fbpx
Editor's Pick

ಗೊಮ್ಮಟಮೂರ್ತಿ ಹಾಗೂ ಪರಿಸರದ ಪೌಳಿಯಲ್ಲಿನ ಮೂರ್ತಿಗಳ ಭೌತಿಕ ವಿವರಗಳು

ಶ್ರವಣಬೆಳಗೊಳದ ಗೊಮ್ಮಟಮೂರ್ತಿಯ ಭೌತಿಕ ವಿವರಗಳು ಹಾಗೂ ಪರಿಸರದ ಪೌಳಿಯಲ್ಲಿನ ಮೂರ್ತಿಗಳು

ಶ್ರವಣಬೆಳಗೊಳಕ್ಕೆ ಪ್ರವಾಸ ಬೆಳೆಸಿದ ಪ್ರತಿಯೊಬ್ಬರೂ ಕೂಡಾ ಗೊಮ್ಮಟೇಶ್ವರ ಮೂರ್ತಿಯನ್ನು ನೋಡಲೇಬೇಕು. ಶ್ರವಣಬೆಳಗೊಳದಲ್ಲೇ ಇದು ಪ್ರಮುಖ ಆಕರ್ಷಣೀಯ ಸ್ಥಳ. ಜಗತ್ತಿನಲ್ಲೇ ಅತಿ ದೊಡ್ಡ ಏಕಶಿಲಾ ವಿಗ್ರಹವಿದು. 17 ಮೀಟರ್ (58 ಅಡಿ) ಎತ್ತರದ ಈ ವಿಗ್ರಹ ಏಕಶಿಲೆಯಿಂದ ನಿರ್ಮಾಣಗೊಂಡಿದ್ದು. ಗಂಗ ಸಾಮ್ರಾಜ್ಯದ ರಾಜಮಲ್ಲ ಮತ್ತು ಆತನ ಜನರಲ್‌ ಚಾಮುಂಡರಾಯನಿಂದ ನಿರ್ಮಾಣಗೊಂಡಿದೆ.ಈ ಪ್ರದೇಶವನ್ನು ತಲುಪುತ್ತಿದ್ದಂತೆಯೇ, ಪ್ರವಾಸಿಗರು ಕನ್ನಡ ಮತ್ತು ತಮಿಳು ಭಾಷೆಗಳಲ್ಲಿ ಬರೆದ ಶಿಲಾಶಾಸನವನ್ನು ನೊಡಬಹುದು. ಈ ಶಿಲಾಶಾಸನಗಳು ರಾಜನ ಶ್ರಮದ ಬಗ್ಗೆ ಹೊಗಳಿಕೆ ಮತ್ತು ಗೊಮ್ಮಟೇಶ್ವರನ ಮೂರ್ತಿಯನ್ನು ನಿರ್ಮಿಸಿದ ಜನರಲ್‌ ಬಗ್ಗೆ ಹೊಗಳಿಕೆಯನ್ನು ಹೊಂದಿವೆ.ಸಾವಿರಾರು ಭಕ್ತರು, ಅದರಲ್ಲೂ ಜೈನರು ಹೆಚ್ಚಾಗಿ ಶ್ರವಣಬೆಳಗೊಳ ನಗರಕ್ಕೆ ಮಹಾಮಸ್ತಾಭಿಷೇಕದ ಸಮಯದಲ್ಲಿ ಭೇಟಿ ನೀಡುತ್ತಾರೆ. ಈ ಮಹಾಮಸ್ತಕಾಭಿಷೇಕವು 12 ವರ್ಷಗಳಿಗೊಮ್ಮೆ ನಡೆಯುತ್ತದೆ. ಈ ಹಬ್ಬದಲ್ಲಿ ಗೊಮ್ಮಟೇಶ್ವರ ಮೂರ್ತಿಗೆ ಅಭಿಷೇಕವನ್ನು ಮಾಡಲಾಗುತ್ತದೆ. ಕೇಸರಿ, ತುಪ್ಪ, ಹಾಲು, ಮೊಸರು, ಚಿನ್ನದ ನಾಣ್ಯ ಮತ್ತು ಹಲವು ವಸ್ತುಗಳಿಂದ ಈ ಏಕಶಿಲಾ ವಿಗ್ರಹಕ್ಕೆ ಅಭಿಷೇಕ ಮಾಡಿಸಲಾಗುತ್ತದೆ.

temples-svravanbelagola

ನೋಡಲೇಬೇಕಾದ ಗೊಮ್ಮಟೇಶ್ವರ ಮೂರ್ತಿ, ಶ್ರವಣಬೆಳಗೊಳ

ಏಷ್ಯ ಖಂಡದಲ್ಲಿಯೇ ಅತಿ ಎತ್ತರದ ಮತ್ತು ಭಾರತದ ಅತಿ ಎತ್ತರದ ಏಕಶಿಲಾ ವಿಗ್ರಹಗಳಲ್ಲಿಯೇ ದೊಡ್ಡದಾದ ಗೊಮ್ಮಟನ ಶಿಲೆಯಿರುವ ಶ್ರವಣಬೆಳಗೊಳ ಪ್ರಸಿದ್ಧ ಜೈನ ಪುಣ್ಯಕ್ಷೇತ್ರ. ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಹೋಬಳಿ ಕೇಂದ್ರವು ಬೆಂಗಳೂರಿನಿಂದ 148 ಕಿ.ಮೀಗಳ ದೂರದಲ್ಲಿದೆ.

ಶ್ರವಣ ಬೆಳಗೊಳದ ವಿಂಧ್ಯಗಿರಿಯ ಮೇಲೆ ಕಡೆಯಲಾಗಿರುವ ಈ ಮೂರ್ತಿಯನ್ನು ಚಾವುಂಡರಾಯನು ಬೃಹದಾಕಾರದ ವಿಗ್ರಹವನ್ನು ಕ್ರಿ.ಶ.೯೭೩ರಲ್ಲಿ ಕೆತ್ತಿಸಿದನು.ಅರಿಷ್ಟ ನೇಮಿ ಎಂಬುವ ಶಿಲ್ಪಿ ಕೆತ್ತಿದನೆಂದು ಹೇಳಲಾಗುತ್ತದೆ. ಈ ಶಿಲ್ಪಿಯು ವಿಶ್ವಕರ್ಮ ವರ್ಗಕ್ಕೆ ಸೆರಿದವನಾಗಿದ್ದು, ಪ್ರಸಿದ್ಧ ಶಿಲ್ಪಿ ಜಕಣಚಾರಿಯ ಶಿಷ್ಯನೆ೦ದು ಹೆಳುತ್ತಾರೆ’.

ಮತ್ತೊಂದೆಡೆ ತುಳುನಾಡಿನ ಪ್ರಸಿದ್ದ ಶಿಲ್ಪಿ “ವೀರ ಶಂಭು ಕಲ್ಕುಡ “ಕೆತ್ತಿದನೆಂದು ಹೇಳಲ್ಪಡುತ್ತದೆ.(ಕೋಟಿ ಚೆನ್ನಯ:-ಡಾ| ವಾಮನ ನಂದಾವರ ಪುಟ219) ವಿಂಧ್ಯಗಿರಿಯ ಬೆಟ್ಟದ ಮೇಲಕ್ಕೆ ಹೋಗಲು ಸುಮಾರು ೭೦೦ ಮೆಟ್ಟಿಲುಗಳನ್ನು ಹತ್ತಬೇಕಾಗುತ್ತದೆ. ಹತ್ತಲಾಗದವರಿಗೆ ಡೋಲಿ ವ್ಯವಸ್ಥೆಯೂ ಲಭ್ಯವಿದೆ. ವಿಂಧ್ಯಗಿರಿಯ ಎದುರಿನಲ್ಲೇ ಚಿಕ್ಕಬೆಟ್ಟ ಅಥವಾ ಚಂದ್ರಗಿರಿ ಬೆಟ್ಟವಿದ್ದು ಇಲ್ಲೂ ಸಹ ಪ್ರಾಚೀನ ಬಸದಿಗಳಿವೆ.

ಕ್ಷೇತ್ರದಲ್ಲಿ ಜೈನ ಮಠವಿದ್ದು, ಮಠದ ಪಕ್ಕದಲ್ಲಿಯೇ ಪ್ರಾಚೀನವಾದ ಭಂಡಾರಿ ಹುಳ್ಳ ಬಸದಿ ಹಾಗೂ ಚಂದ್ರನಾಥ ಸ್ವಾಮಿಯ ಬಸದಿಯಿದೆ. ಜೈನ ಮಠದ ಈಗಿನ ಭಟ್ಟಾರಕರಾದ ಶ್ರೀ ಚಾರುಕೀರ್ತಿ ಸ್ವಾಮೀಜಿಯವರು (Charukeerthi swamiji, Shravanabelagola) ವಿದ್ವತ್‌ಪೂರ್ಣರು ಹಾಗೂ ಸಾಕಷ್ಟು ಶೈಕ್ಷಣಿಕ ಸಂಸ್ಥೆಗಳನ್ನು ನಡೆಸುತ್ತಿದ್ದಾರೆ.

ಹನ್ನೆರಡು ವರ್ಷಗಳಿಂದ ಕಠಿಣ ವ್ರತದ ಕಾರಣ ಸಂಚಾರಕ್ಕೆ ವಾಹನವನ್ನೂ ಸಹ ಬಳಸದ ಸ್ವಾಮೀಜಿಯವರು ಇತ್ತೀಚೆಗೆ ತಾನೆ ಧರ್ಮಪ್ರಚಾರಕ್ಕೋಸ್ಕರ ಮತ್ತೆ ವಾಹನವನ್ನು ಬಳಸಿ ಧರ್ಮಪ್ರಚಾರ ಕೈಗೊಳ್ಳುತ್ತಿದ್ದಾರೆ. ಶ್ರೀ ಕ್ಷೇತ್ರದ ವತಿಯಿಂದ ನಡೆಸುತ್ತಿರುವ ಶ್ರೀ ಬಾಹುಬಲಿ ಇಂಜಿನಿಯರಿಂಗ್ ಕಾಲೇಜ್ ಸಹ ಇಲ್ಲಿದ್ದು, ಸಾಕಷ್ಟು ಹೊರ ರಾಜ್ಯದ ವಿದ್ಯಾರ್ಥಿಗಳು ಈ ಗ್ರಾಮೀಣ ಪ್ರದೇಶದ ಇಂಜಿನಿಯರಿಂಗ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಜೊತೆಗೆ ಪಾಲಿಟೆಕ್ನಿಕ್, ವಿಜ್ಞಾನ ಕಾಲೇಜು, ಪ್ರೌಢ ಮತ್ತು ಪ್ರಾಥಮಿಕ ಶಾಲೆಯನ್ನೂ ಶ್ರೀಕ್ಷೇತ್ರದ ವತಿಯಿಂದ ನಡೆಸಲಾಗುತ್ತಿದೆ.ಶ್ರವಣಬೆಳಗೊಳ ಜೈನರ ಕಾಶಿ ಎಂದು ಕರೆಯಲ್ಪಡುವ ಸ್ಥಳ.

ಗೊಮ್ಮಟಮೂರ್ತಿಯ ಭೌತಿಕ ವಿವರಗಳು ಹಾಗೂ ಪರಿಸರದ ಪೌಳಿಯಲ್ಲಿನ ಮೂರ್ತಿಗಳು

ದೈವಿಕಯನ್ನು ಅರಿಯಲು ಮಾಡುವ ಮನುಷ್ಯನ ಸಾಮರ್ಥ್ಯಕ್ಕೆ ಸವಾಲೆಸೆಯುವ ಹಾಗೆ ಗೊಮ್ಮಟ ಮೂರ್ತಿಯು ಹಲವರಿಗೆ ಹಲವಾರು ಆಳತೆಗಳಲ್ಲಿ ಕಾಣಿಸಿಕೊಂಡಿದೆ ಎಂದು ವಿಸ್ಮಯ ಪಡುತ್ತಾರೆಡ ಡಾ|| ಎಸ್.ಶೆಟ್ಟರ್.ಬುಚ್ ನನ್ ಪ್ರಕಾರ ಇದು 70.30ಅಡಿ, ಆದರೆ ಸರ್. ಆಥರ್ ವೆಲ್ಲೆಸ್ಲಿ ಪ್ರಕಾರ ಇದು 60.30ಅಡಿ, ಬ್ರೌನಿಂಗ್ [ಮೈಸೂರಿನ ಕಮಿಷನರ್, 1869] ಪ್ರಕಾರ 57ಅಡಿ, ವರ್ಕಮನ್ ಪ್ರಕಾರ 57ಅಡಿ ಎತ್ತರ ಅಳೆದಿದೆ.

%e0%b2%97%e0%b3%8a%e0%b2%ae%e0%b3%8d%e0%b2%ae%e0%b2%9f%e0%b3%87%e0%b2%b6%e0%b3%8d%e0%b2%b5%e0%b2%b0-%e0%b2%ae%e0%b3%82%e0%b2%b0%e0%b3%8d%e0%b2%a4%e0%b2%bf

1871ರಲ್ಲಿ ಪಬ್ಲಿಕ್ ವರ್ಕ್ಸ್ ಡಿಪಾರ್ಟ್ ಮೆಂಟ್ ವತಿಯಿಂದ ನಡೆದ ಮಾಪನದಲ್ಲಿ ಮೂರ್ತಿಯ ಅಳತೆಯು 56 ಅಡಿಎತ್ತರ ಅಳೆದಿತ್ತು. ಮೈಸೂರಿನ ದೊರೆ ಕೃಷ್ಣರಾಜ ಓಡೆಯರ್ -3 ಅವರ ನೇತೃತ್ವದಲ್ಲಿ 1820 ರಲ್ಲಿ ಕವಿ ಚಕ್ರವರ್ತಿ ಶಾಂತಾರಾಜ ಪಂಡಿತರು ತಮ್ಮ ‘ಸರಸಜನ ಚಿಂತಮಾಣಿಯಲ್ಲಿ ‘ ಮೂರ್ತಿಯ ಅಳತೆಯ ಮೇಲೆ 16 ಶ್ಲೋಕಗಳನ್ನು ಬರೆದಿದ್ದಾರೆ. ಇವರ ಪ್ರಕಾರ ಮೂರ್ತಿಯ ಅಳತೆ 361/8 ಕ್ಯುಬಿಟ್ ಗಳು, ಆರ್. ನರಸಿಂಹಚಾರ್ ಅವರ ಪ್ರಕಾರ 57 ಅಡಿ ಎತ್ತರವಿದೆ. ಮೈಸೂರು ಆರ್ಕಿಯಾಲಜಿಕಲ್ ಡಿಪಾರ್ಟ್ ಮೆಂಟ್ ರಿಪೋರ್ಟ್, 1957ರ ವರದಿಯ ಪ್ರಕಾರ ಇದು 57 ಅಡಿ ಎತ್ತರವಿದೆ. ತಿಯೋಡಿಲೈಟ್ ಎನ್ನುವ ಸಾಧನವನ್ನು ಉಪಯೋಗಿಸಿ ಇನ್ ಸ್ಟಿಟೂಟ್ ಆಫ್ ಇಂಡಿಯನ್ ಆರ್ಟ್ಸ್ ಹಿಸ್ಟರಿ, ಕರ್ನಾಟಕ ವಿಶ್ವವಿದ್ಯಾಲಯದವರು ನಡೆಸಿದ ಮಾಪನದ ಪ್ರಕಾರ ಮೂರ್ತಿಯ ಎತ್ತರ 58 ಅಡಿ 8 ಇಂಚು. 1980 – ತಿಯೋಡಿಲೈಟ್ ಸಾಧನವನ್ನು ಉಪಯೋಗಿಸಿ ಇನ್ ಸ್ಟಿಟ್ಯೂಟ್ ಆಫ್ ಇಂಡಿಯನ್ ಆರ್ಟ್ ಹಿಸ್ಟರಿ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ ಅವರ ಮಾಪನದ ಮುಖ್ಯಾಂಶಗಳು.

ಎತ್ತರ

1)ಪಾದದ ಎತ್ತರ – 2.8 ಅಡಿ

2)ಪಾದದ ತುದಿಯಿಂದ ಮೊಣಕಾಲಿನವರೆಗೆ – 15.2 ಅಡಿ

3)ಪಾದದ ತುದಿಯಿಂದ ಸೊಂಟದವರೆಗೆ 31.4 ಅಡಿ

4)ಪಾದದ ತುದಿಯಿಂದ ನಾಭಿಯವರೆಗೆ 31.4 ಅಡಿ

5)ಪಾದದ ತುದಿಯಿಂದ ಕುತ್ತಿಗೆಯ ಕೆಳಭಾಗದವರೆಗೆ – 48.10 ಅಡಿ

6)ಪಾದದ ತುದಿಯಿಂದ ಕುತ್ತಿಗೆಯ ಮೇಲ್ಭಾಗದವರೆಗೆ – 47.8 ಅಡಿ

7)ಮೊಣಕಾಲಿನಿಂದ ಸೊಟ್ಟದ ವರೆಗು -16.2 ಅಡಿ

8)ಸೊಂಟದಿಂದ ನಾಭಿಯವರೆಗು-2.9 ಅಡಿ

9)ನಾಭಿಯಿಂದ  ಕುತ್ತಿಗೆಯ ಕೆಳಭಾಗದವರೆಗೆ-10.11 ಅಡಿ

10)ಕುತ್ತಿಗೆಯ ಕೆಳಭಾಗದಿಂದ ಕುತ್ತಿಗೆಯ ಮೇಲ್ಭಾಗದವರೆಗೆ- 2.8 ಅಡಿ

11)ಕುತ್ತಿಗೆಯ ಮೇಲ್ಭಾಗದಿಂದ ನೆತ್ತಿಯವರೆಗೆ 11.10 ಅಡಿ

12)ತೋಳೀನ  ಉದ್ದ- 30.0 ಅಡಿ

13)ಮರ್ಮಂಗ ಉದ್ದ- 4.0ಅಡಿ

14)ಕಿವಿಯ ಉದ್ದ- 5.10 ಅಡಿ

15)ಮೂಗಿನ ಉದ್ದ- 3.9 ಅಡಿ

16)ಕೈಗಳ ಉದ್ದ:-

(1)ಮುಂಗೈಯಿಂದ ಮಧ್ಯ ಬೆರಳಿನ ತಿದಿಯವರೆಗೆ-8.0 ಅಡಿ

(2)ಮುಂಗೈಯಿಂದ ತೋರು ಬೆರಳಿನವರೆಗೆ- 5.0 ಅಡಿ

(3)ಮುಂಗೈಯಿಂದ ಹೆಬ್ಬಟ್ಟಿನವರೆಗೆ- 5.0 ಅಡಿ

                 ಒಟ್ಟು ಎತ್ತರ – 58.8 ಅಡಿ

ಆಗಲ:–

1)ಮುಖ (ಕಿವಿಯಿಂದ ಕಿವಿಗೆ) – 8.10 ಅಡಿ

2)ಕುತ್ತಿಗೆ (ಎಡದಿಂದ ಬಲ) – 6.4 ಅಡಿ

3)ಭುಜದಿಂದ ಭುಜ – 23.99 ಅಡಿ

4)ಸೊಂಟ – 9.1 ಅಡಿ

5)ಎದೆ (ಕಂಕುಳದಿಂದ ಕಂಕುಳ) – 12.88 ಅಡಿ.

ಕಳೆದ ಕಳೆದ ಒಂದು ಸಾವಿರಕ್ಕೂಹೆಚ್ಚಿನ ಅವಧಿಯಲ್ಲಿ ಲಕ್ಷೋಪ ಲಕ್ಷಗಟ್ಟಲೆ ಭಕ್ತರು/ಯಾತ್ರಿಗಳು, ಪ್ರವಾಸಿಗರು ಗೊಮ್ಮಟನ ದರ್ಶನ ಮಾಡಿ, ಮೆಚ್ಚಿ ಮನತುಂಬಿಸಿಕೊಂಡಿದ್ದಾರೆ. ಗೊಮ್ಮಟ ವಿಗ್ರಹದ ಬೃಹತ್ ಮಹತ್ತು, ಸೌಂದರ್ಯ, ಹಾಗೂ ಗಾಂಭೀರ್ಯ ಪ್ರತಿಯೊಬ್ಬರ ಮನವನ್ನು ಸೂರೆಗೊಂಡಿದೆ.

%e0%b2%97%e0%b3%8a%e0%b2%ae%e0%b3%8d%e0%b2%ae%e0%b2%9f%e0%b3%87%e0%b2%b6%e0%b3%8d%e0%b2%b5%e0%b2%b0-%e0%b2%ae%e0%b3%82%e0%b2%b0%e0%b3%8d%e0%b2%a4%e0%b2%bf-1

ಈ ವಿಗ್ರಹವನ್ನು ನಿರ್ಮಿಸಿದವರು ಯಾರು, ಹೇಗೆ ಸ್ಥಾಪಿಸಲಾಯಿತು ಎಂದು ಪ್ರಶ್ನೆಗಳನ್ನು ಕೇಳುವುದು ಸ್ವಾಭಾವಿಕವೇ. ಆ ಸ್ಥಳದಲ್ಲಿ ಲಂಬವಾಗಿ ನಿಂತಿದ್ದ ಭಾರೀ ಬಂಡೆಯನ್ನು ಕೆತ್ತಿದ ಮಹಾನ್ ಕಲಾವಿದ ಯಾರೆಂಬುದು ನಮಗಿನ್ನೂ ಸರಿಯಾಗಿ ತಿಳಿದಿಲ್ಲ. ಈ ವಿಗ್ರಹವನ್ನು ಅರಿಷ್ಠನೇಮಿ ಎಂಬ ಕಲಾವಿದ ಕೆತ್ತಿದ ಎಂದು ಸ್ಥಳೀಯ ದಂತ ಕಥೆಯೊಂದು ಹೇಳುತ್ತದೆ.

ಬೆಟ್ಟದ ಮೇಲಿನ ಬರಹ

ಬೆಟ್ಟದ ಮೇಲಿನ ಹಾಗೂ ಗೊಮ್ಮಟಮೂರ್ತಿಯ ಶ್ರೀಪಾದಗಳ ಸುತ್ತ ಈ ಮೂರೂ ಭಾಷೆಗಳಲ್ಲಿರುವ ಬರಹಗಳು ಚಾವೂಂಡರಾಯ ಈ ವಿಗ್ರಹವನ್ನು ಕೆತ್ತಿಸಿದರು ಎಂದು ಸಾರುತ್ತಿವೆ. ಹನ್ನೆರಡು ಹಾಗೂ ಹದಿಮೂರನೆ ಶತಮಾನಗಳಲ್ಲಿದ್ದ ಗಂಗರಾಜ ಹಾಗೂ ಬಸವೀಶೆಟ್ಟಿ ಅವರುಗಳು ವಿಗ್ರಹದ ಪಾದದ ಬಳಿ ಕಟಕಟೆ ಹಾಗೂ ಮೇಲು ಮಹಡಿಯನ್ನು ಕಟ್ಟಿಸಿದರು ಎಂದು ಆಸುಪಾಸಿನ ಬರಹಗಳಿಂದ ತಿಳಿಯುತ್ತದೆ.

%e0%b2%ac%e0%b3%86%e0%b2%9f%e0%b3%8d%e0%b2%9f%e0%b2%a6-%e0%b2%ae%e0%b3%87%e0%b2%b2%e0%b2%bf%e0%b2%a8-%e0%b2%ac%e0%b2%b0%e0%b2%b92%e0%b2%ac%e0%b3%86%e0%b2%9f%e0%b3%8d%e0%b2%9f%e0%b2%a6-%e0%b2%ae%e0%b3%87%e0%b2%b2%e0%b2%bf%e0%b2%a8-%e0%b2%ac%e0%b2%b0%e0%b2%b9

ಗೊಮ್ಮಟಮೂರ್ತಿ ನಿಂತಿರು ಕಮಲದಳದ ಪೀಠದಲ್ಲಿ ಆಲತೆಗೋಲೊಂದನ್ನು ಸೂಚಿಸಲಾಗಿದೆ. ಈ 3’4”ಉದ್ದ ಅಳತೆ ಯನ್ನು ಎರಡು ಸಮಭಾಗಗಳನ್ನಾಗಿ ವಿಂಗಡಿಸಲಾಗಿದೆ. ಈ ಅಳತೆಯ ಎಡಭಾಗದ ಅರ್ಧಭಾಗವನ್ನು ಎಂಟು ಭಾಗಗಳನ್ನಾಗಿ ಹಾಗೂ ಬಲಭಾಗದ ಅರ್ಧಭಾಗವನ್ನು ಎರಡು ಸಮಭಾಗಗಳನ್ನಾಗಿ ವಿಂಗಡಿಸಲಾಗಿದೆ ಎಂದು ಡಾ|| ಶೆಟ್ಟರ್ ಅವರು ವಿವರಿಸುತ್ತಾರೆ. ಗೊಮ್ಮಟಮೂರ್ತಿಯನ್ನು ಕೆತ್ತಲು ಶಿಲ್ಪಿ ಅನುಸರಿಸಿದ ಅಳತೆಗೋಲು ಇದಾಗಿದ್ದಲ್ಲಿ ಶಿಲ್ಪಶಾಸ್ತ್ರದ ಸಂಪ್ರದಾಯದಂತೆ ಈ ಘಟಕಗಳನ್ನು 18 ರಿಂದ ಗಿಣಿಸಲಾಗಿದೆ (3’4”*18= ಮೂರ್ತಿಯ ಎತ್ತರ), ಹೀಗೆ ಮೂರ್ತಿ ಎತ್ತರವನ್ನು ಶಿಲ್ಪಿ ನಿರ್ವಹಿಸಿದ್ದಾನೆಂದು ನಂಬಲಾಗಿದೆ. ಗೊಮ್ಮಟನ ಎಡ ಪಾದದ ಬಳಿ ಲಲಿತ ಸರೋವರ ಎಂಬ ಹೆಸರಿನ ವೃತ್ತಾಕಾರದ ಕಿರಿಕೊಳವನ್ನು ನಿರ್ಮಿಸಲಾಗಿದೆ. ಉತ್ಸವದ ಸಂದರ್ಭಗಳಲ್ಲಿ ಉಪಯೋಗಿಸುವ ನೀರನ್ನು ಈ ಕೊಳದಲ್ಲಿ ಸಂಗ್ರಹಿಸಲಾಗುತ್ತದೆ.

ದ್ವಾರಪಾಲಕರು

12ನೇ ಶತಮಾನದಲ್ಲಿ ಹೊಯ್ಸಳ ಕಲಾವಿದರು ಕೆತ್ತಿದ ಎರಡು ಕಪ್ಪುನೀಲಿಯ ಪಾಲಕ ವಿಗ್ರಹಗಳು ಸುರಕ್ಷಿತವಾಗಿದೆ. ಭಾರೀ ಮೀಸೆ, ಕಣ್ಣುಗಳೊಡನೆ ಈ ವಿಗ್ರಹಗಳ ಮೇಲೆ ಕಿರೀಟಗಳನ್ನು ಸೂಕ್ಷ್ಮವಾಗಿ ಕೆತ್ತಲಾಗಿದೆ. ಬಹುಶಃ 12ನೇ ಶತಮಾನದ ಆಧಿಭಾಗದಲ್ಲಿ ವಿಗ್ರಹದ ಬಳಿ ಕಟಕಟೆ ನಿರ್ಮಿಸಿದ ಸಮಯದಲ್ಲಿ ಈ ವಿಗ್ರಹಗಳನ್ನು ಕೆತ್ತಲಾಗಿದೆರಬೇಕು.

12ನೇ ಶತಮಾನದಲ್ಲಿ

ಸುಮಾರು 150 ವರ್ಷಗಳ ನಂತರ ಗೊಮ್ಮಟನತ್ತ ಭಕ್ತರ ತೀವ್ರ ಗಮನ ಹರಿಯಲಾರಂಭಿಸಿತು ಎಂಬುದು ಸಂಶೋಧಕರ ಅಭಿಪ್ರಾಯವಾಗಿದೆ. ಹೊಯ್ಸಳರ ರಾಜನಾದ ವಿಷ್ಣುವರ್ಧನನ ಸೇನಾಧಿಪತಿಯಾಗಿದ್ದ ಗಂಗರಾಜ ವಿಗ್ರಹದ ಪಾದದ ಬಳಿ ಕಟ-ಕಟೆಯೋಂದನ್ನು ನಿರ್ಮಿಸಿದ. ಬಸವೀಶೆಟ್ಟಿ ಹಾಗೂ ಅವನ ಮಕ್ಕಳು. ಕಟಕಟೆಯನ್ನು ಬಲಪಡಿಸಿ ಸುತ್ತು ರಕ್ಷಣಗೋಡೆಯನ್ನು ಹಾಕಿಸಿದರು. ಬಲದೇವ, ಪ್ರವೇಶ ಪಂಟಪದ ಛಾವಣಿಯಲ್ಲಿ  ಯಕ್ಷವಿಗ್ರಹ ಹಾಗೂ ಮಾನಸ್ತಂಭವನ್ನು ನಿರ್ಮಿಸಿದನು. ಈ ಆವರಣದಲ್ಲಿ ಮುಂದಿನ ವರ್ಷದಲ್ಲಿ  ಹೆಚ್ಚಿನ ವಿಗ್ರಹಗಳನ್ನು ಸ್ಥಾಪಿಸಲಾಯಿತು. ಕ್ರಿಸ್ತಶಕ 1700ರ ನಂತರ ಮಂಟಪದ ಮಹಾದ್ವಾರದ ಬಳಿ ಕಂಬ, ವಿಗ್ರಹಗಳನ್ನು ಕೆತ್ತಲಾಯಿತು. ಪ್ರವೇಶದ್ವಾರದ ಬಳಿಯ ದ್ವಾರಪಾಲಕರು (7ಅಡಿ ಎತ್ತರ) ಮತ್ತಿತರ ಬರಹಗಳು 17-18ನೇ ಶತಮಾನದಲ್ಲಿ ಸೇರಿಸಿರುವ ಕೃತಿಗಳಾಗಿವೆ.

ಸುತ್ತಾಲಯ ಹಾಗೂ ವಿಗ್ರಹಗಳು

ದಿವ್ಯ ಮೂರ್ತಿ, ಗೊಮ್ಮಟದ ಸುತ್ತಲಿನ ಮೂರು ಭಾಗಗಳಲ್ಲಿ ಎರಡು ಹಂತಗಳಲ್ಲಿ ನಿರ್ಮಿಸಿದ  41 ವಿಗ್ರಹಗಳಿವೆ. 24 ವಿಗ್ರಗಳ ನಿರ್ಮಾಕ್ಕೆ ಬಸವೀಶೆಟ್ಟಿ ಕಾರಣ. ಉಳಿದವುಗಳ ಉದಯಕ್ಕೆ ಕಟೆಶೆಟ್ಟಿ ಒಳ್ಳೆಯ ದಂಡನಾಯಕ, ಅಂಕಿಶೆಟ್ಟಿ ಬಡಿಯಾಮಶೆಟ್ಟಿ ಮಹಾದೇವಶೆಟ್ಟಿ, ನೇಮಿಶೆಟ್ಟಿ, ಕಮ್ಮಟದ ರಾಮಶೆಟ್ಟಿ, ಭಾನುದೇವ ಹೆಗ್ಗಡೆ ಮುಂತಾದವರು ಕಾರಣ. 16ನೇ ಶತಮಾನದ ಅಂತ್ಯದಲ್ಲಿ ಕೆಲವು ಮಾರವಾಡಿಗಳು ಅಮೃತಶಿಲೆಯ ವಿಗ್ರಹಗಳನ್ನು ಸ್ಥಾಪಿಸಿದರು.

ಜೈನರು ಹಾಗೂ ಜೈನಕಲೆ ಹಾಗೂ ಶಿಲ್ಪಶಾಸ್ತ್ರದ ವಿದ್ಯಾರ್ಥಿಗಳ ಆಸಕ್ತಿಯನ್ನು ಆಕರ್ಷಿಸಿ ಆಸಕ್ತಿಯನ್ನು ಕೆರಳಿಸುತ್ತದೆ. ದೊರೆತಿರುವ ವಿವರಗಳು ಹಾಗೂ ಪೀಠದ ಮೇಲಿನ ಬರಹಗಳು ಮತ್ತಿತರ ರೂಪುರೇಷಗಳ ಆಧಾರದ ಮೇಲೆ ಈ  ಕೆಲವು ವಿಗ್ರಗಳನ್ನು ಗುರುತಿಸಲಾಗಿದೆ.

ಶ್ರವಣಬೆಳಗೊಳದಕ್ಕೆ ತಲುಪುವ ದಾರಿ:

ಬೆಂಗಳೂರಿನಿಂದ ಬರುವವರಿಗೆ:ಬೆಂಗಳೂರಿನಿಂದ ಸದ್ಯಕ್ಕಿರುವುದು ರಸ್ತೆ ಮಾರ್ಗ ಮಾತ್ರ.ಬೆಂಗಳೂರಿನಿಂದ ಹೊರಟು ರಾ. ಹೆ. ೪೮ (N H 48)ಯಲ್ಲಿ ಸಾಗಬೇಕು. ದಾರಿಯಲ್ಲಿ ಸಿಗುವ ಪ್ರಮುಖ ಪಟ್ಟಣಗಳೆಂದರೆ..ನೆಲಮಂಗಲ,ಕುಣಿಗಲ್,ಯಡಿಯೂರು,ಬೆಳ್ಳೂರ್ ಕ್ರಾಸ್,ಕದಬಹಳ್ಳಿ ನಂತರ ಹಿರೀಸಾವೆ. ಹಿರೀಸಾವೆಯಲ್ಲಿ ಎಡಕ್ಕೆ ತಿರುವಿದರೆ ೧೮ ಕಿ ಮೀ ನಂತರ ನೀವು ಶ್ರವಣಬೆಳಗೊಳದಲ್ಲಿ ಇರುತ್ತೀರಿ.

ರಾಜ್ಯ ಸಾರಿಗೆ ಮೂಲಕ ಬರುವಂತವರು ಬೆಂಗಳೂರಿನಿಂದ ಶ್ರವಣಬೆಳಗೊಳಕ್ಕೆ ನೇರ ಬಸ್ ಸಂಪರ್ಕ ತೀರಾ ಕಡಿಮೆ ಇರುವುದರಿಂದ ಹಾಸನ, ಮಂಗಳೂರು ಅಥವಾ ಧರ್ಮಸ್ಥಳಕ್ಕೆ ತೆರಳುವ ಯಾವುದೇ ರಾಜ್ಸ ರಸ್ತೆ ಸಾರಿಗೆ ಬಸ್ಸನ್ನು ಹಿಡಿದು ಚನ್ನರಾಯಪಟ್ಟಣದಲ್ಲಿ ಇಳಿದು, ಅಲ್ಲಿಂದ ೧೨ ಕಿಮೀ ದೂರವಿರುವ ಶ್ರವಣಬೆಳಗೊಳವನ್ನು ತಲುಪಬಹುದು.(ಬೆಂಗಳೂರಿನಿಂದ ಸುಮಾರು ೧೫೦ ಕಿ ಮೀ)

ಮೈಸೂರಿನಿಂದ ಬರುವವರು ಶಿವಮೊಗ್ಗ, ದಾವಣಗೆರೆ ಅಥವಾ ಅರಸೀಕೆರೆ ಕಡೆಗೆ ತೆರಳುವ ಯಾವುದೇ ರಸ್ತೆ ಸಾರಿಗೆ ಬಸ್ಸಿನಲ್ಲಿ ಚನ್ನರಾಯಪಟ್ಟಣಕ್ಕೆ ಬಂದು ಅಲ್ಲಿಂದ ಶ್ರವಣಬೆಳಗೊಳ ತಲುಪಬಹುದು. ಸ್ವಂತ ವಾಹನದಲ್ಲಿ ಬರುವವರು ಮೈಸೂರು- ಚನ್ನರಾಯಪಟ್ಟಣ ಮಾರ್ಗದಲ್ಲಿ ಬರುವ ಕಿಕ್ಕೇರಿಯಲ್ಲಿ ಎಡಕ್ಕೆ ತಿರುಗಿ ನೇರವಾಗಿ ಶ್ರವಣಬೆಳಗೊಳ ತಲುಪಬಹುದು(ಮೈಸೂರಿನಿಂದ ದೂರ ಸುಮಾರು ೧೦೦ ಕಿ ಮೀ.)

ಇದೀಗ ಮಂಗಳೂರಿನಿಂದ ಶ್ರವಣಬೆಳಗೊಳದ ಮುಖಾಂತರ ಬೆಂಗಳೂರನ್ನು ಸಂಪರ್ಕಿಸುವ ರೈಲು ಕಾಮಗಾರಿ ಪ್ರಗತಿಯಲ್ಲಿದ್ದು ಶೀಘ್ರದಲ್ಲಿಯೇ ಮುಕ್ತಾಯಗೊಳ್ಳುವ ವಿಶ್ವಾಸವಿದೆ. ಈಗಾಗಲೇ ಹಾಸನದಿಂದ ಶ್ರವಣಬೆಳಗೊಳವನ್ನು ಸಂಪರ್ಕಿಸುವ ರೈಲು ಮಾರ್ಗ ಮುಕ್ತಾಯಗೊಂಡಿದೆ. ಈ ಕಾಮಗಾರಿಯು ಪೂರ್ಣಗೊಂಡರೆ ಯಾತ್ರಾರ್ಥಿಗಳು ಹೆಚ್ಚು ಸುಲಭವಾಗಿ ಕ್ಷೇತ್ರವನ್ನು ಸಂಪರ್ಕಿಸಬಹುದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top