fbpx
Achivers

ಸ್ವಾಮಿ ವಿವೇಕಾನಂದರು ವಿಶ್ವಧರ್ಮ ಸಮ್ಮೇಳನದಲ್ಲಿ *ಸಿಂಹ ಘರ್ಜನೆ* ಮಾಡಿದಿದ ದಿನವನ್ನು ನೆನೆಯಿರಿ…

ಸೆಪ್ಟೆಂಬರ್ 11, 1893 ರಂದು ಚಿಕಾಗೋದಲ್ಲಿ ನಡೆದ “ವಿಶ್ವ ಸರ್ವಧರ್ಮ ಸಮ್ಮೇಳನ”ದಲ್ಲಿ ಸ್ವಾಮಿ ವಿವೇಕಾನಂದರು ಭಾರತದ ಕೀರ್ತಿಯನ್ನು ಇಡೀ ವಿಶ್ವಕ್ಕೆ ಪರಿಚಯಿಸಿದ ದಿನ.

ಇಡೀ ವಿಶ್ವವೇ ಭಾರತದ ಕಡೆಗೆ ನೋಡುವಂತೆ ಮಾಡಿದ ಮಹಾನ್ ಪುರುಷ, ದಿವ್ಯ ಚೇತನ ಯುವಕರ ಕಣ್ಮಣಿ ಸ್ವಾಮಿ ವಿವೇಕಾನಂದರಿಗೆ ಕೋಟಿ ಕೋಟಿ ನಮನಗಳು.

swami-vivekanandas-speech-at-world-parliament-of-religion-chicago

ಸೆಪ್ಟೆಂಬರ್ 11 ಪ್ರತಿಯೊಬ್ಬ ಭಾರತೀಯನ್ನು ಮರೆಯದ ಅವೀಸ್ಮರಣೀಯ ದಿನ ಮತ್ತು ಹೆಮ್ಮೆಪಡಬೇಕಾದ ದಿನ. ಸರಿಯಾಗಿ ಇಂದಿಗೆ 123 ವರ್ಷಗಳ ಹಿಂದೆ ಅಂದರೆ ಸೆಪ್ಟಂಬರ್ 11, 1893 ರಂದು ಭಾರತದ ಸಿಂಹದೊಂದು ವಿಶ್ವಮಟ್ಟದಲ್ಲಿ ಘರ್ಜಿಸಿದ ದಿನ.

1vivekananda_centenary_banquet

ಅದು ಸ್ವತಂತ್ರಪೂರ್ವ ಕಾಲ. ಭಾರತೀಯರುˌ ಭಾರತೀಯತೆˌ ಭಾರತೀಯ ಸಂಸ್ಕೃತಿˌ ಭಾರತೀಯ ಪರಂಪರೆ ಮತ್ತು ಹಿಂದೂಧರ್ಮವನ್ನು ನಿಂಧಿಸುತ್ತಿದ್ದ ಕಾಲವದು. ಅಂತಹ ಸಂಧರ್ಭದಲ್ಲಿ

2

ವಿದೇಶಗಳಿಗೆ ಪ್ರಯಣ ಬೆಳೆಸಿ ಭಾರತೀಯತೆಯನ್ನುˌ ಹಿಂದೂ ಧರ್ಮದ ಸಾರವನ್ನು ವಿದೇಶಿಯರಿಗೆ ಭೋಧಿಸಿ ಭಾರತೀಯರ ಸದ್ಗುಣಗಳನ್ನು ಜಾಗತಿಕ ಮಟ್ಟದಲ್ಲಿ ಮಿಂಚಿಸಿದರೇ ಸ್ವಾಮಿ ವಿವೇಕಾನಂದರು. ವಿಶ್ವಧರ್ಮ ಸಮ್ಮೇಳನದಲ್ಲಿ ಪಾಲ್ಗೊಂಡು ವಿಶ್ವಕ್ಕೆ ಭಾರತದ ಜ್ಞಾನ ಸಂಪತ್ತನ್ನು ಪರಿಚಯಿಸಿದ ಕೀರ್ತಿ ವಿವೇಕಾನಂದರದ್ದು.

6-swami-vivekananda-usa-1894

ಸೆಪ್ಟೆಂಬರ್ 11ˌ 1893 ರ ಸೋಮವಾರ ಅಮೇರಿಕಾದ ಶಿಕಾಗೋ ನಗರದ ಆರ್ಟ್ ಇನ್ಸ್ಟಿಟ್ಯೂಟ್ ಎಂಬ ದೊಡ್ಡಕಟ್ಟಡದ ಹಾಲ್ ಆಫ್ ಕೊಲಂಬಸ್ ಎಂಬ ಸಭಾಂಗಣದಲ್ಲಿ ಸ್ವಾಮಿ ವಿವೇಕಾನಂದರು ಹಿಂಧೂ ಧರ್ಮ ಹಾಗೂ ಭಾರತೀಯರ ಪ್ರತಿನಿಧಿಯಾಗಿ ಭಾಗವಹಿಸಿ ಭಾರತದ ಮಣ್ಣಿನ ಗುಣಗಳನ್ನು ವಿಶ್ವಕ್ಕೆ ಸಾರುವ ಮುಖಾಂತರ ಭಾರತ ದೇಶದ ಕೀರ್ತಿಪತಾಕೆಯನ್ನು ಮುಗಿಲೆತ್ತರಕ್ಕೆ ಏರಿಸಿದರು.

4

ವಿಶ್ವಧರ್ಮ ಸಮ್ಮೇಳನದಲ್ಲಿ ತಮ್ಮ ಭಾಷಣವನ್ನು ಆರಂಭಿಸಿದ ಸ್ವಾಮೀಜಿಯವರು ನನ್ನ ಪ್ರೀತಿಯ ಅಮೇರಿಕಾದ ಸಹೋದರˌ ಸಹೋದರಿಯರೇ ಎನ್ನುತ್ತಲೇ ಇಡೀ ಸಭಾಂಗಣದಲ್ಲಿ ಮಿಂಚಿನ ಸಂಚಲನವಾಗಿ ಕರತಾಡನ ಮುಗಿಲುಮುಟ್ಟಿ ಜಯಘೋಷಗಳು ಮೊಳಗಿದವು.

ತಮ್ಮ ಭಾಷಣವನ್ನು ಮುಂದುವರೆಸಿದ ಸ್ವಾಮೀಜಿಯವರು ಎಲ್ಲಾ ಧರ್ಮಗಳ ಸತ್ಯಗಳನ್ನು ಕುರಿತು ಮಾತನಾಡಿದರು. ಆದರೆ ಸ್ವಾಮೀಜಿಯವರ ಭಾಷಣಕ್ಕೆ ಮೊದಲು ಮಾತನಾಡಿದ್ದ ಎಲ್ಲಾ ಧರ್ಮ ಪ್ರಚಾರಕರು ಅವರ ಧರ್ಮದ ಕುರಿತು ಮಾತ್ರ ಮಾತುಗಳಾನಾಡಿದ್ದರು.

%e0%b2%b8%e0%b3%8d%e0%b2%b5%e0%b2%be%e0%b2%ae%e0%b2%bf-%e0%b2%b5%e0%b2%bf%e0%b2%b5%e0%b3%87%e0%b2%95%e0%b2%be%e0%b2%a8%e0%b2%82%e0%b2%a6-%e0%b2%b5%e0%b2%bf%e0%b2%b6%e0%b3%8d%e0%b2%b5%e0%b2%b8

ಹಾಗೇ ಭಾಷಣವನ್ನು ಮುಂದುವರೆಸಿದ ಸ್ವಾಮೀಜಿಯವರು ವಿಶ್ವಕ್ಕೆ ಸಹನೆˌ ಶಾಂತಿ ಮತ್ತು ಸೌಹರ್ಧತೆಯನ್ನು ಹೇಳಿಕೊಟ್ಟ ಧರ್ಮಕ್ಕೆ ಸೇರಿದವನು ನಾನು ಎನ್ನುವ ಮೂಲಕ ಹಿಂಧೂ ಧರ್ಮದ ಘನತೆಯನ್ನು ಕೊಂಡಾದಿದ್ದರು. ಅಲ್ಲಿಯವರೆಗೂ ಯಾವ ಯಾವ ಜನರು ಭಾರತೀಯತೆ ಮತ್ತು ಹಿಂಧೂ ಧರ್ಮವನ್ನು ಕೀಳಾಗಿ ಕಾಣುತ್ತಿದ್ದರೋ ಅವರಿಗೆ ಹಿಂದುತ್ವದ ಪರಿಕಲ್ಪನೆ ಮತ್ತು ವಿಚಾರಗಳನ್ನು ಭೋಧಿಸುತ್ತಾ ಹಿಂಧೂ ಧರ್ಮ ಮತ್ತು ಭಾರತೀಯತೆಯ ಮೌಲ್ಯಗಳನ್ನು ಸಾರಿದರು.

ಈ ರೀತಿ ಸ್ವಾಮೀಜಿಯವರು ವಿಶ್ವಧರ್ಮ ಸಮ್ಮೇಳನದಲ್ಲಿ ಘರ್ಜಿಸಿದ ನಂತರ ಅಮೇರಿಕನ್ನರಿಗೆ ತಮ್ಮ ತಪ್ಪಿನ ಅರಿವಾಗಿ ಖುದ್ದು ಅಮೇರಿಕಾ ಮಾಧ್ಯಮಗಳೇ ” ಭಾರತದಂತಹ ಶ್ರೇಷ್ಠ ಮತ್ತು ಪ್ರಜ್ಞಾವಂತ ರಾಷ್ಟ್ರಕ್ಕೆ ಧರ್ಮ ಪ್ರಚಾರಕನ್ನು ಕಳುಹಿಸಿ ನಮ್ಮ ಮುರ್ಖತನ ಮತ್ತು ಧಾರ್ಮಿಕ ಮಡಿವಂತಿಕೆ ತೋರ್ಪಡಿಸಲು ಈ ವಿಶ್ವ ಧರ್ಮ ಸಮ್ಮೇಳನವನ್ನು ಆಯೋಜಿಸಿದಂತಾಗಿದೆ ಎಂದು ಸುದ್ಧಿ ಬಿತ್ತರಿಸಿ ವಿವೇಕಾನಂದರ ಜ್ಞಾನ ಸಂಪತ್ತನ್ನು ಹೋಗಳುತ್ತಾ ಈ ವೀರ ಸನ್ಯಾಸಿಗೆ ನಾವೂ ತಲೆಬಾಗುತ್ತೇವೆ ಎಂದೂ ಪ್ರಕಟಿಸಿದವು.

swamy-vivekananda

ಈ ರೀತಿ ಭಾರತೀಯರ ಕೀರ್ತಿಪತಾಕೆ ಮುಗಿಲೆತ್ತರಕ್ಕೆ ಕೊಂಡೊಯ್ದು ಭಾರತೀಯರ ಸ್ವಾಭಿಮಾನ ಮತ್ತು ಸಾಹಸಗಳನ್ನು ವಿಶ್ವಕ್ಕೆ ಪರಿಚಯಿಸಿದ ಮಹಾನ್ ಸಾಧನ ಪುರುಷ ˌ ಆಧ್ಯಾತ್ಮಿಕ ದಿವ್ಯಪುರುಷˌ ರಾಷ್ಟೀಯತೆಯ ಹರಿಕಾರ ನಿಗೆ ಕೋಟಿ ಕೋಟಿ ವಂದನೆಗಳು.

ಸ್ವಾಮಿ ವಿವೇಕಾನಂದರ ಕನಸಿನಂತೆ ನಮ್ಮೀ ಭವ್ಯ ಭಾರತ ಮುಂದೊಂದು ದಿನ ಜಗದ್ಗುರು ಪಟ್ಟದಲ್ಲಿ ಮೆರೆಯಲಿದೆ.. ನಮೋ ನಮೋ.

_*ಜೈ ವಿವೇಕಾನಂದ*_

_*ಜೈ ವೀರ ಸನ್ಯಾಸಿ*_

_*ಜೈ ಹಿಂದ್*_

_*ಜೈ ಭಾರತ್ ಮಾತಾ*_

ಮಾಹಿತಿ: WhatsApp

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top