fbpx
Achivers

ಭಾರತದ ಸ್ಟೀಲ್ ಮ್ಯಾನ್

ಸಾಹಸ ಕೃತ್ಯಗಳನ್ನು ಮಾಡುವ ಮೂಲಕ ಅಸಾಮಾನ್ಯ ಕೆಲಸಗಳನ್ನು ಮಾಡುತ್ತಿರುವ ಒಬ್ಬ ಸಿಖ್ ಹುಡುಗ. ಕುರುಕ್ಷೇತ್ರ ನೆಡೆದ ಭೂಮಿ ಹರಿಯಾಣದ ಸಣ್ಣ ಪಟ್ಟಣ ಇಸ್ಮಾಯಿಲಬಾದ್ ನಲ್ಲಿ ಜನಿಸಿದ ಅಮಂದೀಪ್ ಸಿಂಗ್ ವಿಶ್ವದ ಪ್ರತಿಭಾವಂತ ಸ್ಟೀಲ್ಮ್ಯಾನ್ ಅಂತನೇ ಹೆಸರುವಾಸಿಯಾಗಿದ್ದಾರೆ.

ಇಲ್ಲಿ ಕೊಡಲಾಗಿರುವ ವೀಡಿಯೋವನ್ನೊಮ್ಮೆ ಗಮನವಿಟ್ಟು ನೋಡಿ. ಭಾರತದ ಸ್ಟೀಲ್ ಮ್ಯಾನ್ ಅಮಂದೀಪ್ ಸಿಂಗ್ ಅವರ ಸಾಹಸ ಮತ್ತು ಅವರ ಸಾಧನೆಯ ಕುರಿತು ವಿವರಿಸಲಾಗಿದೆ.

ಅಮಂದೀಪ್ ಸಿಂಗ್ ಕುಟುಂಬ ಮತ್ತು ಬಾಲ್ಯ:

ಅವರ ತಂದೆ ಹೆಸರು ಎಸ್ ಜಸ್ಪಾಲ್ ಸಿಂಗ್ ಮತ್ತು ತಾಯಿ ನರಿಂದರ್ ಕೌರ್. ಅವರು ಗುರು ನಾನಕ್ ವಿದ್ಯಾ ಪ್ರೌಢಶಾಲೆ, ಇಸ್ಮಾಯಿಲಬಾದ್ ರಿಂದ ಶಿಕ್ಷಣ ಪಡೆದುಕೊಂಡಿದ್ದಾರೆ. ಅವರ ೧೦ ನೇ ವಯಸ್ಸಿನಿಂದಲೇ martial arts ಅನ್ನು ಕಲಿಯುತ್ತಿದ್ದಾರೆ. ಬಾಲ್ಯದಿಂದಲೂ ಗುರು ಗೋಬಿಂದ್ ಸಿಂಗ್ ಜಿ ಸೈನ್ಯದ ವಿದ್ಯಾರ್ಥಿ ಯಾಗಿದ್ದಾರೆ. ಅವರ ಈ ಸಾಧನೆಯ ಹಿಂದೆ ಗುರು ಗೋಬಿಂದ್ ಸಿಂಗ್ ಜಿ ಸೈನ್ಯ ದ ಪಾಲು ತುಂಬಾ ದೊಡ್ಡದು.

ಆಹಾರ ಮತ್ತು ವ್ಯಾಯಾಮ:

ತನ್ನ ದೃಢತೆಯನ್ನು ಕಾಪಾಡಿಕೊಳ್ಳಲು, ಅಮಂದೀಪ್ ಕಟ್ಟುನಿಟ್ಟಾದ ಪಥ್ಯ ಮತ್ತು ವ್ಯಾಯಾಮ ಮಾಡುತ್ತಾರೆ. ಅವರು ಜಿಮ್ ನಲ್ಲಿ ಸುಮಾರು ಆರು ಘಂಟೆಗಳ ಕಾಲ ಕಳೆಯುತ್ತಾರೆ ಮತ್ತು ಬೆಳೆಗ್ಗೆ ಆರು ಕಿಲೋಮೀಟರ್ ನಷ್ಟು ಓಡುತ್ತಾರೆ. ಇವರು ತಮ್ಮ ಆಹಾರದಲ್ಲಿ ಹಣ್ಣುಗಳನ್ನು ಮತ್ತು ಹಣ್ಣಿನ ಜ್ಯೂಸ್ ಅನ್ನು ದೊಡ್ಡ ಜಗ್ ನ ಪ್ರಮಾಣದಲ್ಲಿ ಕುಡಿಯುತ್ತಾರೆ. ಊಟಕ್ಕೆ ಮೊಟ್ಟೆಗಳು, ತರಕಾರಿಗಳು, ಅನ್ನ ಮತ್ತು ಚಪಾತಿಯನ್ನು ಸೇವಿಸುತ್ತಾರೆ ಎಂದು ಅಮಂದೀಪ್ ಹೇಳುತ್ತಾರೆ.

ರೆಕಾರ್ಡ್ಸ್, ಪ್ರಶಸ್ತಿಗಳು ಮತ್ತು ಕೊಡುಗೆಗಳು:

2005 – ಶ್ರೀ ಸಿಂಗ್ ಅಂಬಾಲ ದಲ್ಲಿ ಭಾಗವಹಿಸಿ “Best Confidence” ಶೀರ್ಷಿಕೆ ಗೆದ್ದುಕೊಂಡರು.
2006 – ಶ್ರೀ ಕುರುಕ್ಷೇತ್ರ ಸ್ಪರ್ಧೆಯಲ್ಲಿ ಭಾಗವಹಿಸಲು ಪ್ರಯತ್ನಿಸುತ್ತಿರುವ ಹೊರತಾಗಿಯೂ, ಅವನು ತನ್ನ ಎದೆಯ ಕೂದಲಿನ ತೆಗೆದುಹಾಕಲು ಕೇಳಲಾಗುತ್ತದೆ ಸಾಧ್ಯವಾಗಲಿಲ್ಲ ಕರಣ ಅವರು ಒಬ್ಬ ಖಾಲ್ಸಾ ಹುಡುಗ ಆದುದರಿಂದ ನಿರಾಕರಿಸಿದರು.
2006 ರಿಂದ 2009 ರ ಅವಧಿಯಲ್ಲಿ ಅವರು ದೇಹವನ್ನು ಶಕ್ತಿಯುತವಾಗಿ, ಮತ್ತು ಆಕಾರವನ್ನು ತರಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಯಿತು.
2009 ರಲ್ಲಿ ಅಕಾಲ್ ಪುರಖ್ ಕಿ ಫೌಜ್ ಆಯೋಜಿಸಿದ ಫ್ರಾಂಕೆಫೈನ್ ಸಿಂಗ್ ಅಂತರರಾಷ್ಟ್ರೀಯ ಸ್ಪರ್ಧೆಯಲ್ಲಿ ಭಾಗವಹಿಸಿ ಅತ್ಯುತ್ತಮ ಟ್ಯಾಲೆಂಟ್ ಮತ್ತು Steelman ಎಂಬ ಬಿರುದನ್ನು ತಮ್ಮದಾಗಿಸಿಕೊಂಡರು.
2010 ರಲ್ಲಿ ಅವರು ಮತ್ತೆ MH1 ಆಯೋಜಿಸಿದ ಪ್ರತಿಭಾ ಪ್ರದರ್ಶನದ ಭಾಗವಹಿಸಿ Talent of Punjab ಟೈಟಲ್ ಅನ್ನು ಪಡೆದರು.
2011 ರಲ್ಲಿ ಮತ್ತೊಮ್ಮೆ ಸೋನಿ ಟಿವಿ ಆಯೋಜಿಸಿದ್ದ “ಮನರಂಜನೆ ಕೆ ಲಿಯೇ ಕುಚ್ ಭಿ ಕರೇಗಾ” ಶೋನಲ್ಲಿ ಭಾಗವಹಿಸಿ Steelman ಮತ್ತು ಐರನ್ ಮ್ಯಾನ್ ಬಿರುದನ್ನು ಪಡೆದುಕೊಳ್ಳುತ್ತಾರೆ.
2012 ರಲ್ಲಿ ತಮ್ಮ ಸಾಧನೆಯನ್ನು ವಿಶ್ವದಾಖಲೆಯ guinness ಪುಸ್ತಕದಲ್ಲಿ ಛಾಪು ಮೂಡಿಸಿದರು.
ಇಲ್ಲಿಯವರೆಗೆ ಅವರು ೩೫೦ ವಿಡಿಯೋ ಗಳನ್ನು ಮಾಡಲಾಗಿದ್ದು ಜೊತೆಗೆ ಪ್ರಪಂಚದಾದ್ಯಂತ ಅವರ ಈ ಸಾಧನೆಗಳನ್ನು ತೋರಿಸುತ್ತಿದ್ದಾರೆ.
ಬಹುತೇಕವಾಗಿ ಅವರ ಸಾಧನೆಯಲ್ಲಿ ದ್ವಿಚಕ್ರ ವಾಹನಗಳಲ್ಲಿ ಮಾಡಲಾಗುವ ಸಾಹಸ, ಮತ್ತು ತಮ್ಮ ಹಲ್ಲಿನಿಂದ 45 kg ತೂಕವುಳ್ಳ ಮನುಷ್ಯನನ್ನು ಎತ್ತುವ ಮೂಲಕ, ಬೈಕ್ ಗಳನ್ನು ಕೈಯಿಂದ ಎತ್ತುವಂತಹ ಸಾಹಸಗಳನ್ನು ಪ್ರದರ್ಶಿಸುತ್ತಾರೆ.

ಅಮಂದೀಪ್ ಸಿಂಗ್ ಕನಸು

ವಿಶ್ವದರ್ಜೆಯ ಸೌಲಭ್ಯಗಳನ್ನು ಹೊಂದಿರುವ ಜಿಮ್ ಅನ್ನು ಸ್ಥಾಪಿಸುವ ಕನಸನ್ನು ಹೊಂದಿದ್ದಾರೆ. ಮತ್ತು ದೇಹದ ಕಟ್ಟಮಸ್ತು ಗಳಿಗೆ ಸಂಬಂಧಿತ ಚಟುವಟಿಕೆಗಳಲ್ಲಿ ಮುಂದೆ ಬರುವ ಯುವಕರನ್ನು ತರಬೇತಿ ನೀಡಲು ಬಯಸುತ್ತಾರೆ. ಹಾಂಗ್ ಕಾಂಗ್ ನಲ್ಲಿ ನೆಡೆಯಲಿರುವ ಅಲ್ಟಿಮೇಟ್ ಫೈಟ್ ಚಾಂಪಿಯನ್ಷಿಪ್ ಭಾಗವಹಿಸುವಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ವಿಶ್ವದ ಮಟ್ಟದಲ್ಲಿ ತಮ್ಮ ಹೆಸರು ಮತ್ತು ದೇಶದ ಹೆಸರನ್ನು ಬೆಳೆಸುವುದು ಅವರ ಮಹಾದಾಸೆಯಾಗಿದೆ. ಇಂತಹ ಪ್ರತಿಭಾವಂತ ವ್ಯಕ್ತಿ ನಮ್ಮ ದೇಶದಲ್ಲಿರುವುದು ಹೆಮ್ಮೆಯ ವಿಚಾರ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top