ಕಟಕ್: ಭಾರತ– ಇಂಗ್ಲೆಂಡ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಆಕರ್ಷಕ ಶತಕ ಸಿಡಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಯುವರಾಜ್ ಸಿಂಗ್ ಪಾತ್ರರಾದರು. ಆರು ವರ್ಷಗಳ ಬಳಿಕ ಶತಕ ಸಿಡಿಸಿದ ಯುವರಾಜ್ ಸಿಂಗ್, ಏಕದಿನ ಕ್ರಿಕೆಟ್ನಲ್ಲಿ ಗಳಿಸಿದ ಗರಿಷ್ಠ ಮೊತ್ತ ಇದಾಗಿದೆ.
ಇಂಗ್ಲೆಂಡ್ ವಿರುದ್ಧದ 2ನೇ ಏಕದಿನ ಪಂದ್ಯ, 6 ವರ್ಷಗಳ ಬಳಿಕ ಶತಕ ಸಿಡಿಸಿದ ಯುವರಾಜ್ ಸಿಂಗ್ 100*(98 ಎಸೆತ), ಭಾರತ 3 ವಿಕೆಟ್ ನಷ್ಟಕ್ಕೆ 190(33 ಓವರ್)
2011ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ 113 ರನ್ ಸಿಡಿಸಿದ್ದೇ ಕೊನೆ. ವಿಶ್ವಕಪ್ ಬಳಿಕ ಕ್ಯಾನ್ಸರ್ ಚಿಕಿತ್ಸೆಗೆ ತೆರಳಿದ್ದ ಯುವಿ ಚೇತರಿಸಿಕೊಂಡು ಬಂದ ಬಳಿಕ ಫಾರ್ಮ್`ಗೆ ಮರಳಲು ಪರಿತಪಿಸುತ್ತಿದ್ರು. 6 ವರ್ಷಗಳ ಬಳಿಕ ಇದೀಗ, ಶತಕ ಸಿಡಿಸಿ ತಮ್ಮ ಫಿಸಿಕಲ್ ಫಿಟ್ನೆಸ್ ಸಾಬೀತುಪಡಿಸಿದ್ದಾರೆ.
150 ರನ್ ಸಿಡಿಸಿದ ಯುವಿ ಬಟ್ಲರ್`ಗೆ ಕ್ಯಾಚಿತ್ತು ನಿರ್ಗಮಿಸಿದರು. ಯುವಿಯ ಈ ಭರ್ಜರಿ ಶತಕದಲ್ಲಿ 21 ಬೌಂಡರಿ ಮತ್ತು 3 ಸಿಕ್ಸರ್ ಇದ್ದವು.
ನಾಯಕ ವಿರಾಟ್ ಕೊಹ್ಲಿ ನನ್ನ ಮೇಲಿಟ್ಟ ಮಹತ್ವದ ನಂಬಿಕೆಯೇ ಶತಕ ಸಿಡಿಸಲು ಸ್ಫೂರ್ತಿಯಾಯಿತು ಎಂದು ಯುವರಾಜ್ ಸಿಂಗ್ ಹೇಳಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
