ಈ ಬಾರಿಯ ಗಣಪತಿ ಹಬ್ಬವನ್ನು ಸಂತೋಷದಿಂದ ಆಚರಿಸಬೇಕು, ಸಂಭ್ರಮಿಸಬೇಕು ಎಂದು ಸಿದ್ಧಗೊಂಡಿದ್ದ ಕನ್ನಡಿಗರಿಗೆ ಸುಪ್ರೀಂ ಕೋರ್ಟ್ ತೀರ್ಪು ತಣ್ಣೀರು ಎರಚಿದ್ದು ಸುಳ್ಳಲ್ಲ, ಸ್ವಾತಂತ್ರ ಪೂರ್ವ 1882 ರಿಂದಲೂ ಸಹ ತಮಿಳುನಾಡಿನವರಿಗೂ ನಮಗೂ ಹತ್ತಿದ ಜಗಳ ಇಂದಿಗೂ ಕಾವು ಪಡೆದುಕೊಳ್ಳುತ್ತಿದ್ದೆ.
ನಿಮಗೆಲ್ಲ ಅನ್ನಿಸಬಹುದು ಯಾಕೆ ನಾವು ಕಾವೇರಿ ಹೋರಾಟದಲ್ಲಿ ಪದೇ ಪದೇ ಯಡವುತ್ತಿದ್ದೇವೆ ಎಂದು…! ಅದಕ್ಕೆ ಮುಖ್ಯ ಕಾರಣ ಕರ್ನಾಟಕದ ಪರ ವಾದ ಮಂಡಿಸುತ್ತಿರುವ ನಾರಿಮನ್… ನಮಗೆ ನೀರಿಲ್ಲದೆ ಇರುವಾಗ, ಸುಪ್ರೀಂ ಕೋರ್ಟ್ ಗೆ ಸಲ್ಲಿಸಿದ ಅಫಿಡ್ ಅವಿಟ್ ನಲ್ಲಿ ‘ಸದ್ಭಾವನೆಯಿಂದ’ [goodwill gesture] 10,000 ಕ್ಯುಸೆಕ್ಸ್ ನೀರು ತಮಿಳು ನಾಡಿಗೆ ಹರಿಸುತ್ತೇವೆ ಎಂದು ಯಾಕೆ ಸಲ್ಲಿಸಲಾಯಿತು. ಇದನ್ನು ನೀರಾವರಿ ಸಚಿವರು ಗಮನಿಸಲಿಲ್ಲವೇ ? ನಾರಿಮನ್ ಮತ್ತು ಕಾತರಕಿ ಅವರು ಯಾವ basis ಮೇಲೆ ನಾವು ಪ್ರತಿದಿನ 10,000 ಕ್ಯೂಸ್ಸ್ಸ್ ನೀರು ಕೊಡ್ತೀವಿ ಅಂತ ಒಪ್ಪಿಕೊಂಡಿದ್ದಾರೆ? ಫಾಲಿ ನಾರಿಮನ್ ಹೇಳಿದ್ದಕ್ಕೆಲ್ಲ ಸಿದ್ದರಾಮಣ್ಣ ತಲೆ ಆಡಿಸಿ ಬಂದಿದಕ್ಕೆ ಈ ಸಂಕಷ್ಟ ಎದುರಾಗಿದೆ. ಅಷ್ಟೇ ಅಲ್ಲದೆ, ನಾರಿಮನ್ ತಾತರ ವಾದ ಸಮರ್ಪಕವಾಗಿಲ್ಲ; ಇತರೆ ವಕೀಲರು ಕೂಡ ನಾರಿಮನ್ ಜೊತೆ ಸೇರಿ ಸರಿಯಾಗಿ ಕೆಲಸ ಮಾಡಿಲ್ಲ.
ನೆನ್ನೆ ರಾತ್ರಿಯಿಂದಲೇ ತಮಿಳುನಾಡಿಗೆ ನೀರು ಹರಿಸಲು ಸರ್ಕಾರ ಅಧಿಕಾರಿಗಳೇ ಸೂಚಿಸಿದ್ದು, ಇದಕ್ಕೆಲ್ಲ ಕಡಿವಾಣ ಬೀಳುವ ಕಾಲ ಮತ್ತಷ್ಟು ಕ್ಲಿಷ್ಟ ಎನ್ನಿಸಿದೆ. ಒಂದಂತೂ ನಿಜ, ಸಿದ್ಧಣ್ಣನ ದುರಾಡಳಿತದಿಂದ ಮತ್ತು misplaced priorites ನಿಂದಾಗಿ, ಇಡೀ ರಾಜ್ಯ ಕಡಿವಾಣವಿಲ್ಲದ ಕುದುರೆಯ ಬೆನ್ನಿಗೆ ಕಟ್ಟಿದ ಜಟಕಾ ಬಂಡಿಯಂತೆ, ದಿಕ್ಕು ದೆಸೆಯಿಲ್ಲದೆ ಓಡುತ್ತಿದೆ. ರೈತರಿಗೆ ನೀರಂತೂ ನಿಮ್ಮ ಕೈಲಿ ಕೊಡಲ್ಲಾಗಲಿಲ್ಲ ಕೊನೆಯ ಪಕ್ಷ ವಿಷವನ್ನಾದರೂ ಕೊಟ್ಟು ನಿಮ್ಮ ಅದಿಕಾರದ ದರ್ಪ ರುಚಿಯನ್ನು ತೋರಿಸಿ…
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
