fbpx
cinema

ಕಾಲೇಜ್ ಕಿರಿಕ್ಕು ಸಿಕ್ಕಾಪಟ್ಟೆ ಕಿಕ್ಕು

ಅರಳಿಕಟ್ಟೆ ರೇಟಿಂಗ್:

four_half-stars_0-1024x238

ನಮ್ಮೆಲ್ಲರ ಕೊನೆ ಪುಟದಲಿ ನಿನ್ನದೊಂದೇ ಹೆಸರಿದೆ ಸಾನವೀ … ಅಂತ ಕೇಳಿದಾಕ್ಷಣ ಅರೆರೇ ಇದ್ಯಾವ್ದೋ ನಮ್ ಕಾಲೇಜ್ ಕಥೆ ತರಾನೇ ಅಂತ ಕಾಲೇಜ್ ಲೈಫ್ ಕಂಡಂತ ಪ್ರತಿಯೊಬ್ಬರಿಗೂ ಅನ್ಸುತ್ತೆ , ಯಾಕಂದ್ರೆ ಪ್ರತಿಯೊಂದು ಕಾಲೇಜ್ ನಲ್ಲೂ ಇದು ಕಾಮನ್ ಸಬ್ಜೆಕ್ಟ್ ಕಣ್ರೀ. ಪಾಠ ಕೇಳದೆ ಪಾಠ ಓದದೇ ಡಿಸ್ಟಿಂಕ್ಷನ್ ತೆಗೆಯೋ ಸಬ್ಜೆಕ್ಟ್ ಇದು. ಅದ್ರಲ್ಲೂ ರಕ್ಷಿತ್ n ಟೀಮ್ ಈ ರೀತಿ ಸಬ್ಜೆಕ್ಟ್ ತಗೊಂಡಾಗ ಅದ್ರಲ್ಲಿ ಇನ್ನಷ್ಟು ಹೊಸತನ, ತರಲೆ , ತಮಾಷೆ ಇದ್ದೆ ಇರತ್ತೆ ಅನ್ನೋ ಕಾನ್ಫಿಡೆನ್ಸ್ ನಮ್ದು. ಹಾಗಾಗಿ ಟ್ರೈಲರ್ ನೋಡೀನೇ ಎಕ್ಸೈಟ್ ಆಗಿದ್ದ ನಮಗೆ ಕಿರಿಕ್ ಪಾರ್ಟಿ ಇನ್ನಷ್ಟು ಮಜಾ ಕೊಡ್ತು…

ಹಾಸನ್ ಮಲ್ನಾಡ್ ಇಂಜಿನಿಯರಿಂಗ್ ಕಾಲೇಜ್ , 1st ಇಯರ್ ಲಾಸ್ಟ್ ಬೆಂಚರ್ಸ್ ಗ್ಯಾಂಗ್ , ಅವರ ಗ್ಯಾಂಗ್ ಲೀಡರ್ ಕರ್ಣ. ಕಾಲೇಜ್ ನ ಹಾಟ್ ಫೇವರಿಟ್ ಹುಡುಗಿ ಸಾನ್ವಿ.
ಅವಳನ್ನ ಪಟಾಯ್ಸೋದೇ ನಮ್ ಹುಡ್ಗರ ಕೆಲ್ಸ. ಆ 6 ಜನರ ಗ್ಯಾಂಗ್ ನಲ್ಲಿ ಯಾರು ಅವಳನ್ನ ಇಂಪ್ರೆಸ್ ಮಾಡ್ತಾರೆ, ಸಾನ್ವಿ ಎಂತ ಹುಡುಗಿ, ಅವಳು ಕರ್ಣನ್ನ ಒಪ್ಕೋತಾಳ ಅನ್ನೋ ಅಷ್ಟ್ರಲ್ಲಿ ಕಥೆಗೆ ಒಂದು ಟ್ವಿಸ್ಟ್. OMG ಟೈಮ್ ಹೋಗಿದ್ದೆ ಗೊತಾಗ್ಲಿಲ್ಲ already interval . 3 years 6 sems 2 Backlogs ಕರ್ಣ ಕಂಪ್ಲೀಟ್ ಬದಲಾಗಿದ್ದಾನೆ ಮುಂದೇನು ಅನ್ನೋದೇ ದ್ವಿತೀಯಾರ್ಧ…

ಕಾಲೇಜ್ ಲೈಫೇ ಹಾಗೆ ಅಲ್ವ , ಆ ಲೈಫೇ ಗೆ ಎಂಟ್ರಿ ಆದಾಕ್ಷಣ ಸ್ನೇಹ, ಪ್ರೀತಿಯ ಹುಡುಕಾಟ ಜೊತೆಗೆ ಒಂಚೂರು ತುಂಟಾಟ ಮತ್ತು ಹುಡುಗಾಟ, ಎಲ್ಲಾ ಬ್ರಾಂಚೆಸ್ ಗಳೊಂದಿಗೆ ಒಡನಾಟ, ಸ್ಪೋರ್ಟ್ಸ್ ಕಲ್ಚರಲ್ಸ್ & ಹುಡುಗಿ ವಿಷ್ಯ ಬಂದಾಗ ಹೊಡೆದಾಟ ಇಷ್ಟೆಲ್ಲ ಆದ್ರೂ ಫೈನಲ್ ಇಯರ್ farewell ಬಂದಾಗ ಬಿಟ್ಟು ಹೋಗ್ಬೇಕಲ್ಲ ಅನ್ನೋ ಸಂಕಟ. ಈ ಎಲ್ಲಾ ಆಟಗಳ ಒಕ್ಕೂಟವನ್ನ ಬೆಳ್ಳಿತೆರೆಯ ಮೇಲೆ colorfull ಆಗಿ ಬಿಂಬಿಸುವಲ್ಲಿ ರಕ್ಷಿತ್,ರಿಷಬ್ &ಟೀಮ್ ಸಕ್ಸಸ್ ಆಗಿದ್ದಾರೆ. ಸಾಂಗ್ಸ್ ಅಂಡ್ ಮೇಕಿಂಗ್ ಎಲ್ಲವೂ ಸೂಪರ್.ಕಾಲೇಜ್ ಲೈಫ್ ಮುಗಿಸಿರೋ ಪ್ರತಿಯೊಬ್ಬರಿಗೂ ನೆನಪಿನ ದೋಣಿಯಲ್ಲಿ ಕೂತು ಸ್ನೇಹದ ಕಡಲಿಗೆ ಹೋಗಿಬಂದಂತಹ ಅನುಭವ ಆಗೋದ್ರಲ್ಲಿ ಸಂಶಯ ಇಲ್ಲ.

ಲೊಕೇಶನ್ ಎಷ್ಟೇ ಆದ್ರೂ ಮಲ್ನಾಡ್ ಇಂಜಿನಿಯರಿಂಗ್ ಕಾಲೇಜ್ ಅಲ್ವ ಫುಲ್ ಶಕೆ ಗುರು. ಇನ್ನೂ characters ಕೂಡ ಎಲ್ಲವೂ ಪರ್ಫೆಕ್ಟ್. ರಕ್ಷಿತ್ ಮತ್ತೊಮ್ಮೆ ಸಿಂಪಲ್ಲಾಗೆ ಎಲ್ಲರ ಮನಸನ್ನ ಕದೀತಾರೆ. ರಶ್ಮಿತಾ ದುಪ್ಪಟ ಸೀನಿಯರ್ ಆದ್ರೆ ಸಂಯುಕ್ತ ಅಪ್ಪಟ ಜೂನಿಯರ್ ಅಂದ್ರೆ ಸಾನ್ವಿ mature character ಆದ್ರೆ ಆರ್ಯಳದು ತುಂಟಾಟ. ಉಳಿದ ಎಲ್ಲಾ ಹೊಸಹುಡುಗ್ರು ಸೂಪರ್.
CS & Mech ನ ಕೋಳಿಜಗಳಗಳನ್ನ ನೋಡುವಾಗಲಂತೂ ಎಷ್ಟು ನ್ಯಾಚುರಲ್ ಆಗಿದೆ ಅಲ್ವ ಅನ್ಸುತ್ತೆ. ಒಟ್ಟಾರೆ ಎಲ್ಲಾ ಕಾಲೇಜ್ ಸ್ಟೂಡೆಂಟ್ಸ್ ಗೂ ಇದೊಂದು ನ್ಯೂ ಇಯರ್ ಗಿಫ್ಟ್.
ಆದ್ರೆ ಈಗಾಗ್ಲೇ ಆಗಿರೋ & ಈಗ ಆಗ್ತಾ ಇರೋ ಇಂಜಿನಿಯರ್ಸ್ ಗೆ ಇದೊಂದು ಡಬಲ್ ಧಮಾಕ. ಎಷ್ಟೇ ತರ್ಲೆ ,ತಮಾಷೆ ಇದ್ರೂ ಕೊನೆಯಲ್ಲಿ ಪ್ರೇಕ್ಷಕರ ಕಣ್ಣಂಚಲ್ಲಿ ಒಂದು ಹನಿ ನೀರು ಜಾರಿದ್ರೆ ಅದು ನಮ್ಮ ಸೂಕ್ಷ್ಮತೆ ಅಲ್ಲ ಅದು ಕಥೆಗೆ & ಆ ಭಾವನೆಗಳಿಗೆ ಇರುವ ಶಕ್ತಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top