fbpx
Travel

ಶಿವಗಂಗೆ ಬೆಟ್ಟಕ್ಕೆ ಬನ್ನಿ….

ಬೆಂಗಳೂರಿನ ಒತ್ತಡದ ಬದುಕು ಹಾಗೂ ಟ್ರಾಫಿಕ್ ಸಮಸ್ಯೆಯಿಂದ ಮುಕ್ತಿಯೇ ಇಲ್ಲದವರಿಗೆ ವಾರಾಂತ್ಯದಲ್ಲಿ ಇಲ್ಲಿಂದ ದೂರ ಹೋಗಿ ಕಾಲ ಕಳೆಯುವಂತಹ ಬಯಕೆ. ಒಂದೆರೆಡು ದಿನವಾದರು ಪ್ರಕೃತಿಯ ರಸದೌತಣವನ್ನು ಸವಿಯುವ ಮಹದಾಸೆ ಇದ್ದೆ ಇರುತ್ತದೆ.

ಇಂತಹವರಿಗೆ ಬೆಂಗಳೂರಿನ ಸುತ್ತಮುತ್ತಲೇ ಹಲವಾರು ಸ್ಥಳಗಳು ಇದ್ದು ಸಮಯ ಸಿಕ್ಕಾಗಲೇಲ್ಲ ಹೋಗಿ ಕಾಲ ಕಳೆದ ಬರಬಹುದು. ನಗರದಿಂದ ಕೇವಲ 50 ಕೀ.ಮಿ ದೂರವಿರುವ ಶಿವಗಂಗೆ ಬೆಟ್ಟಕ್ಕೆ ಎನ್‍ಹೆಚ್ 4ನೇ ಹೆದ್ದಾರಿಯಲ್ಲಿ ತುಮಕೂರಿನೆಡೆ ಹೋಗುವಾಗ ಸಿಗುವಂತಹ ರಮಣೀಯವಾದ ತಾಣ. ನಗರದಿಂದ ಮೈಲುಗಟ್ಟಲೆ ದೂರದಲ್ಲಿರುವ ಈ ಸ್ಥಳ ನಾನಾ ವಿಶೇಷತೆಗಳನ್ನು ಹೊಂದಿದೆ. ಅಲ್ಲಿರುವ ಕೋಟೆ, ದೇವಸ್ಥಾನ ಹಾಗೂ ಬೃಹತ್ ಕಲ್ಲುಬಂಡೆಗಳು ನೋಡುಗನನ್ನು ಸೆಳೆಯದೇ ಇರಲಾರವು. ಇಂತಹ ಸ್ಥಳಗಳು ತುಂಬಾ ಅಪರೂಪವಾಗಿವೆ.

shivagange

ಸಮುದ್ರಮಟ್ಟಕ್ಕಿಂತ ಸುಮಾರು 4599 ಅಡಿ ಎತ್ತರದಲ್ಲಿರುವ ಶಿವಗಂಗೆ ಪ್ರಕೃತಿಯ ಸುಂದರ ಸೊಬಗಿನಿಂದ ಕಂಗೊಳಿಸುತ್ತಾ ಪ್ರವಾಸಿಗರನ್ನು ಸದಾ ಕೈಬಿಸಿ ಕರೆಯುತ್ತಿರುತ್ತದೆ. ಬೆಟ್ಟ ಹತ್ತುವಾಗ ದಾರಿಯಲ್ಲಿಯೇ ಶಿವನ ದೇವಸ್ಥಾನವಿದ್ದು, ಬೆಟ್ಟದ ತುದಿಯಲ್ಲಿ ಗಂಗಾಧರೇಶ್ವರಸ್ವಾಮಿ ದೇವಸ್ಥಾನವಿದೆ.

ಬೆಟ್ಟದ ಉತ್ತರದ ಕಡೆಯಿಂದ ನಿಂತು ನೋಡಿದರೆ ಇಡೀ ಬೆಟ್ಟ ನಂದಿಯ ಆಕಾರದಲ್ಲಿರುವುದು ಕಂಡುಬರುತ್ತದೆ. ದೂರದಿಂದ ನಿಂತ ಚಿತ್ರಗಳನ್ನು ತೆಗೆದರೆ ಇದು ಸ್ಪಷ್ಟವಾಗಿ ಗೋಚರಿಸುತ್ತದೆ. ಪಶ್ಚಿಮದಿಂದ ನೋಡಿದರೆ ಗಣೇಶನ ಆಕಾರ ಕಂಡುಬರುತ್ತದೆ. ದಕ್ಷಿಣದಲ್ಲಿ ನಿಂತು ನೋಡಿದರೆ ಶಿವಲಿಂಗುವಿನ ಆಕಾರದಲ್ಲಿದ್ದು, ಉತ್ತರದ ಕಡೆನಿಂತ ನೋಡಿದರೆ ಹೆಡೆ ಬಿಚ್ಚಿರುವ ನಾಗರಹಾವಿನ ಆಕಾರದಲ್ಲಿ ಕಂಡುಬರುವುದೇ ಈ ಬೆಟ್ಟದ ವಿಶೇಷತೆಯಾಗಿದೆ.

dsc08822_1

18ನೇ ಶತಮಾನದಲ್ಲಿ ನಿರ್ಮಾಣವಾಗಿದೆ ಎಂಬ ಪ್ರತೀಕ ಹೊಂದಿರುವ ಗಂಗಾಧರೇಶ್ವರ ದೇವಸ್ಥಾನವು ಅತ್ಯಂತ ಆಕರ್ಷಣಿಯವಾಗಿದ್ದು ಅಲ್ಲಿನ ಗುಹೆಗಳು ಕೂತುಹಲ ಮೂಡಿಸುತ್ತವೆ. ಅಲ್ಲಿರುವ ಶಿವನ ಬಳಿ ಇರುವ ಪಾತಾಳಗಂಗೆಯಲ್ಲಿ ಸಿಗುವ ಅತ್ಯಂತ ಶುದ್ಧವಾಗಿದೆ. ಈ ಪವಿತ್ರವಾದ ನೀರನ್ನು ತೀರ್ಥದ ಹಾಗೇ ಸೇವಿಸಿದರೆ ಎಲ್ಲ ಕಾಯಿಲೆಗಳು ದೂರವಾಗವವು ಎಂಬ ನಂಬಿಕೆ ಭಕ್ತಾಧಿಗಳಲ್ಲಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top