fbpx
News

ಕಾವೇರಿ ಜಲವಿವಾದದವು ಐತಿಹಾಸಿಕ ಕಾಳಗ

ಮೂಲ research: U.Honnharati

“ಮೈಸೂರು ಗೆಜೆಟಿಯರ್”, “History of Mysore State”, ” River Water Disputes of Deccan India” etc

ಕಾವೇರಿ ಜಲವಿವಾದದವು ಐತಿಹಾಸಿಕ ಕಾಳಗವಾಗಿದೆ!

ಇದರ ಆರಂಭವನ್ನು ಕೆದುಕುತ್ತಾ ಹೋದರೆ ಗಂಗ ಹಾಗು ಚೋಳ ರಾಜರ ಆದಿಕಾಲ ನಮ್ಮೆದುರು ನಿಲ್ಲುತ್ತದೆ! ಕನ್ನಡದ ಆದಿಕವಿ ನಾಮಾಂಕಿತ ಪಂಪನ ಕಾವ್ಯಗಳು, ನಾವು ಹತ್ತನೇ ತರಗತಿ ಓದುತ್ತಿದ್ದಾಗ ಇದ್ದವು. ಅವನ ಕಾವ್ಯದ ಒಂದು ಸಾಲು ಸಹ “ಕಾವೇರಿ ಜಲ ವಿವಾದಂ” ಎಂದಿದ್ದು ಈಗಲೂ ನೆನಪಿದೆ!

ಸಾಮಾನ್ಯವಾಗಿ ನಾವು ಓದುವ ಇತಿಹಾಸವು ರಾಜಮನೆತನಗಳು ಅಧಿಕಾರ-ಸರ್ವಾಧಿಕಾರದ ಗದ್ದುಗೆ ಏರುವ ಕಾಲವನ್ನು ಆಯಾ ರಾಜಮನೆತನಗಳ ಆರಂಭವೆಂದು ಹೇಳುತ್ತವೆ. ಇದೇ ಕಾರಣಕ್ಕೆ ಕನ್ನಡದ ಹಲವು ರಾಜಮನೆತನಗಳ ಆರಂಭವನ್ನು ನಾವು ಕ್ರಿಸ್ತ ಶಕದ ಕಾಲಕ್ಕೆಂದು ಓದುತ್ತೇವೆ. ಕ್ರಿಸ್ತ ಪೂರ್ವದ ಅಲೆಕ್ಸಾಂಡರ್ ಭಾರತದ ಮೇಲೆ ದಂಡೆತ್ತಿ ಬಂದಾಗ, ಆತನ ಆಸ್ಥಾನದ ಭೂಗೋಳ – ಖಗೋಳಶಾಸ್ತ್ರಜ್ಞ ಟಾಲೆಮಿಯು ಚಾಲುಕ್ಯರನ್ನು “ಸಲುಕಿ”ಗಳೆಂದು, ಗಂಗವಾಡಿಯನ್ನು ” ಗಂಗೋಯಿ” ಎಂದು ಉಲ್ಲೇಖಿಸಿರುವುದೇ ಇದಕ್ಕೆ ಸಾಕ್ಷಿ.

ಕುಂತಲ ದೇಶದ ಇತಿಹಾಸ ಕ್ರಿಸ್ತ ಪೂರ್ವ ೫ಕ್ಕೆ ಇದ್ದರೂ ಸಹ, ಅದರ ಮೂಲದ್ದೇ ಆದ ಕದಂಬರು ಮತ್ತು ಚಾಲುಕ್ಯರ ಆರಂಭವವನ್ನು ಕ್ರಿಸ್ತ ಶಕ ೨-೩-೪-೫ ಎಂದು ಗುರುತಿಸಲಾಗುತ್ತದೆ!

ಹೀಗೆ ಪೂರ್ವಗಂಗರು ಸ್ವತಂತ್ರ್ಯರಾಗುವ ಮುನ್ನ, ಪಾಂಡ್ಯರಿಗೆ ಹಾಗು ಚೋಳರಿಗೆ ಸಾಮಂತರಾಗಿದ್ದರು ಎಂಬುದರಲ್ಲಿ ಎರಡು ಮಾತಿಲ್ಲ!

ಚೋಳರು ಮತ್ತು ಪಾಂಡ್ಯರು ಗಂಗವಾಡಿಯ ಮೇಲೆ ನೇರ ಆಳ್ವಿಕೆ ನಡೆಸದಿದ್ದರೂ ಸಹ ಸಾಮಂತಿಕೆಯೇ ಶಾಪವಾಗಿದ್ದು ಮುಂದೆ ತಿಳಿಯಲಿದೆ! ಸದ್ಯಕ್ಕೆ ಈ ಕಾವೇರಿ ಜಲ ವಿವಾದದ ಮೊದಲ ಕಾಳಗ ಕಾಣಸಿಗುವುದು ೧ನೇ ಶತಮಾನದಲ್ಲಿ!

ಚೋಳರ ಸಾಮಂತಿಕೆಯಲ್ಲಿದ್ದ ಗಂಗನಾಡಿನಲ್ಲಿ, ಒಡೆಯರು, ಅರಸರು, ಗಾವುಡಿಗಳು, ಬೇಸಾಯಗಾರರು ಇತ್ಯಾದಿಯರೆಲ್ಲ ಸೇರಿ ಚುಂಚನಕಟ್ಟೆಯ (ಈಗಿನ ಮೈಸೂರಿನ ಕೃಷ್ಣರಾಜನಗರದಲ್ಲಿ) ಬಳಿ ಕೇವಲ ಬಂಡೆಗಲ್ಲುಗಳು, ಸುಣ್ಣದಕಲ್ಲುಗಳು, ಮತ್ತು ಇಟ್ಟಿಗೆ ಮಣ್ಣನ್ನು ಬಳಸಿ ದೊಡ್ಡದೊಂದು ಅಣೆಕಟ್ಟು ಕಟ್ಟುತ್ತಾರೆ! ಅದು ಎಷ್ಟು ವಿಸ್ತಾರವಾದ ಅಣೆಕಟ್ಟು ಎಂದರೆ, ಇಂದಿನ ಕೃಷ್ಣರಾಜಸಾಗರದ ಮೂರ್ನಾಲ್ಕು ಪಟ್ಟು ದೊಡ್ಡದಾದುದು!

ನಿತ್ಯಹರಿದ್ವರ್ಣವನ್ನು ದಾಟಿ ಅರೆಮಲೆನಾಡಿನ ಮೂಲಕ ಬಯಲುಸೀಮೆಗೆ ಕಾಲಿಡುವ ಕಾವೇರಿಯ ಕನ್ನಡ ನಾಡಿನ ಬಯಲುದಾರಿಯ ಆರಂಭ ಇದೇ ಚುಂಚನಕಟ್ಟೆ ಭಾಗದಲ್ಲಿ!

ಯಥೇಚ್ಛವಾಗಿ ಅಲ್ಲಿಯೇ ದೊರೆತಿದ್ದ ಬಂಡೆಗಳನ್ನು ಬಳಸಿ ಅಣೆಕಟ್ಟು ಕಟ್ಟಿದ ಗಂಗನಾಡಿನ ಜನ ಅಕ್ಷರಶಃ ತಮ್ಮ ಮುಂದಿನ ಬೇಸಾಯಾಧಾರಿತ ಆರ್ಥಿಕತೆ ಮತ್ತು ಸಾಮಂತಿಕೆಯಿಂದ ಸ್ವತಂತ್ರರಾಗುವಲ್ಲಿ ಸಾಗುವ ಹಂತಗಳನ್ನು ನೆನೆದು ಸ್ವರ್ಗದಲ್ಲಿ ತೇಲಾಡಿದ್ದರು!

ಆದರೆ ಎದುರಾಳಿ ಸೈನ್ಯ ಸುಮ್ಮನಿರಬೇಕಲ್ಲ???

ಮಳೆಗಾಲದಲ್ಲಿ ವ್ಯತ್ಯಾಸವೇನನ್ನೂ ಅರಿಯದ ಚೋಳಮಂಡಲದ ಅರಸರು ಸುಮ್ಮನಿದ್ದರು. ಆಗ ಆಳ್ವಿಕೆ ನಡೆಸುತ್ತಿದ್ದ ಕರಿಕಾಲ ಚೋಳನಿಗೆ ಗಂಗವಾಡಿಯಲ್ಲಿ ನಿರ್ಮಾಣವಾಗಿದ್ದ ಅಣೆಕಟ್ಟೆಯ ವಿಚಾರ ಕೇಳಿ ಕಣ್ಣು ಕೆಂಪಾಗಿದ್ದವು! ಈ ಆಕ್ರೋಶ ಆವೇಶಕ್ಕೆ ತಕ್ಕಂತೆಯೆ ಕಾವೇರಿ ಕೊಳ್ಳದಲ್ಲಿ ನೀರಿನ ಅಭಾವ ಎದುರಾದಾಗ ಕರಿಕಾಲನು ಅಕ್ಷರ ಸಹ ಉರಿದು ಹೋದನು!

ಇದು ಹೀಗೆ ಮುಂದುವರಿಯಲು ಬಿಟ್ಟರೆ, ಎಲ್ಲಿ ತನ್ನ ಸಾಮ್ರಾಜ್ಯಕ್ಕೆ ಹರಿದು ಬರುವುವ ಅಲ್ಪ ಪ್ರಮಾಣದ ನೀರು ಭವಿಷ್ಯದಲ್ಲಿ ಸಾಲದೆ ವ್ಯತಿರಿಕ್ತ ಪರಿಣಾಮ ಬೀರಬಹುದೋ ಎಂದು ಚಿಂತಿಸಿ, ಕಡೆಗೆ ಗಂಗನಾಡಿನ ಮೇಲೆ ದಂಡೆತ್ತಿಯೇ ಬಿಟ್ಟ!

ಸಾಮಂತಿಕೆಯಲ್ಲಿ ನರಳಿದ್ದ ಗಂಗನಾಡು, ತನ್ನಲ್ಲಿ ಸಮರ್ಥ ಅರಸರು ಮತ್ತು ಅಡಳಿತಗಾರಿಗೆ ಜನ್ಮವಿತ್ತಿರಲಿಲ್ಲ! ಚೋಳರ ಯುದ್ಧಕ್ಕೆ ಗಂಗರು ಮಣಿದು ಶರಣಾದರು! ಚೋಳ ಸೈನಿಕರು ಅಂದೇ ಚುಂಚನಕಟ್ಟೆ ಅಣೆಕಟ್ಟನ್ನು ದ್ವಂಸಗೊಳಿಸಿದರು!

ನಂತರ, ಅದೇ ಚುಂಚನಕಟ್ಟೆಯ ಮಾದರಿ, ಅಭಿಯಂತರ, ತಂತ್ರಜ್ಞಾನವನ್ನು ಬಳಸಿ ಕರಿಕಾಲಚೋಳನು ಚೋಳಮಂಡಲದಲ್ಲಿ ಕಲ್ಲಾಣೈ ಎಂಬ ಅಣೆಕಟ್ಟು ನಿರ್ಮಾಣಕ್ಕೆ ಬುನಾದಿ ಹಾಕಿದನು! ಅದು ಪೂರ್ಣವೂ ಆಯ್ತು!

ಈಗದು ಜಗತ್ತಿನ ಅತ್ಯಂತ ಹಳೆಯ ಮತ್ತು ಇನ್ನೂ ಬಳಕೆಯಲ್ಲಿರುವ ಮಾನವ ನಿರ್ಮಿತ ಅಣೆಕಟ್ಟು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ! ಇದರ ಅಪ್ಪನಂತಿದ್ದ ಚುಂಚನಕಟ್ಟೆಯ ಇತಿಹಾಸ, ಮತ್ತು ಆ ಕಾಲದ ಕನ್ನಡಿಗರ ವಿನ್ಯಾಸ ಮಾದರಿ ಮತ್ತು ಕರಕುಶಲತೆ ಕಾಲಗರ್ಭದಲ್ಲಿ ಹುದುಗಿಹೋಗಿದೆ! ಸಮಾಧಿಯಾಗಿದೆ!

ಕಾಕತಾಳೀಯವೆಂಬಂತೆ ಕೃಷ್ಣರಾಜಸಾಗರವು ಇದೇ ಚುಂಚನಕಟ್ಟೆಯ ಮುಂದಿನ ಹಾದಿಯಲ್ಲಿ, ಎಂದರೆ ಕನ್ನಂಬಾಡಿಯಲ್ಲಿ ನಿರ್ಮಾಣವಾಗುತ್ತದೆ! ಇದು ಸಹ ಒಂದು ಸೆಣೆಸಾಟದ ಸಾಹಸವೇ! ೧೯೧೧ರಲ್ಲಿ ಕೆಲಸ ಶುರುವಾದರೂ ಸಹ ಆಗಿನ ಮದರಾಸಿನ ಬ್ರಿಟಿಷ್ ಸರ್ಕಾರ ತೆಗೆದ ತರಾಟೆಯಿಂದ ಅಣೆಕಟ್ಟು ನಿರ್ಮಾಣ ಕಾರ್ಯ ಆಮೆಗತಿಯಲ್ಲಿ ಸಾಗಿದ್ದಂತು ನಿಜ!

ಚೋಳರ ಕಿರುಕುಳ ಮೆಟ್ಟಿನಿಂತು ಬೆಳೆದ ಗಂಗಾರಸರನ್ನು ಬೆಂಕಿಯಲ್ಲಿ ಪಳಗಿದ ಹುಲಿಗಳೆಂದರೆ ತಪ್ಪಾಗಲಾರದು!

ಆದರೂ ಚೋಳರಿಗೆ ಮಣ್ಣು ಮುಕ್ಕಿಸಿದ್ದು ಮಾತ್ರ ಚಾಲುಕ್ಯರು ಮತ್ತು ಹೊಯ್ಸಳರೆ! ರಾಜ ವಿಷ್ಣುವರ್ಧನನ ಕಾಲದಲ್ಲಿ ಕುಲೋತ್ತುಂಗ ಚೋಳ ಮತ್ತವನ ಸೈನ್ಯವು, ಪದೇ ಪದೇ ಹೊಯ್ಸಳ ಸಾಮ್ರಾಜ್ಯದ ಮೇಲೆ ದಂಡೆತ್ತಿ ಬಂದು ಕೊಲೆ ಸುಲಿಗೆಗಳನ್ನು ಮಾಡಿ ಕ್ರೌರ್ಯ ಮೆರೆಯುತ್ತಿದ್ದರು! ಆತನೂ ಭೀಕರವಾಗಿ ವಿಷ್ಣುವರ್ಧನನ ಖಡ್ಗಕ್ಕೆ ಬಲಿಯಾದದ್ದು ಇತಿಹಾಸ!

ಬಳ್ಳಾರಿ ರಾಯಚೂರು ಬಾಗಲಕೋಟೆ ಧಾರವಾಡ ಭಾಗಗಳಲ್ಲಿ ಚಾಲುಕ್ಯರೊಂದಿದೆ ಸೆಣೆಸಾಡಿದ್ದಾಗ ಚೋಳರು ಅಕ್ಷರಶಃ ಬಲಿಯ ಕುರಿಗಳಾದರು! ಆ ಅತ್ಯಂತ ಘೋರ ಯುದ್ಧದಲ್ಲಿ ಅತಿಭೀಕರವಾಗಿ ಚೋಳರ ರುಂಡ ಮುಂಡ ಬೇರ್ಪಡಿಸಿ ಊಳಲಾಗಿತ್ತು!

ಕೋಲಾಹರಪುರ ಎಂದೇ ಹೆಸರುವಾಸಿಯಾದ ಕೋಲಾರದಲ್ಲೂ ಇದೇ ಕಥೆ! ಕೋಲಾರದ ಮಾರಮ್ಮದೇವಿಯಾದ ಕೋಲಾರಮ್ಮನ ದೇವಸ್ಥಾನದಲ್ಲಿ ಚೋಳಭಾವಿ ಇದೆ! ಇದು ಸಹ ಚಾಲುಕ್ಯರು ಬಲಿ ಹಾಕಿದ ಚೋಳರ ಕಳೇಬರಗಳು!

ಹೀಗೆ ಕಾವೇರಿ ನದಿ ನೀರು ಹಂಚಿಕೆಯ ವಿಚಾರವಾಗಿ ನಮ್ಮ ಊಹೆಗೂ ನಿಲುಕದ ಕಾಲದಿಂದಲೂ ಕಾಳಗಗಳು ನಡೆದಿವೆ! ಇಂದು ಕರ್ನಾಟಕದಲ್ಲಿ ಕನ್ನಡತ್ವ ಮರೆತ, ಕರ್ನಾಟಕದ ಹಿತವನ್ನು ಲೆಕ್ಕಿಸದ so called ರಾಷ್ಟ್ರಿಯ ಪಕ್ಷಗಳು, ನಿಜಕ್ಕೂ ಕನ್ನಡಿಗರಿಗೆ ದುಸ್ಥಿತಿಯನ್ನು ತಂದು ಒದಗಿದ್ದಾರೆ! ಜಯಲಲಿತಾಳಂತ ಅವಕಾಶವಾದಿ ರಾಜಕಾರಣಿಗೆ ಕಾವೇರಿ ಖ್ಯಾತೆ vote bankಆಗಿ ಉಳಿದಿರುವುದಂತು ನಿಜ! ಇತಿಹಾಸದಲ್ಲಿ ಖಡ್ಗ ಗುಂಡು ಮದ್ದುಗಳನ್ನು ಹಿಡಿದು ಕಿತ್ತಾಡಿದಂತೆ ಇಂದು ಆಡಲಾಗುವುದಿಲ್ಲ!

ಕರ್ನಾಟದ ರೈತ ಮುಖಂಡರು ಮತ್ತು ತಮಿಳುನಾಡಿನ ರೈತ ಮುಖಂಡರು ತಮ್ಮ ತಮ್ಮ ವೈಯಕ್ತಿಕ ರಾಜಕೀಯ ಹಿತಾಸಕ್ತಿಗಳನ್ನು ಮರೆತು, ರೈತರ ಹಾಗು ಸಾಮಾನ್ಯ ಬೇಡಿಕೆಯಾದ ಕುಡಿಯುವ ನೀರಿನ ವಿಷಯವಾಗಿ ನಿಷ್ಪಕ್ಷಪಾತಗಿ ನಿರ್ಧಾರಗಳನ್ನು ತೆಗೆದುಕೊಂಡರೆ ಒಳಿತು. ನಮ್ಮ ನಿರ್ಧಾರಗಳು, ನಮ್ಮ ಹಿತಾಸಕ್ತಿಗಳು ನಮ್ಮ ಹಿಡಿತದಲ್ಲೇ ಉಳಿಸಿಕೊಳ್ಳುವುದನ್ನು ಬಿಟ್ಟು ಕೇಂದ್ರದ ಕೈಗೆ ನಮ್ಮ ಜುಟ್ಟನ್ನು ಕೊಟ್ಟು ಕೂರುವುದು ದುರಂತ! ಇಂಥ ಪರಸ್ಪರ ಸ್ನೇಹಿ ವಿಷಯಗಳಿಗೆ ಸ್ವಹಿತಾಸ್ತ ರಾಜಕೀಯ ಹಿತಾಸಕ್ತ ರಾಜಕಾರಣಿಗಳು ಅಡ್ಡಿಯಾಗುವುದಂತು ನಿಜ! ಅಂತವರಿಗೆ ಅಧಿಕಾರ ಕೊಡುವ ಸಾಮಾನ್ಯ ಪ್ರಜೆಗಳು ಬುದ್ಧಿ ಕಲಿಯುವವರೆಗೂ ಇಂಥ ಅಡೆತಡೆಗಳು ಇದ್ದದ್ದೆ! ಕನ್ನಡ ಕರ್ನಾಟಕ ಕನ್ನಡಿಗರ ಹಿತ ಕಾಯುವ ಒಂದು ಪ್ರಬಲ ಪ್ರಾದೇಶಿಕ ಪಕ್ಷ ಅವಶ್ಯಕತೆ ಬಹಳವೇ ಇದೆ! ಇಂದು ನಮ್ಮ ಕಾವೇರಿಯನ್ನು ಉಳಿಸಿಕೊಳ್ಳವ ಮಾಡು ಇಲ್ಲವೆ ಮಡಿ ಎಂಬ ದುರ್ಗತಿ ಒದಗಿಬಂದಿರುವುದು ದುರಂತವೆ ಸರಿ!

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top