fbpx
cinema

ಹಸೆಮಣೆ ಏರಬೇಕಿದ್ದ ಹುಡುಗ ಹೆಣವಾಗಿಬಿಟ್ಟ…!! ಖಳನಟ ರಾಘವ ಉದಯ್ ಸ್ಟೋರಿ

ಆರಡಿ ಎತ್ತರ, ಉಕ್ಕಿನಂತಹ ಮೈಕಟ್ಟು, ಬೆಂಕಿ ಉಗುಳುವ ಕಣ್ಣುಗಳು, ಕ್ರೌರ್ಯ ತುಂಬಿದ ಮುಖ ಭಾವ….ಹೇಗೆ ನೋಡಿದರೂ, ಖಳನಟನಾಗುವುದಕ್ಕೆ ಪರ್ಫೆಕ್ಟ್ ಎನಿಸುವಂತಹ ಗುಣಗಳನ್ನ ಹೊಂದಿದ್ದ ನಟ, ‘ಚಿತ್ರರಂಗದಲ್ಲಿ ಎಲ್ಲರೂ ಕಷ್ಟ ಪಟ್ಟಿದ್ದಾರೆ, ಅವರಷ್ಟು ಕಷ್ಟ ಪಡದಿದ್ದರೂ, ನಾನೂ ಕೂಡ ಒಂದು ಮಟ್ಟದಲ್ಲಿ ಕಷ್ಟದಿಂದಲೇ ಇಲ್ಲಿಯವರೆಗೂ ಬಂದಿದ್ದೇನೆ” – ಹೀಗಂತ ಹೇಳಿದವರು ಬೇರೆ ಯಾರೂ ಅಲ್ಲ, ಉದಯೋನ್ಮುಖ ಖಳನಟ ರಾಘವ ಉದಯ್.

ಸ್ಯಾಂಡಲ್ ವುಡ್ ನ ಖ್ಯಾತ ನಟರಾದ ದರ್ಶನ್, ಸುದೀಪ್, ಪುನೀತ್ ರಾಜ್ ಕುಮಾರ್, ದುನಿಯಾ ವಿಜಯ್ ಸೇರಿದಂತೆ ಅನೇಕರ ಎದುರು ಖಡಕ್ ಕೇಡಿ ಆಗಿ ಮಿಂಚಿರುವ ಉದಯ್, ಪ್ರೇಕ್ಷಕರಿಗೆ ಮಾತ್ರ ‘ರಕ್ತಾಕ್ಷ’ ಎಂದೇ ಪರಿಚಯ.

ಸಿಕ್ಕ ಸಣ್ಣ-ಪುಟ್ಟ ಅವಕಾಶಗಳನ್ನ ಎರಡೂ ಕೈಗಳಿಂದ ಅಪ್ಪಿಕೊಂಡು, ಕೊಟ್ಟ ಪಾತ್ರಗಳನ್ನ ಜವಾಬ್ದಾರಿಯಿಂದ ನಿರ್ವಹಿಸಿ, ಚಿತ್ರರಂಗದಲ್ಲಿ ಅಂಬೆಗಾಲಿಡುತ್ತಿದ್ದ ಉದಯ್, ತಮ್ಮ ಕಟ್ಟುಮಸ್ತಾದ ದೇಹದಿಂದಲೇ ಹೆಚ್ಚು ಖ್ಯಾತಿ ಗಳಿಸಿಕೊಂಡಿದ್ದರು. ಹೀಗಿರುವಾಗಲೇ, ದುರಂತ ಸಂಭವಿಸಿ ಬಾರದ ಲೋಕಕ್ಕೆ ಉದಯ್ ಪಯಣಿಸಿದ್ದಾರೆ.

ತೆರೆಮೇಲೆ ಭಯಂಕರವಾಗಿ ಘರ್ಜಿಸಿರುವ ಉದಯ್ ಎಲ್ಲಿಯವರು? ಆಟೋ ಡ್ರೈವರ್ ಆಗಿದ್ದ ಉದಯ್, ಸಿನಿಮಾಗೆ ಬಂದಿದ್ದು ಹೇಗೆ? ಎಂಬ ಇಂಟ್ರೆಸ್ಟಿಂಗ್ ಸ್ಟೋರಿ ಇಲ್ಲಿದೆ ಓದಿ.

1. ಆಟೋ ಡ್ರೈವರ್

ಬನಶಂಕರಿ ಬಳಿ ಇರುವ ಯಡಿಯೂರಿನಲ್ಲಿ ವಾಸವಾಗಿದ್ದ ಉದಯ್, ಚಿತ್ರರಂಗಕ್ಕೆ ಬರುವ ಮುನ್ನ ಹೊಟ್ಟೆ ಪಾಡಿಗೆ ಆಟೋ ಓಡಿಸುತ್ತಿದ್ದರು.

2. ಹಸೆಮಣೆ ಏರಬೇಕಿತ್ತು.!

ದುರಂತ ಘಟನೆ ಸಂಭವಿಸದೇ ಇದ್ದಿದ್ದರೆ, ಕೆಲವೇ ದಿನಗಳಲ್ಲಿ ಉದಯ್ ಹಸೆಮಣೆ ಏರುತ್ತಿದ್ದರು. ಉದಯ್ ಮನೆಯಲ್ಲಿ ಮದುವೆ ತಯಾರಿ ನಡೆಯುತ್ತಿತ್ತು. ಆಗಲೇ, ಹುಡುಗಿಯನ್ನೂ ಕೂಡ ನೋಡಿ ಒಪ್ಪಿಗೆ ಸೂಚಿಸಿ ಬಂದಿದ್ದರು. ಆದ್ರೆ, ಅಷ್ಟರಲ್ಲೇ ಉದಯ್ ಸಾವನ್ನಪ್ಪಿದ್ದಾರೆ.

3. ಚಿತ್ರರಂಗದಲ್ಲಿ ಆಸಕ್ತಿ ಇರಲಿಲ್ಲ

ಚಿತ್ರಗಳಲ್ಲಿ ಅಭಿನಯಿಸಲು ಆಸಕ್ತಿ ಇಲ್ಲದಿದ್ದರೂ, ಸ್ನೇಹಿತರ ಉತ್ತೇಜನದಿಂದ ಇಂಡಸ್ಟ್ರಿಗೆ ಬಂದವರು ಈ ರಾಘವ ಉದಯ್.

4. ಕೆ.ಡಿ.ವೆಂಕಟೇಶ್ ಅವರ ಬಳಿ ಕೆಲಸ

ಕನ್ನಡ ಚಿತ್ರರಂಗದ ಖ್ಯಾತ ಸಾಹಸ ನಿರ್ದೇಶಕ ಕೆ.ಡಿ ವೆಂಕಟೇಶ್ ಅವರ ಬಳಿ ಮೊದಲು ಅಸಿಸ್ಟಂಟ್ ಆಗಿ ಉದಯ್ ಕೆಲಸಕ್ಕೆ ಸೇರಿಕೊಂಡರು. ಕೆ.ಡಿ ವೆಂಕಟೇಶ್ ಅವರ ಬಳಿ ಇದ್ದ ಶೂಟಿಂಗ್ ವಸ್ತುಗಳನ್ನ ಇಟ್ಟುಕೊಳ್ಳುವ ಕೆಲಸ ಇವರದ್ದಾಗಿತ್ತು. ಆಗ ದಿನಕ್ಕೆ ಉದಯ್ ಪಡೆಯುತ್ತಿದ್ದ ಸಂಬಳ 100 ರೂಪಾಯಿ ಮಾತ್ರ.

5. ಫೈಟರ್ ಉದಯ್

ದಷ್ಟಪುಷ್ಟವಾದ ದೇಹವನ್ನ ಹೊಂದಿದ್ದ ಉದಯ್ ಗೆ, ಜೊತೆಯಲ್ಲಿದ್ದ ಸ್ನೇಹಿತರು, ‘ನೀನು ವಿಲನ್ ಆಗಬಹುದು’ ಎಂದು ಉತ್ತೇಜಿಸುತ್ತಿದ್ದರಂತೆ. ಇದರ ಪರಿಣಾಮವೇ…ಆಟೋ ಡ್ರೈವರ್ ಉದಯ್, ಫೈಟರ್ ಉದಯ್ ಆಗಿದ್ದು.

6. ದುನಿಯಾ ವಿಜಯ್, ಅನಿಲ್ ಉದಯ್ ಸ್ನೇಹಿತರು

ನಟ ದುನಿಯಾ ವಿಜಯ್, ಅನಿಲ್ ಹಾಗೂ ಉದಯ್ ಮೂವರು ಸ್ನೇಹಿತರು. ಬಸವನಗುಡಿಯಲ್ಲಿರುವ ಕೃಷ್ಣರಾವ್ ಪಾರ್ಕ್ ನಲ್ಲಿ ಪ್ರತಿದಿನವೂ ಮೂವರು ಒಟ್ಟಿಗೆ ಟ್ರೈನಿಂಗ್ ಮಾಡುತ್ತಿದ್ದರಂತೆ. ಬಸವರಾಜು ಎಂಬುವವರು ಉದಯ್ ಸೇರಿದಂತೆ ಇತರರಿಗೂ ಟ್ರೈನಿಂಗ್ ನೀಡುತ್ತಿದ್ದರಂತೆ.

7. ಸ್ಟಾರ್ ಚಿತ್ರಗಳಲ್ಲಿ ಫೈಟರ್

ಉದಯ್ ಖಳನಟನಾಗುವುದಕ್ಕೂ ಮೊದಲು ಫೈಟರ್ ಆಗಿ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿದ್ದರು. ದುನಿಯಾ ವಿಜಯ್ ರವರ ‘ಯುಗ’, ದರ್ಶನ್ ಅಭಿನಯದ ‘ಇಂದ್ರ’, ಪುನೀತ್ ಅಭಿನಯದ ‘ವಂಶಿ’, ಶಿವಣ್ಣನ ‘ಮಾದೇಶ’ ಸೇರಿದಂತೆ ಹಲವು ಸಿನಿಮಾಗಳಲ್ಲಿ ಸ್ಟಂಟ್ ಮ್ಯಾನ್ ಆಗಿ ಉದಯ್ ಕೆಲಸ ಮಾಡಿದ್ದಾರೆ. ಜೊತೆಗೆ ಸಣ್ಣ ಪುಟ್ಟ ಪಾತ್ರಗಳಲ್ಲಿ ಬಣ್ಣ ಹಚ್ಚಿದ್ದಾರೆ.

8. ಬ್ರೇಕ್ ಕೊಟ್ಟ ‘ಜಯಮ್ಮನ ಮಗ’ ಚಿತ್ರ

ಉದಯ್ ಗೆ ಮೊದಲು ಬ್ರೇಕ್ ಕೊಟ್ಟ ಸಿನಿಮಾ ‘ಜಯಮ್ಮನ ಮಗ’, ದುನಿಯಾ ವಿಜಯ್ ಅಭಿನಯದ ಈ ಚಿತ್ರದಲ್ಲಿ ಪ್ರಮುಖ ಖಳನಾಯಕನಾಗಿದ್ದ ಉದಯ್, ವಾಮಾಚಾರ ಮಾಡುವ ಮಂತ್ರವಾದಿ ‘ರಕ್ತಾಕ್ಷ’ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಚಿತ್ರದ ಅಭಿನಯಕ್ಕೆ ‘ಅತ್ಯುತ್ತಮ ಖಳನಟ’ ಸೈಮಾ ಪ್ರಶಸ್ತಿ ಕೂಡ ಉದಯ್ ಗೆ ಲಭಿಸಿತ್ತು.

9. ದುನಿಯಾ ವಿಜಯ್ ಕೊಟ್ಟ ಅವಕಾಶ

‘ಜಯಮ್ಮನ ಮಗ’ ಚಿತ್ರವನ್ನ ನಟ ದುನಿಯಾ ವಿಜಯ್ ಅವರೇ ನಿರ್ಮಾಣ ಮಾಡಿದ್ದರು. ಇನ್ನೂ ಉದಯ್ ಅವರ ಪ್ರತಿಭೆಯನ್ನು ನೋಡಿದ್ದ ವಿಜಯ್, ತನ್ನ ಚಿತ್ರದಲ್ಲಿ ವಿಲನ್ ಆಗಲು ಅವಕಾಶ ಕೊಟ್ಟರು. ಆ ಅವಕಾಶ ಇಂದು ಉದಯ್ ಅವರನ್ನ ಇಲ್ಲಿಯವರೆಗೂ ಕರೆದುಕೊಂಡು ಬಂದಿತ್ತು. ನಟ ದುನಿಯಾ ವಿಜಯ್ ಮೂಲಕ ಚಿತ್ರರಂಗದಲ್ಲಿ ಬೆಳಕಿಗೆ ಬಂದ ಉದಯ್, ವಿಜಿ ಅವರನ್ನ ‘ಗುರುಗಳು’ ಎಂದೇ ಕರೆಯುತ್ತಿದ್ದರು.

10. ಉತ್ತಮ ಅವಕಾಶಗಳು

‘ಜಯಮ್ಮನ ಮಗ’ ಚಿತ್ರದಲ್ಲಿ ಉದಯ್ ಪಾತ್ರವನ್ನ ನೋಡಿದ ನಂತರ, ಸಾಲು ಸಾಲು ಆಫರ್ ಗಳು ಉದಯ್ ರನ್ನ ಅರಸಿಬಂತು. ‘ರಾಟೇ’, ‘ಡಾರ್ಲಿಂಗ್’, ‘ಅಂಬರೀಶ್’, ‘ಐರಾವತ’, ‘ವಿಜಯಾಧಿತ್ಯ’, ‘ಡೇಂಜರ್ ಝೂನ್’, ‘ದೊಡ್ಮನೆ ಹುಡ್ಗ’ ದಂತಹ ಚಿತ್ರಗಳಲ್ಲಿ ಉದಯ್ ತಮ್ಮ ಖದರ್ ತೋರಿಸಿದ್ರು.

11. ಟಾಲಿವುಡ್ ನಲ್ಲೂ ಉದಯ್

ಕೇವಲ ಸ್ಯಾಂಡಲ್ ವುಡ್ ನಲ್ಲಿ ಮಾತ್ರವಲ್ಲ, ಟಾಲಿವುಡ್ ನಲ್ಲೂ ಉದಯ್ ಮಿಂಚಿ ಬಂದಿದ್ದಾರೆ. ತೆಲುಗು ನಟ ಸುನಿಲ್ ಅಭಿನಯದ ‘ಜಕ್ಕಣ್ಣ’ ಚಿತ್ರದಲ್ಲಿ ಉದಯ್ ಖಳನಾಯಕನಾಗಿ ಅಭಿನಯಿಸಿದ್ದರು.

12. ‘ಮಾಸ್ತಿಗುಡಿ’ ಕಥೆ

ಸ್ನೇಹಿತರಾಗಿದ್ದ ದುನಿಯಾ ವಿಜಯ್, ಉದಯ್, ಅನಿಲ್ ಹಾಗೂ ಸುಂದರ್ ಗೌಡ ಸೇರಿ ‘ಮಾಸ್ತಿಗುಡಿ’ ಚಿತ್ರಕ್ಕೆ ಚಾಲನೆ ನೀಡಿದ್ದು. ಚಿತ್ರದಲ್ಲಿ ವಿಜಿ ನಾಯಕನಾಗಿದ್ರೆ, ಅನಿಲ್ ಹಾಗೂ ಉದಯ್ ಇಬ್ಬರು ಖಳನಾಯಕರು. ಈ ಚಿತ್ರವನ್ನ ಸುಂದರ್ ನಿರ್ಮಾಣ ಮಾಡುತ್ತಿದ್ದು, ನಾಗಶೇಖರ್ ನಿರ್ದೇಶನದ ಹೊಣೆ ಹೊತ್ತಿದ್ದರು.

13. ಅನಿಲ್-ಉದಯ್ ಜುಗಲ್ ಬಂದಿ

ಅನಿಲ್ ಹಾಗೂ ಉದಯ್ ಇಬ್ಬರು ಆಪ್ತ ಸ್ನೇಹಿತರು. ಆರಂಭದಿಂದಲೂ ಜೊತೆಯಾಗಿದ್ದ ಈ ಇಬ್ಬರು ‘ಮಾಸ್ತಿಗುಡಿ’ ಚಿತ್ರದಲ್ಲೂ ಒಟ್ಟಾಗಿ ಅಭಿನಯಿಸುತ್ತಿದ್ದರು. ಈ ಚಿತ್ರಕ್ಕಾಗಿ ಸುಮಾರು 10 ತಿಂಗಳಿಂದ ಊಟ, ನಿದ್ದೆ ಬಿಟ್ಟು, ಸಿಕ್ಸ್ ಪ್ಯಾಕ್ ಮಾಡಿದ್ದರು. ಕೊನೆಗೆ ಒಟ್ಟಿಗೆ ಇಹಲೋಕ ತ್ಯಜಿಸಿ, ಸಾವಿನಲ್ಲೂ ಜೊತೆಯಾಗಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top