fbpx
News

ಬಂಗಾರಪ್ಪನವರಂತಹ ರಾಜಕಾರಣಿಗಳ ಅವಶ್ಯಕತೆ ನಮಗಿದೆ ಇಂದು.

1991ರಲ್ಲಿ, ತಮಿಳುನಾಡಿಗೆ 205 ಟಿಎಂಸಿ ಅಡಿ ನೀರು ಬಿಡುವಂತೆ ಕಾವೇರಿನ್ಯಾಯಾಧಿಕರಣವು ಮಧ್ಯಂತರ-ತೀರ್ಪನ್ನು ನೀಡಿತು. ಈ ತೀರ್ಪಿಗೆ ವಿರುದ್ಧವಾಗಿಯೆ ಮುಖ್ಯಮಂತ್ರಿ ಬಂಗಾರಪ್ಪನವರು ಸುಗ್ರೀವಾಜ್ಞೆ ಹೊರಡಿಸಿ ಕಾವೇರಿ ಕೊಳ್ಳದ ಅಣೆಕಟ್ಟುಗಳಲ್ಲಿನನೀರನ್ನು ರಕ್ಷಿಸಿ, ನಮ್ಮ ರಾಜ್ಯದ ರೈತರಿಗೇ ಉಳಿಸಿಕೊಳ್ಳುವಂತೆಅಣೆಕಟ್ಟುಗಳ ಉಸ್ತುವಾರಿಯ ಅಧಿಕಾರಿಗಳಿಗೆ ಆದೇಶಿಸಿದರು.

ಇದರ ವಿರುದ್ಧ ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್ ಗೆ ಹೋದರೂ ಬಂಗಾರಪ್ಪನವರು ಜಗ್ಗಲಿಲ್ಲ. ನಂತರ ಕೇಂದ್ರ ಸರ್ಕಾರವು ಕಾವೇರಿ ನ್ಯಾಯಾಧಿಕರಣದ ಮಧ್ಯಂತರ ತೀರ್ಪನ್ನು ಗೆಜೆಟ್ ನಲ್ಲಿ ಹೊರಡಿಸಿತು. ಇದನ್ನು ಧಿಕ್ಕರಿಸಿ ಬಂಗಾರಪ್ಪನವರ ಸರ್ಕಾರವೆ ‌1991ನೇ ಇಸವಿ ಡಿಸೆಂಬರ್ 13ರ “ಕರ್ನಾಟಕ ಬಂದ್”ಗೆ ಬಾಹ್ಯವಾಗಿಯೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿತು.

ಅಲ್ಲಿಂದ ಎರಡು ವಾರ ಈ ನಮ್ಮ ರಾಜ್ಯದಲ್ಲಿ ಕನ್ನಡಿಗರ ಶಕ್ತಿಪ್ರದರ್ಶನ ಹೇಗಿತ್ತೆಂದರೆ 1,00,000 ತಮಿಳಿಗರು ಬೆಂಗಳೂರು, ಮೈಸೂರು ಮತ್ತಿತರ ಊರುಗಳಿಂದ ತಮಿಳುನಾಡು ಮತ್ತು ಕೇರಳಕ್ಕೆಓಡಿಹೋದರು. ದೇಶ-ವಿದೇಶಗಳ ಮಾಧ್ಯಮಗಳಿಂದ ಅಪಾರ ಟೀಕೆ ವ್ಯಕ್ತವಾದರೂ ಆಗಲೂ ಬಂಗಾರಪ್ಪನವರು ಕನ್ನಡಿಗರನ್ನ ಸಮರ್ಥಿಸಿಕೊಂಡರು.ಎಲ್ಲಿಯೂ ಬಿಟ್ಟುಕೊಡಲಿಲ್ಲ !

“ರೈತರ ತಂಟೆಗೆ ಬಂದ್ರೆ ನಿಮ್ಮ ಮನೆ ಬಳಿಯ ಗೂಟ ತೆಗೆದು ಹೊಡಿರಿ. ರೈತರಿಲ್ಲದೆ ಯಾವ ಸರ್ಕಾರವೂ ಇಲ್ಲ” ಎಂದು ಹೇಳುತ್ತಿದ್ದ ಮಹಾವ್ಯಕ್ತಿ ಎಸ್. ಬಂಗಾರಪ್ಪನವರು. ನಾಡಿನ ನೆಲ-ಜಲದ ವಿಚಾರಗಳಲ್ಲಿ ಯಾವ ದಿಟ್ಟ ನಿರ್ಧಾರಗಳನ್ನು ಕೈಗೊಳ್ಳದೆ ನಪುಂಸಕರಂತೆ ವರ್ತಿಸುವ ದಿಲ್ಲಿಯ ಗುಲಾಮರಾದ ಇಂದಿನ ನಮ್ಮ ನಾಡಿನ ರಾಜಕಾರಣಿಗಳನ್ನು ನೋಡಿದಾಗ ಬಂಗಾರಪ್ಪನವರು ಎಷ್ಟು ಎತ್ತರದಲ್ಲಿದ್ದರುಎಂದು ನೆನಪಾಗುತ್ತಿದೆ.

ಬಂಗಾರಪ್ಪನವರಂತಹ ರಾಜಕಾರಣಿಗಳ ಅವಶ್ಯಕತೆ ನಮಗಿದೆ ಇಂದು. ಅಂದು ಸುಪ್ರಿಂ ಕೋರ್ಟಗೆ ಸೆಡ್ಡು ಹೊಡೆದು ನಾಡ ಜನರ ಹಿತ ಕಾಯ್ದವರು ನಮ್ಮ ಬಂಗಾರಪ್ಪನವರು, ಜೊತೆಗೆ ಬೀಮೆಗೆ ಕಟ್ಟಿದ್ದ ಗೇಟಗಳನ್ನ ರಾತ್ರೋ ರಾತ್ರಿ ಒಡೆದು ಹಾಕಿದ್ದ ಆಗಿನ SR ಕಾಶಪ್ಪನವರ ಅಂತಹ ಧೈರ್ಯಶಾಲಿ ರಾಜಕಾರಣಿಗಳು ನಮಗಿಂದು ಬೇಕು. ಆದರೆ ವಿಶಾದನೀಯ ಅಂದರೆ ಈಗಿರುವವರೆಲ್ಲ ರಾಷ್ಟ್ರೀಯ ನಾಯಕರ ಕಾಲು ನೆಕ್ಕೊ ನಾಯಿಗಳೇ ಹೊರತು ಸಿಂಹಗಳಲ್ಲ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top