fbpx
Karnataka

ಕಾವೇರಿ ಕುರಿತ ಸರ್ವಪಕ್ಷ ಸಭೆಗೆ ಎಚ್.ಡಿ.ಕುಮಾರಸ್ವಾಮಿ ಗೈರು.

ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಮಾಡುವಂತೆ ಸುಪ್ರೀಂಕೋರ್ಟ್ ನೀಡಿರುವ ಆದೇಶಕ್ಕೆ ತಲೆಬಾಗಿರುವ ರಾಜ್ಯ ಸರ್ಕಾರ, ರೈತರು, ಪ್ರತಿಪಕ್ಷಗಳು, ಸಂಘಟನೆಗಳ ವಿರೋಧದ ನಡುವೆಯೂ ನೀರು ಬಿಡುಗಡೆ ಮಾಡುವ ನಿರ್ಧಾರ ಕೈಗೊಂಡಿದೆ.

ಮಗ ನಿಕಿಲ್ ಕುಮಾರ್ ಸಿನಿಮಾ ಶೂಟ್ ನಲ್ಲಿ ಕುಮಾರಸ್ವಾಮಿ ಬಿಜಿ. ರಾಜ್ಯದಲ್ಲಿ ಕಾವೇರಿ ಕುರಿತು ಗದ್ದಲನಡೆಯುತ್ತಿದೆ. ಸಿಎಂ ರಿಂದ ಕುಮಾರಸ್ವಾಮಿ ಗೆ ಆಹ್ವಾನ ನೀಡಿದ್ದರು. ಇಷ್ಟಾದರೂ ಸರ್ವ ಪಕ್ಷ ಸಭೆಗೆ ಆಗಮಿಸದ ಕುಮಾರಸ್ವಾಮಿ. ರಾಜ್ಯದ ಹಿತಕ್ಕಿಂತ ಮಗನ ಸಿನಿಮಾವೇ ಮುಖ್ಯವಾಯ್ತು ಕುಮಾರಸ್ವಾಮಿಗೆ. ನಿಖಿಲ್ ಸಿನಿಮಾ ಜಾಗ್ವಾರ್ ಆಡಿಯೊ ರಿಲೀಸ್ ಮಂಡ್ಯದಲ್ಲೇ ಮಾಡಿದ್ದ ಕುಮಾರಸ್ವಾಮಿ. ಆದ್ರೆ ಮಂಡ್ಯದಲ್ಲಿ ಭರ್ಜರಿ ಪ್ರತಿಭಟನೆ ನಡೆಯುತ್ತಿದೆ. ಈ ಬಗ್ಗೆ ಸಿಎಂ ಸಭೆ ಕರೆದ್ರೂ ಸರ್ವ ಪಕ್ಷ ಸಭೆಗೆ ಬಾರದ ಕುಮಾರಸ್ವಾಮಿ. ಇದೇನಾ ಎಚ್.ಡಿ.ಕೆ. ರೈತಪರ ತೋರಿಸುವ ಕಾಳಜಿ?

ಕಾವೇರಿ ಕುರಿತ ಸರ್ವಪಕ್ಷ ಸಭೆ ನಿನ್ನೆ ನಡೆದಿದ್ದು ಈ ಸಭೆಯಲ್ಲಿ  ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆರುವ ಸಭೆ. ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ,  ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಅನಂತ್ಕುಮಾರ್, ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ, ಕಂದಾಯ ಸಚಿವ ಕಾಗೋಡು ತಿಮ್ಮಪ್ಪ, ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್, ವಿಧಾನಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್. ಈಶ್ವರಪ್ಪ, ಜೆಡಿಎಸ್ ಶಾಸಕಾಂಗ ಪಕ್ಷದ ಉಪ ನಾಯಕ ವೈಎಸ್ವಿ ದತ್ತ, ಸಂಸದರಾದ ಎಂ.ವೀರಪ್ಪ ಮೊಯ್ಲಿ, ಕೆ.ಎಚ್.ಮುನಿಯಪ್ಪ, ಪಿ.ಸಿ.ಮೋಹನ್, ಶಿವಕುಮಾರ್ ಉದಾಸಿ, ಸಿ.ಎಸ್.ಪುಟ್ಟರಾಜು, ರಾಜ್ಯಸಭಾ ಸದಸ್ಯರಾದ ಡಾ.ಕೆ.ರಹ್ಮಾನ್ಖಾನ್, ಕುಪೇಂದ್ರರೆಡ್ಡಿ, ರಾಜೀವ್ ಚಂದ್ರಶೇಖರ್, ಮಾಜಿ ಸಾಂಸದೆ ರಮ್ಯಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ರಾಜ್ಯವು ತೀವ್ರ ಸಂಕಷ್ಟದಲ್ಲಿದ್ದರೂ ಭರವಾದ ಹೃದಯದಿಂದ ನ್ಯಾಯಾಲಯದ ಆದೇಶ ಪಾಲನೆ ಮಾಡಬೇಕಾಗುತ್ತದೆ. ಕಾವೇರಿ ಕಣಿವೆಯ ಬೆಂಗಳೂರು, ಮೈಸೂರು, ಮಂಡ್ಯ ಸೇರಿದಂತೆ ಇನ್ನಿತರ ಪ್ರದೇಶಗಳಿಗೆ ಕುಡಿಯುವ ನೀರು ಹಾಗೂ ರೈತರ ಬೆಳೆಗಳಿಗೆ ನೀರು ಪೂರೈಸಲು ಸರಕಾರ ಎಲ್ಲ ಪ್ರಯತ್ನಗಳನ್ನು ಮಾಡಲಿದೆ ಎಂದು ಸಿದ್ದರಾಮಯ್ಯ ಹೇಳಿದರು.

ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಸರ್ವಪಕ್ಷ ಸಭೆಗೆ ಗೈರು ಹಾಜರಾಗಿದ್ದರು.

ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಮಾಡುವ ರಾಜ್ಯ ಸರಕಾರದ ನಿರ್ಧಾರದಿಂದಾಗಿ ಜೆಡಿಎಸ್ ಸದಸ್ಯರು ಸರ್ವಪಕ್ಷಗಳ ಮುಖಂಡರ ಸಭೆಯನ್ನು ಬಹಿಷ್ಕರಿಸಿದರೆ, ಬಿಜೆಪಿ ಮುಖಂಡರು ಮುಖ್ಯಮಂತ್ರಿ ತೀರ್ಮಾನ ಪ್ರಕಟಿಸುವ ಸುದ್ದಿಗೋಷ್ಠಿಯನ್ನು ಬಹಿಷ್ಕರಿಸಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top