fbpx
Achivers

ಕ್ಯಾಪ್ಟನ್ ಕೂಲ್ ನಿಂದ ಏಕದಿನ, ಟಿ-20 ನಾಯಕ ಸ್ಥಾನಕ್ಕೂ ಗುಡ್ ಬೈ

ಭಾರತಕ್ಕೆ ಎರಡು ವಿಶ್ವಕಪ್‌ಗಳನ್ನು ಗೆಲ್ಲಿಸಿಕೊಟ್ಟ ಕೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಬುಧವಾರ ಏಕದಿನ ಮತ್ತು ಟಿ-20 ಪಂದ್ಯಗಳ ನಾಯಕ ಸ್ಥಾನದಿಂದಲೂ ಕೆಳಗಿಳಿದಿದ್ದಾರೆ. ಈ ಮೂಲಕ ಭಾರತ ಕಂಡ ಅತ್ಯಂತ ಯಶಸ್ವಿ ನಾಯಕ ಧೋನಿ ಅವರನ್ನು ನಾಯಕನನ್ನಾಗಿ ನೋಡಲು ಸಾಧ್ಯವಿಲ್ಲ.

ತಮ್ಮ ಚಾಣಾಕ್ಯ ನಡೆ, ಯುವಕರನ್ನು ಬೆಳೆಸುತ್ತಿದ್ದ ರೀತಿಯಿಂದಲೇ ವಿಶ್ವದ ಗಮವನ್ನು ಗೆದ್ದಿದ್ದ ಧೋನಿ, 2014ರಲ್ಲಿ ಟೆಸ್ಟ್ ಪಂದ್ಯಗಳಿಗೆ ವಿದಾಯ ಘೋಷಿಸಿದ್ದರು. ಇದೀಗ ಸೀಮಿತ ಓವರ್‍ಗಳ ಪಂದ್ಯದ ನಾಯಕತ್ವವನ್ನೂ ತ್ಯಜಿಸಿದ್ದಾರೆ.

ಇನ್ನು ಮುಂದೆ ಧೋನಿ ಭಾರತ ತಂಡದಲ್ಲಿ ಓರ್ವ ಸದಸ್ಯರಾಗಿ ಮುಂದುವರೆಯಲು ನಿರ್ಧರಿಸಿದ್ದಾರೆ. ಈ ಬಗ್ಗೆ ಧೋನಿ ಆಯ್ಕೆ ಸಮಿತಿಯ ಮುಖ್ಯಸ್ಥರಿಗೂ ಮಾಹಿತಿ ನೀಡಿದ್ದಾರೆ. ಆದ್ದರಿಂದ ಇನ್ನು ಧೋನಿ ಅವರನ್ನು ಮೈದಾನದಲ್ಲಿ ಸಾಮಾನ್ಯ ಆಟಗಾರನಾಗಿ ಮಾತ್ರ ನೋಡಬಹುದು. ಧೋನಿಯಿಂದ ತೆರವಾದ ಸ್ಥಾನಕ್ಕೆ ವಿರಾಟ್‍ ಕೊಹ್ಲಿ ನಾಯಕನಾಗಿ ಆಯ್ಕೆಯಾಗುವ ಸಾಧ್ಯತೆ ದಟ್ಟವಾಗಿದ್ದು, ಆಯ್ಕೆ ಸಮಿತಿ ಇನ್ನಷ್ಟೇ ಅಂತಿಮ ತೀರ್ಮಾನ ಕೈಗೊಳ್ಳಬೇಕಿದೆ.

2007ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ಚೊಚ್ಚಲ ಟಿ-೨೦ ವಿಶ್ವಕಪ್ ಹಾಗೂ ೨೦೧೧ರಲ್ಲಿ ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್ ಗೆದ್ದ ಭಾರತ ತಂಡದ ಮುಂದಾಳತ್ವವನ್ನು ಧೋನಿ ವಹಿಸಿಕೊಂಡಿದ್ದರು. ಅಲ್ಲದೆ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲೂ ಚೆನ್ನೈ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ ಧೋನಿ ಅವಧಿಯಲ್ಲಿ ಚೆನ್ನೈ ಐಪಿಎಲ್ ಪ್ರಶಸ್ತಿಯನ್ನು ಗೆದ್ದು ಬೀಗಿದೆ. ಅಂತಾರಾಷ್ಟ್ರೀಯ ಕ್ರಿಕೆಟ್ ಸಂಸ್ಥೆ ನಡೆಸುವ ಎಲ್ಲ ಕ್ರಿಕೆಟ್ ಟೂರ್ನಿಯನ್ನು ಗೆದ್ದ ನಾಯಕ ಎಂಬ ಹೆಗ್ಗಳಿಕೆಗೆ ಇವರಿಗೆ ಸಲ್ಲುತ್ತದೆ.

೧೯೮೩ರಲ್ಲಿ ಕಪೀಲ್ ದೇವ್ ಮುಂದಾಳತ್ವದಲ್ಲಿ ಭಾರತ ಏಕದಿನ ವಿಶ್ವಕಪ್ ಗೆದ್ದಿತ್ತು. ನಂತದ ಧೋನಿ ಈ ಸಾಧನೆಯನ್ನು ಮಾಡಿ ಇತಿಹಾಸವನ್ನು ನಿರ್ಮಿಸಿದ್ದರು.

ಇವರ ಮುಂದಾಳತ್ವದಲ್ಲಿ ಭಾರತ ೨೦೧೫ ಏಕದಿನ ವಿಶ್ವಕಪ್ ಸೆಮಿಫೈನಲ್‌ಗೆ ಅರ್ಹತೆಯನ್ನು ಪಡೆದುಕೊಂಡಿತ್ತು. ಅಲ್ಲದೆ ತವರಿನಲ್ಲಿ ನಡೆದ ಟಿ-೨೦ ವಿಶ್ವಕಪ್ ಟೂರ್ನಿಯಲ್ಲೂ ಉಪಾಂತ್ಯವನ್ನು ಪ್ರವೇಶಿಸಿ ಹಿರಿಮೆ ಮೆರೆದಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top