ಕೆ ಮುಂದೂಡಿತು.

ಆದರೆ ಎಷ್ಟು ಪ್ರಮಾಣದ ನೀರನ್ನು ಬಿಡಬೇಕು ಎಂಬುದನ್ನು ಮಾತ್ರ ಸುಪ್ರೀಂಕೋರ್ಟ್ ತಿಳಿಸಿಲ್ಲ. ಹಾಗೆಯೇ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿದೆ.ಸೋಮವಾರ ಈ ಬಗ್ಗೆ ವಿಸ್ತೃತ ವಾದ ನಡೆಯಲಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top