ಒಂದು ಸಾವಿರ ವರ್ಷಗಳ ಕಾಲ ದೆಖ್ಖನ್ ಪ್ರಸಿದ್ಧ ಭೂಮಿಯನ್ನು ಆಳಿದವರು ಕನ್ನಡಿಗರು. ಕ್ರಿ ಶ 2 ನೇ ಶತಮಾನದಿಂದ 12ನೇ ಶತಮಾನದ ವರೆಗೆ, ಸಿಂಧೂ ನದಿಯ ದಕ್ಷಿಣ ಭಾಗ ಕರ್ಣಾಟ ಎಂದು ಮಹಾಭಾರತದಲ್ಲಿ ಉಲ್ಲೇಖವಾಗಿದೆ.
ಅದರ ಗಡಿ ಭಾಗ ಹೀಗಿತ್ತು ಗುಜರಾತ್, ವಿಂಧ್ಯ ಪರ್ವತ ಶ್ರೇಣಿಗಳು ,ರಾಜಸ್ತಾನ, ಊಟಿ, ಕೃಷ್ಣ ಗಿರಿ,ಅರಬ್ಭಿ ಸಮುದ್ರ ಹಾಗು ಮಧ್ಯಪ್ರದೇಶಗಳಾಗಿದ್ದವು. ಮಧ್ಯ ಪ್ರದೇಶದ ಹೊಲೆಯ ಹಾಗು ಗೊಲ್ಲ ಬುಡಕಟ್ಟು ಜನರು ಈಗಲೂ ಹೊಲೆಯ ಎಂಬ ಕನ್ನಡದ ಉಪ ಭಾಷೆಯನ್ನು ಮಾತಾಡುತ್ತಾರೆ. ಹೌದು ಮಧ್ಯಪ್ರದೇಶದ ಬಾಲಾಘಾಟ ಜಿಲ್ಲೆಯ ತಿರೊಡಿ ತಾಲೂಕಿನ ಕನ್ಹಡಗಾಂವ್ ಗ್ರಾಮವಿದೆ . ಬಹಳ ಹಿಂದುಳಿದಿರುವ ಈ ಜನಾಂಗದವರು ಮಾತಾಡುವುದು ಕನ್ನಡ ಭಾಷೆ , ತಾವಡುವ ಭಾಷೆಯ ಬಗ್ಗೆ ಅದರ ಸಂಸ್ಕೃತಿಯ ಬಗ್ಗೆ ಅವರಿಗೆ ಅರಿವಿಲ್ಲ. ಈ ಬುಡಕಟ್ಟು ಜನಾಂಗ ಮುಖ್ಯವಾಗಿ ಬಾಲಾಘಾಟ, ಶಿವನಿ ಜಿಲ್ಲೆಗಳಲ್ಲಿವೆ.
ಅಂತೆಯೇ ಮುಂಡ,ಗೊಂಡರು ಎಂಬ ಕುಲದ ಹೆಸರು ಬಳಸುವ ಮುಂಡ ಜನಾಂಗದವರು ಸಹ ಕನ್ನಡ ಭಾಷೆಯ ಮಕ್ಕಳು.
ವರಕವಿ ಬೇಂದ್ರೆಯವರು ತಮ್ಮ ಒಂದು ಕವನದಲ್ಲಿ :
“ ಕನ್ನಡ ನುಡಿದಿತು ಕನ್ನಡಹಕ್ಕಿ, ಕನ್ನಡವೆಂದಿತು ಆ ಗೋದೆ, ಕಾವೇರಿಯು ತಂಪಾಯಿತು, ಕನ್ನಡ ಗಾಳಿಯು ಉಸಿರಿತು ಈ ಬೋಧೆ ”
ಎಂದು ಹೇಳುವಾಗ, ಅವರು ಗೋದಾವರಿಯ ದಂಡೆಯ ಮೇಲಿರುವ ಈ ‘ಕನ್ನಡ’ ಗ್ರಾಮವನ್ನು ಉಲ್ಲೇಖ ಮಾಡಿದ್ದಾರೆ.
ಚಾಕಾ+ಯೇಟಿ(ಕುರಿ)>ಚಾಕಾಹೇಟಿ ಗ್ರಾಮಗಳಲ್ಲಿಯೂ ಗೊಲರ ಸಮುದಾಯದವರಿದ್ದಾರೆ. ಕುರಿಗಳ ತಂಗುವಿಕೆಯ ತಾಣಗಳಿಗೆ ಹಟ್ಟಿ ಎನ್ನುವರು. ಕರ್ನಾಟಕದಲ್ಲಿ ಪಶುಪಾಲಕರ ಸಹಸ್ರಾರು ಹಟ್ಟಿಗಳಿವೆ. ಅಲ್ಲಿಯ ಈ ಗ್ರಾಮಗಳಲ್ಲಿರುವ ಕನ್ಹಡ (ಕನ್ನಡ) ಮತ್ತು ಹೇಟಿ (ಹಟ್ಟಿ) ಪದಗಳು ಕನ್ನಡ ಭಾಷಿಗರಿಗೆ ಚಿಂತನಾರ್ಹವಾಗುವವು.
ಇಂದು ಈ ಭಾಷೆಯು ಅಳಿವಿನಂಚಿನಲ್ಲಿದೆ. ಬುಡಕಟ್ಟುಗಳಲ್ಲಿಯ ನುಡಿಗಳು ಮರೆತುಹೋದರೆ ಅದರೊಂದಿಗೆ ಬುಡಕಟ್ಟುಗಳ ಅಮೂಲ್ಯ ಪಾರಂಪರಿಕ ಜ್ಞಾನವೂ ಮರೆಮಾಚುತ್ತದೆ.
ಮಾಹಿತಿ ಕೃಪೆ :ಕೆ .ಎಂ ಮೆತ್ರಿ (ಹಂಪಿ ವಿಶ್ವ ವಿದ್ಯಾಲಯ)
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
