fbpx
Achivers

ಇತಿಹಾಸ ಬರೆದ ಕರ್ನಾಟಕದ ಕರುಣ್ ನಾಯರ್ ತ್ರಿಶತಕ ಸಾಧನೆ!!!

ಕರ್ನಾಟಕದ ಆಟಗಾರ ಕರುಣ್ ನಾಯರ್ ಅದ್ಭುತ ಆಟವಾಡಿ ತಮ್ಮ ಚೊಚ್ಚಲ ಶತಕವನ್ನೇ ತ್ರಿಶತಕವಾಗಿ ಪರಿವತಿಸಿದ್ದಾರೆ. ವಿಶ್ವದಲ್ಲೇ ಇದು ಕೇವಲ ಮೂರನೇ ಬಾರಿ ಆಗುತ್ತಿರುವುದು, ದಿಗ್ಗಜ ಗ್ಯಾರಿ ಸೋಬರ್ಸ್ ಕೂಡ ಈ ಪಟ್ಟಿಯಲ್ಲಿ ಬರುತ್ತಾರೆ.

ನಾಯರ್-ರವರು ತ್ರಿಶತಕ ಬಾರಿಸಿದ ಎರಡನೆಯ ಭಾರತೀಯ, ಈ ಮುಂಚೆ ವೀರೇಂದ್ರ ಸೆಹ್ವಾಗ್-ರವರು ಎರಡು ಬಾರಿ ತ್ರಿಶತಕ ಬಾರಿಸಿದ್ದರು. ತೆಂಡೂಲ್ಕರ್, ದ್ರಾವಿಡ್, ಲಕ್ಷ್ಮಣ್, ಗಂಗೂಲಿ, ಗವಾಸ್ಕರ್ ಹೀಗೆ ದಿಗ್ಗಜರಿಂದಲೂ ಮಾಡಲಾಗದ ಸಾಧನೆಯನ್ನು ಯುವ ನಾಯರ್ ಮಾಡಿರುವುದು ಅತ್ಯಂತ ಶಲಾಘನೀಯ..

ಚೆನ್ನೈನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಈ ಮಹತ್ತರ ಸಾಧನೆಯನ್ನು ಮಾಡಿದ್ದಾರೆ. ಇದರಿಂದ ಭಾರತದ ಮೊತ್ತ ೭೫೯ಕ್ಕೆ ಏರಿದ್ದು ಇಂಗ್ಲೆಂಡ್ ವಿರುದ್ಧ ೨೮೨ ರಷ್ಟು ಮುನ್ನಡೆ ಸಾಧಿಸಿದ್ದಾರೆ.

Image result for karun nair
ಈ ಮೊದಲಿಗೆ ಸೊಗಸಾಗಿ ಆಡಿದ ಕರ್ನಾಟಕದವರೇ ಆದ ಕೆ.ಎಲ್.ರಾಹುಲ್ ೧೯೯ರನ್ ಬಾರಿಸಿ ಔಟಾಗಿದ್ದರು, ಕೇವಲ ಒಂದು ರನ್-ನಿಂದ ದ್ವಿಶತಕದಿಂದ ವಂಚಿತರಾಗಿದ್ದರು ರಾಹುಲ್, ಇದರಿಂದ ಭಾರತ ತಂಡದ ಅಭಿಮಾನಿಗಳಲ್ಲಿ ಬೇಸರ ಮೂಡಿತ್ತು, ನಾಯರ್-ರವರ ಈ ಸಾಧನೆಯಿಂದ ಭಾರತ ಕ್ರಿಕೆಟ್ ತಂಡದ ಅಭಿಮಾನಿಗಳಲ್ಲಿ ಖಂಡಿತವಾಗಿಯೂ ಸಂತಸ ಮೂಡಿರುತ್ತದೆ.

ಕರುಣ್ ನಾಯರ್-ಗೆ ಕೆ.ಎಲ್.ರಾಹುಲ್, ಮುರಳಿ ವಿಜಯ್, ಅಶ್ವಿನ್, ಹಾಗು ಜಡೇಜಾ ತುಂಬ ಒಳ್ಳೆ ಸಾಥ್ ಕೊಟ್ಟಿದ್ದಾರೆ. ಕರುಣ್ ನಾಯರ್ ಮೊದಲ ೧೦೦ ರನ್-ಗಳನ್ನೂ ತುಂಬಾ ಜಾಗರೂಕಾಗಿ ಆದಿ ನಂತರ ತಮ್ಮ ರನ್-ಗಳಿಕೆಯ ಗತಿಯನ್ನು ಹೆಚ್ಚಿಸಿ ಭಾರತ ತಂಡ ಉತ್ತಮ ಮುನ್ನಡೆ ಗಳಿಸುವುದಕ್ಕೆ ಸಾಧ್ಯವಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top