fbpx
Food

ಮಳೆಗಾಲದಲ್ಲಿ ಸವಿಯಲು ಬಿಸಿಬಿಸಿಯಾದ ಆಲೂ ಪರಾಟ ಮಾಡುವ ವಿಧಾನ

ಬೇಕಾಗುವ ಸಾಮಾನುಗಳು

  • ಗೋದಿ ಹಿಟ್ಟು
  • ಬೇಯಿಸಿದ ಆಲುಗೆಡ್ಡೆ
  • ಕೆಂಪು ಮೆಣಸಿನ ಪುಡಿ 1/2 ಚಮಚ
  • ಅರಿಸಿನ ಪುಡಿ 1/2 ಚಮಚ
  • ಹೆಚ್ಚಿದ ಹಸಿ ಮೆಣಸಿನಕಾಯಿ 2
  • ಕೊತ್ತಂಬರಿ ಸೊಪ್ಪು ಸ್ವಲ್ಪ
  • ತುರಿದ ಶುಂಟಿ 1/2 ಚಮಚ
  • ಚಾಟ್ ಮಸಾಲಾ
  • ಜೀರಿಗೆ ಪುಡಿ 1/2 ಚಮಚ
  • ಧನಿಯ ಪುಡಿ 1/2 ಚಮಚ
  • ರುಚಿಗೆ ಉಪ್ಪು

ತಯಾರಿಸುವ ವಿಧಾನ

ಮೊದಲು ಒಂದು ಬಟ್ಟಲಿಗೆ ಬೇಯಿಸಿದ ಆಲೂಗಡ್ಡೆ ಹಾಕಿಕೊಂಡು ಚೆನ್ನಾಗಿ ಹಿಸುಕಿ (ಮ್ಯಾಶ್) ಮಾಡಿಕೊಳ್ಳಿ. ಅದಕ್ಕೆ ಕೆಂಪು ಮೆಣಸಿನ ಪುಡಿ, ಅರಿಸಿನ ಪುಡಿ, ಹೆಚ್ಚಿದ ಹಸಿ ಮೆಣಸಿನಕಾಯಿ ೨, ಕೊತ್ತಂಬರಿ ಸೊಪ್ಪು ಸ್ವಲ್ಪ, ತುರಿದ ಶುಂಟಿ, ಚಾಟ್ ಮಸಾಲಾ, ಜೀರಿಗೆ ಪುಡಿ, ಧನಿಯ ಪುಡಿ, ರುಚಿಗೆ ಉಪ್ಪು ಹಾಕಿ ಚೆನ್ನಾಗಿ ಬೆರೆಸಿರಿ.

ಗೋದಿ ಹಿಟ್ಟನ್ನು ಚಪಾತಿಯ ಹದಕ್ಕೆ ನೀರು ಹಾಕಿ ಕಲಿಸಿಡಿ. ಹಿಟ್ಟನ್ನು ಪೂರಿ ಆಕಾರದಷ್ಟು ಕೈಯಲ್ಲಿ ತಟ್ಟಿಕೊಂಡು ಅದರ ಮಧ್ಯೆ ಆಲೂ ಉಂಡೆಗಳನ್ನು ಇಟ್ಟು ಹಿಟ್ಟಿನಿಂದ ಪೂರ್ತಿಯಾಗಿ ಮುಚ್ಚಿರಿ. ಒಬ್ಬಟ್ಟಿನ ಹೂರಣ ತುಂಬುವಂತೆ ಆಲೂ ಉಂಡೆಯನ್ನು ತುಂಬಬೇಕು. ನಂತರ ತುಂಬಿದ ಉಂಡೆಗಳನ್ನು ಚಪಾತಿಯ ಹಾಗೆ ಲಟ್ಟಿಸಿಕೊಂಡು, ತವಾದ ಮೇಲೆ ಎಣ್ಣೆ ಹಾಕಿ ಎರಡು ಕಡೆ ಹದವಾಗಿ ಬೇಯಿಸಿ.

ಈಗ ರುಚಿಯಾದ ಆಲೂ ಪರಾಟ ಸವಿಯಲು ಸಿದ್ದ. ಈ ಚಳಿಗೆ ಬಿಸಿ ಬಿಸಿ ಪರಾಟ ತಿನ್ನಲು ತುಂಬಾ ರುಚಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top