ಅದೇನೋ ಗೊತ್ತಿಲ್ಲ ಬಳ್ಳಾರಿ ಅಂದ್ರೆ ಜನಕ್ಕೆ ಈಗಲೂ ದುಡ್ಡು, ದೂಳು ಅಂತ ಅನ್ನಿಸದೆ ಇರೋದಿಲ್ಲ, ಅದಕೆಲ್ಲಾ ಕಾರಣ ಕಳೆದ ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿ ಸೇವೆ ಸಲ್ಲಿಸಿದ ರೆಡ್ಡಿ brothers ಅಂದರೆ ತಪ್ಪು ಆಗೋದಿಲ್ಲ ಬಿಡಿ…
ಭೂಮಿ ತಾಯಿ ಗರ್ಭ ಅಗೆದು ಸಂಪಾದಿಸಿದ ಹಣದಿಂದಾಗಿ ಎಲ್ಲವನ್ನು ಕೊಂಡುಕೊಂಡ ರೆಡ್ಡಿ brothers ಕೊನೆ ಕೊನೆಗೆ ಹೀನಾಯ ಎನ್ನುವಂತಹ ದುಸ್ಥಿತಿಗೆ ತಲುಪಿದ್ದು ಸುಳ್ಳಲ್ಲ… ಇತ್ತ ಗಾಲಿ ಜನಾರ್ದನ ರೆಡ್ಡಿ ತಿಂಗಳಾನುಗಟ್ಟಲೆ ಜೈಲು ವಾಸ ಅನುಭವಿಸಿ bail ಮೇಲೆ ಆಚೆ ಬಂದು ತೆಪ್ಪುಗೆ ಮನೆಯಲ್ಲಿ ಕೂತಿದ್ದು ಆಯಿತು.
ಆದರೆ ಈಗಿರುವ ವಿಚಾರ ಅದಲ್ಲ ಸ್ನೇಹಿತರೆ, ಗಾಲಿ ಜನಾರ್ದನ ರೆಡ್ಡಿಯ ಎರಡನೇ ಮಗಳು ‘ಬ್ರಾಹ್ಮಣಿ’ಗೆ ಕಂಕಣ ಭಾಗ್ಯ ಕೂಡಿ ಬಂದಿದೆ, ಭಾನುವಾರದಂದು ನೆಡೆದ ಅದ್ದೂರಿ ನಿಶ್ಚಿತಾರ್ಥ ದಲ್ಲಿ ಹೈದರಾಬಾದ್ ಮೂಲದ ಉದ್ಯಮಿ ಜೊತೆ ಬ್ರಾಹ್ಮಿಣಿ ನಿಶ್ಚಿತಾರ್ಥ ಜರುಗಿತು.
ಬಿಬಿಎಂ ಪದವಿ ಪಡೆದಿರುವ ಬ್ರಹ್ಮಣಿ ಮೈ ತುಂಬಾ ಚಿನ್ನ ಹೊತ್ತು ಕಂಗೊಳಿಸುತ್ತಿದ್ದರು, ಕೋಟ್ಯಂತರ ದುಡ್ಡು ಇನ್ನು ರೆಡ್ಡಿ ಮನೆಯಲ್ಲಿ ಕೊಳೆಯುತ್ತಿದ್ದೆ ಎನ್ನುವುದಕ್ಕೆ ಆಕೆಯ ಮೈ ಮೇಲಿರುವ ಒಡವೆ ಸಾರಿ ಸಾರಿ ಹೇಳುತ್ತಿದೆ, ಎಲ್ಲ ಸರಿಯಾಗಿದ್ದಿದ್ದರೆ ನಿಶ್ಚಿತಾರ್ಥವನ್ನು ಪ್ಯಾಲೇಸ್ ಗ್ರೌಂಡ್ ನಲ್ಲಿ ಮಾಡುತ್ತಿದ್ದರೋ ಏನೋ…? ಆದರೆ ಈಗಿರುವ ಪರಿಸ್ಥಿತಿಯಲ್ಲಿ, ಯಾವಾಗ CBI ಬಂದು ವಿಚಾರಣೆಗೆ ಒಳಪಡಿಸುತ್ತೋ ಎಂಬ ಭೀತಿಯಲ್ಲಿ ಇರುವ ರೆಡ್ಡಿ, ಎಲ್ಲವನ್ನು ಗುಟ್ಟು ಗುಟ್ಟಾಗಿ ಮಾಡುತ್ತಿದ್ದರೆ, ಕೆಲವೇ ಕೆಲವು ಗಣ್ಯರಿಗೆ ಮಾತ್ರ ಆಮಂತ್ರಿಸಲಾಗಿತ್ತು, ಮದುವೆಯ ದಿನಾಂಕ ಇನ್ನು ನಿಗದಿಯಾಗಿಲ್ಲ ಎನ್ನಲಾಗಿದೆ.
ಇನ್ನೊಂದು ವಿಚಾರ, ಹೈದರಾಬಾದ್ ಮೂಲದ ಲಕ್ಷ್ಮಿ ರೆಡ್ಡಿಯವರು ಎನ್ನುವವರು facebookನಲ್ಲಿ ಚಿತ್ರಗಳನ್ನು ಹಾಕಿಕೊಂಡಾಗ ನಿಶ್ಚಿತಾರ್ಥದ ವಿಚಾರ ಬಹಿರಂಗವಾಗಿದೆ ಎನ್ನುವುದು ನಿಮ್ಮ ಗಮನದಲ್ಲಿ ಇರಲಿ…
-ಗಿರೀಶ್ ಗೌಡ
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
