fbpx
ಆರೋಗ್ಯ

ಖಿನ್ನತೆಯಿಂದ ಬಳಲುತ್ತಿರುವವರಿಗೆ ಒಂದಿಷ್ಟು ಮಾಹಿತಿ

ಬಹುತೇಕ ಜನರು ಖಿನ್ನತೆಗೊಳಗಾದಂತೆ ಅಥವಾ ದುಃಖಿತರಾದಂತೆ ಅನಿಸಬಹುದು.  ಖಿನ್ನತೆಯು ಕಳೆದುಕೊಳ್ಳುವುದರ, ಜೀವನದ ಹೋರಾಟಗಳ, ಅಹಂಗೆ ಧಕ್ಕೆ ಉಂಟಾಗುವುದು ಇತ್ಯಾದಿಗಳ ಸಾಮಾನ್ಯ ಪ್ರತಿಕ್ರಿಯೆಯಾಗಿರಬಹುದು.

ಖಿನ್ನತೆಯ ಲಕ್ಷಣಗಳೆಂದರೆ ಸಾಮಾನ್ಯವಾಗಿ ದಿನನಿತ್ಯದ ಚಟುವಟಿಕೆಗಳಾದ ಶಾಲೆ, ಕಾಲೇಜು, ಕೆಲಸದ ಜಾಗ, ಸಾಮಾಜಿಕ ಚಟುವಟಿಕೆಗಳು ಮತ್ತು ಸಂಬಂಧಗಳಲ್ಲಿ. ಖಿನ್ನತೆಯು ಹೆಂಗಸರನ್ನು ಪುರುಷರಿಗಿಂತ ಶೇ 50ಕ್ಕಿಂತ ಹೆಚ್ಚು ಕಾಡುತ್ತದೆಂದು ವಿಶ್ವ ಆರೋಗ್ಯ ಸಂಸ್ಥೆ ಯು ತೋರಿಸುತ್ತದೆ.

ಬಡತನ, ಸಾಮಾಜಿಕ ಆರ್ಥಿಕ ಕಷ್ಟಗಳು, ಅಲ್ಪವಾಗಿ ಕಾಣುವಿಕೆ ಮತ್ತು ಇತರೆ ಅಂಶಗಳು ಭಾರತದಲ್ಲಿ ಖಿನ್ನತೆಯೊಂದಿಗೆ ತಳುಕು ಹಾಕಿಕೊಂಡಿವೆ. ರಾಜ್ಯದಲ್ಲಿ ಜನಸಂಖ್ಯೆಯ ಶೇ.25 ರಷ್ಟು ಮಂದಿ ಒಂದಲ್ಲ ಒಂದು ಬಗೆಯ ಮಾನಸಿಕ ರೋಗಗಳಿಂದ ಬಳಲುತ್ತಿದ್ದಾರೆ. ಹೀಗಾಗಿ ಮಾನಸಿಕ ಆರೋಗ್ಯ ಕುರಿತಾದ ಟಾಸ್ಕ್ ಪೋರ್ಸ್ ಸಮೀಕ್ಷೇ ತಿಳಿಸಿದೆ.

ಮಾನಸಿಕ ಅನಾರೋಗ್ಯಕ್ಕೆ ಒಳಗಾಗಲು ಖಿನ್ನತೆಯೇ ಪ್ರಮುಖ ಕಾರಣ ಎಂಬುದನ್ನು ಕೂಡ ಟಾಸ್ಕ್ ಪೋರ್ಸ್ ಪತ್ತೆ ಹಚ್ಚಿದೆ. ಶೇ.75 ರಷ್ಟು ಜನರಿಗೆ ತೆಗೆದುಕೊಳ್ಳುವುದೇ ಇಲ್ಲ. ಹೀಗಾಗಿ ಕಾಯಿಲೇ ಅಧಿಕವಾಗಲು ಕಾರಣವಾಗಿದೆ.

ಖಿನ್ನತೆಯ ಕೆಲವು ಗುಣಲಕ್ಷಣಗಳು ಹೀಗಿವೆ:

* ಬಹುತೇಕ ಸಮಯದಲ್ಲಿ ಕುಸಿದು ಹೋದಂತಹ ಭಾವ ಮತ್ತು ದುಃಖದ ಮನೋಭಾವ.

*ಏಕಾಗ್ರತೆಯ ಕೊರತೆ, ಚಿಂತನೆ ಅಥವಾ ನಿರ್ಧಾರ ತೆಗೆದುಕೊಳ್ಳಲು ಕಷ್ಟವಾಗುವುದು (ಉದಾ: ಹವ್ಯಾಸ, ಅಧ್ಯಯನದ ಮೇಲೆ ಗಮನ ನೀಡಲು ಕಷ್ಟ, ಇತ್ಯಾದಿ).

*ಹಠದ ದುಃಖಕರವಾದ ಭಾವನೆಗಳು

*ನಕರಾತ್ಮಕ ಮತ್ತು/ಅಥವಾ ಹತಾಶೆಯ ಭಾವಗಳು

*ಚಡಪಡಿಕೆ ಮತ್ತು ನಿಷ್ಪ್ರಯೋಜಕತೆ

*ಅಸಹಾಯಕತೆ, ತಪ್ಪಿತಸ್ಥ ಮತ್ತು/ಅಥವಾ ಬೆಲೆಯಿಲ್ಲದಿರುವ ಭಾವನೆಗಳು

*ತುಂಬಾ ತಿನ್ನುವುದು ಅಥವಾ ಹಸಿವಿಲ್ಲದಿರುವಿಕೆ

*ಆತ್ಮಹತ್ಯೆಯ ಯೋಚನೆಗಳು ಅಥವಾ ಪ್ರಯತ್ನಗಳು

*ಸಂತೋಷದಾಯಕ ವಿಷಯಗಳಲ್ಲಿ ಆಸಕ್ತಿಯಿಲ್ಲದಿರುವಿಕೆ

*ಶಕ್ತಿ ಕಡಿಮೆಯಾಗುವುದು ಮತ್ತು ಆಯಾಸ

*ತುಂಬಾ ನಿದ್ರಿಸುವುದು ಅಥವಾ ನಿದ್ರೆಯಲ್ಲಿ ನಡೆಯುವುದು.

*ನಿರಂತರ ತಲೆನೋವು, ಪಚನದ ಅಸ್ವಸ್ಥತೆ ಅಥವಾ ನೋವು.

ಖಿನ್ನತೆಯ ತಡೆಗಟ್ಟುವಿಕೆಯ ವಿಧಾನ:

*ಖಿನ್ನತೆಯನ್ನು ತಡೆಗಟ್ಟಲು ಯಾವುದೇ ಒಂದು ವಿಧ ಅಥವಾ ದಾರಿಯಿರುವುದಿಲ್ಲ. ಏನೇ ಇರಲಿ ಈ ವಿಧಾನಗಳು ಖಿನ್ನತೆಯನ್ನು ತಡೆಗಟ್ಟುವಲ್ಲಿ ಸಹಾಯಕವಾಗಬಹುದು.

*ಒತ್ತಡಗಳನ್ನು ನಿರ್ವಹಿಸವ ದಾರಿ ಹುಡುಕುವುದು ಮತ್ತು ನಿಮ್ಮ ವ್ಯಕ್ತಿತ್ವದ ಉನ್ನತಿಗೆ ಕ್ರಮ ಕೈಗೊಳ್ಳುವುದು.  ವಿಶ್ರಾಂತಿಗೆ ಸಮಯ ತೆಗೆದುಕೊಳ್ಳುವುದು ಮತ್ತು ಹೆಚ್ಚು ಕೆಲಸ ಮಾಡದಿರುವುದು.  ಬೇರೆ ರೀತಿಯ ಆಸಕ್ತಿಗಳಲ್ಲಿ ತೊಡಗಿಸಿಕೊಳ್ಳುವುದು.

*ಸ್ನೇಹಿತರ ಜೊತೆ ಮತ್ತು ಕುಟುಂಬದವರ ಜೊತೆ ಮಾಡನಾಡಿ, ವಿಶೇಷವಾಗಿ ಅವಶ್ಯಕತೆಯಿರುವ ಸಮಯದಲ್ಲಿ, ಇದು ಕಷ್ಟದ ಸಮಯಗಳನ್ನು ತಡೆದುಕೊಳ್ಳುವಲ್ಲಿ ಸಹಾಯವಾಗಬಹುದು.

*ಖಿನ್ನತೆಯ ಮೊದಲನೇ ಲಕ್ಷಣಗಳಲ್ಲೇ  ವೈದ್ಯರ ಸಲಹೆ ಪಡೆದರೆ ಹೆಚ್ಚಾಗುವ ತೊಂದರೆಗಳನ್ನು ತಡೆಯಬಹುದು.

*ದೀರ್ಘಾವಧಿ ಚಿಕಿತ್ಸೆಗಳನ್ನು ಪಡೆಯುವುದರಿಂದ ಮರುಕಳಿಸದಂತೆ ತಡೆಯಬಹುದು.

*ನಿಮಗೆ ಆತ್ಮಹತ್ಯೆಯ ಯೋಜನೆಗಳು ಬರುತ್ತಿದ್ದರೆ, ಈ ಕೆಳಕಂಡ ಸಂಖ್ಯೆಗಳಿಗೆ ಸಹಾಯಕ್ಕಾಗಿ ಕರೆ ಮಾಡಿ-ಮಾನಸಿಕ ಆರೋಗ್ಯ ಸಹಾಯವಾಣಿ

ಇವತ್ತಿನ ಒತ್ತಡಮಯ ಜೀವನದಲ್ಲಿ ಯಾವುದೇ ನಿರಾಸೆ, ನೋವುಗಳು ಹೃದಯಕ್ಕೆ ತಟ್ಟಿದರೂ ಅದನ್ನು ಮನಸಿನಿಂದ ದೂರವಿಡುವ ಸಾಮರ್ಥ್ಯ ಬೆಳೆಸಿಕೊಳ್ಳುವುದು ಬಹಳ ಮುಖ್ಯ. ಎಷ್ಟು ಅಲೆಗಳು ಬಂದು ಅಪ್ಪಳಿಸಿದರೂ ಎಲ್ಲೂ ನೀರು ನಿಲ್ಲದೆ ನೀರು ಹರಿದು ಹೋಗುವ ನಯವಾದ ಬಂಡೆಕಲ್ಲಿನಂತೆ ಮನಸನ್ನು ಇಟ್ಟು ಕೊಂಡರೆ ಮನಸಿನ ಕ್ಷೇಮವನ್ನು ಕಾಯ್ದುಕೊಳ್ಳಬಹುದು. ಇದು ಸುಲಭವಲ್ಲ ಆದರೆ ಪ್ರಯತ್ನ ಮಾಡಿದರೆ ಯಾವುದೂ ಅಸಾಧ್ಯವಲ್ಲ.

ಮಾನಸಿಕ ತೊಂದರೆಗಳಿದ್ದರೆ ಹೀಗೆ ಮಾಡಿ

*ಅನುಭವೀ ಮಾನಸಿಕ ಆರೋಗ್ಯ ತಜ್ಞರು ಹೇಳಿರುವ ಚಿಕಿತ್ಸೆ ಪಾಲಿಸಿ. *

*ದಿನಚರಿಯಲ್ಲಿ ಏರುಪೇರು ಆಗದಂತೆ ನೋಡಿಕೊಳ್ಳಿ. ವಿಪರೀತ ಚಟುವಟಿಕೆ ಬೇಡ.

*ದೈಹಿಕ ಚಟುವಟಿಕೆಗಳಲ್ಲಿ ತೊಡಗಿ.

*ಸಾಕಷ್ಟು ನಿದ್ರೆ ಮಾಡಿ.

*ದಿನಾಲೂ ಸ್ವಲ್ಪ ಸಮಯ ವಿಶ್ರಾಂತಿ ಪಡೆಯಿರಿ.

*ಪೌಷ್ಠಿಕ ಹಾಗೂ ಆರೋಗ್ಯಕರ ಆಹಾರ ಸೇವಿಸಿ.

*ಮದ್ಯ ಸೇವನೆ ಕಡಿಮೆ ಮಾಡಿ. ವೈದ್ಯರು ಬೇರೆಯವರಿಗೆಂದು ಬರೆದುಕೊಟ್ಟ ಮಾತ್ರೆ, ಔಷಧಗಳನ್ನು ಸೇವಿಸಬೇಡಿ.

*ಒಂಟಿ ಆಗಿರಬೇಡಿ. ನಿಮಗೆ ಯಾರ ಮೇಲೆ ಭರವಸೆ ಇದೆಯೊ, ನಿಮ್ಮ ಬಗ್ಗೆ ಯಾರಿಗೆ ಕಾಳಜಿ ಇದೆಯೊ ಅಂಥವರೊಟ್ಟಿಗೆ ಸಮಯ ಕಳೆಯಿರಿ.

*ಆಧ್ಯಾತ್ಮಿಕತೆ ಇರಲಿ. *

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top