fbpx
Achivers

ಕನ್ನಡ ಚಿತ್ರರಂಗದ ಶ್ರೇಷ್ಠ ನಿರ್ದೇಶಕ ಗಿರೀಶ್ ಕಾಸರವಳ್ಳಿ

ಕನ್ನಡ ಚಿತ್ರರಂಗದ ಶ್ರೇಷ್ಠ ನಿರ್ದೇಶಕರಲ್ಲಿ ಒಬ್ಬರಾದ ಗಿರೀಶ್‍ಕಾಸರವಳ್ಳಿಯವರ ಹೆಸರು ಕೇಳದವರಾರು? ಗಿರೀಶ್ ಕಾಸರವಳ್ಳಿ ಸಿನಿಮಾ ಮಾಡಿದ್ದಾರೆಂದರೆ ಅದಕ್ಕೆ ಪ್ರಶಸ್ತಿ ಬಂದೇ ಬರುತ್ತದೆ ಎಂಬ ಖಾತರಿ ಇರುತ್ತದೆ. ಇವರು ನಿರ್ದೇಶಿಸಿದ ನಾಲ್ಕು ಚಿತ್ರಗಳು ಶ್ರೇಷ್ಠ ಚಿತ್ರವೆಂಬ ರಾಷ್ಟ್ರೀಯ ಪ್ರಶಸ್ತಿ ಪಡೆದಿವೆ. 1977ರಲ್ಲಿ ಘಟಶ್ರಾದ್ಧ, 1986ರಲ್ಲಿ ತಬರನ ಕಥೆ, 1997ರಲ್ಲಿ ತಾಯಿ ಸಾಹೇಬ ಹಾಗೂ 2011ರಲ್ಲಿ ದ್ವೀಪ ಚಿತ್ರಗಳು ಶ್ರೇಷ್ಠ ಚಿತ್ರಗಳೆಂಬ ಪ್ರಶಸ್ತಿಗೆ ಪಾತ್ರವಾಗಿವೆ.

ಗಿರೀಶ್ ಕಾಸರವಳ್ಳಿಯವರು ನಿರ್ದೇಶಿಸಿದ ಹಲವು ಚಿತ್ರಗಳು ಹಲವಾರು ರಾಜ್ಯಪ್ರಶಸ್ತಿಗಳನ್ನೂ ಗಳಿಸಿವೆ. ಚಿತ್ರಗಳಿಗಷ್ಟೇ ಅಲ್ಲದೆ ಕಾಸರವಳ್ಳಿಯವರು ಕೂಡ ಶ್ರೇಷ್ಠ ನಿರ್ದೇಶಕ ಪ್ರಶಸ್ತಿಯನ್ನೂ ಗಳಿಸಿದ್ದಾರೆ. ಉತ್ತಮ ಚಿತ್ರಕಥೆ, ಅಭಿನಯ ಮುಂತಾದ ಹಲವಾರು ವಿಭಾಗಗಳಲ್ಲಿ ಕಾಸರವಳ್ಳಿಯವರ ನಿರ್ದೇಶನದ ಚಿತ್ರಗಳು ಪ್ರಶಸ್ತಿ ಪಡೆದುಕೊಂಡಿವೆ.

ಪುಣೆಯ ಫಿಲ್ಮ್ ಮತ್ತು ಟೆಲಿವಿಷನ್ ಇನ್‍ಸ್ಟಿಟ್ಯೂಟ್‍ನ ಡಿಪ್ಲೊಮದಲ್ಲಿ ಸ್ವರ್ಣಪದಕ ಪಡೆದ ಗಿರೀಶ್, ತಮ್ಮ ವಿದ್ಯಾರ್ಥಿದೆಸೆಯಲ್ಲಿ ನಿರ್ದೇಶಿಸಿದ `ಅವಶೇಷ’ ಚಿತ್ರವು ಉತ್ತಮ ವಿದ್ಯಾರ್ಥಿ ಚಿತ್ರ ಹಾಗೂ ಕಿರುಚಿತ್ರದ ವಿಭಾಗದಲ್ಲಿ ರಾಷ್ಟ್ರೀಯ ಪ್ರಶಸ್ತಿ ಪಡೆದಿತ್ತು. ಅವರು ಈವರೆಗೆ ಹದಿಮೂರು ರಾಷ್ಟ್ರಪ್ರಶಸ್ತಿಗಳನ್ನು ಪಡೆದಿದ್ದಾರೆ. ಜೊತೆಗೆ ಭಾರತ ಸರ್ಕಾರ ನೀಡುವ ದೇಶದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿ `ಪದ್ಮಶ್ರೀ’ ಕೂಡ ಇವರಿಗೆ ಸಂದಿದೆ.

ಚಿತ್ರನಿರ್ದೇಶದಲ್ಲಿ ವಿಶೇಷ ಪರಿಣಿತಿಗಾಗಿ ಪುಣೆಯ ಫಿಲ್ಮ್ ಇನ್‍ಸ್ಟಿಟ್ಯೂಟ್‍ನಲ್ಲಿ ಡಿಪ್ಲೊಮೊ ಪಡೆದ ಗಿರೀಶ್ ಕಾಸರವಳ್ಳಿ ಜೀವನಕ್ಕೆ ತೀರ ಹತ್ತಿರವಾದ ಸಿನಿಮಾಗಳನ್ನು ಮಾಡುತ್ತಾರೆ. ಸ್ವತಂತ್ರವಾಗಿ ನಿರ್ದೇಶಿಸಿದ ಪ್ರಥಮ ಚಿತ್ರ `ಘಟಶ್ರಾದ್ಧ’ ಚಿತ್ರಕ್ಕೆ ಸ್ವರ್ಣಕಮಲ ಪ್ರಶಸ್ತಿ ದೊರೆಯಿತು. ಇದಕ್ಕೂ ಮುಂಚೆ ಅಂತಿಮ ವರ್ಷದ ಡಿಪ್ಲೊಮೊ ಓದುತ್ತಿದ್ದಾಗಲೇ ಖ್ಯಾತನಿರ್ದೇಶಕ ಬಿ.ವಿ.ಕಾರಂತರಗೆ `ಚೋಮನ ದುಡಿ’ ಚಿತ್ರದಲ್ಲಿ ಸಹನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದರು. ನುರಿತ ನಿರ್ದೇಶಕರ ಜೊತೆ ಕೆಲಸ ಮಾಡಿದ ಅನುಭವ ಹಾಗೂ ಅವರ ಆಸಕ್ತಿ, ಕಠಿಣ ಪರಿಶ್ರಮ ಗಿರೀಶ್ ಕಾಸರವಳ್ಳಿಯವರನ್ನು ಉತ್ತಮ ಹಾಗೂ ಪ್ರಶಸ್ತಿಪಡೆಯುವ ನಿರ್ದೇಶಕರನ್ನಾಗಿ ರೂಪಿಸಿದವು.

ಇಷ್ಟೇ ಅಲ್ಲದೆ ಕಾಸರವಳ್ಳಿಯವರು ಹಲವಾರು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನೂ ಗಳಿಸಿದ್ದಾರೆ. ಬೆಂಗಳೂರಿನ ಫಿಲ್ಮ್ ಇನ್‍ಸ್ಟಿಟ್ಯೂಟ್ ಒಂದರಲ್ಲಿ ಪ್ರಾಂಶುಪಾಲರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಕನ್ನಡದ ಅತ್ಯುತ್ತಮ ಕಾದಂಬರಿಗಳನ್ನು ಆರಿಸಿ ಸಿನಿಮಾ ತಯಾರಿಸಿದ ಹೆಗ್ಗಳಿಕೆಗೆ ಪಾತ್ರರಾದ ಕಾಸರವಳ್ಳಿಯವರು ಪ್ರಖ್ಯಾತ ಕಾದಂಬರಿಕಾರ ಎಸ್.ಎಲ್.ಭೈರಪ್ಪ, ವೈದೇಹಿ ಅವರ ಕಾದಂಬರಿಗಳನ್ನೂ ಸಿನಿಮಾ ಮಾಡಿದ್ದಾರೆ.

ಕರ್ನಾಟಕದಾದ್ಯಂತ ಮನೆಮಾತದ ಪ್ರಖ್ಯಾತ ಧಾರಾವಾಹಿ `ಗೃಹಭಂಗ’ದ ನಿರ್ದೇಶಕರು ಗಿರೀಶ್ ಕಾಸರವಳ್ಳಿಯವರೇ. ಇದರ ಕರ್ತೃ ಖ್ಯಾತ ಲೇಖಕ ಎಸ್.ಎಲ್.ಭೈರಪ್ಪನವರು. ಈ ಕೃತಿಯನ್ನು ಧಾರಾವಾಹಿಯ ರೂಪದಲ್ಲಿ ಮನೆಮನೆಗೂ ತಲುಪಿಸಿದ ಕಾಸರವಳ್ಳಿಯವರು ಟಿ.ವಿ. ವೀಕ್ಷಕರಿಗೂ ಅಚ್ಚುಮೆಚ್ಚಿನವರಾಗಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top