fbpx
Travel

‘ಭಾರತದ ಭೂಪಟ’ದಂತೆ ಕಾಣುವ ಈ ಜಲಾಶಯ ಆಕರ್ಷಣೆಯ ಪ್ರವಾಸಿ ತಾಣ

ಇದು ಭಾರತದ ಪ್ರಮುಖ ನದಿಗಳಲ್ಲಿ ಒಂದು. ಪೂರ್ವ ಸಹ್ಯಾದ್ರಿ ಘಟ್ಟಗಳಲ್ಲಿ  ವೇದ ಮತ್ತು ಅವತಿ ಎಂಬ ಎರೆಡು ನದಿಗಳು ಹುಟ್ಟುತ್ತವೆ ಮುಂದೆ ಪೂರ್ವ ಮುಖವಾಗಿ ಹರಿದು ಪುರ ಎಂಬ ಹತ್ತಿರ ವೇದವತಿಯಾಗಿ ಹರಿಯುತ್ತದೆ. ನಂತರ ಹಿರಿಯೂರಿನ ಕೂಡಲಹಳ್ಳಿ ಎಂಬಲ್ಲಿ ಸುವರ್ಣಮುಖಿ ಎಂಬ ಉಪನದಿ ವೇದವತಿಗೆ ಸೇರುತ್ತದೆ. ನಂತರ ಅದು ಹಿರಿಯೂರಿನ ಮೂಲಕ ಆಂದ್ರಪ್ರದೇಶದ ಕಡೆಗೆ ಹರಿದು ತುಂಗಾಭದ್ರಾ ನದಿ ಸೇರುತ್ತದೆ.

%e0%b2%b5%e0%b2%be%e0%b2%a3%e0%b2%bf%e0%b2%b5%e0%b2%bf%e0%b2%b2%e0%b2%be%e0%b2%b8%e0%b2%b8%e0%b2%be%e0%b2%97%e0%b2%b0-%e0%b2%9c%e0%b2%b2%e0%b2%be%e0%b2%b6%e0%b2%af4

ವಾಣಿ ವಿಲಾಸ ಸಾಗರ ಕರ್ನಾಟಕದ ಹಳೆಯ ಅಣೆಕಟ್ಟುಗಳಲ್ಲಿ ಒಂದು. ವೇದಾವತಿ ನದಿಗೆ ಅಡ್ಡಲಾಗಿ, ‘ಮಾರಿಕಣಿವೆ’ ಎಂಬಲ್ಲಿ ಕಟ್ಟಲಾಗಿರುವ ಈ ಅಣೇಕಟ್ಟು ಹಿರಿಯೂರಿನಿಂದ ಸುಮಾರು ೨೦ ಕಿ .ಮೀ. ದೂರದಲ್ಲಿದೆ. ಇದರ ಎತ್ತರ ೫೦ ಮೀ, ಉದ್ದ ೪೦೫ ಮೀಟರ್ ಗಳು. ೧೩೫ ಅಡಿಗಳವರೆಗೆ ನೀರನ್ನು ಸಂಗ್ರಹಿಸಬಹುದಾಗಿದೆ. ಹಿರಿಯೂರು ತಾಲ್ಲೂಕಿನ ಸುಮಾರು ೧/೩ ರಷ್ಟು (ಸುಮಾರು ೧೦,೦೦೦ ಹೆಕ್ಟೇರ್ ಪ್ರದೇಶ) ನೆಲಕ್ಕೆ ನೀರುಣಿಸುವುದಲ್ಲದೆ ಹಿರಿಯೂರು ಮತ್ತು ಚಿತ್ರದುರ್ಗ ನಗರಗಳಿಗೆ ಕುಡಿಯುವ ನೀರನ್ನೂ ಒದಗಿಸುತ್ತದೆ. ಸಿಮೆಂಟ್ ಉಪಯೋಗವಿಲ್ಲದೆ ಕೇವಲ ಗಾರೆಯಿಂದಲೇ ಇದನ್ನು ಕಟ್ಟಲಾಗಿದೆ. ಒಂದು ಬದಿಯಿಂದ ನೋಡಿದಾಗ, ‘ಭಾರತದ ಭೂಪಟ’ವನ್ನು ನಾವು ಕಾಣಬಹುದಾಗಿದೆ.

%e0%b2%b5%e0%b2%be%e0%b2%a3%e0%b2%bf%e0%b2%b5%e0%b2%bf%e0%b2%b2%e0%b2%be%e0%b2%b8%e0%b2%b8%e0%b2%be%e0%b2%97%e0%b2%b0-%e0%b2%9c%e0%b2%b2%e0%b2%be%e0%b2%b6%e0%b2%af3

ಸನ್, ೨೦೧೦ ಮಳೆ, ‘ವಾಣಿವಿಲಾಸ ಸಾಗರ’ನೀರಿನಮಟ್ಟ ಹೆಚ್ಚಿಸಿದೆ

ಸನ್, ೨೦೧೦ ರ ಮಳೆ ಜಲಾಶಯಕ್ಕೆ ಭರ್ಜರಿ ನೀರು ಒದಗಿಸಿದೆ. ಯಾವಾಗಲೂ ‘ಚಿತ್ರದುರ್ಗ’ ಮತ್ತು ಸುತ್ತಮುತ್ತಲ ಜಿಲ್ಲೆಗಳು ನೀರಿನ ಅಭಾವಕ್ಕೆ ಒಳಗಾಗಿರುವುದು ಸರ್ಕಾರದ ಗಮನಕ್ಕೆ ಬಂದಿದ್ದು, ಹಲವಾರು ವರ್ಷಗಳು ಈ ಭೂಭಾಗಗಳು ‘ಬರಗಾಲ ಪ್ರದೇಶ’ ಗಳೆಂದು ಘೋಷಣೆಮಾಡಿರುವ ಸನ್ನಿವೇಷಗಳು ಹಲವುಬಾರಿ.

%e0%b2%95%e0%b2%a3%e0%b2%bf%e0%b2%b5%e0%b3%86

ಹಲವಾರು ವರದಿಗಳ ಪ್ರಕಾರ, ಈಗ ೧೦ ವರ್ಷಗಳ ನಂತರ ಜಲಾಶಯದ ನೀರಿನ ಮಟ್ಟ ೧೦೦ ಅಡಿ ಗಡಿ ದಾಟಿದೆ. ಒಟ್ಟು ಇದರ ಸಾಮರ್ಥ್ಯ, ೧೩೩ ಅಡಿಗಳು. ಈ ‘ಮುಂಗಾರು ಹಂಗಾಮಿ’ನಲ್ಲಿ ೩೩ ಅಡಿ ನೀರು, ಸಂಗ್ರಹವಾಗಿದೆ. ಇಂದಿನ ಅಚ್ಚುಕಟ್ಟು ಪ್ರದೇಶದ ‘ತೆಂಗು’, ‘ಅಡಕೆ’, ‘ಮಾವು’ ಮುಂತಾದ ದೀರ್ಘಾವಧಿ ಬೆಳೆಗಳು ಮುಂದಿನ ೩-೪ ವರ್ಷಗಳವರೆಗೆ ಅನುಕೂಲವಾಗಲಿದೆ.

ಆಕರ್ಷಣೆಯ ಯಾತ್ರಾ ಸ್ಥಳವಾಗಿ ಮಾರಿಕಣಿವೆ

ವಿವಿ ಸಾಗರ ಆಣೆಕಟ್ಟು ಒಂದು ಶತಮಾನದಿಂದ ಒಂದು ಆಕರ್ಷಣೆಯ ಯಾತ್ರಾ ಸ್ಥಳವಾಗಿ ಮುಂದುವರೆದಿದೆ. ಇಲ್ಲಿ ಪ್ರಾಚೀನ ಭಾರತೀಯ ಔಷಧೀಯ ಸಸ್ಯಗಳ ಉದ್ಯಾನ ವನ್ನು ಇಲ್ಲಿ ಮಾಡಲಾಗಿದೆ. ಅರಣ್ಯ ಇಲಾಖೆಯು ಕೈಗೊಂಡ ಕಾಡು ವರ್ಧನೆಯ ಕೆಲಸಕ್ಕೆ ಪಂಚವಟಿ ಉದ್ಯಾನವನ ಗಳನ್ನು ತೆರೆದಿರುವುದು. ನೆರೆ ಅರಣ್ಯದ ಪುನರುತ್ತಾನಕ್ಕೆ ಆಧ್ಯತೆ, ವಾರಾಂತ್ಯದಲ್ಲಿ ಗೇಟ್ ವೇ ಸ್ಥಳ. ಪಂಚವಟಿ ಗಾರ್ಡನ್ ಔಷಧೀಯ ಸಸ್ಯಗಳು. ಸಾಂಸ್ಕೃತಿಕ ವಿಷಯಗಳನ್ನು ಪ್ರತಿಬಿಂಬಿಸುವ ಕಣಿವೆ ಮಾರಮ್ಮ ಗುಡಿ, ಮತ್ತು ಅದರ ಉತ್ಸವ. ಇಲ್ಲಿಗೆ ಭೇಟಿ ನೀಡಿರುವವರ ಸಂಖ್ಯೆಯನ್ನು ಹೆಚ್ಚಿಸಿವೆ.

%e0%b2%95%e0%b2%a3%e0%b2%bf%e0%b2%b5%e0%b3%86-%e0%b2%ae%e0%b2%be%e0%b2%b0%e0%b2%ae%e0%b3%8d%e0%b2%ae-%e0%b2%a6%e0%b3%87%e0%b2%b5%e0%b2%b8%e0%b3%8d%e0%b2%a4%e0%b2%be%e0%b2%a8

ಕಣಿವೆ ಮಾರಮ್ಮ ದೇವಸ್ತಾನ

ಈ ಐತಿಹಾಸಿಕ ಗುಡಿಯು 14-15 ಶತಮಾನದ ವಿಜಯನಗರ ಆಳ್ವಿಕೆಯ ಕಾಲದಲ್ಲಿ ಆಗಿದ್ದು ಎಂದು ಹೇಳಲಾಗುತ್ತದೆ. ಈ ಗುಡಿಯ  ಪ್ರಭಾವದಿಂದಲೇ ಇರಬೇಕು, ಹೆಸರು ವಾಣಿ ವಿಲಾಸ ಸಾಗರ ಆದರೂ ಅಲ್ಲಿನ ಜನ ಮಾರಿಕಣಿವೆ ಎಂದೇ ಹೇಳುತ್ತಾರೆ. ಇಲ್ಲಿ ಪದ್ಮಾಸನ ಹಾಕಿ ಕುಳಿತಿರುವ ಕಣಿವೆ ಮಾರಮ್ಮ ದೇವಿಯನ್ನು ನೋಡಬಹುದು, ಅಕ್ಕ ಪಕ್ಕದಲ್ಲಿ ಆಕೆಯ ತಂಗಿಯಂದಿರು ಇದ್ದು ಅವುಗಳನ್ನು ಪೂಜಿಸಲಾಗುತ್ತದೆ. ಇವಲ್ಲದೆ ಅಲ್ಲಿ ಇನ್ನು ಕೆಲವು ದೇವರುಗಳನ್ನು ಕಾಣಬಹುದು.ಉದಾ-ಈಶ್ವರ, ಹನುಮಂತ, ನಾಗಪ್ಪ, ಹಲವು. ದಿನದಲ್ಲಿ ಬೆಳಿಗ್ಗೆ ,ಮದ್ಯಾನ್ನ ,ಸಾಯಂಕಾಲ,ರಾತ್ರಿ ಹೀಗೆ ನಾಲ್ಕು ಬಾರಿ ಪೂಜೆ ನಡೆಯುತ್ತದೆ.ನವರಾತ್ರಿ ಪೂಜೆ ಯನ್ನು ತುಂಬಾ ವಿಶಿಸ್ತವಾಗಿ ಆಚರಿಸುತ್ತಾರೆ. ವರ್ಷಕ್ಕೊಮ್ಮೆ ಮಾರ್ಚ್ ತಿಂಗಳಲ್ಲಿ ರಥೋತ್ಸವ ನಡೆಯುತ್ತದೆ. ಕರ್ನಾಟಕ ಜನ ಮತ್ತು ಅಂದ್ರ ಪ್ರದೇಶದ ಕೆಲವು ಭಾಗಗಳ ಜನರು ಈ ಜಾತ್ರೆಯಲ್ಲಿ ಸೇರುತ್ತಾರೆ. ಕೆಲವು ಕುಟುಂಬಗಳಿಗೆ ಈ ಕಣಿವೆ ಮಾರಮ್ಮ ಕುಲ ದೇವತೆಯು ಹೌದು. ಈ ಕುಟುಂಬಗಳ ಜನರು ಪಕ್ಕದಲ್ಲೇ ಇರುವ ವೇದಾವತಿ ನದಿಗೆ ವರ್ಷಕ್ಕೊಮ್ಮೆಯಾದರೂ ಇಲ್ಲಿ ಗಂಗಮ್ಮ ಪೂಜೆ ಮಾಡುತ್ತಾರೆ .ಇಲ್ಲವೇ ವಿಶೇಷ ಸಂದರ್ಭಗಳಲ್ಲಿ, ಮದುವೆ, ಮುಂಜಿ, ಮೈ ನೆರೆದ ಹೆಣ್ಣುಮಕ್ಕಳಿಗೆ ಸೂತಕ ತೆಗೆಯಲು, ಹಬ್ಬ-ಹರಿದಿನಗಳಲ್ಲಿ ,ಮದುವೆಯಾದ ನವ ದಂಪತಿಗಳು ಮೊದಲ ಭೇಟಿಯಲ್ಲಿ ಇಲ್ಲಿ ಗಂಗಮ್ಮ ಪೂಜೆ ಮಾಡುತ್ತಾರೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top