fbpx
ಉಪಯುಕ್ತ ಮಾಹಿತಿ

ಪರೀಕ್ಷಾ ತಯಾರಿ ಮತ್ತು ಓದುವ ಸಮಯ ಹೀಗಿರಲಿ

ಪರೀಕ್ಷಾ ತಯಾರಿ ಮತ್ತು ಓದುವ ಸಮಯ ಹೀಗಿರಲಿ

ಪರೀಕ್ಷೆ ಎಂಬುದು ವಿದ್ಯಾರ್ಥಿಗಳಿಗಿಂತ ಅವರ ಪೋಷಕರಿಗೇ ದೊಡ್ಡ ಪರೀಕ್ಷೆಯಂತೆ ಇರುತ್ತದೆ. ಪರೀಕ್ಷಾ ತಯಾರಿಯಲ್ಲಿ ಆರೋಗ್ಯ ಮುಖ್ಯ ಪಾತ್ರ ವಹಿಸುತ್ತದೆ. ಸಾಮಾನ್ಯವಾಗಿ ಪರೀಕ್ಷೆಗಳು ಹತ್ತಿರ ಬರುತ್ತಿದ್ದಂತೆ ಕೆಲವು ಮಕ್ಕಳ ಆರೋಗ್ಯ ಸರಿಯಾಗಿರುವುದಿಲ್ಲ. ನಿದ್ದೆಗೆಟ್ಟು ನಿರಂತರವಾಗಿ ಓದುತ್ತಿದ್ದರೆ ಓದಿದ್ದು ಜೀರ್ಣವಾಗುವುದೇ ಇಲ್ಲ. ಪರೀಕ್ಷೆ ಸಮಯದಲ್ಲಿ ಈ ರೀತಿಯಾದರೆ ವರ್ಷವಿಡೀ ಮಾಡಿದ ಪ್ರಯತ್ನ ವ್ಯರ್ಥವಾದಂತೆ.

ಓದುವ ಸಮಯ

ದಿನಕ್ಕೆ ಕನಿಷ್ಠ 6 ಗಂಟೆಯಾದರೂ ನಿದ್ರೆ ಅವಶ್ಯಕ. ಇದರಿಂದ ಶರೀರ ಮತ್ತು ಮನಸ್ಸಿನ ಅಗತ್ಯವಾದ ವಿಶ್ರಾಂತಿ ಸಿಗುತ್ತದೆ. ರಾತ್ರಿ ನಿದ್ದೆಗೆಟ್ಟು ಓದುವವುದಕ್ಕಿಂತ ರಾತ್ರಿ ಬೇಗ ಮಲಗಿ ಬೆಳಗಿನ ಜಾವ 4 ಗಂಟೆಗೆ ಎದ್ದು ಓದಿದ್ದು ಚೆನ್ನಾಗಿ ನೆನಪಿನಲ್ಲಿ ಇರುತ್ತದೆ. ಎಷ್ಟೇ ಆದರೂ ರಾತ್ರಿ ಓದಿದ್ದು ನಿನ್ನೆ ಓದಿದ್ದು ನಿಮ್ಮ ಪರಿಕ್ಷಾ ದಿನ, ಅಂದರೆ ಅದೇ ದಿನ ಓದಿದಂತೆ ಇರುತ್ತದೆ.

ಓದಿನ ಹನ್ನೆರಡು ಗಂಟೆಗಳನ್ನು ಸಮವಾಗಿ ಬೆಳಿಗ್ಗೆ, ಮಧ್ಯಾಹ್ನ, ಸಂಜೆ ಮತ್ತು ರಾತ್ರಿ ಎಂದು ನಾಲ್ಕು ಭಾಗಗಳಲ್ಲಿ ವಿಭಾಗಿಸಿಕೊಂಡು ಓದಬೇಕು. ಅದರಲ್ಲಿ ಓದು ಬರವಣಿಗೆ ಮತ್ತು ಪುನಾರವರ್ತನೆಗೂ ಸಮಯ ಮೀಸಿಲಿಡಿ. ನೀವು  ಹಾಕಿಕೊಂಡ ಟೈಮ್ ಟೇಬಲ್ ಪ್ರಾಮಾಣಿಕವಾಗಿ ಪಾಲಿಸಿ. ಪ್ರಗತಿಯನ್ನು ಗಮನಿಸಿ, ಸಮಾಧಾನಕರವಾಗಿಲ್ಲವೆನಿಸಿದರೆ ನೀವು ಸಮಯನನ್ನು ವ್ಯರ್ಥ ಮಾಡುತ್ತಿದ್ದೀರಿ ಎಂದು ಅರ್ಥವಾಗುತ್ತದೆ.

ನಿಮ್ಮ ಏಕಾಗ್ರತೆಯನ್ನು ಹೆಚ್ಚಿಸಿಕೊಳ್ಳಲು

*ದಿನವೂ ಒಂದೇ ಸ್ಥಳದಲ್ಲಿ, ಒಂದೇ ಸಮಯದಲ್ಲಿ ಕುಳಿತುಕೊಳ್ಳಿ. ಆ ವಾತಾವರಣಕ್ಕೆ ನಿಮ್ಮ ಮನಸ್ಸು ಹೊಂದಿಕೊಳ್ಳುತ್ತದೆ.

*ಮೊಬೈಲ್, ಟಿ.ವಿ. ಟ್ಯಾಬ್, ಕಂಪ್ಯೂಟರ್. ಎಲ್ಲವನ್ನೂ ಆರಿಸಿಬಿಡಿ.

*ಓದುವಾಗ ಯಾವ ರೀತಿಯಲ್ಲೂ ನಿಮಗೆ ತೊಂದರೆ ಕೊಡಬಾರದೆಂದು ಮನೆಯವರಿಗೆ ಹೇಳಿ.

*ಆ ಸಮಯದಲ್ಲಿ ಯಾವುದೇ ಫೋನ್, ಮೊಬೈಲ್ ಕರೆಗಳನ್ನು ಸ್ವೀಕರಿಸಬೇಡಿ.

*ಆದಷ್ಟು ಇತರ ಕಾರ್ಯಕ್ರಮಗಳಿಗೆ ಹೋಗದಿರಿ.

*ಕ್ರಿಕೆಟ್ ಪಂದ್ಯ ಮತ್ತು ಗೆಳೆಯ ಮತ್ತು ಗೆಳತಿಯರಿಂದ ಆದಷ್ಟು ದೂರವಿರಿ.

ಓದಲು ಏಕಾಗ್ರತೆ ಕೆಲವು ವಿಧಾನಗಳನ್ನು ಪ್ರಯತ್ನಿಸಿ.

*ದೀರ್ಘವಾಗಿ ಶ್ವಾಸವನ್ನು ತೆಗೆದುಕೊಳ್ಳಿ

*ನಿಮ್ಮ ಅಂಗೈಗಳನ್ನು ಚೆನ್ನಾಗಿ ಉಜ್ಜಿಕೊಂಡು ಕಣ್ಣುಗಳ ಮೇಲಿಟ್ಟುಕೊಳ್ಳಿ

*ಬಗ್ಗುವ, ಕೈ ಕಾಲುಗಳನ್ನು ಚಾಚುವಂತಹ ವ್ಯಾಯಾಮವನ್ನು ಮಾಡಿ.

*ಮೆಲುವಾದ ಸಂಗೀತವನ್ನು ಕೇಳಿಸಿಕೊಳ್ಳಿ.

*ಪುನಾರವರ್ತನೆ ಮಾಡುವಾಗ ವೇಗವಾಗಿ ಓದಿ.

*ಫಾರ್ಮುಲಾಗಳು, ಚಿತ್ರಗಳು, ನಕ್ಷೆಗಳನ್ನು ದೊಡ್ಡದಾಗಿ ಬರೆದು ಓಡಾಡುವಾಗ ನಿಮ್ಮ ಕಣ್ಣಿಗೆ ಕಾಣುವಂತೆ ಇಟ್ಟುಕೊಳ್ಳಿ.

*ನಿಮ್ಮ ಪಾಠಗಳನ್ನು ಮನಸ್ಸಿನಲ್ಲೇ ಊಹಿಸಿಕೊಳ್ಳಿ.

*ಗೆಲುವು ನಿಮ್ಮದೆನ್ನುವ ಭಾವ ಬೆಳೆಸಿಕೊಳ್ಳಿ.

ಓದುವಾಗ ಗಮನಿಸಬೇಕಾದ ಅಂಶಗಳು

*ಕಷ್ಟವಾಗಿರುವುದನ್ನು ಮೊದಲು ಓದಿ

*ಕಷ್ಟದ ವಿಷಯವೆಂದು ಇಂದು, ನಾಳೆ ಎಂದು ಮುಂದೂಡಬೇಡಿ. ಅಗತ್ಯವೆನಿಸಿದರೆ ನಿಮ್ಮ ಗೆಳೆಯ/ತಿ, ಶಿಕ್ಷಕರ ಸಲಹೆ ತೆಗೆದುಕೊಳ್ಳಿ.

*ನೀವು ಬರೆದುಕೊಂಡ ನೋಟ್ಸ್ ಅಲ್ಲದೆ ಮಿಕ್ಕ ಪುಸ್ತಕಗಳನ್ನೂ ಓದಿ.

*ಪರೀಕ್ಷೆಯ ಭಯದಲ್ಲಿ ಓದುತ್ತೇನೆಂದು ಗಂಟೆಗಟ್ಟಲೇ ಓದುವ ಅಗತ್ಯವಿಲ್ಲ. *5 ನಿಮಿಷಕ್ಕಿಂತ ಹೆಚ್ಚಾಗಿ ಒಂದೇ ಸಮನೆ ಓದಲಾಗದು ಅಥವಾ ಓದಿದರೂ ಅದು ತಲೆಯಲ್ಲಿ ಉಳಿಯಲಾರದು. ಆದ್ದರಿಂದ ಓದಿನ ಮಧ್ಯೆ ವಿರಾಮ ತೆಗೆದುಕೊಳ್ಳಿ ಮತ್ತು ಏಕಾಗ್ರತೆ ಹೆಚ್ಚಿಸುವ ವ್ಯಾಯಾಮ ಮಾಡಿ. ಮಧ್ಯೆ ವಿರಾಮದಲ್ಲಿ ಯಾರನ್ನಾದರೂ ಮಾತನಾಡಿಸಿ, ನಗಿಸಿ, ವಿರಮಿಸಿ, ಸ್ವಲ್ಪ ಹೊತ್ತು ಹೊರಗೆ ಹೋಗಿ, ಒಟ್ಟಿನಲ್ಲಿ ನಿಮಗಿಷ್ಟವಾದುದನ್ನು ಮಾಡಿ, ನಿಮ್ಮಲ್ಲಿ ಆಸಕ್ತಿ ಮೂಡುವಂತೆ ಮಾಡಿಕೊಳ್ಳಿ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top