fbpx
Awareness

ಮಂತ್ರಿ ಮಾಲ್ ‘ಒತ್ತುವರಿ’ ಯ ಕುರಿತು ‘ದಿ ನ್ಯೂಸಿಸ್ಮ್’ ಎಕ್ಸ್ಕ್ಲೂಸಿವ್ ವರದಿ !!

– ಕಳಪೆ ನಿರ್ವಹಣೆ, ಫಿಲ್ಟರ್ ಮರಳು ಬಳಸಿದಿರುವುದರಿಂದ ಗೋಡೆಗಳು ಕುಸಿದಿವೆ
-ನ್ಯಾಯಾಲಯ ಆದೇಶಿಸಿದಂತೆ ‘ಬೈ ಪಾಸ್’ ರೋಡ್ ನಿರ್ಮಿಸಿಲ್ಲ
– ಸ್ಕೈ ವಾಕ್ ನಿರ್ಮಾಣ ಮಾಡಿಲ್ಲ
-ಪ್ರೆವೆಂಟಿವ್ ಮೈಂಟೆನನ್ಸ್ ಕೈಗೊಂಡಿಲ್ಲ

ಮಂತ್ರಿ ಮಾಲ್ ಹಿಂಬದಿಯ ಗೋಡೆ ಕುಸಿದಿರುವ ಬೆನ್ನಲ್ಲೇ ಸ್ಫೋಟಕ ಮಾಹಿತಿ ಹೊರಬಿದ್ದಿದೆ. ಮಂತ್ರಿ ಬಿಲ್ಡರ್ಸ್ ರವರು ಬಿ.ಬಿ.ಎಂ.ಪಿ ನಿಯಮಾವಳಿಗಳನ್ನು ಪಾಲಸದಿರುವುದರ ಬಗ್ಗೆ ಮಾಹಿತಿ ಹೊರಬಿದ್ದಿದೆ. ‘ದಿ ನ್ಯೂಸಿಸ್ಮ್’ ತಂಡ, ಬಸವನಗುಡಿಯ ಪಾಲಿಕೆ ಸದಸ್ಯರಾದ ಶ್ರೀ ‘ಕಟ್ಟೆ’ ಸತ್ಯನಾರಾಯರನ್ನು ಸಂಪರ್ಕಿಸಿದಾಗ, ಕಟ್ಟಡ ಉಲ್ಲಂಘನೆಯ ಬಗ್ಗೆ, ಪಾಲಿಕೆಯ ನಿಯಮಾವಳಿಗಳನ್ನು ಗಾಳಿಗೆ ತೂರಿರುವ ವಿಷಯಗಳನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.

ತಾವು ಮಹಾಪೌರರಾಗಿದ್ದಾಗ, ಮಂತ್ರಿ ಬಿಲ್ದರ್ ವಿರುದ್ಧ ಕಡತಗಳನ್ನು ತೆಗೆಸಿ, ನ್ಯಾಯಾಲಯದಿಂದ ಆದೇಶ ನೀಡಿರುವುದನ್ನು ಪಾಲಿಸುವ ನಿಟ್ಟಿನಲ್ಲಿ (ಸಂಚಾರ ದಟ್ಟಣೆ ಕಡಿಮೆ ಮಾಡಲು) ಬೈ ಪಾಸ್ ರಸ್ತೆ ನಿರ್ಮಿಸಲು ‘ಮಂತ್ರಿ ಬಿ’ಲ್ಡ್ರ್ಸ್ ರವರಿಗೆ ಅನೇಕ ಬಾರಿ ಹೇಳಿದರೂ, ಇವತ್ತಿನ್ನವರೆಗೂ ಅಲ್ಲಿ ಬೈ ಪಾಸ್ ರಸ್ತೆ ನಿರ್ಮಾಣವಾಗಿಲ್ಲ. ಕ್ಷೇತ್ರದ ಶಾಸಕರಾಗಿದ್ದ ದಿನೇಶ್ ಗುಂಡು ರಾಯರೂ ಕೂಡ ಪದೇ ಪದೇ ಹೇಳಿದ್ದರು ಅಲ್ಲಿ ಬೈ ಪಾಸ್ ರಸ್ತೆಯಾಗಲಿ, ಸ್ಕೈ ವಾಕ್ ಆಗಲಿ ನಿರ್ಮಾಣ ಮಾಡಿಲ್ಲ. ನ್ಯಾಯಾಲಯವಾಗಲಿ, ಚುನಾಯಿತ ಪ್ರತಿನಿಧಿಯಾಗಲಿ ಅಥವಾ ಅಧಿಕಾರಿಗಳಿಗೂ ಕ್ಯಾರೇ ಎನ್ನದ ಮಂತ್ರಿ ಯವರ ಕುತಂತ್ರಿ ಬುದ್ದಿಯನ್ನು – ‘ದಿ ನ್ಯೂಸಿಸ್ಮ್’ ಎಳೆ ಎಳೆಯಾಗಿ ಬಿಚ್ಚಿಡಲಿದೆ.

ಫಿಲ್ಟರ್ ಮರಳನ್ನು ಬಳಸಿ ಮಂತ್ರಿ ಮಾಲ್ ನಿರ್ಮಿಸಿರುವುದಾಗಿ, ಕಳಪೆ ಕಾಮಗಾರಿಯಾಗಿರುವುದು ಈಗ ದೃಢಪಟ್ಟಿದೆ. ಅಷ್ಟೇ ಅಲ್ಲದೆ ನೆನ್ನೆ 5:40 ಕ್ಕೆ ಮತ್ತೊಂದು ಗೋಡೆ ಕುಸಿದಿದೆ. 2010ರಲ್ಲಿ ನಿರ್ಮಾಣವಾಗಿರುವ ಮಂತ್ರಿ ಮಾಲ್ ಬಗ್ಗೆ ಅನೇಕ ಹೋರಾಟಗಾರರು; ಅಂದಿನ ಮೇಯರ್ ಆಗಿದ್ದ ‘ಕಟ್ಟೆ’ ಸತ್ಯನಾರಾಯಣರು, ಅಂದಿನ ಬಿ.ಬಿ.ಎಂ.ಪಿ ಆಯುಕ್ತರಾದ ಸಿದ್ದಯ್ಯ ನವರು ಕ್ರಮಕ್ಕೆ ಸೂಚಿಸಿದ್ದರಾದರೂ; ಅಧಿಕಾರಿಗಳು ಎಚ್ಚೆತ್ತುಕೊಳ್ಳದೆ, ಮಂತ್ರಿ ಬಿಲ್ದರ್ಗಳ ಪ್ರಸಾದ ತಿಂದು ಸುಮ್ಮನಾಗಿದ್ದರು.

ಸ್ವಾಧೀನ ಪ್ರಮಾಣ ಪಾತ್ರ ವಾಪಸ್ !

ಇದೆ ವೇಳೆ ಆಯುಕ್ತರಾದ ಮಂಜುನಾಥ ಪ್ರಸಾದ್ – ರವರು ಮಂತ್ರಿ ಮಾಲ್ ನ ಸ್ವಾಧೀನ ಪ್ರಮಾಣ ಪತ್ರವನ್ನು [Occupancy certificate] ಹಿಂಪಡೆಯಲು ಸೂಚಿಸಿದ್ದಾರೆ. ತನಿಖೆ ಪೂರ್ಣಗೊಳ್ಳುವವರೆಗೂ ಯಾವುದೇ ರೀತಿಯಾದ ವ್ಯಾಪಾರ, ವಹಿವಾಟು ನಡೆಯುವಂತಿಲ್ಲವೆಂದು ಆದೇಶ ಹೊರಡಿಸಿದ್ದಾರೆ.

ಸಂಚಾರ ಸುಗಮ:

ಇದೆ ವೇಳೆ, ಮಾಲ್ನಲ್ಲಿ ಯಾವುದೇ ಕಾರ್ಯಚಟುವಟಿಕೆ, ವ್ಯವಹಾರಗಳು ಇಲ್ಲದಿರುವುದರಿಂದ ಜನ ಸಂದಣಿ ಕಡಿಮೆಯಾಗಿದ್ದು, ಸದಾ ಟ್ರಾಫಿಕ್ ದಟ್ಟಣೆ ಇರುತ್ತಿದ್ದ ಮಂತ್ರಿ ಮಾಲ್ ನ ಮುಂದೆ ಸಂಚಾರ ಸುಗಮವಾಗಿದೆ.
ಅಧಿಕಾರಿಗಳ ನಿರ್ಲಕ್ಷ್ಯ, ಮಂತ್ರಿ ಬಿಲ್ದರ್ ಕೊಟ್ಟ ‘ಪ್ರಸಾದ‘ ವನ್ನು ತಿಂದು ನಮ್ಮ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಜನರ ಪ್ರಾಣಕ್ಕೆ ಕುತ್ತು ತರುವ ಕೆಲಸ ಮಾಡಿದ್ದಾರೆ.

ಮುಂದಿನ ಅಂಕಣಗಳಲ್ಲಿ, ಅನೇಕ ದಾಖಲೆಗಳನ್ನು ಬಿಡುಗಡೆ ಮಾಡಿ ಮಂತ್ರಿ ಬಿಲ್ದರ್ ರವರ ಒತ್ತುವರಿ, ನ್ಯಾಯಾಂಗ ನಿಂದನೆ, ನಮ್ಮ ಜನಪ್ರತಿನಿಧಿಗಳ ಭ್ರಷ್ಟಾಚಾರ, ಮಂತ್ರಿ ಗ್ರೀನ್ ಎಂಬ ಸೂಪರ್ ಲಕ್ಸುರಿ ಅಪಾರ್ಟ್ಮೆಂಟ್ಗಲ್ಲಿ ಫ್ಲಾಟ್ ಪಡೆದಿರುವ ಬಗ್ಗೆ ವಿಸ್ತೃತವಾದ ವರದಿಯನ್ನು ಮಾಡುತ್ತೇವೆ.

ಕೇವಲ ಸ್ವಾಧೀನ ಪ್ರಮಾಣ ಪತ್ರವನ್ನು ಹಿಂಪಡೆಯುವುದರಿಂದ ಈ ಸಮಸ್ಯೆ ಬಗೆಹರಿಯುವುದಿಲ್ಲ. ಪಾಲಿಕೆಯ ಮಾಜಿ ಆಯುಕ್ತರಾದ ಸಿದ್ಧಯರು ತಯಾರು ಮಾಡಿದ ವರದಿ ಮತ್ತು ನ್ಯಾಯಾಲಯದಿಂದ ಪಡೆದಿರುವ ‘ತಡೆಯಾಜ್ಞೆ’ ಯನ್ನು ತೆರವು ಮಾಡಲು ಕಾನೂನು ಹೋರಾಟ ಮಾಡಿ, ರಾಜಕಾಲುವೆ, ಸರ್ಕಾರದ ‘ಬಿ’ ಖರಾಬ್ ಭೂಮಿ ಒತ್ತುವರಿ ಮಾಡಿಕೊಂಡಿರುವ ಜಾಗವನ್ನು ಸರ್ಕಾರ ವಶಕ್ಕೆ ಪಡೆಯಬೇಕು. ಬೆಂಗಳೂರಿನಲ್ಲಿ ‘ನಾಯಿಕೊಡೆಯಂತೆ’ ಹರಡುತ್ತಿರುವ ‘ಭೂ ಮಾಫಿಯಾ’ ವನ್ನು ಹತ್ತಿಕ್ಕಲು ವಿಶೇಷ ನ್ಯಾಯಾಲಯವನ್ನು ಸ್ಥಾಪಿಸಿ, ಹಣದಾಸೆಗೆ ಸಾರ್ವಜನಿಕರ ಜೀವವನ್ನು ಒತ್ತೆಯಿಟ್ಟಿರುವ ಈ ‘ಭೂ’ ತಗಳ ಶಿಕ್ಷೆಯಾಗಬೇಕೆಂದು ‘ದಿ ನ್ಯೂಸಿಸ್ಮ್’ ತಂಡ ಒತ್ತಾಯಿಸುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top