fbpx
god

ತಿರುಮಲ ತಿರುಪತಿ ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯದ 11 ಸತ್ಯಗಳು

ತಿರುಮಲ ವೆಂಕಟೇಶ್ವರ ದೇವಸ್ಥಾನ ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯ ತಿರುಪತಿ ಬಳಿ ತಿರುಮಲ ಬೆಟ್ಟದ ಪಟ್ಟಣದಲ್ಲಿ ಪ್ರಸಿದ್ಧ ವೈದಿಕ ದೇವಾಲಯ , ಆಗಿದೆ . ಇದು ಹೈದರಾಬಾದ್ ನಿಂದ ಸುಮಾರು 600 ಕಿ ( 370 ಮೈಲಿ) , ಚೆನೈ ನಿಂದ 138 ಕಿ ( 86 ಮೈಲಿ) ಮತ್ತು ಬೆಂಗಳೂರಿನಿಂದ 291 ಕಿಮೀ ( 181 ಮೈಲು) ದುರದಲ್ಲಿದೆ. ತಿರುಮಲ ಬೆಟ್ಟ ಸಮುದ್ರ ಮಟ್ಟದಿಂದ 853m ಮತ್ತು ಪ್ರದೇಶದಿಂದ 10,33 ಚದರ ಮೈಲಿ ( 27 ಕಿಮಿ 2 ) ಇದು . ಈ ಬೆಟ್ಟವು ಎಳು ಶಿಕರವನ್ನು ಒಳಗೊಂಡಿದೆ ಇದು ಅದಿಸೆಶನ ಏಳು ತಲೆಗಳನ್ನು ಪ್ರತಿನಿಧಿಸುವುದರಿಂದ ಸೆಶಛಲಂ ಎಂದು ಹೆಸರು ಗಳಿಸಿದೆ .

ಓಂ ಶ್ರೀ ವೆಂಕಟೇಶ್ವರಾಯ ನಮಃ… ಗೋವಿಂದಾಯ ನಮಃ.. ಇದು ಕೋಟ್ಯಾಂತರ ಭಕ್ತರ ಎದೆಯೊಳಗಿಂದ ಉಕ್ಕಿ ಹರಿಯುವ ಪದಗಳು.. ಕೇಳಿದ್ದನ್ನು ಕರುಣಿಸೋ ಕರುಣಾಮಯಿಯ ದರ್ಶನಕ್ಕೆ ದೇಶ ವಿದೇಶಗಳಿಂದಲೂ ಭಕ್ತರು ಬರ್ತಾರೆ. ಬ್ಯುಸಿ ಶೆಡ್ಯೂಲ್ ನಡುವೆಯೂ ತಿರುಪತಿಗೆ ಬಂದು, ತಿಮ್ಮಪ್ಪನಿಗೆ ನಮಿಸಿ ಹೋಗ್ತಾರೆ.

1) ದೇವಸ್ಥಾನದ ಪ್ರಾರಂಭದಲ್ಲಿ ಮಹಾದ್ವಾರದ ಬಲಗಡೆ ಶ್ರೀ ವೆಂಕಟೇಶ್ವರ ಸ್ವಾಮಿಯವರ ತಲೆಯ ಮೇಲೆ ಅನಂತಾಳ್ವಾರ್ ಹೊಡೆದ ಗಾಯ ಇರುತ್ತದೆ,

   ಚಿಕ್ಕಮಗುವಿನ ರೂಪದಲ್ಲಿ ಇದ್ದ ಸ್ವಾಮಿಯವರನ್ನು ಆ ರಾಡಿನಲ್ಲಿ ಹೊಡೆದಿದ್ದರಿಂದ ಸ್ವಾಮಿಯವರ ಗಡ್ಡದ ಮೇಲೆ ಗಾಯವಾಗಿ ರಕ್ತ ಬರುತ್ತದೆ,

  ಆಗಲಿಂದ ಸ್ವಾಮಿಯವರ ಗಡ್ಡದ ಮೇಲೆ ಗಂಧವನ್ನು ಹಚ್ಚುವುದು ಸಂಪ್ರದಾಯವಾಗಿದೆ.

2) ಶ್ರೀ ವೆಂಕಟೇಶ್ವರ ಸ್ವಾಮಿ ವಿಗ್ರಹದಲ್ಲಿ ತಲೆ ಕೂದಲು ಜುಟ್ಟು (ನಿಜವಾದ ಕೂದಲು) ಇರುತ್ತದೆ. ಈ ಕೂದಲು ಯಾವಾಗಲೂ ಚಿಕ್ಕೆ ಹಿಡಿಯುವುದಿಲ್ಲ ಅಂತಾರೆ.

3)ತಿರುಮಲ ದೇವಸ್ಥಾನದಿಂದ 23 ಕಿ.ಮೀ ದೂರದಲ್ಲಿ ಒಂದು ಗ್ರಾಮ ಇರುತ್ತದೆ. ಆ ಗ್ರಾಮಸ್ಥರಿಗೆ ಬಿಟ್ಟು ಬೇರೆಯವರಿಗೆ ಆ ಗ್ರಾಮದ ಒಳಗಡೆ ಪ್ರವೇಶವಿಲ್ಲ. ಆ ಗ್ರಾಮಸ್ಥರು ತುಂಬಾ ಪದ್ಧತಿಯಿಂದ ಇರುತ್ತಾರೆ. ಅಲ್ಲಿಂದಲೇ ಸ್ವಾಮಿಯವರಿಗೆ ಹೂವು ತರುತ್ತಾರೆ. ಅಲ್ಲೇ ಇರುವ ತೋಟದಿಂದ ಆ ಹೂವುಗಳನ್ನು ತರುತ್ತಾರೆ. ಗರ್ಭಗುಡಿಯಲ್ಲಿ ಇರುವ ಪ್ರತಿಯೊಂದು ಆ ಗ್ರಾಮದಿಂದಲೇ ಬರುತ್ತದೆ.(ಹಾಲು,ತುಪ್ಪ,ಹೂವು,ಇತ್ಯಾದಿ…,)

4) ಸ್ವಾಮಿಯವರು ಗರ್ಭ ಗುಡಿಯ ಮದ್ಯ ಭಾಗದಲ್ಲಿ ಇರುವಂತೆ ಕಾಣಿಸುತ್ತಾರೆ. ಆದರೆ ನಿಜವಾಗಿ ಸ್ವಾಮಿಯು ಗರ್ಭಗುಡಿಯ ಬಲಗಡೆಯ ಕಾರ್ನರ್ ನಲ್ಲಿ ಇರುತ್ತಾರೆ. ಆಚೆಕಡೆಯಿಂದ ಗಮನಿಸಿದರೆ ಈ ವಿಷಯ ನಮಗೆ ತಿಳಿಯತ್ತದೆ.

5)  ಸ್ವಾಮಿಯವರಿಗೆ ಪ್ರತಿದಿನ ಕೆಳಗೆ ಪಂಚೆ, ಮೇಲೆ ಸೀರೆಯಿಂದ ಅಲಂಕರಿಸುತ್ತಾರೆ. ಸುಮಾರು 50 ಸಾವಿರ ಖರೀದಿ ಮಾಡುವ ಸೇವೆ ಇರುತ್ತದೆ. ಆ ಸೇವೆಯಲ್ಲಿ ಪಾಲ್ಗೊಂಡ ದಂಪತಿಗಳಿಗೆ ಸೀರೆಯನ್ನು ಸ್ತ್ರೀಯರಿಗೆ, ಪಂಚೆಯನ್ನು ಪುರುಷರಿಗೆ ಕೊಡುತ್ತಾರೆ. ಈ ಸೇವೆಗೆ ತುಂಬಾ ಕಡಿಮೆ ಟಿಕೆಟ್ಟುಗಳನ್ನು ಮಾರುತ್ತಾರೆ.

6)  ಗರ್ಭಗುಡಿಯ ಸ್ವಾಮಿಯಿಂದ ತೆಗೆದ ಹೂವು ಎಂದಿಗೂ ಆಚೆಕಡೆ ತರುವುದಿಲ್ಲ. ಸ್ವಾಮಿಯವರ ಹಿಂದೆ ಜಲಪಾತ ಇರುತ್ತದೆ. ಅರ್ಚಕರು ಹಿಂದೆ ನೋಡದೆ ಹೂಗಳನ್ನು ಜಲಪಾತದಲ್ಲಿ ಎಸೆಯುತ್ತಾರೆ.

7) ಸ್ವಾಮಿಯವರ ಬೆನ್ನಿನ ಮೇಲಿನ ನೀರನ್ನು ಎಷ್ಟು ಸಾರಿ ಒರೆಸಿದರೂ ಆ ನೀರು ಹಾಗೆ ಇರುತ್ತದೆ. ಹಾಗೆ ಅಲ್ಲಿ ಕಿವಿ ಇಟ್ಟು ಕೇಳಿದರೆ ಸಮುದ್ರದ ಅಲೆಗಳ ಶಬ್ದ ಕೇಳಿಸುತ್ತದೆ.

8) ಸ್ವಾಮಿಯವರ ಎದೆಯ ಮೇಲೆ ಲಷ್ಕ್ಮಿದೇವಿ ಇರುತ್ತಾರೆ, ಪ್ರತೀ ಗುರುವಾರ ನಿಜರೂಪ ದರ್ಶನದ ವೇಳೆಯಲ್ಲಿ ಸ್ವಾಮಿಯವರಿಗೆ ಛಂಧನದಿಂದ ಅಲಂಕರಿಸುತ್ತರೆ. ಅದು ತೆಗೆದುಹಾಕುವಾಗ ಲಷ್ಕ್ಮಿದೇವಿಯ ಅಚ್ಚು ಹಾಗೆ ಬರುತ್ತದೆ. ಅದನ್ನು ಮಾರುತ್ತಾರೆ.

9)   ಸತ್ತ ಮೇಲೆ ಹಿಂದೆ ನೋಡದೆ ಹೇಗೆ ಸುಡುತ್ತಾರೊ, ಹಾಗೆ ಸ್ವಾಮಿಯವರಿಂದ ತೆಗೆದುಹಾಕಿದ.ಹೂಗಳನ್ನು ಮತ್ತು ಎಲ್ಲಾ ಪದಾರ್ಥಗಳನ್ನು ಅದೇ ತರಹ ಹಿಂದೆ ತಿರುಗಿ ನೋಡದೆ ಸ್ವಾಮಿಯವರ ಹಿಂದೆ ಎಸೆಯುತ್ತಾರೆ, ಆ ದಿನವೆಲ್ಲಾ ಸ್ವಾಮಿಯವರ ಹಿಂದಗಡೆ ನೋಡುವುದಿಲ್ಲ ಎನ್ನುತ್ತಾರೆ. ಆ ಹೂಗಳು ಮತ್ತು ಪದಾರ್ಥಗಳು ಎಲ್ಲಾ ಕೂಡ ತಿರುಪತಿಯಿಂದ 20 ಕಿ.ಮೀ ದೂರದಲ್ಲಿರುವ ವೆರ್ಚೆಡು (ಕಾಲಹಸ್ತಿಗೆ ಹೋಗುವ ದಾರಿಯಲ್ಲಿ) ಹತ್ತಿರ ತೇಲುತ್ತದೆ.

10)  ಸ್ವಾಮಿಯವರ ಮುಂದೆ ಬೆಳಗುವ ದೀಪಗಳು ಅವು ಎಷ್ಟು ವರ್ಷಗಳಿಂದ ಬೆಳಗುತ್ತಿವೆಯೋ ಕೂಡ ಯಾರಿಗೂ ಗೊತ್ತಿಲ್ಲ.

11)    1800 ರಲ್ಲಿ ದೇವಸ್ಥಾನವನ್ನು ಹನ್ನೆರಡು ವರ್ಷಗಳ ಕಾಲ ಮುಚ್ಚಲಾಗಿತ್ತಂತೆ. ಯಾರೋ ಒಂದು ದಿನ 12 ಮಂದಿಯನ್ನು ದೇವಸ್ಥಾನದ ಹತ್ತಿರ ತಪ್ಪು ಮಾಡಿದರೆಂದು ಬುದ್ಧಿ ಹೇಳಿ ಹೊಡೆದು ಗೋಡೆಗೆ ನೇತಾಡಿಸಿದರಂತೆ. ಆ ಸಮಯದಲ್ಲಿ ವಿಮಾನ ವೆಂಕಟೇಶ್ವರ ಸ್ವಾಮಿ ನೆಲೆಸಿದ್ದಾರೆಂದು ಹೇಳುತ್ತಾರೆ.

ತಿಮ್ಮಪ್ಪ ಅಂದ್ರೆ ಸಾಕು.. ಜಗತ್ತಿನ ಜನರಿಗೆ ಥಟ್ ಅಂತ ನೆನಪಾಗೋದು, ಹಿಂದೂ ಧರ್ಮ.. ಯಾಕಂದ್ರೆ, ತ್ರಿಮೂರ್ತಿಗಳಲ್ಲಿ ಒಬ್ಬನಾದ ವಿಷ್ಣು, ಶ್ರೀ ವೆಂಕಟೇಶ್ವರ ಎಂಬ ಹೆಸರಿನಲ್ಲಿ ತಿರುಪತಿಯಲ್ಲಿ ನೆಲೆಸಿದ್ದಾನೆ. ಹೀಗಾಗಿ ತಿರುಪತಿ ಅಂದ್ರೆ, ಹಿಂದೂಗಳ ಪವಿತ್ರ ಕ್ಷೇತ್ರ ಅನ್ನೋದ್ರಲ್ಲಿ ಎರಡು ಮಾತಿಲ್ಲ..

ಆದ್ರೆ ಈ ಪವಿತ್ರ ತಾಣದಲ್ಲಿ ಜಾತಿ ಧರ್ಮದ ಭೇಧವಿಲ್ಲ.. ಶುದ್ಧ ಮನಸ್ಸಿನಿಂದ, ಭಕ್ತಿ ಭಾವದಿಂದ ನಮಿಸಿದ್ರೆ ಸಾಕು, ಎಲ್ಲರಿಗೂ ಒಲಿದು ಬಿಡ್ತಾನೆ ಈ ತಿಮ್ಮಪ್ಪ. ಅದಕ್ಕಾಗೇ, ಇಲ್ಲಿ ಎಲ್ಲಾ ಧರ್ಮದವರು, ಎಲ್ಲಾ ಜಾತಿಯವರು ಬರ್ತಾರೆ. ತಿಮ್ಮಪ್ಪನ ಪಾದಕ್ಕೆ ಬಿದ್ದು ಆಶೀರ್ವಾದ ಪಡೀತಾರೆ.

ನೀವೂ ಓದಿ ನಂತರ

 18 ಮಂದಿಗೆ ಕಳುಹಿಸಿ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top