fbpx
News

ಮಂಚಕ್ಕಾಗಿ ರೈತರ ಕಾದಾಟ….

ನವದೆಹಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಮಂಗಳವಾರ ಉತ್ತರಪ್ರದೇಶದಲ್ಲಿ ರೈತರೊಂದಿಗೆ ನಡೆಸಿರುವ ಕಾಟ್(ಮರದಮಂಚ) ಸಭಾ ನಾಟಕೀಯ ರೀತಿಯಲ್ಲಿ ಪರ್ಯಾವಸನಗೊಂಡಿತು. ರಾಹುಲ್ ಅವರ ಸ್ಥಳೀಯ ಬೆಂಬಲಿಗರು ಸ್ಥಳದಿಂದ ಮರದ ಮಂಚಗಳನ್ನು ಒಯ್ಯಲು ಕಾದಾಟಕ್ಕಿಳಿರುವುದು ಕಂಡುಬಂತು. ರ್ಯಾಲಿ ನಡೆದ ಡಿಯೊರಿಯಾ ಮೈದಾನದಲ್ಲಿ ಜನರು ಮರದ ಮಂಚಗಳನ್ನು ಒಯ್ಯಲು ಹೊಡೆದಾಟಕ್ಕಿಳಿದಾಗ ಆ ಪ್ರದೇಶದಲ್ಲಿ ಗೊಂದಲಮಯ ವಾತಾವರಣ ಉಂಟಾಯಿತು.

&copy: varthabharati

&copy: varthabharati

ರಾಹುಲ್ ತಮ್ಮ ಭಾಷಣದಲ್ಲಿ ರೈತರ ಸಾಲ ಮನ್ನ ಹಾಗೂ ವಿದ್ಯುತ್ ಬಿಲ್ಲಿನಲ್ಲಿ ಶೇ 50 ರಿಯಾಯಿತಿ ಘೋಷಿಸಿ ಅಲ್ಲಿಂದ ಹೊರಡುತ್ತಿದ್ದಂತೆಯೇ ಅಲ್ಲಿದ್ದ ಮರದ ಮಂಚ ಒಯ್ಯಲು ರೈತರು ಪೈಪೋಟಿ ನಡೆಸುತ್ತಾ ಹೊಡೆದಾಡಿಕೊಳ್ಳುತ್ತಿದ್ದರು. ರಾಹುಲ್ ಬೆಂಬಲಿಗರಲ್ಲಿ ಕೆಲವರು ಈ ಮರದ ಮಂಚಗಳನ್ನು ನೀರಿನ ಬಾಟಿಲುಗಳನ್ನು ತೂರುವಂತೆ ಒಬ್ಬರ ಕೈಯಿಂದ ಮತ್ತೊಬ್ಬ ಹಾರಿಸುತ್ತಾ ತಮ್ಮದಾಗಿಸುವ ಪ್ರಯತ್ನ ಮಾಡುತ್ತಿದ್ದರು. ಈ ರೀತಿ ಕೆಲವರು ಯಶಸ್ವಿಯಾಗಿ ಮರದ ಮಂಚಗಳನ್ನು ಮನೆಗೆ ಒಯ್ಯುತ್ತಿದ್ದುದನ್ನು ಕಂಡು ಇನ್ನೂ ಹಲವರು ಅದೇ ರೀತಿಯ ಪ್ರಯತ್ನ ಮುಂದುವರೆಸಿ ಉಳಿದ ಮಂಚಗಳನ್ನು ಪಡೆದರು. ಡಿಯೊರಿಯಾದ ರುದ್ರಪುರ ಮೈದಾನದಲ್ಲಿ ರಾಹುಲ್ ಅವರ ರ್ಯಾಲಿಗೆ ಬರುವ ರೈತರ ಆಸೀನ ಉದ್ದೇಶಕ್ಕಾಗಿ 2 ಸಾವಿರ ಮರದ ಮಂಚಗಳನ್ನು ಹಾಕಲಾಗಿತ್ತು. ಉತ್ತರಪ್ರದೇಶದಲ್ಲಿ ಕಾಂಗ್ರೆಸ್ಸಿಗೆ ಕಳೆದ 27 ವರ್ಷಗಳಿಂದ ಅಧಿಕಾರಕ್ಕೇರಲು ಸಾಧ್ಯವಾಗಿಲ್ಲ. ಈ ಕಾರಣದಿಂದ ಮುಂಬರುವ ವಿಧಾನಸಭಾ ಚುನಾವಣಾ ಕಾಲದಲ್ಲಿ ರಾಹುಲ್ ಅವರು ಕಾಟ್ ಸಭಾ ಆಯೋಜಿಸಲು ಉದ್ದೇಶಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top