fbpx
Business

ಥಿಯೇಟರ್ ಒಳಗೆ ವಾಟರ್ ಬಾಟಲ್ ನಿರಾಕರಿಸಿದ್ದಕ್ಕೆ 11 ಸಾವಿರ ಪರಿಹಾರ ತೆತ್ತ ಮಲ್ಟಿಪ್ಲೆಕ್ಸ್

ಈ ಮಲ್ಟಿಪ್ಲೆಕ್ಸ್ ಗಳದ್ದು ಅತೀ ಆಯಿತು! ನಾವು ಸಿನಿಮಾ ನೋಡೋಕ್ಕೆ ಅಂತ Multiplex ಚಿತ್ರಮಂದಿರಕ್ಕೆ ಹೋದ್ರೆ ನಮಗೆ ನೀರು/ಜ್ಯೂಸು ಯಾವುದನ್ನು ತೊಗೊಂಡು ಹೋಗೋಕ್ಕೆ ಬಿಡ್ಲಿಲ್ಲ. ಯಾಕೆ ಅಂತ ಕೇಳಿದ್ರೆ ಅವರ ರೂಲ್ಸ್ ಅಂತೆ. ನಾವು ಅವರು ಮಾರೋದನ್ನೆ ತಗೋಬೇಕು ಅಂತೆ. ಇವರು ಹಕೊದೆ price ಅಂತೆ. ಇವರು ಏನ್ ಬೇಕಾದ್ರೂ ನಿಯಮಗಳನ್ನ ಮಾಡಬಹುದಾ?
ನಾವ್ ಹೋಗ್ತಿರೋದು ಸಿನಿಮಾ ನೋಡೋಕ್ಕೆ ತಾನೆ, ಅವ್ರೇನ್ ನಮಗೆ ಹೇಳೋದು ಇಲ್ಲೇ ತೊಗೊಳ್ಳಿ ಇದನ್ನೇ ತೊಗೊಳಿ ಅಂತ….
೧೦ ರುಪಾಯಿ ಪಾಪ್ಕಾರ್ನ್ ನ ಬೆಲೆ ೪೦೦ ರುಪಾಯಿ ಅಂತೆ

ವಿಡಿಯೋ ನೋಡಿ ಗೊತ್ತಾಗುತ್ತದೆ

ಸಂಜೆ ಸಂತೋಷವಾಗಿ ಸಿನಿಮಾ ನೋಡಲೆಂದು ಮೂರು ಜನ ಮಿತ್ರರು ಟಿಕೆಟ್ ಖರೀದಿಸುತ್ತಾರೆ.ಸಾಲಿನಲ್ಲಿ ನಿಂತು ಒಳಗೆ ಹೋಗುತ್ತಿರುತ್ತಾರೆ.ಅಲ್ಲಿರುವ ಸೆಕ್ಯೂರಿಟಿ ಗಾರ್ಡ್ ಅವರನ್ನು ನಿಲ್ಲಿಸಿ,ನಿಮ್ಮ ಕೈಯಲ್ಲಿರುವ ವಾಟರ್ ಬಾಟಲನ್ನು ಇಲ್ಲೇ ಬಿಸಾಡಿ ಎನ್ನುತ್ತಾನೆ.ಇದು ಕುಡಿಯುವ ನೀರಿನ ಬಾಟಲ್ .ಬೇಕಾದರೆ ನೀನೇ ಕುಡಿದು ನೋಡು ಎಂದು ಹೇಳುತ್ತಾರೆ.ಅವರ ಮಾತುಗಳನ್ನು ಲೆಕ್ಕಿಸದೆ,ಬಾಟಲನ್ನು ಥಿಯೇಟರ್ ಒಳಗೆ ಬಿಡಲು ನಿರಾಕರಿಸುತ್ತಾನೆ.ಇದೇ ವಿಷಯವಾಗಿ ದೊಡ್ಡ ರಾದ್ಧಾಂತವಾಗುತ್ತದೆ.ಕೊನೆಗೆ ಈ ವಿಷಯ ಮ್ಯಾನೇಜರ್ ವರೆಗೂ ಹೋಗುತ್ತದೆ.

ಮ್ಯಾನೇಜರ್ ಸಹ ಸೆಕ್ಯೂರಿಟಿ ಕಾರಣಗಳಿಂದಾಗಿ ವಾಟರ್ ಬಾಟಲನ್ನು ಥಿಯೇಟರ್ ಒಳಗೆ ಬಿಡಲಾಗುದಿಲ್ಲವೆಂದು ಕಡ್ಡಿ ತುಂಡು ಮಾಡಿದಂತೆ ಹೇಳುತ್ತಾನೆ.ಇದರಿಂದಾಗಿ ಆ ಬಾಟಲನ್ನು ಅಲ್ಲಿಯೇ ಬಿಸಾಡಿ,ಸಿನಿಮಾ ನೋಡುತ್ತಾರೆ ಆ ಮೂರುಜನ ಮಿತ್ರರು.ಮರುದಿನ ಎಲ್ಲರೂ ಕೂಡಿ ರಾಷ್ಟ್ರೀಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ( NCDRC)ಗೆ ದೂರು ಸಲ್ಲಿಸುತ್ತಾರೆ.

ವೇದಿಕೆಯು ಈ ದೂರನ್ನು ಕೂಲಂಕುಶವಾಗಿ ಪರಿಶೀಲಿಸಿ,11 ಸಾವಿರ ರೂಪಾಯಿಗಳನ್ನು ಥಿಯೇಟರ್ ನವರು ದೂರುದಾರರಿಗೆ ಪರಿಹಾರವನ್ನಾಗಿ ನೀಡಬೇಕೆಂದು ತೀರ್ಪು ನೀಡಿತು.ವಾಟರ್ ಬಾಟಲನ್ನು ಒಳಗೆ ತೆಗೆದುಕೊಂಡು ಹೋಗಲು ಅನುಮತಿ ನಿರಾಕರಿಸುವುದಕ್ಕೆ ಅಸಲು ಕಾರಣ ಭದ್ರತೆಯ ಕುರಿತಾಗಿರದೆ,ಥಿಯೆಟರ್ ಒಳಗೆ ಅಧಿಕ ಧರಕ್ಕೆ ಮಾರುವ ವಾಟರ್ ಬಾಟಲ್ ಗಳನ್ನು ಗ್ರಾಹಕರು ಕೊಳ್ಳುವಂತೆ ಮಾಡುವುದೇ ಮುಖ್ಯ ಉದ್ದೇಶವೆಂದು ಅಭಿಪ್ರಾಯಪಟ್ಟರು.ಎಲ್ಲಾ ಥಿಯೇಟರ್ ಗಳ ಒಳಗೆ ವಾಟರ್ ಬಾಟಲ್ ಗಳನ್ನು ತೆಗೆದುಕೊಂಡು ಹೋಗಲು ಅನುಮತಿಸಬೇಕೆಂದು ಆಜ್ಞೆ ಹೊರಡಿಸಿತು.ಒಂದು ವೇಳೆ ಕುಡಿಯುವ ನೀರಿನ ಬಾಟಲ್ ಗಳನ್ನು ಥಿಯೇಟರ್ ನವರೇ ಉಚಿತವಾಗಿ ನೀಡುತ್ತಿದ್ದಲ್ಲಿ,ಹೊರಗಿನಿಂದ ತೆಗೆದುಕೊಂಡು ಬರುವ ನೀರಿನ ಬಾಟಲ್ ಗಳ ಮೇಲೆ ನಿಷೇಧ ವಿಧಿಸಬಹುದಂತೆ.

ಹೊರಗಿನಿಂದ ತರುವ ತಿಂಡಿ ತಿನಿಸುಗಳನ್ನು ಒಳಗೆ ಬಿಡುವುದಲ್ಲವೆಂದು ದೊಡ್ಡ ಅಕ್ಷರಗಳಲ್ಲಿ ಹಲವು ಥಿಯೇಟರ್ ಗಳಲ್ಲಿ ಬರೆದಿರುವುದನ್ನು ನಾವೆಲ್ಲರೂ ನೋಡಿರುತ್ತೇವೆ.ವಿಚಾರಿಸಿದರೆ,ಭದ್ರತೆಯ ಕಾರಣವನ್ನು ನೀಡುತ್ತಾರೆ. ನಿಜಾಂಶ ಇದಾಗಿರದೆ,ಥಿಯೇಟರ್ ಒಳಗಿರುವ ಕ್ಯಾಂಟೀನ್ ನಲ್ಲಿ ತಿಂಡಿಗಳನ್ನು ಅಧಿಕ ದರಕ್ಕೆ ಮಾರುವುದೇ ಇವರ ಕಂಡುಕೊಂಡ ಮಾರ್ಕೆಟಿಂಗ್ ಸ್ಟ್ರಾಟಜಿ. ಮಲ್ಟಿಫ್ಲೆಕ್ಸ್ ನವರಿಗೆ ಬುದ್ಧಿಕಲಿಸಿದ ಆ ಮೂರುಜನ ಮಿತ್ರರಿಗೆ ಅಭಿನಂದನೆಗಳನ್ನು ಸಲ್ಲಿಸೋಣ.ನಮಗೂ ಇಂತಹ ಪರಿಸ್ಥಿತಿ ಎದುರಾದರೆ ಪ್ರಶ್ನಿಸೋಣ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

2 Comments

2 Comments

Leave a Reply

Your email address will not be published.

To Top