fbpx
News

ಭಾರತ-ವಿಯಟ್ನಾಂ 12 ಒಪ್ಪಂದಗಳಿಗೆ ಸಹಿಹಾಕಲಾಯಿತು

ಭಾರತ-ವಿಯಟ್ನಾಂ 12 ಒಪ್ಪಂದಗಳಿಗೆ ಸಹಿ
ವಿಯಟ್ನಾ ರಕ್ಷಣೆ ಬಲವರ್ಧನೆಗೆ 500 ಮಿ. ಡಾಲರ್ ನೆರವು
ಸಾಫ್ಟ್‍ವೇರ್ ಪಾರ್ಕ್ ನಿರ್ಮಾಣಕ್ಕೆ 5 ಮಿ.ಡಾಲರ್ ಅನುದಾನ
20ರವೇಳೆಗೆ ವ್ಯವಹಾರ ವಹೀವಾಟು 15 ಬಿ. ಡಾಲರ್ ಗುರಿ

ಹಾನೋಯಿ(ವೆಯಟ್ನಾಂ): ಪ್ರಧಾನಿ ನರೇಂದ್ರ ಮೋದಿಯವರ ವಿಯಟ್ನಾಂ ಭೇಟಿ ಕಾಲದಲ್ಲಿ ಉಭಯದೇಶಗಳು 12 ಒಡಂಬಡಿಕೆಗಳಿಗೆ ಸಹಿಹಾಕಿವೆ. ರಕ್ಷಣಾ ಸಹಕಾರವನ್ನು ಮತ್ತಷ್ಟು ಬಲಪಡಿಸಲು 500 ಮಿಲಿಯನ್ ಡಾಲರ್ ಸಾಲ ನೆರವು, ಸಾಫ್ಟ್‍ವೇರ್ ಪಾರ್ಕ್ ನಿರ್ಮಾಣಕ್ಕೆ 5 ಮಿಲಿಯನ್ ಡಾಲರ್ ಅನುದಾನ, ಮಾಹಿತಿ ತಂತ್ರಜ್ಞಾನ, ಬಾಹ್ಯಾಕಾಶ, ಅವಳಿ ತೆರಿಗೆ ಹಾಗೂ ಹಡಗುಗಳಿಗೆ ಸೇರಿದ ಮಾಹಿತಿ ವಿನಿಮಯ ಹೀಗೆ ಹಲವಾರು ವಲಯಗಳಿಗೆ ಸೇರಿದ 12 ಒಪ್ಪಂದಗಳಿಗೆ ಪ್ರಧಾನಿ ಮೋದಿ ಹಾಗೂ ವಿಯಟ್ನಾಂ ಪ್ರಧಾನಿ ನುಗ್ಯೆನ್ ಕ್ಸುವಾನ್ ಪುಕ್ ಅವರ ಉಪಸ್ಥಿತಿಯಲ್ಲಿ ಸಹಿಹಾಕಲಾಯಿತು.

ಆಗ್ನೇಯ ಏಷ್ಯಾ ವಲಯದಲ್ಲಿ ಎದುರಾಗುವ ಹೊಸಹೊಸ ಸವಾಲುಗಳಿಗೆ ಪ್ರತಿಸ್ಪಂದಿಸುವ ಸಲುವಾಗಿ ಈ ಉಭಯದೇಶಗಳು ತಮ್ಮ ಬಾಂಧವ್ಯವನ್ನು ಸಮಗ್ರವಾದ ವ್ಯೂಹಾತ್ಮಕ ಪಾಲುದಾರಿಕೆ ಮಟ್ಟಕ್ಕೇರಿಸಲು ನಿರ್ಧರಿಸಿವೆ.

ನಮ್ಮ ಭವಿಷ್ಯದ ಸಹಕಾರ ಬಲಪಡಿಸಲು ಈಗಿನ ವ್ಯೂಹಾತ್ಮಕ ಪಾಲುದಾರಿಕೆಯನ್ನು ಸಮಗ್ರವಾದ ವ್ಯೂಹಾತ್ಮಕ ಪಾಲುದಾರಿಕೆ ಮಟ್ಟಕ್ಕೇರಿಸಲು ತೀರ್ಮಾನಿಸಿದ್ದೇವೆ. ಇದು ನಮ್ಮ ದ್ವಿಪಕ್ಷೀಯ ಸಹಕಾರಕ್ಕೆ ಹೊಸ ದಿಕ್ಕು, ಆವೇಗ ಹಾಗೂ ಭೌತಿಕತೆಯನ್ನು ಒದಗಿಸುತ್ತದೆ ಎಂದು ಪ್ರಧಾನಿ ಮೋದಿ ಅವರು ಪುಕ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದ ನಂತರ ಪತ್ರಕರ್ತರಿಗೆ ತಿಳಿಸಿದರು.

ಉಭಯದೇಶಗಳು ಹೊಸದಾಗಿ ಎದುರಾಗುವ ಸವಾಲುಗಳಿಗೆ ಪ್ರತಿಸ್ಪಂದಿಸುವಲ್ಲಿ ಸಹಕಾರ ನೀಡುವ ಆವಶ್ಯಕತೆ ಇರುವುದನ್ನು ಮನಗಂಡಿವೆ ಎಂದವರು ಹೇಳಿದರು. ವಿಯಟ್ನಾಂ ಈಗಾಗಲೇ ರಷ್ಯಾ ಹಾಗೂ ಚೀನಾದೊಂದಿಗೆ ವ್ಯೂಹಾತ್ಮಕ ಪಾಲುದಾರಿಕೆ ಮಾಡಿಕೊಂಡಿದೆ.

ಪ್ರಧಾನಿ ಮೋದಿ ಇದೇ ಮೊದಲ ಬಾರಿಗೆ ವಿಯಟ್ನಾಂಗೆ ಭೇಟಿ ನೀಡುತ್ತಿದ್ದಾರೆ. ಭಾರತದ ಪ್ರಧಾನಿಯೊಬ್ಬರು 15 ವರ್ಷಗಳ ನಂತರ ಈ ದೇಶಕ್ಕೆ ಭೇಟಿ ನೀಡುತ್ತಿರುವುದು ಉಲ್ಲೇಖನೀಯ.

ರಕ್ಷಣಾ ಸಹಕಾರವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ವಿಯಟ್ನಾಂಗೆ 500 ಮಿಲಿಯನ್ ಡಾಲರ್‍ಗಳ ಹೊಸ ರಕ್ಷಣಾ ಸಾಲ ನೀಡುವುದನ್ನು ಘೋಷಿಸುವುದಕ್ಕೆ ನನಗೆ ಬಹಳ ಸಂತೋಷವಾಗುತ್ತಿದೆ ಎಂದರು ಪ್ರಧಾನಿ ಮೋದಿ.

ನಮ್ಮ ಸಾಮಾನ್ಯ ಪ್ರಯತ್ನಗಳ ಮೂಲಕ ಆಗ್ನೇಯ ಏಷ್ಯಾ ವಲಯದಲ್ಲಿ ಸ್ಥಿರತೆ, ಭದ್ರತೆ ಹಾಗೂ ಭವಿತವ್ಯ ಮೂಡಿಸುವಲ್ಲಿ ಕೊಡುಗೆ ನೀಡಲಿದ್ದೇವೆ ಎಂದರು. ಸಾಗರದಾಚೆ ಇರುವ ಗಸ್ತು ದೋಣಿಗಳ ನಿರ್ಮಾಣ ಕುರಿತಂತೆ ಒಪ್ಪಂದ ಏರ್ಪಟ್ಟಿರುವುದು ಉಭಯದೇಶಗಳ ಮಧ್ಯೆ ರಕ್ಷಣಾ ಸಹಕಾರಕ್ಕೆ ದೃಢವಾದ ರೂಪ ನೀಡುವ ಸಂಕೇತದಂತಿದೆ.

ನಾಹ್ ತ್ರಾಂಗ್ ನಗರದಲ್ಲಿರುವ ದೂರ ಸಂಪರ್ಕ ವಿಶ್ವವಿದ್ಯಾಲಯದಲ್ಲಿ ಸಾಫ್ಟ್‍ವೇರ್ ಪಾರ್ಕ್ ನಿರ್ಮಾಣ ಮಾಡುವುದಕ್ಕೆ ಭಾರತ 5 ಮಿಲಿಯನ್ ಡಾಲರ್ ಅನುದಾನ ನೀಡಲಿದೆ.

2020ರವೇಳೆಗೆ ಉಭಯದೇಶಗಳ ಮಧ್ಯೆ ವ್ಯಾಪಾರ ವಹೀವಾಟು ಸಾಮಥ್ರ್ಯವನ್ನು 15 ಬಿಲಿಯನ್ ಡಾಲರ್‍ಗೇರಿಸುವುದಕ್ಕೆ ಹೊಸ ರೀತಿಯ ವ್ಯಾಪಾರ ಹಾಗೂ ವ್ಯವಹಾರಿಕ ಅವಕಾಶಗಳನ್ನು ಬಳಸಿಕೊಳ್ಳುವುದಕ್ಕೂ ನಿರ್ಧರಿಸಲಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top