fbpx
Karnataka

ನದಿಜಲ ಚಕ್ರವ್ಯೂಹದಲ್ಲಿ ದೇಶ

ಕಾವೇರಿ ನದಿ ನೀರು ಹಂಚಿಕೆ ಶತಮಾನಗಳಿಂದ ಬಿಡಿಸಲಾಗದ ಕಗ್ಗಂಟಾಗಿಯೇ ಉಳಿದಿದೆ. ಕರ್ನಾಟಕ ಮತ್ತು ತಮಿಳುನಾಡಿನ ನಡುವೆ ವೈಷಮ್ಯದ ಕಾವು ಏರಿಸುವ ಈ ವಿವಾದ ಎರಡೂ ರಾಜ್ಯಗಳಲ್ಲಿ ಪ್ರಬಲ ರಾಜಕೀಯ ಅಸ್ತ್ರ. ವಿವಾದ ಯಥಾಸ್ಥಿತಿಯಲ್ಲಿ ಮುಂದುವರಿದರಷ್ಟೇ ಲಾಭ ಎನ್ನುವುದು ಎರಡೂ ರಾಜ್ಯಗಳ ರಾಜಕಾರಣಿಗಳ ಅಭಿಮತ. ಇದೇರೀತಿ ನಮ್ಮ ಭಾರತ ದೇಶದಲ್ಲಿ ದಶಕಗಳಿಂದಲೂ ಹಲವಾರು ಜಲವಿವಾದಗಳು ಇವೆ. ದೇಶದಲ್ಲಿನ ಪ್ರಮುಖ ಜಲವಿವಾದಗಳು, ರಾಜ್ಯಗಳ ನಡುವಿನ ಶಾಂತಿಸೌಹಾರ್ದತೆಗೆ ಧಕ್ಕೆಯನ್ನುಂಟುಮಾಡುತ್ತಿದೆ.

ಕಾವೇರಿ

ಕಾವೇರಿಯು ಅಂತರರಾಜ್ಯ ನದಿ. ಇದರ ಪಾತ್ರ ಹಾಗೂ ಜಲಾನಯನ ಪ್ರದೇಶವು ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಪುದುಚೇರಿ ರಾಜ್ಯಗಳಲ್ಲಿ ಹರಡಿದೆ. ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳಿಗೆ ಇದು ಜೀವನದಿಯಾಗಿದೆ. ಈ ನದಿಯ ಉದ್ದ 804 ಕಿ.ಮೀ. ಇದರಲ್ಲಿ 380 ಕಿ.ಮೀ. ಕರ್ನಾಟಕದಲ್ಲೂ, 360 ಕಿ.ಮೀ ತಮಿಳುನಾಡು ಹಾಗೂ 64 ಕಿ.ಮೀ ಉದ್ದಕ್ಕೆ ಕರ್ನಾಟಕ ಮತ್ತು ತಮಿಳುನಾಡು ಗಡಿಯಾಗಿ ಹರಿಯುತ್ತದೆ. ಕಾವೇರಿ ನದಿಯ ಜಲಾನಯನ ಪ್ರದೇಶ 81, 191 ಚ.ಕಿ.ಮೀ ಮತ್ತು ಇದರಿಂದ ಸುಮಾರು 790 ಟಿಎಂಸಿ ನೀರು ಲಭ್ಯವಾಗುವುದೆಂದು ಅಂದಾಜು ಮಾಡಲಾಗಿದೆ. ಕಾವೇರಿ ನದಿಯು ಒಟ್ಟು ಜಲಾನಯನ ಪ್ರದೇಶದಲ್ಲಿ ಶೇ.54 ಭಾಗ ಹಾಗೂ ನೀರಿನ ಲಭ್ಯತೆಯಲ್ಲಿ ಶೇ.32 ಭಾಗವು ತಮಿಳುನಾಡಿನಲ್ಲಿ ಲಭ್ಯವಿದೆ.

ಜೊತೆಗೆ ಇದೇ ರಾಜ್ಯದ ಕಾವೇರಿ ನದಿ ಮುಖಜ ಭೂಮಿಯಲ್ಲಿ ತಮಿಳು ನಾಡು ಹಾಗೂ ಪುದುಚೆರಿ ಸೇರಿ ಒಟ್ಟು 150 ಟಿಎಂಸಿ ಅಂತರ್ಜಲವು ದೊರೆಯುವುದೆಂದು ವಿಶ್ವಸಂಸ್ಥೆಯ ಅಭಿವೃದ್ಧಿ ಅಧ್ಯಯನ ಅಂದಾಜು ಮಾಡಿದೆ. ಇದಕ್ಕೆ ಪ್ರತಿಯಾಗಿ ಕರ್ನಾಟಕದ ಶಿಲಾಸ್ತರಗಳಲ್ಲಿ ಅಂತರ್ಜಲ ಸಂಗ್ರಹಣಾ
ಸಾಮಥ್ರ್ಯವು ಬಹಳ ಕಡಿಮೆ. ಆದರೆ ಕಾವೇರಿಯ ಒಟ್ಟು ನೀರಿನ ಲಭ್ಯತೆಯಲ್ಲಿ ರಾಜ್ಯದಲ್ಲಿರುವ ಕಾವೇರಿ ನದಿ ಜಲಾನಯನ ಪ್ರದೇಶದಿಂದ ಶೇ.53.8ರಷ್ಟು ದೊರೆಯುತ್ತದೆ. ಆದಾಗ್ಯೂ ತಾಯ್ನಾಡಿನಲ್ಲಿ ಲಭ್ಯವಾಗುವ ಕಾವೇರಿ ನದಿನೀರಿನ ಪೂರ್ಣ ಲಾಭ ಪಡೆದುಕೊಳ್ಳದಂತಹ ಪರಿಸ್ಥಿತಿಯನ್ನ ಕರ್ನಾಟಕ ರಾಜ್ಯವು ಎದುರಿಸುತ್ತದೆ.

ಕೃಷ್ಣಾ

ನಾಲ್ಕು ದಶಕಗಳ ಸುದೀರ್ಘ ಹೋರಾಟದ ನಂತರ ಕೃಷ್ಣಾನದಿ ನೀರು ಹಂಚಿಕೆಯ ತೀರ್ಪು ಮೇಲ್ನೋಟಕ್ಕೆ ನಮಗೆ ಸಂಪೂರ್ಣ ನ್ಯಾಯ ದಕ್ಕಿದೆ ಅಂತ ಅನ್ನಿಸಿದರೂ ಕೆಲವು ಪ್ರಮುಖ ವಿಷಯಗಳಲ್ಲಿ ನಮಗೆ ನ್ಯಾಯ ಸಿಕ್ಕಿಲ್ಲ.. ಲಭ್ಯ ಮಾಹಿತಿಯ ಪ್ರಕಾರ, ಕೃಷ್ಣಾ ನದಿಯ ಒಟ್ಟು ನೀರು ಹಂಚಿಕೆಯಲ್ಲಿ ಕರ್ನಾಟಕದ
ಪಾಲಿಗೆ 911 ಟಿಎಂಸಿ ಸಿಕ್ಕಿದೆ. ಮಹಾರಾಷ್ಟ್ರದ ಪಾಲಿಗೆ 666 ಟಿಎಂಸಿ ಹಾಗೂ ಆಂಧ್ರ ಪ್ರದೇಶಕ್ಕೆ 1005 ಟಿ.ಎಂ.ಸಿ.. ದೊರೆತಿದೆ. ಇದರ ಜೊತೆಗೆ ಕರ್ನಾಟಕ ಪ್ರತಿ ವರ್ಷ ಜೂನ್-ಜುಲೈ ತಿಂಗಳಿನಲ್ಲಿ 8-10 ಟಿ.ಎಂ.ಸಿ.. ನೀರು ಆಂಧ್ರಕ್ಕೆ ಬಿಡಬೇಕು ಎಂದು ನ್ಯಾಯಾಧಿಕರಣ ತೀರ್ಪು ನೀಡಿದೆ.

ಗೋದಾವರಿ

ಗೋದಾವರಿ ನ್ಯಾಯಾಧಿಕರಣ ತೀರ್ಪಿನ ಪ್ರಕಾರ, ಅವಿಭಜಿತ ಆಂಧ್ರಕ್ಕೆ ಅತ್ಯಂತ ಹೆಚ್ಚು ಪಾಲು 1,486 ಟಿಎಂಸಿ ಅಡಿ ನೀರು ಸಿಕ್ಕಿದೆ. ಕರ್ನಾಟಕ ಮತ್ತು ಮಹಾರಾಷ್ಟ್ರಕ್ಕೆ 35 ಟಿಎಂಸಿ ಅಡಿ ನೀರು ದೊರೆತಿದೆ.

ತುಂಗಭದ್ರಾ

ತುಂಗಭದ್ರಾ ಜಲಾಶಯ 101 ಟಿಎಂಸಿ ಅಡಿ ಸಾಮಥ್ರ್ಯ ಹೊಂದಿದ್ದು, 378 ಚದರ ಕಿ.ಮೀ ವಿಸ್ತರಣೆ ಹರಡಿದೆ. ಎಡ ಮತ್ತು ಬಲಭಾಗದಲ್ಲಿ ಎರಡು ಕೆನಾಲ್‍ಗಳನ್ನು ನಿರ್ಮಿಸಲಾಗಿದೆ. ಕರ್ನಾಟಕ ಮತ್ತು ಆಂಧ್ರದ ರಾಯಲುಸೀವi ಪ್ರದೇಶದಲ್ಲಿ ನೀರು ಹರಿಯುತ್ತಿದೆ. ಕರ್ನಾಟಕ ಮತ್ತು ಆಂಧ್ರಪ್ರದೇಶಕ್ಕೆ ಕ್ರಮವಾಗಿ 151 ಟಿಎಂಸಿ ಮತ್ತು 79 ಟಿಎಂಸಿ ನೀರು ಹಂಚಿಕೆಯಾಗಿದೆ.

1 ಟಿಎಂಸಿ ಅಂದರೆ 28.3 ದಶಲಕ್ಷ ಕ್ಯೂಬಿಕ್ ಮೀಟರ್
ಅಂದರೆ 28,316,846,592 ಲೀಟರ್

ಜಲ ನ್ಯಾಯಾಧಿಕರಣ
< ಗೋದಾವರಿ
< ಕೃಷ್ಣಾ
< ನರ್ಮದಾ
< ರಾವಿ ಮತ್ತು ಬಿಯಾಸ್
< ಕಾವೇರಿ

ಜಲ ವಿವಾದ ಕಾಯಿದೆ 1956

ಅಂತರ್‍ರಾಜ್ಯ ನದಿ ಅಥವಾ ನದಿ ಕಣಿವೆಯ ನೀರು ಬಳಕೆ, ನಿಯಂತ್ರಣ ಮತ್ತು ಹಂಚಿಕೆ ಸಂಬಂಧ ಉದ್ಭವಿಸಬಹುದಾದ ಜಲವಿವಾದ ಪರಿಹರಿಸುವ ನಿಟ್ಟಿನಲ್ಲಿ ರಾಜ್ಯಗಳ ಪುನರ್‍ವಿಂಗಡಣೆ ವೇಳೆ ಸಂವಿಧಾನದ 262 ವಿಧಿಯನ್ವಯ ಅಂದಿನ ಕೇಂದ್ರ ಸರ್ಕಾರವು 1956ರಲ್ಲಿ ಅಂತರ್‍ರಾಜ್ಯ ನದಿ ನೀರು ವಿವಾದ ಕಾಯಿದೆಯನ್ನು(ಐಆರ್‍ಡಬ್ಲ್ಯೂಡಿ ಕಾಯಿದೆ)ಜಾರಿಗೊಳಿಸಿತು.

ಸಂವಿಧಾನದ 262 ವಿಧಿಯನ್ವಯ ಅಂತರ್‍ರಾಜ್ಯಗಳ ನಡುವೆ ಉದ್ಬವಿಸುವ ವಿವಾದವನ್ನು ಕೇಂದ್ರ ಸರ್ಕಾರ ನ್ಯಾಯಸಮ್ಮತವಾಗಿ ಬಗೆಹರಿಸಬೇಕಿದೆ. ತರುವಾಯ ಈ ಕಾಯಿದೆಗೆ ಹಲವು ತಿದ್ದುಪಡಿಗಳನ್ನೂ ತರಲಾಯಿತು. 2002ರಲ್ಲಿ ಈ ಕಾಯಿದೆಗೆ ತಿದ್ದುಪಡಿ ತರಲಾಗಿತ್ತು.

ಈ ಕಾಯಿದೆ 17 ರಾಜ್ಯಗಳಿಗೆ ಅನ್ವಯವಾಗುತ್ತದೆ. ಸಾರ್ವಜನಿಕ ಹಿತಾಸಕ್ತಿ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಅಂತರ್‍ರಾಜ್ಯ ನದಿ ಮತ್ತು ಕಣಿವೆಗಳ ಅಭಿವೃದ್ಧಿ ಸಂಬಂಧ ಕಾನೂನನ್ನು ನಿಯಂತ್ರಣಿಸಬಹುದು. ಸಂವಿಧಾನ 263ನೇ ವಿಧಿ ಅನ್ವಯ ರಾಜ್ಯಗಳ ನಡುವೆ ಉದ್ಬವಿಸುವ ವಿವಾದ ಕುರಿತು ತನಿಖೆ ಹಾಗೂ ಶಿಫಾರಸು ಮಾಡಲು ರಾಷ್ಟ್ರಪತಿ ಅವರು ಅಂತರ್‍ರಾಜ್ಯ ಮಂಡಳಿಯನ್ನೂ ರಚಿಸಬಹುದಾಗಿದೆ. ಅಂತರ್‍ರಾಜ್ಯಗಳ ನದಿ ಅಥವಾ ಕಣಿವೆಯ ನೀರು ಸಂಗ್ರಹ ಕುರಿತು ಜಲಾನಯನ ರಾಜ್ಯಗಳ ಈ ಹಿಂದಿನ ಒಪ್ಪಂದಗಳನ್ನು ಐಆರ್‍ಡಬ್ಲ್ಯೂಡಿ ಕಾಯಿದೆ(ವಿಭಾಗ 2ಸಿ2) ಮೌಲ್ಯೀಕರಿಸುತ್ತದೆ.

ನದಿ ಜಲ ವಿವಾದ – ಏನು ಎತ್ತ ?

ಕಾವೇರಿ – ಕರ್ನಾಟಕ, ತಮಿಳುನಾಡು, ಕೇರಳ
ಕೃಷ್ಣಾ – ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ
ತುಂಗಾಭದ್ರ – ಕರ್ನಾಟಕ ಮತ್ತು ಆಂಧ್ರಪ್ರದೇಶ
ಗೋದಾವರಿ – ಆಂಧ್ರÀ, ಮಧ್ಯಪ್ರದೇಶ, ಛತ್ತೀಸ್‍ಗಢ, ಒಡಿಸ್ಸಾ, ಕರ್ನಾಟಕ
ಅಲಿಯಾರ್-ಭಿವಾಣಿ- ತಮಿಳುನಾಡು ಮತ್ತು ಕೇರಳ
ನರ್ಮದಾ – ಗುಜರಾತ್, ಮಹಾರಾಷ್ಟ್ರ, ಮಧ್ಯಪ್ರದೇಶ, ರಾಜಸ್ತಾನ
ಮಹಿ- ಗುಜರಾತ್, ರಾಜಸ್ತಾನ ಹಾಗೂ ಮಧ್ಯಪ್ರದೇಶ)
ರಾವಿ ಮತ್ತು ಬೀಯಾಸ್ – ಪಂಜಾಬ್, ಹರ್ಯಾಣ, ಹಿಮಾಚಲ ಪ್ರದೇಶ, ರಾಜಸ್ತಾನ, ಜಮ್ಮು-ಕಾಶ್ಮೀರ, ದೆಹಲಿ
ಸಟ್ಲೆಜ್-ಯಮುನಾ – ಪಂಜಾಬ್, ಹರ್ಯಾಣ, ರಾಜಸ್ತಾನ
ಯಮುನಾ – ಉತ್ತರಪ್ರದೇಶ, ಹರ್ಯಾಣ, ಹಿಮಾಚಲಪ್ರದೇಶ, ಪಂಜಾಬ್, ರಾಜಸ್ತಾನ, ಮಧ್ಯಪ್ರದೇಶ ಮತ್ತು ದೆಹಲಿ
ಕರ್ಮಾನಸ – ಉತ್ತರಪ್ರದೇಶ ಮತ್ತು ಬಿಹಾರ
ಬರಾಕ್ – ಅಸ್ಸಾಂ ಹಾಗೂ ಮಣಿಪುರ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top