fbpx
Karnataka

ಕಾವೇರಿಗೇಕಿಲ್ಲ ಕನ್ನಡಿಗ ಲಾಯರ್ ನ ಶ್ರೀರಕ್ಷೆ…?

ಸ್ನೇಹಿತರೆ

ಸುಪ್ರೀಮ್ ಕೋರ್ಟನಲ್ಲಿ ಕಾವೇರಿ ನದಿ ನೀರು ಹಂಚಿಕೆ ವಾದ ಮಂಡಿಸಲು ನಮ್ಮ ಪರವಾಗಿ ಇಪ್ಪತ್ತೇಳು ಜನ ಲಾಯರ್‍ ಗಳಿದ್ದಾರೆ. ಆದರೆ ತಮಿಳುನಾಡಿನ ಪರ ಕೇವಲ ಐದು ಜನ ಲಾಯರ್ ಗಳಿದ್ದಾರೆ.‍

  • ನಮ್ಮ ಕಡೆ ಅಷ್ಟು ಜನ ನುರಿತ ಲಾಯರ್ ಗಳಿದ್ದರೂ ಸುಪ್ರೀಂ ಕೋರ್ಟ್ ಗೆ ಮನವರಿಕೆ ಮಾಡಲು ಪ್ರತಿ ಸಾರಿ ಏಕೆ ವಿಫಲ ರಾಗುತ್ತಾರೆ ?
  • ಸಮರ್ಥವಾಗಿ ವಾದಮಂಡಿಸಲು ಸಾಧ್ಯವಾಗುತ್ತಿಲ್ಲ ?

ಇದನ್ನು ನಾವು ಗಂಭೀರವಾಗಿ ಯೋಚಿಸಬೇಕಾಗಿದೆ.

ನಾವು ಕೋರ್ಟ್ ನಲ್ಲಿ ಒಂದು ಕೇಸ್ ಹಾಕಿ ,ಲಾಯರ್‍ ಸರಿಯಾಗಿ ಕೇಸ್ ನಡೆಸದಿದ್ದರೆ ಏನು ಮಾಡುತ್ತೇವೆ ?
ಲಾಯರ್‍ ಬದಲಾಯಿಸಿ ಬೇರೆಯವರನ್ನು ನೇಮಿಸುತ್ತೇವೆ.

  • ಆದರೆ ಕಾವೇರಿ ವಿಷಯದಲ್ಲಿ ಏಕೆ ಹೀಗಾಗುತ್ತಿಲ್ಲ.?
  • ಕಾವೇರಿ ಲಾಯರ್ ಪ್ಯಾನಲ್ ನಲ್ಲಿ ಕರ್ನಾಟಕದವರು ,ಕನ್ನಡಿಗರು ಎಷ್ಟು ಜನರಿದ್ದಾರೆ ?
  • ಡೆಲ್ಲಿಯಲ್ಲಿ ಕುಳಿತಿರುವ ‌ಬೇರೆ ರಾಜ್ಯದ ಲಾಯರ್ ಗಳಿಗೆ ಕರ್ನಾಟಕದ ರೈತರ ಕಷ್ಟ ಹೇಗೆ ಅರ್ಥವಾಗುತ್ತದೆ?

ಕರ್ನಾಟಕದವರು ,ಕನ್ನಡಿಗರು ಆಗಿದ್ದಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ.

  • ತಮಿಳುನಾಡಿನ ಪರ ವಾದ ಮಂಡಿಸಲು ತಮಿಳರೆ ಇರುತ್ತಾರೆ. ಅವರಿಗೆ ವಾದದಲ್ಲಿ ಸಹಾಯಮಾಡಲು ಒಂದು ” ಟೀಂ” ಕಟ್ಟಿದ್ದಾರೆ.ನಮ್ಮಲ್ಲಿ ಏಕಿಲ್ಲ ?

ದುರಂತ ವೆಂದರೆ ಕನ್ನಡಿಗರು, ಕನ್ನಡಿಗರನ್ನೇ ನಂಬುವುದಿಲ್ಲ..!

  • ಲಕ್ಷಗಟ್ಟಲೆ ಲಾಯರ್‍ ಗಳಿರುವ ಕರ್ನಾಟಕದಲ್ಲಿ , ಕಾವೇರಿ ವಾದ ಮಂಡಿಸಲು ಸಮರ್ಥ ವಾದ ಐದಾರು
    ಜನ ಲಾಯರ್ ‍ಗಳಿಲ್ಲವೆ ? ಅವರಿಗೆ ಬುದ್ದಿ , ಕೌಶಲ್ಯ ಇಲ್ಲವೆ ?

ಖಂಡಿತ ಇದೆ, ಆದರೆ , ಜಾತಿರಾಜಕೀಯ , ಪಕ್ಷರಾಜಕೀಯ, ಆಲಸ್ಯ, ನಿರ್ಲಕ್ಷ್ಯ, ಆಕ್ರಮಣ ಮನೋಭಾವದ (Agressive mentality )ಕೊರತೆ. ನಮ್ಮ ರೈತರು, ನಮ್ಮ ಜನ, ಕನ್ನಡಿಗರು, ಕರ್ನಾಟಕ ಎಂಬ ಅಭಿಮಾನ ಶೂನ್ಯವೆ ಕಾರಣ.

ಜೊತೆಗೆ ಏನು ಮಾಡಿದರು ನಡೆಯುತ್ತದೆ ,ಯಾರು ಕೇಳುವುದಿಲ್ಲ ಎಂಬ ಮನೋಭಾವ.

ಇದೆಲ್ಲದರ ಪರಿಣಾಮವೆ ಸತತ ಸೋಲು , ಈ ಪರಿಸ್ಥಿತಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top