ಮಡಿಕೇರಿ: ಬ್ರಿಟೀಷ್ ಬಾರ್ಬರ್ಸ್ ಅಸೋಸಿಯೇಷನ್ ದುಬೈನಲ್ಲಿ ಆಯೋಜಿಸಿದ ದುಬೈನ ಉತ್ತಮ ಕೇಶ ವಿನ್ಯಾಸಕ ಸ್ಪರ್ಧೆಯಲ್ಲಿ ಹಲವರು ಭಾಗವಹಿಸಿದ್ದು ಅವರ ಪೈಕಿ ಅಂತಿಮ ಹಂತಕ್ಕೆ ನಾಲ್ಕು ಮಂದಿ ಸ್ಪರ್ಧಿಗಳು ಪ್ರವೇಶಿಸಿದರು. ಕೊನೆಯ ಹಂತದ ಈ ಸ್ಪರ್ಧೆಯಲ್ಲಿ ಕೊಡಗಿನ ಹುಡುಗ ದುಬೈ ಕೇಶವಿನ್ಯಾಸ ಸ್ಪರ್ಧೆಯಲ್ಲಿ ಮೊದಲ ಸ್ಥಾನ ಗಳಿಸಿದ್ದಾರೆ.
ಅಂತಾರಾಷ್ಟ್ರೀಯ ಮಟ್ಟದ ಲ್ಲಿ ಭಾಗವಹಿಸಿ ಪ್ರಥಮಸ್ಥಾನ ಗಳಿಸಿದವರೇ ಕೊಡಗಿನ ಸುಂಟಿಕೊಪ್ಪದ ನಿವಾಸಿ ಸುನಿಲ್ ಭಾಸ್ಕರ. ಕೇಶ ವಿನ್ಯಾಸದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆಯುವುದರೊಂದಿಗೆ ಎಲ್ಲರ ಗಮನಸೆಳೆದಿದ್ದಾರೆ.
ಇವರು ಬ್ರಿಟೀಷ್ ಬಾರ್‍ಬಾರ್ಸ್ ಅಸೋಸಿಯೇಷನ್ ವತಿಯಿಂದ ಯುಎಇ(ದುಬೈ)ನಲ್ಲಿ ಇತ್ತೀಚೆಗೆ ನಡೆದ ಕೇಶ ವಿನ್ಯಾಸ ಸ್ಪರ್ಧೆಯಲ್ಲಿ ಭಾಗವಹಿಸಿ ದುಬೈನ ಕೇಶವಿನ್ಯಾಸಕರನ್ನು ಹಿಂದಿಕ್ಕಿ ಬಹುಮಾನಕ್ಕೆ ಪಾತ್ರರಾಗಿದ್ದಾರೆ.
ಬ್ರಿಟೀಷ್ ಬಾರ್ಬರ್ಸ್ ಅಸೋಸಿಯೇಷನ್ ದುಬೈನಲ್ಲಿ ಆಯೋಜಿಸಿದ ದುಬೈನ ಉತ್ತಮ ಕೇಶ ವಿನ್ಯಾಸಕ ಸ್ಪರ್ಧೆಯಲ್ಲಿ ಹಲವರು ಭಾಗವಹಿಸಿದ್ದು ಅವರ ಪೈಕಿ ಅಂತಿಮ ಹಂತಕ್ಕೆ ನಾಲ್ಕು ಮಂದಿ ಸ್ಪರ್ಧಿಗಳು ಪ್ರವೇಶಿಸಿದರು.
ಬಾಕ್ಸಿಂಗ್ ರಿಂಗ್‍ನಲ್ಲಿ ಸ್ಪರ್ಧೆಯನ್ನು ನಡೆಸಲಾಗಿದ್ದು, 45 ನಿಮಿಷದಲ್ಲಿ ಸ್ಪೀಡ್, ಟೆಕ್ನಿಕ್, ಫಿನಿಶಿಂಗ್, ಟ್ರಂಡ್ ಆಧಾರದ ಮೇಲೆ ಭಾಸ್ಕರ್ ಅವರು ಪ್ರಶಸ್ತಿ ತನ್ನದಾಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಆ ಮೂಲಕ ಹುಟ್ಟೂರು ಕೊಡಗಿಗೂ ಹೆಸರು ತಂದಿದ್ದಾರೆ.
ತನ್ನ 18ನೇ ವಯಸ್ಸಿನಲ್ಲಿ ಸುಂಟಿಕೊಪ್ಪದಲ್ಲಿ ಪುಟ್ಟದಾದ ಕಟ್ಟಿಂಗ್ ಸೆಲೂನ್ ಆರಂಭಿಸಿದ ಸುನಿಲ್ ಭಾಸ್ಕರ ಕೆಲಕಾಲ ಸುಂಟಿಕೊಪ್ಪದಲ್ಲಿ ಕೆಲಸ ಮಾಡಿ ಬಳಿಕ ಹೊಟ್ಟೆಪಾಡಿಗಾಗಿ ದುಬೈ ಕಡೆಗೆ ಮುಖ ಮಾಡಿದರು. ಇದೀಗ ಕಳೆದ 13 ವರ್ಷಗಳಿಂದ ಯುನೈಟೆಡ್ ಅರಬ್ ಎಮರೇಟ್ಸ್(ದುಬೈ)ನಲ್ಲಿ ಕೇಶ ವಿನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ತನ್ನ ಕೈಚಳಕದ ಮೂಲಕ ನೈಪುಣ್ಯತೆ ಪಡೆದಿರುವ ಅವರು ಸೆಲಬ್ರೆಟಿಗಳ ಗಮನಸೆಳೆದಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
