ಸುಲಭದಲ್ಲಿ ತಯಾರಿಸಬಹುದಾದ ಜಿಂಜರ್ ಬ್ರೆಡ್ ಕೇಕ್ ರೆಸಿಪಿ ನಿಮಗಾಗಿ. ಸರಳವಾಗಿ ಮತ್ತು ರುಚಿಕರವಾಗಿ ಜಿಂಜರ್ ಬ್ರೆಡ್ ಕೇಕ್ ಅನ್ನು ಮನೆಯಲ್ಲಿಯೇ ತಯಾರಿಸಬಹುದು. ಮೈಕ್ರೋ ವೇವ್ ನ ಅಗತ್ಯವಿಲ್ಲದೆ, ಮನೆಯಲ್ಲಿಯೇ ಇರುವ ಫ್ರಜರ್ ಕುಕ್ಕರ್ ಉಪಯೋಗಿಸಿ ಕೇಕ್ ತಯಾರಿಸಬಹುದು.
ಕೇಕ್ ಮಾಡಲು ಬೇಕಾಗುವ ಪದಾರ್ಥಗಳು
- ಗೋಧಿ ಹಿಟ್ಟು ಎರಡು ಕಪ್,
- ಬೆಣ್ಣೆ ಅರ್ಧ ಕಪ್,
- ಶುಂಠಿ,
- ಲವಂಗ,
- ಬ್ರೌನ್ ಶುಗರ್,
- ಉಪ್ಪು ,
- ಮೊಟ್ಟೆ,
- ಪುಡಿ ಸಕ್ಕರೆ,
- ಹಾಲು.
ಮಾಡುವ ವಿಧಾನ:
- ಮೊದಲು ಗೋಧಿ ಹಿಟ್ಟಿಗೆ ಉಪ್ಪು, ಸೋಡಾ, ಶುಂಠಿ, ಲವಂಗ ಪುಡಿ ಹಾಕಿ ಮಿಕ್ಸ್ ಮಾಡಿಕೊಳ್ಳಿ.
- ಅನಂತರ 1/2 ಕಪ್ ಬೆಣ್ಣೆ ಚೆನ್ನಾಗಿ ಬೀಟ್ ಮಾಡಿ ಬ್ರೌನ್ ಶುಗರ್ ಹಾಕಿ ಮತ್ತೆ ಬೀಟ್ ಮಾಡಿ ಮೂರು ನಿಮಿಷ ಬಿಡಿ.
- ಅನಂತರ ಮೊಟ್ಟೆ, ಸಕ್ಕರೆಪುಡಿ ಸ್ವಲ್ಪ ಹಾಲು, ಅರ್ಧ ಗೋಧಿ ಹಿಟ್ಟು ಹಾಕಿ ಚೆನ್ನಾಗಿ ಕಲಕಿ.
- ಮತ್ತೆ ಮಿಕ್ಕ ಗೋಧಿ ಹಿಟ್ಟಿಗೆ ಹಾಲು ಸೇರಿಸಿ ಮಿಕ್ಸ್ ಮಾಡಿ.
- ಕೇಕ್ ಬೌಲ್ಗೆ ತುಪ್ಪ ಸವರಿ ಹಿಟ್ಟು ಉದುರಿಸಿ ಮಿಕ್ಸನ್ನು ಹಾಕಿ ಮೈಕ್ರೋ ವೇವ್ ನಲ್ಲಿ ಬೇಯಿಸಿ. ಅಥವಾ ಕೇಕ್ ಬೌಲ್ಗೆ ತುಪ್ಪ ಸವರಿ ಹಿಟ್ಟು ಉದುರಿಸಿದ ನಂತರ ಅದನ್ನು ಕುಕ್ಕರ್ ನಲ್ಲಿ ತಳಕ್ಕೆ ತಾಗದಂತೆ ಇಟ್ಟು 2 ನಿಮಿಷ ಸಣ್ಣನೆಯ ಉರಿಯಲ್ಲಿ ಬೇಯಿಸಿ ನಂತರ ಉರಿಯನ್ನು ಸ್ವಲ್ಪ ಜಾಸ್ತಿ ಮಾಡಿಕೊಂಡು 40 ರಿಂದ 45 ನಿಮಿಷ ಬೇಯಿಸಿ. 10 ನಿಮಿಷ ಅದನ್ನು ಹಾಗೆಯೇ ಬಿಟ್ಟು ನಂತರ ಕುಕ್ಕರಿನ ಮುಚ್ಚಳ ತೆಗೆದು ಕೇಕ್ ನ ಪಾತ್ರೆಯನ್ನು ಹೊರಗೆ ತೆಗೆದು ಬೇಕಾದ ಆಕಾರಕ್ಕೆ ಕತ್ತರಿಸಿಕೊಳ್ಳಿ.
- ನಂತರ ಐಸಿಂಗ್ ಶುಗರ್ ಅದರ ಮೇಲೆ ಉದುರಿಸಿ.
- ಜಿಂಜರ್ ಬ್ರೆಡ್ ಕೇಕ್ ಸವಿಯಲು ಸಿದ್ದ
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
