fbpx
Karnataka

ಕನ್ನಡಿಗರಿಗೆ ಕಾವೇರಿ ಯಾಕ್ ಸಿಗಲ್ಲ ಅನ್ನೋಕೆ ಇದನ್ನ ಓದಬೇಕು.

ನಮ್ಮ ರಾಷ್ಟ್ರೀಯ ಕನ್ನಡಿಗರಿಗೆ ಬಿಜೆಪಿ ಮತ್ತು ಕಾಂಗ್ರೆಸ್ಸ್ ಮೇಲೆ ಇರೋ ಕಳಕಳಿ ಹಾಗು ಭಕ್ತಿ ಕರ್ನಾಟಕದ ನಾಡು ನುಡಿ ಮೇಲೆ ಇದ್ದಿದ್ರೆ ಇಂಥ ದಿನ ನೊಡ್ಬೇಕಾಗಿ ಬರ್ತೀರ್ಲಿಲ್ಲ. ಯಾರೋ ಮೋದಿನ ಅಂದ್ರು ಅಂತ ಎದ್ನೋ ಬಿದ್ನೊ ಅಂತ ಮೋದಿ ಪರ ವಹಿಸ್ಕೊಂಡು ಮಾತಾಡ್ತಾ ಇದಾರೆ. ಇರೋ ಬರೋ ವಾಟ್ಸಾಪ್, ಫೇಸ್ಬುಕ್ ಪೇಜ್ ಅಲ್ಲಿ ಮೋದಿ ಗುಣಗಾನ. ಅದೇ ಕರ್ನಾಟಕಗೆ ಇಷ್ಟು ಅನ್ಯಾಯ ಆದರು ವಿರೋಧ ಪಕ್ಷದಲ್ಲಿರೋ ಬಿಜೆಪಿ ಮಾತ್ರ ಯಾವುದೇ ಪ್ರತಿಭಟನೆಲಿ ಭಾಗವಹಿಸಲಿಲ್ಲ. ಯಾಕೆ ಸರ್ ಬಿಜೆಪಿಯವರು ಕಾವೇರಿ ನೀರು ಕುಡಿಯೊದಿಲ್ವ? ನಮ್ಮ ಮುಖ್ಯಮಂತ್ರಿಗಳಾದ ನಿದ್ದೆರಾಮಯ್ಯ ಮೋದಿ ಕರೆಗೆ ಬೆಲೆ ಕೊಡಲಿಲ್ಲ ಅಂತ ಎಲ್ಲಾ ಕನ್ನಡಿಗರನ್ನ ಬಲಿ ನೀಡೊದ್ ಎಷ್ಟು ಸರಿ. ನಿಮಗೆ ಜನರ ಕಣ್ಣೀರಿಗಿಂತ ಪಕ್ಷನೆ ಮುಖ್ಯ ಆಗೋಯ್ತಾ?

ಅಂತರ್ಜಾಲದಲ್ಲಿ ಮೋದಿಯವರ ವರ್ಚಸ್ಸು ಬೆಳೆಸೋಕೆ ಅಂತಾನೆ ತಂಡಗಳಿವೆ. ನಾವು ಅವರಷ್ಟು ಬುದ್ಧಿವಂತರಲ್ಲ ಆದರೆ ಕಾಂಗ್ರೆಸ್ಸ್ ಹಾಗು ಬಿಜೆಪಿ ನಮ್ಮ ಕನ್ನಡಿಗರನ್ನ ಬರೀ ವೋಟ್ಗಷ್ಟೇ ಬಳಕೆ ಮಾಡ್ತ ಇದಾವೆ ಅನ್ನೋದು ಅರ್ಥ ಮಾಡ್ಕೋಳೋ ಅಷ್ಟು ಬುದ್ಧಿ ದೇವರು ನೀಡಿದ್ದಾನೆ. ನಮ್ಮ ಜನ ಎಷ್ಟು ದಿನ ಅಂತ ದಿಲ್ಲಿ ಬಾಸ್ ಗಳ ಗುಲಾಮಗಿರಿ ಮಾಡ್ತ ಇರಬೇಕು. ಈ ಎರಡೂ ಪಕ್ಷಗಳ ಬೆಂಬಲಿಗರು ಪಕ್ಷನ ರಕ್ಷಣೆ ಮಾಡ್ತ ಇದ್ದಾವೆ ಹೊರತು ಕರ್ನಾಟಕನ ಅಲ್ಲ.

ಯಾವುದೋ ಬಲೂಚಿಸ್ಥಾನಲಿ ನಡೆಯೋ ಅನ್ಯಾಯಕ್ಕೆ ಬಿಜೆಪಿ ಹೃದಯ ಚುರ್ ಅನ್ನತ್ತೆ ಆದರೆ ಕರ್ನಾಟಕ ಅಂದರೆ ಮಾತ್ರ ಅಸಡ್ಡೆ. 17 ಎಂಪಿ ಗಳನ್ನ ಕೊಟ್ಟಿದ್ದು ಬಲೂಚಿಸ್ಥಾನದ ಜನ ಅಲ್ವ ಸೋ ಕನ್ನಡಿಗರು ಈ ಪರಿಸ್ಥಿತಿನ ಎದುರಿಸಬೇಕಾಗಿದ್ದೇ ಬಿಡಿ.

ಮೋದಿ ಈ ವಿಷಯದಲ್ಲಿ ಮಾತಾಡ್ಬೇಕೋ ಇಲ್ವೋ ಗೊತ್ತಿಲ್ಲ ಆದರೆ ನಮ್ಮ ಪ್ರಾದೇಶಿಕ ಬಿಜೆಪಿ ನಾಯಕರು ಮಾತ್ರ ಪ್ರತಿಭಟನೆಲಿ ಪಾಲ್ಗೊಳ್ಳಬೇಕಿತ್ತು. ಕಳಸ ಹಾಗು ಕಾವೇರಿ ವಿಷಯದಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳು ಕನ್ನಡಿಗರ ಕೂಗಿಗೆ ಸ್ಪಂದಿಸಲಿಲ್ಲ. ಆದರೆ ನಾಳೆಯಿಂದ ಮತ್ತದೇ ಜಾತಿ ರಾಜಕಾರಣ ಶುರು ಆಗತ್ತೆ ನಮ್ ಜನ ಮತ್ತದೇ ಕೆಲಸಕ್ಕೆ ಬರ್ದೆ ಇರೋ ಕೇಜ್ರಿ ರಮ್ಯ ಜೋಕ್ಸ್ ಶೇರ್ ಮಾಡ್ತ ಎಲ್ಲಾನೂ ಮರಿತಾರೆ. ಮತ್ತದೇ ಕಾಂಗ್ರೆಸ್ಸ್ ಬಿಜೆಪಿನ ಗೆಲ್ಸಿ ಕರ್ನಾಟಕನ ಗಲ್ಲಿಗೇರ್ಸತಾರೆ.

ಬಿಜೆಪಿ ಹಾಗು ಕಾಂಗ್ರೆಸ್ಸ್ ಗೆ ಕಿಂಚಿತ್ತಾದರೂ ಸ್ವಾಭಿಮಾನ ಅನ್ನೋದ್ ಇದ್ರೆ ದಯವಿಟ್ಟು ಇನ್ಮುಂದೆ ಕನ್ನಡಿಗರ ವೋಟ್ ಕೇಳೋಕೆ ಬರಬೇಡಿ. ಆಗಲು ನಮಗೆ ನಿಮಗೆ ಸಂಬಂಧ ಇಲ್ಲಾ ಅಂತ ಸುಮ್ನೆ ಇದ್ದುಬಿಡಿ.

-ರಾಕೇಶ್ ಭಟ್

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

1 Comment

1 Comment

Leave a Reply

Your email address will not be published.

To Top