fbpx
Karnataka

ಗೂಗಲ್ ಮ್ಯಾಪ್ ನಲ್ಲಿ ಕಾವೇರಿ ನದಿ ತಮಿಳುನಾಡಿನಲ್ಲಿ ತೋರಿಕೆ!

ಬೆಂಗಳೂರು: ಕಾವೇರಿ ವಿಚಾರದಲ್ಲಿ ಕರ್ನಾಟಕಕ್ಕೆ ಪ್ರತೀ ಬಾರಿಯೂ ಸೋಲಾಗಿದೆ. ಅದೇ ರೀತಿ ಕಾವೇರಿ ನದಿ ಎಲ್ಲಿದೆ ಅಂತ ಗೂಗಲ್ ಮ್ಯಾಪ್  ನಲ್ಲಿ ಸರ್ಜ್ ಮಾಡಿದ್ರೆ ಆಗ ನಿಮಗೆ ಕೋಪ ಬರುವಂತೆ ಮಾಡುತ್ತದೆ.. ಯಾಕೆ ಎಂದರೆ ಕಾರಣ ಕಾವೇರಿ ನದಿ ತಮಿಳುನಾಡಿನಲ್ಲಿದೆ ಎಂದು ಗೂಗಲ್ ಲ್ಯಾಂಡ್ ಮಾರ್ಕ್ ತೋರಿಸುತ್ತಿದೆ!

ಗೂಗಲ್ ಮ್ಯಾಪ್, ಗೂಗಲ್ ಸ್ಯಾಟಲೈಟ್ನಲ್ಲಿ ಭಾರೀ ಅವಾಂತರವಾಗಿದ್ದು, ಮ್ಯಾಪ್ನಲ್ಲಿ ತಲಕಾವೇರಿಯಿಂದ ಮೆಟ್ಟೂರು ಬಳಿಗೆ ಕಾವೇರಿ ಶಿಫ್ಟ್ ಆಗಿದೆ. ರಕ್ತ ಕೊಟ್ಟೇವು ಆದ್ರೆ ಕಾವೇರಿ ಬಿಡೆವು ಅಂತ ಕನ್ನಡಿಗರು ಹೋರಾಡ್ತಿದ್ರೆ ಅತ್ತ ಗೂಗಲ್ ಕಾವೇರಿ ನದಿಯನ್ನ ತಮಿಳುನಾಡಿಗೆ ಸೇರಿಸಿದೆ.

ಭೂಪಟದಲ್ಲಿ, ಗೂಗಲ್ ಮ್ಯಾಪ್ ನಲ್ಲಿ ಈ ರೀತಿಯ ಯಡವಟ್ಟುಗಳು ನಡೆಯುತ್ತಿರುತ್ತದೆ. ಬಳಿಕ ತೀವ್ರ ವಿರೋಧ ವ್ಯಕ್ತವಾದ ನಂತರ ಬದಲಾವಣೆ ಕಾಣುತ್ತದೆ. ಈಗ ಗೂಗಲ್ ಮ್ಯಾಪ್, ಗೂಗಲ್ ಸ್ಯಾಟಲೈಟ್ ಸರ್ಜನಲ್ಲಿಯೂ ಕಾವೇರಿ (ಕಾವೇರಿ ಕರ್ನಾಟಕದ ಜೀವನದಿ. ಕೊಡಗು ಜಿಲ್ಲೆಯ ಪಶ್ಚಿಮ ಘಟ್ಟದಲ್ಲಿ ತಲಕಾವೇರಿಯೆಂಬ ಸ್ಥಳದಲ್ಲಿ ಉಗಮಿಸುವ ಈನದಿ, ಮೈಸೂರು ಜಿಲ್ಲೆಯ ಮೂಲಕ ತಮಿಳುನಾಡಿಗೆ ಹರಿದು ಬಂಗಾಳ ಕೊಲ್ಲಿಯನ್ನು ಸೇರುತ್ತದೆ) ಕರ್ನಾಟಕದಲ್ಲಿ ತೋರಿಸುತ್ತಿಲ್ಲ ಬದಲಾಗಿ ತಮಿಳುನಾಡು ಅಂತ ತೋರಿಸುತ್ತಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top