fbpx
Editor's Pick

ಭಾರತದಲ್ಲಿ ಆಕ್ಟೋಬರ್ 7ರಂದು ಬರಲಿದೆ Apple iPhone 7 and iPhone 7 Plus

ನವದೆಹಲಿ:  ಆಪಲ್ ಅಧಿಕೃತ  ವೆಬ್ಸೈಟ್ ಪ್ರಕಾರ 7 ಅಕ್ಟೋಬರ್  ಭಾರತದಲ್ಲಿ ಐಫೋನ್ 7 ಪ್ರಾರಂಭಿಸಲಾಗುತ್ತದೆ ಎಂದು ತಿಳಿದು ಬಂದಿದೆ.

ಗ್ರಾಹಕರಲ್ಲಿ ಭಾರೀ ನಿರೀಕ್ಷೆ ಮೂಡಿಸಿದ್ದ ‘ಆಪಲ್ ಐಫೋನ್ 7’ ಭಾರತಕ್ಕೆ ಯಾವಾಗ ಬರಲಿದೆ. ಬೆಲೆ ಎಷ್ಟಿದೆ ಎಂಬ ಮಾಹಿತಿ ಬಹಿರಂಗವಾಗಿದೆ.

ಸೆಪ್ಟಂಬರ್ 7 ರಂದು ಬಿಡುಗಡೆಯಾಗಿರುವ ಆಪಲ್ ಐಫೋನ್ 7, ಸೆ. 16 ರಿಂದ ಅಮೆರಿಕ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ. ಆಪಲ್ ಐಫೋನ್ 7 ಮತ್ತು ಆಪಲ್ ಐಫೋನ್ 7 ಪ್ಲಸ್ ಫೋನ್ ಗಳು ಗೋಲ್ಡ್, ಸಿಲ್ವರ್, ಗೋಲ್ಡ್ ರೋಸ್ ಕಪ್ಪು ಹಾಗೂ ಕಡುಗಪ್ಪು ಬಣ್ಣದಲ್ಲಿ ಲಭ್ಯವಿದ್ದು, ಅಕ್ಟೋಬರ್ 7 ರಿಂದ ಭಾರತದ ಮಾರುಕಟ್ಟೆಯಲ್ಲಿ ಸಿಗಲಿವೆ. ಭಾರತದಲ್ಲಿ 32 ಜಿ.ಬಿ. ಐಫೋನ್ ಆರಂಭಿಕ ಬೆಲೆ 60,000 ರೂ ನಿಗದಿಯಾಗಿದೆ.

iphone7lineup

32 ಜಿ.ಬಿ., 128 ಜಿ.ಬಿ. ಮತ್ತು 256 ಜಿ.ಬಿ. ಸ್ಟೋರೇಜ್ ಇರುವ ಸೆಟ್ ಗಳು ಭಾರತದ ಮಾರುಕಟ್ಟೆಯಲ್ಲಿ ಸಿಗಲಿವೆ. ಆಪಲ್ ಐಫೋನ್ 7 ಮತ್ತು ಆಪಲ್ ಐಫೋನ್ 7 ಪ್ಲಸ್ ಈಗಿನ ಟ್ರೆಂಡ್ ಗೆ ತಕ್ಕಂತೆ ತಯಾರಾಗಿದ್ದು, ಮೊಬೈಲ್ ಮಾರುಕಟ್ಟೆಯಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ ಎನ್ನಲಾಗಿದೆ.

ಅಪಲ್ ಐ ಫೋನ್7 ನಿರಿಕ್ಷೆಯಂತೆ ಆರಂಭಿಕ ಬೆಲೆ ರೂ. 49999 ಮತ್ತು ಐ ಫೋನ್ 7 32 GB ಮತ್ತು ರೂ.57999 ಈ ಐ ಫೋನ್ 7 ಫ್ಲಸ್ ಈ ಎರಡೂ ಒಂದೇ ರೀತಿ ಸಾಮಾರ್ಥ್ಯ ಹೊಂದಿದೆ.

ಹೊಸ ಆಪಲ್ ಐಫೋನ್ 7 ಮತ್ತು ಐಫೋನ್ 7 ಪ್ಲಸ್ ಸುಧಾರಿತ ಯಂತ್ರಾಂಶ ಮತ್ತು ವಿನ್ಯಾಸ  ಹೊಂದಿರುತ್ತದೆ , ಫೋನ್ ಈಗ IP67 ಅವುಗಳನ್ನು ಮಾಡುವ ರೇಟ್  ಹೋಂದೆಯಾಗಿದ್ದು, water resistant ಅನ್ನು ಹೊಂದಿರುತ್ತದೆ .

ಆಪಲ್ ಐಫೋನ್ 7 ಜೊತೆಗೆ ಒಂದು ವಿಶಾಲ ಡಿಜಿಟಲ್ ತಂತ್ರಾಂಶ ಹೊಂದಿದೆ. ಟೆಲಿಫೋಟೋ ಲೆನ್ಸ್ 2X ಜೂಮ್ ಮತ್ತು 10x ಜೂಮ್ ಕ್ಯಾಮರಾ  ಡಿಜಿಟಲ್ ತಂತ್ರಾಂಶ ಹೊಂದಿದೆ.

ಆಪಲ್ 3.5mm ಹೆಡ್ಫೋನ್ ಜ್ಯಾಕ್ ತೆಗೆದು ಮಿಂಚಿನ ಕನೆಕ್ಟರ್ ಒಳಗೊಂಡಿದ್ದು ಇದು ಸಹ  earphone  ತರ  ಕೆಲಸ ಮಾಡುತ್ತದೆ. ಕಂಪನಿಯು ವೈಯರ್ ಲೆಸ್ AirPods ಜೋತೆ ವೈಯರ್ ಲೆಸ್ connectivity ಬಳಸಿಕೊಂಡು W1 chip ನ ಸಂಪರ್ಕ ಮಾಡಬಹುದಾಗಿದೆ. ಈ ರೀತಿಯ ಡಿಸೈನ್ ಅನ್ನು ಹೋಸದಾಗಿ ತಯಾರಿಸಿದ್ದಾರೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top