fbpx
Karnataka

ಪಬ್ಲಿಕ್ ಮತ್ತು ಯಶ್ ಮದ್ಯೆ ಗುದ್ದಾಟ…

ನಿನ್ನೆ ಯಶ್ ಮತ್ತೊಂದು ವಿಡಿಯೋ ಮಾಡಿದ್ದು ಅದು ಕೂಡ ಸಂದೇಶ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ. ಸಿನಿಮಾ ನಟರು ಸಿನಿಮಾದಲ್ಲಿ ಮಾತ್ರ ಡೈಲಾಗ್ ಹೊಡೆದು ರೈತರ ಪರ ಎಂದು ಹೇಳುತ್ತಾರೆ. ನಿಜವಾದ ಕಾಳಜಿ ಇದ್ದರೆ ಅವರು ರೈತರಿಗಾಗಿ ಹೋರಾಟ ಮಾಡಲಿ ಎಂದು ಮಾಧ್ಯಮ ಯಶ್ ಅವರಿಗೆ ಸವಾಲು ಹಾಕಿತ್ತು.

ಈ ಸವಾಲನ್ನು ಸ್ವೀಕರಿಸಿದ ಯಶ್ ಮಂಗಳವಾರ ಫೇಸ್‍ಬುಕ್‍ನಲ್ಲಿ ನನ್ನ ಮಾತಿಗೆ ನಾನು ಬದ್ಧ ಎಂದು ಹೇಳಿ ವಿಡಿಯೊ ಸಂದೇಶವೊಂದನ್ನು ಪೋಸ್ಟ್ ಮಾಡಿದ್ದರು, ಅದಕ್ಕೆ ಪ್ರತಿಯಾಗಿ ಪಬ್ಲಿಕ್ ಟಿವಿ ಮತ್ತು ಪ್ರಜಾ ಟಿವಿ ಪ್ರೈಮ್ ಟೈಮ್ ಕೊಡುವುದಾಗಿ ಹೇಳಿಕೊಂಡಿದ್ದವು, ಅದಕ್ಕೆ ಪ್ರತಿಯಾಗಿ ಮತ್ತೊಂದು ವಿಡಿಯೋ ಮಾಡಿರುವ ಯಶ್ ಪ್ರತಿಯೊಂದು ನ್ಯೂಸ್ ಚಾನೆಲ್ ಗಳಿಗೂ ಹೋಗಲು ನಾನು ಸಿದ್ದ, ಅದರ ಬದಲು ಇಲ್ಲ ಚಾನ್ನೆಲ್ಗಳ ಪ್ರತಿನಿಧಿಗಳು ಒಟ್ಟಿಗೆ ಒಂದೇ ಕಡೆ ಸೇರೋಣ, ರೈತರ ಸಮಸ್ಯೆಗಳನ್ನು ಚರ್ಚಿಸೋಣ ಎಂದಿದ್ದಾರೆ.

ಕರ್ನಾಟಕ ಮತ್ತು ತಮಿಳುನಾಡು ನಡುವೆ ಕಾವೇರಿ ನದಿ ನೀರು ಹಂಚಿಕೆಯಿಂದಾಗಿ ರಾಜ್ಯಕ್ಕೆ ರಾಜ್ಯವೇ ಹೊತ್ತಿ ಉರಿಯುತ್ತಿರುವಾಗ ರಾಕಿಂಗ್ ಸ್ಟಾರ್ ಯಶ್ ಮಾತ್ರ ಅಮೆರಿಕಾದಲ್ಲಿದ್ದರು. ಅವರಿಗೆ ರಾಜ್ಯದ ರೈತರ ಬಗ್ಗೆ ಕಾಳಜಿ ಇಲ್ಲವೆ? ಎಂದು ಸುದ್ದಿ ಮಾಧ್ಯಮವೊಂದು ಟೀಕೆ ಮಾಡಿತ್ತು.

ನನ್ನನ್ನು ಪ್ರಶ್ನಿಸಿದ ಮಾಧ್ಯಮಕ್ಕೆ ನಾನೂ ಒಂದು ಚಾಲೆಂಜ್ ಮಾಡುತ್ತೇನೆ. ಎಲ್ಲಾ ಚಾನ್ನೆಲ್ಗಳು ಸೇರಿ ಪ್ರೈಮ್ ಟೈಮ್ ನಲ್ಲಿ ಒಂದೇ ಕಾರ್ಯಕ್ರಮ ಮಾಡಿ ಕೇವಲ ರೈತರಿಗೆ ಸಂಬಂಧಪಟ್ಟ ಕಾರ್ಯಕ್ರಮಗಳನ್ನು ಮಾಡುವುದಾದರೆ ಅದರಲ್ಲಿ ನಾನು ಉಚಿತವಾಗಿ ಭಾಗವಹಿಸುತ್ತೇನೆ. ಕಾವೇರಿ ಗಲಾಟೆಗಳ ಸಂದರ್ಭದಲ್ಲಿ ನಾನು ಅಮೆರಿಕಾದಲ್ಲಿದ್ದೆ, ನನಗೆ ಜವಾಬ್ದಾರಿ ಇಲ್ಲ ಎಂದು ಮಾಧ್ಯಮ ಟೀಕಿಸಿದೆ. ಅಷ್ಟೇ ಅಲ್ಲ ರೈತರಿಗಾಗಿ ಹೋರಾಟ ಮಾಡಿ ಎಂದು ಮಾಧ್ಯಮ ನನಗೆ ಸವಾಲು ಹಾಕಿತ್ತು. ಇದೀಗ ನಾನು ಆ ಸವಾಲನ್ನು ಸ್ವೀಕರಿಸಿದ್ದೇನೆ.

ರೈತಾಪಿ ಕುಟುಂಬದಿಂದ ಬಂದವನಾಗಿದ್ದರಿಂದ ನನಗೆ ರೈತರ ಕಷ್ಟಗಳು ಗೊತ್ತು, ಪ್ರತಿಭಟನೆ ಮಾಡಿದರಷ್ಟೇ ನಾವು ರೈತರ ಪರ ಎಂಬ ಮಾತು ತಪ್ಪು. ಪ್ರತಿಭಟನೆಯಲ್ಲಿ ಭಾಗವಹಿಸಿ, ಘೋಷಣೆ ಕೂಗಿದ ತಕ್ಷಣ ನಮ್ಮ ಕೆಲಸ ಮುಗಿಯುವುದಿಲ್ಲ. ರೈತರ ಸಮಸ್ಯೆ ಸಾಕಷ್ಟಿದೆ, ಅವರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳೋಣ; ಅವರಿಗಾಗಿ ಕಾರ್ಯಕ್ರಮವನ್ನು ಮಾಡೋಣ ಹಾಗೂ ಯಾವಾಗ ಕರೆದರೂ ಕಾರ್ಯಕ್ರಮ ಮಾಡಲು ನಾನು ಸಿದ್ಧನಿದ್ದೇನೆ. ನೀವು ರೆಡಿ ಇದ್ದೀರಾ? ಎಂದು ಯಶ್ ಪ್ರಶ್ನೆ ಹಾಕಿದ್ದಾರೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top